ಸಂಗೀತದೊಂದಿಗೆ ಬದುಕಿಗೆ ಸ್ಪರ್ಶ..!

ಟೀಮ್​ ವೈ.ಎಸ್​.

ಸಂಗೀತದೊಂದಿಗೆ ಬದುಕಿಗೆ ಸ್ಪರ್ಶ..!

Thursday October 29, 2015,

4 min Read

ಅಕು ಚಿಂಗಂಗ್ಬಮ್ ಅವರು ಮಣಿಪುರದಲ್ಲಿ ಮನೆಮಾತು. ಇಂಫಾಲ್​​ನಲ್ಲಿರುವ ಇಂಫಾಲ್ ಟಾಕೀಸ್ ಬ್ಯಾಂಡ್​​​ನ ಜನಪ್ರಿಯ ಮುಂದಾಳು. ಅಕು ಅವರು ಅಸಾಂಪ್ರದಾಯಿಕ ಆಂಥಮ್​​ನಂತಹ ಗೀತೆಗಳು ಯುವ ಜನಾಂಗದ ಮಧ್ಯೆ ಹಿಟ್ ಆಗಿದ್ದವು. ಹಾಗಂತ ಅವರೇನು ಪ್ರೇಮಗೀತೆಗಳನ್ನು ಬರೆಯುತ್ತಿರಲಿಲ್ಲ. ಒಂದು ರೀತಿಯಲ್ಲಿ ಬಂಡಾಯದ ಹಾಡುಗಳ ಮೂಲಕ ತಮ್ಮ ಭಾವನೆಗಳನ್ನು ನೇರವಾಗಿಯೇ ಹೇಳುತ್ತಿದ್ದರು ಅಕು.

image


ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಯೂನಿವರ್ಸಿಟಿಯಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಅಕು, ಎಲ್ಲರಂತೆ ಸಹಜವಾದ ವೃತ್ತಿ ಕೈಗೊಳ್ಳಲು ಮುಂದಾಗಲಿಲ್ಲ. ಬದಲಾಗಿ ತಾನು ಪ್ರೀತಿಸುವ ಸಂಗೀತ ಕ್ಷೇತ್ರದಲ್ಲಿ ಮುಂದುವರಿಯಬೇಕು ಎಂದು ನಿರ್ಧರಿಸಿದರು. ಆದರೆ, ನಾವು ಇವತ್ತು ಅಕು ಬಗ್ಗೆ ಮಾತನಾಡುತ್ತಿಲ್ಲ. ನಾವು ಅವರು ಆರಂಭಿಸಿದ ಮಾನವೀಯ ಯೋಜನೆ – ಎ ನೇಟಿವ್ ಟಂಗ್ ಕಾಲ್ಡ್ ಪೀಸ್ ಬಗ್ಗೆ ಮಾತನಾಡುತ್ತಿದ್ದೇವೆ.

ಗುವಾಹಟಿಯ ಎನ್​​ಜಿಒ- ಫೌಂಡೇಶನ್ ಫಾರ್ ಸೋಷಿಯಲ್ ಟ್ರಾನ್ಸ್​​ಫಾರ್ಮೇಶನ್ ಜೊತೆಗೂಡಿ ಅಕು ಅವರು ಎ ನೇಟಿವ್ ಟಂಗ್ ಕಾಲ್ಡ್ ಪೀಸ್ ಎಂಬ ಯೋಜನೆಯನ್ನು ಕಾರ್ಯರೂಪಕ್ಕೆ ತಂದರು. ಇದು ಸಂಘರ್ಷ ಪೀಡಿತ ಮಣಿಪುರದ ಗುಡ್ಡಗಾಡಿನ ಮಕ್ಕಳಿಗಾಗಿ ಆಯೋಜಿಸಿರು ಕಾರ್ಯಕ್ರಮ, ಶುರುವಾಗಿದ್ದು 2015ರ ಮೇನಲ್ಲಿ.

