"ಓಲಾ ಡ್ರೈವ್" ಈಗ ಮತ್ತಷ್ಟು ಫ್ರೆಂಡ್ಲಿ ವಿತ್ "ಓಲಾ ಪ್ಲೇ"

ಟೀಮ್​ ವೈ.ಎಸ್​. ಕನ್ನಡ

0

ನಿಮ್ಮ ಬಳಿ ಆಂಡ್ರಾಯ್ಡ್ ಮೊಬೈಲ್ ಇದ್ರೆ ಸಾಕು, ಓಲಾ ಆಪ್‍ನ್ನು ಡೌನ್‍ಲೋಡ್ ಮಾಡಿ ನೀವು ಇದ್ದಲ್ಲಿಗೆ ಕಾರ್ ಅಥವಾ ಆಟೋವನ್ನು ಕರೆಸಿ, ಪ್ರಯಾಣ ಬೆಳೆಸಬಹುದು. ಇದು ಎಲ್ಲರಿಗೂ ಗೊತ್ತಿರೋ ಮಾಹಿತಿಯೇ. ಆಟೋವನ್ನು ಹುಡುಕಿ ಹೋಗಿ, ಬೇಕೆಂದಾಗ ಆಟೋ ಸಿಗದೆ, ತಲುಪಬೇಕಾದ ಜಾಗಕ್ಕೆ ಸರಿಯಾದ ಸಮಯಕ್ಕೆ ಪರದಾಡುತ್ತಿದ್ದ ಜನರು ಓಲಾದಿಂದ ತಕ್ಕಮಟ್ಟಿಗೆ ರಿಲ್ಯಾಕ್ಸ್ ಆಗಿದ್ದಾರೆ. ದೇಶದಾದ್ಯಂತ ಓಲಾ ಬಳಕೆದಾರರ ಸಂಖ್ಯೆ ಕೂಡ ಅಷ್ಟೇ ಹೆಚ್ಚಿದೆ. ಜನರ ಪ್ರತಿಕ್ರಿಯೆಯಿಂದ ಸಂತೋಷಗೊಂಡ ಓಲಾ ಸಂಸ್ಥೆ ಈಗ ತನ್ನ ಹೊಸ ಸೇವೆಯೊಂದಿಗೆ ತನ್ನ ಗ್ರಾಹಕರನ್ನು ಮತ್ತಷ್ಟು ತೃಪ್ತಿ ಪಡಿಸೋದಕ್ಕೆ ಮುಂದಾಗಿದೆ.

ಓಲಾ ಪ್ಲೇ.. ಇದು ಓಲಾ ತನ್ನ ಪ್ರಯಾಣಿಕರಿಗಾಗಿ ಸಿದ್ಧಪಡಿಸಿರೋ ಹೊಸ ಸೇವೆ. ನೀವು ಇರುವ ಜಾಗಕ್ಕೆ ಕಾರನ್ನು ಓಲಾ ಆ್ಯಪ್​ನಿಂದ ಬುಕ್ ಮಾಡಿ ತಾವು ಇರುವಲ್ಲಿಗೆ ಕರೆಸಿಕೊಳ್ಳೋ ಗ್ರಾಹಕರು ಈಗ ಓಲಾ ಪ್ಲೇ ನಿಂದ ಹೊಸ ಸೌಲಭ್ಯಗಳನ್ನು ಪಡೆಯಬಹುದು. ಇಷ್ಟು ದಿನ ನೀವು ವಾಹನವನ್ನು ಬುಕ್ ಮಾಡಿದ್ರೆ, ನಿಮ್ಮ ಬಳಿ ವಾಹನ ಬಂದ ಮೇಲಷ್ಟೆ ವಾಹನ ಯಾವುದು ಅನ್ನೋದು ತಿಳಿಯುತ್ತಿತ್ತು. ಆದ್ರೆ, ಓಲಾ ಪ್ಲೇ ಸೇವೆಯಿಂದ ಮೊದಲೇ ವಾಹನ ಯಾವುದೆಂದು ತಿಳಿದು, ಬೇಕಾದ ವಾಹನವನ್ನು ಬುಕ್ ಮಾಡಬಹುದು. ಇದರಿಂದ ವಾಹನದ ಮೇಲೆ ನೀವು ವ್ಯಯಿಸೋ ಹಣವನ್ನು ಕೂಡ ಕಡಿತಗೊಳಿಸಬಹುದು.

