ಮೊಬೈಲ್ ಲೋಕದಲ್ಲೂ ಸ್ಟಾರ್ಟ್​ಅಪ್ ಉದ್ಯಮ- ಮೊಬೈಲ್ ಸ್ಪಾರ್ಕ್​ನಲ್ಲಿ ಕಾಣಸಿಕ್ಕಿದ ಭವಿಷ್ಯದ ಉದ್ಯಮಗಳು

ಟೀಮ್​ ವೈ.ಎಸ್​. ಕನ್ನಡ

ಮೊಬೈಲ್ ಲೋಕದಲ್ಲೂ ಸ್ಟಾರ್ಟ್​ಅಪ್ ಉದ್ಯಮ- ಮೊಬೈಲ್ ಸ್ಪಾರ್ಕ್​ನಲ್ಲಿ ಕಾಣಸಿಕ್ಕಿದ ಭವಿಷ್ಯದ ಉದ್ಯಮಗಳು

Sunday November 20, 2016,

2 min Read

ಯುವರ್ ಸ್ಟೋರಿಯ ಟೆಕ್​ಸ್ಪಾರ್ಕ್ ದೇಶದ ಅತ್ಯುತ್ತಮ 30 ಸ್ಟಾರ್ಟ್ಅಪ್​ಗಳನ್ನು ಹುಡುಕಿ ಗೌರವ ನೀಡುತ್ತದೆ. ಭವಿಷ್ಯದಲ್ಲಿ ಉದ್ಯಮ ಬೆಳೆಯ ಬೇಕಾದ ಹಾದಿಗೆ ಸ್ಪೂರ್ತಿ ನೀಡುತ್ತದೆ. ಈಗ ಮೊಬೈಲ್ ಸ್ಪಾರ್ಕ್ ದೇಶದೆಲ್ಲೆಡೆ ಸದ್ದು ಮಾಡಿದೆ. ದೆಹಲಿಯಲ್ಲಿ ನಡೆದ ಮೊಬೈಲ್ ಸ್ಪಾರ್ಕ್ ಭವಿಷ್ಯದ ಮೊಬೈಲ್ ಸ್ಟಾರ್ಟ್ಅಪ್​ಗಳ ಮೇಲೆ ಬೆಳಕು ಚೆಲ್ಲಿದೆ.

ಯುವರ್ ಸ್ಟೋರಿ 5ನೇ ಬಾರಿಗೆ ಮೊಬೈಲ್ ಸ್ಪಾರ್ಕ್​ನ್ನು ಆಯೋಜಿಸಿದೆ. ಹಾಪ್ಟಿಕ್ ( Haptik), , ಕಲ್ಚರ್ ಅಲ್ಲೆ (CultureAlley), ಡ್ರೈವ್ ಯು (DriveU), ಮೈ ಚೈಲ್ಡ್ ಆ್ಯಪ್ (MyChildApp), ಸ್ಕ್ವಾಡ್ರನ್ ( Squadrun) ಮತ್ತು ಮ್ಯಾಡ್​ಸ್ಟ್ರೀಟ್ ಡೆನ್(MadStreetDen) ಈ ಬಾರಿಯ ಮೊಬೈಲ್ ಸ್ಪಾರ್ಕ್​ನಲ್ಲಿ ವಿಶೇಷವಾಗಿ ಕಂಡಿತ್ತು.

image


ಮೊಬೈಲ್ ಸ್ಪಾರ್ಕ್ 2016ರ ಆಯ್ಕೆಗಳು

5 ಬಾರ್ಜ್ (5BARz)

ಮೊಬೈಲ್ ನೆಟ್​ವರ್ಕ್​ಗಳಲ್ಲಿ ಸಮಸ್ಯೆ ಇದೆಯೇ..? ಮೊಬೈಲ್ ಡಿವೈಸ್​ಗಳಲ್ಲಿ ಈ ಸಮಸ್ಯೆಗೆ ಪರಿಹಾರ ನೀಡಲು ಇರುವುದೇ 5 ಬಾರ್ಜ್. ಈ ಕಂಪನಿ ನೆಟ್​ವರ್ಕ್ ಸಮಸ್ಯೆಗೆ ಮಂಗಳ ಹಾಡಲಿದೆ. ಎಲ್ಲೆಲ್ಲಿ ನೆಟ್​ವರ್ಕ್ ಸಮಸ್ಯೆ ಇದೆಯೋ, ಅಲ್ಲಲ್ಲಿ ಮೊಬೈಲ್ ಸಿಗ್ನಲ್​ಗಳು ವೀಕ್ ಆಗುವುದು ಸಾಮನ್ಯ. ಆದ್ರೆ 5 ಬಾರ್ಜ್ ಡಿವೈಸ್ ಖರೀದಿ ಮಾಡಿದ್ರೆ ನೆಟ್​ವರ್ಕ್ ಮತ್ತು ಸಿಗ್ನಲ್ ಸಮಸ್ಯೆಗಳು ಎದುರಾಗುವುದೇ ಇಲ್ಲ. ಈ ಡಿವೈಸ್​ನ್ನು ನೀವು ನಿಮ್ಮ ಇಷ್ಟ ಬಂದ ಜಾಗಕ್ಕೆ ತೆಗೆದುಕೊಂಡು ಹೋಗಬಹುದು.