ಇನ್ನೂ ಈ ಹಿಂದೆ ನಿಮ್ಮ ಜೊತೆ ಪ್ರಯಾಣ ಮಾಡಿದ ಗ್ರಾಹಕರು ಮತ್ತೊಂದು ಓಲಾ ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದರೆ ಅವರನ್ನೂ ವೀಡಿಯೋ ಮೂಲಕ ಸಂಪರ್ಕಿಸಬಹುದು. ಓಲಾದ ಈ ಹೊಸ ಸೇವೆಯಲ್ಲಿ ನೀವು ಸೇರಬೇಕಾದ ಜಾಗ ಸೇರುವವರೆಗೂ ನಾನ್‍ಸ್ಟಾಪ್ ಎಂಟರ್‍ಟೈನ್‍ಮೆಂಟ್‍ಗೆ ಮೋಸವಿಲ್ಲ. ಓಲಾ ಕಾರಿನಲ್ಲಿ ಸೌಂಡ್ ಸಿಸ್ಟಮ್ ಇದ್ದು ನಿಮ್ಮಿಷ್ಟದ ಹಾಡುಗಳನ್ನು ಕೇಳುತ್ತಾ ಪ್ರಯಾಣ ಬೆಳೆಸಬಹುದು. ಕಾರ್‍ನಲ್ಲಿ ಎಲ್‍ಇಡಿ ಸ್ಕ್ರೀನ್ ಅಳವಡಿಸಿರುವುದರಿಂದ ನೀವು ಕಾರಿನಲ್ಲೇ ವೀಡಿಯೋ ನೋಡ್ತಾ ಮತ್ತಷ್ಟು ಮನೋರಂಜನೆ ಪಡೆಯಬಹುದು. 

ಇದನ್ನು ಓದಿ: ಇವರು ಕೇವಲ ಆಟೋ ಡ್ರೈವರ್​ ಅಲ್ಲ- ಎಲ್ಲರಿಗೂ ಮಾದರಿ ವ್ಯಕ್ತಿ..!

ಇನ್ನೂ ಈ ಹಿಂದೆ ನಿಮ್ಮ ಜೊತೆ ಪ್ರಯಾಣ ಮಾಡಿದ ಗ್ರಾಹಕರು ಮತ್ತೊಂದು ಓಲಾ ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದರೆ ಅವರನ್ನೂ ವೀಡಿಯೋ ಮೂಲಕ ಸಂಪರ್ಕಿಸಬಹುದು. ಓಲಾದ ಈ ಹೊಸ ಸೇವೆಯಲ್ಲಿ ನೀವು ಸೇರಬೇಕಾದ ಜಾಗ ಸೇರೋವರೆಗೂ ನಾನ್‍ಸ್ಟಾಪ್ ಎನ್‍ಟರ್‍ಟೈನ್‍ಮೆಂಟ್‍ಗೆ ಮೋಸವಿಲ್ಲ. ಓಲಾ ಕಾರಿನಲ್ಲಿ ಸೌಂಡ್ ಸಿಸ್ಟಮ್ ಇದ್ದು ನಿಮ್ಮಿಷ್ಟದ ಹಾಡುಗಳನ್ನು ಕೇಳುತ್ತಾ ಪ್ರಯಾಣ ಬೆಳೆಸಬಹುದು. ಕಾರ್‍ನಲ್ಲಿ ಎಲ್‍ಇಡಿ ಸ್ಕ್ರೀನ್ ಅಳವಡಿಸೋದ್ರಿಂದ ನೀವು ಕಾರಿನಲ್ಲೇ ವೀಡಿಯೋ ನೋಡ್ತಾ ಮತ್ತಷ್ಟು ಮನೋರಂಜನೆ ಪಡೆಯಬಹುದು.

ವಿಶೇಷ ಅಂದ್ರೆನೀವು ನೋಡೋ ವೀಡಿಯೋವನ್ನು ಅಥವಾ ಕೇಳೋ ಸಾಂಗ್‍ನ್ನು ಮೊದಲೇ ಸೆಲೆಕ್ಟ್ ಮಾಡಿ ಪ್ರಯಾಣಿಸುವಾಗ ಪ್ಲೇ ಮಾಡಬಹುದು. ಉತ್ತಮ ಕ್ವಾಲಿಟಿಯ ವೀಡಿಯೋಗಳನ್ನು ನಿಮ್ಮ ಮೊಬೈಲ್‍ನಲ್ಲಿ ಓಲಾ ಕ್ಯಾಬ್ ಒಳಗೆ ಕುಳಿತು ವೀಕ್ಷಿಸಬಹುದು. ಮತ್ತೊಂದು ಖುಷಿಯ ವಿಚಾರ ಅಂದ್ರೆ ನಿಮ್ಮ ಮೊಬೈಲ್‍ನಲ್ಲಿವೀಡಿಯೋ ಅಥವಾ ಸಾಂಗ್ ನೋಡೋದು ಓಲಾ ಪ್ಲೇನ ಡಾಟಾದಲ್ಲಿ. ಓಲಾ ಕ್ಯಾಬ್‍ನಲ್ಲಿ ಸಿಗೋ ಇಂಟರ್‍ನೆಟ್‍ನಿಂದ ನೀವು ಹೆಚ್‍ಡಿ ಕ್ವಾಲಿಟಿಯ ವೀಡಿಯೋ ನೋಡಬಹುದು. ಇಷ್ಟೆಲ್ಲಾ ಮನೋರಂಜನೆ ಜೊತೆ ಓಲಾ ಹೊಸ ಸೇವೆಯನ್ನ ತನ್ನ ಗ್ರಾಹಕರಿಗಾಗಿ ನೀಡ್ತಾ ಇದೆ. ಈಗಾಗಲೇ ಈ ಸೇವೆ ಬೆಂಗಳೂರು, ಡೆಲ್ಲಿ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ಅದಾಗಲೇ ಚಾಲ್ತಿಯಲ್ಲಿದೆ. ಮಾರ್ಚ್ 2017ರ ಒಳಗಾಗಿ ಈ ಸೇವೆ 50 ಸಾವಿರ ಕ್ಯಾಬ್‍ಗಳು ದೇಶಾದ್ಯಂತ ಸೇವೆ ಸಲ್ಲಿಸೋಕೆ ಸಿದ್ಧವಾಗ್ತಿವೆ.