ಅಡೊರೋ (Adoro)

ಫ್ಯಾಷನ್ ಲೋಕದ ನಿಮ್ಮ ಆಯ್ಕೆಗೆ ಅಡೊರೋ ಸಾಥ್ ನೀಡಬಹುದು. ಫ್ಯಾಷನ್ ಲೋಕದ ಆಯ್ಕೆಗಳಿಗೆ ವಿಭಿನ್ನ ಟಚ್ ನೀಡುವ ಮೂಲಕ ನಿಮ್ಮ ಆಯ್ಕೆಗಳಿಗೆ ಇದು ಸಹಕಾರಿ ಆಗಬಲ್ಲದು. ಅಷ್ಟೇ ಈ ತಂತ್ರಜ್ಞಾನದ ಮೂಲಕ ಫ್ಯಾಷನ್ ಲೋಕದಲ್ಲಿ ನಿಮ್ಮ ಆಯ್ಕೆಯನ್ನು ಪರ್ಫೆಕ್ಟ್ ಆಗಿ ಮಾಡಬಹುದು.

ಇದನ್ನು ಓದಿ: ಐರನ್‌ ಡಿಫಿಶಿಯನ್ಸಿಗೆ ಗುಡ್‌ ಬೈ- ಕೆನಾಡದ "ಲಕ್ಕಿ ಐರನ್‌ ಫಿಶ್‌" ಅನ್ವೇಷಕನಿಗೆ ಹಾಯ್‌ ಹಾಯ್‌..!

ಡಾಟಾ ಮೇಲ್ (Date mail)

ಮೊಬೈಲ್ ಲೋಕದಲ್ಲಿರುವ ಭಾಷೆಗಳ ನಡುವಿನ ಅಂತರವನ್ನು ಈ ತಂತ್ರಜ್ಞಾನ ಕಡಿಮೆ ಮಾಡಬಲ್ಲದು. ವಿವಿಧ ಭಾಷೆಗಳಲ್ಲಿ ಮತ್ತು ಲಿಪಿಗಳಲ್ಲಿ ಇ-ಮೇಲ್ ಐಡಿಗಳನ್ನು ನೀಡುವ ಕೆಲಸವನ್ನು ಡಾಟಾ ಮೇಲ್ ಮಾಡುತ್ತಿದೆ. ಇದು ಇಂಗ್ಲೀಷ್ ಮತ್ತು ಭಾರತದ ಇತರೆ ಭಾಷೆಗಳ ನಡುವೆ ಸೇತುವೆ ಆಗಿ ಕೆಲಸ ಮಾಡುತ್ತಿದೆ.

ಫಿನೋಮೆನಾ (Finomena)

ಫೈನಾನ್ಷಿಯಲ್​ ಪ್ಲಾಟ್ ಫಾರಂನಲ್ಲಿರುವ ಸಂಹನವನ್ನು ಉತ್ತಮ ಗೊಳಿಸಲು ಈ ಮೊಬೈಲ್ ತಂತ್ರಜ್ಞಾನ ನೆರವಾಗುತ್ತಿದೆ. ಸುಮಾರು 500 ಮಿಲಿಯನ್ ಭಾರತೀಯರು ಈ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿದ್ದಾರೆ. ಸಾಲದ ಅನಿವಾರ್ಯತೆ ಇದ್ದಾಗ, ಅದಕ್ಕೆ ಅರ್ಜಿ ಸಲ್ಲಿಸಿದರೆ, ಸಾಲ ನೀಡುವ ಸಂಸ್ಥೆಗಳು ಯಾವುದೇ ಕಾರಣ ನೀಡದೆ ಸಾಲ ನಿರಾಕರಣೆ ಮಾಡುತ್ತವೆ. ಆ ಸಮಯದಲ್ಲಿ ಸಾಲ ನೀಡುವವರ ಮತ್ತು ಸಾಲ ಪಡೆದುಕೊಳ್ಳುವವರ ನಡುವೆ ಸಂಹವನ ಕಲ್ಪಿಸಿ ಕೆಲಸ ಸುಗಮವಾಗಿ ನಡೆಯಲು ನೆರವು ನೀಡುತ್ತದೆ.