ಓಲಾ ಈ ಬಾರಿ ಮಹೀಂದ್ರ ಮತ್ತು ಮಹೀಂದ್ರ, ಜೊತೆ ಪಾರ್ಟ್​ನರ್‍ಶಿಪ್‍ನಲ್ಲಿ ಈ ಸೇವೆ ಆರಂಭಿಸುತ್ತಿದೆ. ಓಲಾ ತನ್ನ ಟ್ರಾನ್ಸ್​ಪೋರ್ಟ್ ಸೇವೆಯೊಂದಿಗೆ ಈಗ ಹೊಸ ಟೆಕ್ನಾಲಜಿಯ ಮೂಲಕ ಹೊಸ ಸೇವೆಯನ್ನು ಶುರು ಮಾಡ್ತಿರೋದು ಗ್ರಾಹಕರಲ್ಲೂ ಖುಷಿತಂದಿದೆ. ಅಷ್ಟೇಅಲ್ಲ, ಈ ಹೊಸ ತಾಂತ್ರಿಕ ಸೇವೆಯೊಂದಿಗೆ ಓಲಾ ಪ್ರಪಂಚದಲ್ಲೇ ಈ ರೀತಿಯ ಸೇವೆ ಕೊಟ್ಟಿದ್ದರಲ್ಲಿ ಮೊದಲು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗ್ತಿದೆ. ಈಗಾಗಲೇ ದಿನವೊಂದಕ್ಕೆ ಗ್ರಾಹಕರು 60 ಮಿಲಿಯನ್ ನಿಮಿಷಗಳಷ್ಟು ಸಮಯವನ್ನು ಓಲಾ ಕ್ಯಾಬ್‍ಗಳಲ್ಲಿ ಕಳೆಯುತ್ತಿದ್ದಾರೆ. ಓಲಾ ಪ್ಲೇ ಅನ್ನೋ ಹೊಸ ಸೇವೆಯಿಂದಾಗಿ ಗ್ರಾಹಕರು ಓಲಾ ಬಗ್ಗೆ ಮತ್ತಷ್ಟು ಒಲವು ತೋರುತ್ತಾರೆ ಅನ್ನೋದು ಓಲಾ ಸಂಸ್ಥೆಯ ವಿಶ್ವಾಸ. ಓಲಾದ ಈ ಹೊಸ ಸೇವೆ ಗ್ರಾಹಕರನ್ನು ಮತ್ತಷ್ಟು ಸೆಳೆಯುವಲ್ಲಿ ಯಶಸ್ವಿಯಾಗಲಿದೆ ಅನ್ನೋದು ಸುಳ್ಳಲ್ಲ. 

ಇದನ್ನು ಓದಿ:

1. ಒತ್ತಡವಿಲ್ಲದ ಕೆಲಸ- ಕೈ ತುಂಬಾ ಸಂಬಳ- ನೆಮ್ಮದಿಯಾಗಿ ಸಮಯ ಕಳೆಯುವ ಬಗ್ಗೆ ಯೋಚನೆ ಮಾಡಿ

2. ನೀವಿದ್ದಲ್ಲಿಗೆ ಅಮ್ಮನ ಕೈತುತ್ತು, ಇದು ಮೈಸೂರಿನ ಟೆಕ್ಕಿಗಳ ಕರಾಮತ್ತು

3. ಬೆಂಗಳೂರಿನಲ್ಲೊಂದು ದೀವಟಿಗೆ ಗ್ರೂಪ್..!

Related Stories