ಗ್ರೇ ಕರ್ನೆಲ್ (Grey Kernel)

ಈ ತಂತ್ರಜ್ಞಾನ ಉದ್ಯಮ ವಲಯದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಬಲ್ಲದು. ನಿಮ್ಮ ಪ್ರಾಡಕ್ಟ್​​ಗಳನ್ನು ಇನ್ನಷ್ಟು ಗ್ರಾಹಕ ಸ್ನೇಹಿ ಮಾಡಲು ಇದು ಉಪಯೋಗಕಾರಿ. ಈ ತಂತ್ರಜ್ಞಾನದಲ್ಲಿ 360 ಡಿಗ್ರಿ ವಿಡೀಯೋ ಮತ್ತು ಫೋಟೊಗಳನ್ನು ನೀವು ನಿಮ್ಮ ಉದ್ಯಮದ ಬೆಳವಣಿಗೆಗೆ ಬಳಸಿಕೊಳ್ಳಬಹುದು.

ಮನಿಟ್ಯಾಪ್ (Money Tap)

ಈ ಆ್ಯಪ್ ಬೇಸ್ಡ್ ಉದ್ಯಮ ಆನ್​ಲೈನ್ ಮೂಲಕ ಸಾಲಗಳನ್ನು ನೀಡುವಂತಹ ಸೌಲಭ್ಯ ಹೊಂದಿದೆ. ಮಾಸಿಕ 25000ಕ್ಕಿಂತಲೂ ಕಡಿಮೆ ಸಂಭಾವನೆ ಹೊಂದಿರುವ ಫುಲ್ ಟೈಮ್ ಸ್ಯಾಲರಿಡ್ ಎಂಪ್ಲಾಯಿಗಳಿಗೆ ಬೇಗನೆ ಸಾಲ ನೀಡುವಂತಹ ಸೌಲಭ್ಯವನ್ನು ಇದು ಪರಿಚಯಿಸುತ್ತದೆ.

ಪಿಕ್ಟರ್

ಇ- ಕಾಮರ್ಸ್ ಫೋಟೋಗ್ರಫಿಯಲ್ಲಿ ಪಿಕ್ಟರ್ ಒಳ್ಳೆಯ ಹೆಸರು ಪಡೆದಿದೆ. ಸ್ಮಾರ್ಟ್ ಫೋನ್​ಗಳನ್ನು ಬಳಸಿಕೊಂಡು ಅತ್ಯುತ್ತಮ ಫೋಟೋಗಳನ್ನು ಹೇಗೆ ತೆಗೆಯಬಹುದು ಅನ್ನೋದನ್ನ ಪಿಕ್ಟರ್ ಹೇಳಿಕೊಡುತ್ತದೆ. ಇತ್ತೀಚಿನ ದಿನಗಳಲ್ಲಿ ಪಿಕ್ಟರ್ ಭಾರಿ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ.

ಯುವರ್ ಸ್ಟೋರಿಯ ಟೆಕ್​ಸ್ಪಾರ್ಕ್ ಹೊಸ ಉದ್ಯಮಿಗಳಿಗೆ ಹೊಸ ಐಡಿಯಾ ಮತ್ತು ದಾರಿಗಳನ್ನು ಹೇಳಿಕೊಟ್ಟಿದೆ. ಮೊಬೈಲ್ ಸ್ಪಾರ್ಕ್ ಮೊಬೈಲ್ ಲೋಕದ ಅನ್ವೇಷಣೆ ಮತ್ತು ಉದ್ಯಮಗಳನ್ನು ಜನರಿಗೆ ಪರಿಚಯಿಸಿದೆ. ನವೆಂಬರ್ 24ಕ್ಕೆ ಪುಣೆಯಲ್ಲಿ IoT ಮೀಟ್ ಅಪ್ ನಡೆಯಲಿದೆ. ಅಲ್ಲಿ ಬಂದು ಹೊಸ ಎಕ್ಸ್​ಪಿರಿಯನ್ಸ್ ಪಡೆಯಲು ಸಜ್ಜಾಗಿ.

ಇದನ್ನು ಓದಿ:

1. ಭಾರತದ ಮೊಬೈಲ್​ ಮಾರುಕಟ್ಟೆಯ ಕಥೆ ಮತ್ತು ಅದರ ಬೆಳವಣಿಗೆ... 

2. 'ಜನಸಾಮಾನ್ಯರಿಗಾಗಿ ಜನ್ಮತಳೆಯುವ ಉದ್ಯಮಗಳಿಗೆ ಸರ್ಕಾರದ ನೆರವು' - ರಾಜೀವ್ ಬನ್ಸಲ್ ಅಭಯ

3. ಸ್ಮಾರ್ಟ್​ ಇದ್ದರಷ್ಟೇ ಸಾಕಾಗೋದಿಲ್ಲ- ದೆಹಲಿ-ಎನ್​ಸಿಆರ್​ನಲ್ಲಿ ಹುಟ್ಟಿದ ಮೊಬೈಲ್​ ಆ್ಯಪ್​ಗಳ ಕಥೆಯನ್ನೂ ಕೇಳಿ..!