ಮಣಿಪುರದ ಬೇರೆ ಬೇರೆ ಕೋಮುಗಳ ಮಧ್ಯೆ ಸಂಘರ್ಷದ ವಾತಾವರಣವಿದೆ. ಈ ದ್ವೇಷದ ವಾತಾವರಣವೇ ನನಗೆ ಈ ಯೋಜನೆ ಆರಂಭಿಸಲು ಮೂಲ ಪ್ರೇರಣೆ. ಗುವಾಹಟಿಯ ಎಫ್ಎಸ್ಟಿಯವರು ನನ್ನನ್ನು ಈಶಾನ್ಯ ರೈಸಿಂಗ್ ಫೆಲೋ ಎಂದು ನೇಮಿಸಿದರು. ಅಷ್ಟೇ ಅಲ್ಲ ಯೋಜನೆಗೆ ಸಂಪೂರ್ಣ ಧನಸಹಾಯ ಮಾಡಿದರು.

image


ಮಣಿಪುರದಲ್ಲಿ ವಿವಿಧ ಕೋಮುಗಳ ಮಧ್ಯೆ ಶಾಂತಿ ಮತ್ತು ಸೌಹಾರ್ದತೆ ತರುವ ನಿಟ್ಟಿನಲ್ಲಿ ಅಕು ಮತ್ತು ಅವರ ತಂಡ – ಮೋನಿಕ ಖಂಗೇಂಬಮ್, ಉಷಾರಂಜನ್, ಕರಣ್ಜಿತ್ ಲೈಷ್​ರಾಮ್ – ಸಂಗೀತ, ಅಂಕು ಹೈರಂಗ್​​​ಕಾಂಗ್ಜಮ್ ವಿರಚಿತ ಒರಿಗಮಿ ಮತ್ತು ಕೆಲವು ಮ್ಯೂಸಿಕ್ ಥೆರಪಿಗಳ ಮೂಲಕ ಶ್ರಮಿಸುತ್ತಿದೆ. ಅಲ್ಲದೆ ನಾವು ಅಗತ್ಯಕ್ಕೆ ತಕ್ಕಂತೆ ಮತ್ತಷ್ಟು ಜನರನ್ನೂ ಸೇರಿಸಿಕೊಳ್ಳುತ್ತೇವೆ ಎನ್ನುತ್ತಾ ತನ್ನ ನಂಬಿಕಸ್ಥ ತಂಡವನ್ನುಪರಿಚಯಿಸುತ್ತಾರೆ ಅಕು.

ಇಂಫಾಲ್​​ನಲ್ಲಿ ಮಕ್ಕಳ ಮನೆಯನ್ನು ಆರಂಭಿಸಿರುವ ಈ ಸಂಸ್ಥೆಯು, ಎಲ್ಲಾ ವರ್ಗಗಳ ಮಕ್ಕಳಿಗೆ ಇಲ್ಲಿ ತರಗತಿಗಳನ್ನು ನಡೆಸುತ್ತಿದೆ. ನಾವು ಆರಂಭಿಸಿ ಮೂರು ತಿಂಗಳಾಗಿದೆ. ಮಕ್ಕಳೆಲ್ಲಾ ಒಂದೇ ಸೂರಿನಡಿ ಸಂತೋಷದಿಂದ ಇರುವುದನ್ನು ನೋಡಿದರೆ ಖುಷಿಯಾಗುತ್ತದೆ. ದೊಡ್ಡವರ ರೀತಿಯಲ್ಲಿ ಇವರ ಮನಸ್ಸುಗಳಲ್ಲಿ ಯಾವುದೇ ಕಲ್ಮಶಗಳಿಲ್ಲ, ಜಾತಿ, ಪಂಗಡ, ಧರ್ಮಗಳ ಬೇಧವಿಲ್ಲ, ಎನ್ನುತ್ತಾರೆ ಅಕು.

ಒಂದು ತರಗತಿಯ ಮ್ಯೂಸಿಕ್ ಥೆರಪಿ ವೇಳೆ ಮಕ್ಕಳಿಗೆ ಕಣ್ಣುಮುಚ್ಚಿ ಪೇಪರ್​​ನಲ್ಲಿ ಸಂಗೀತ ಆಲಿಸುತ್ತಾ ಚಿತ್ರ ಬರೆಯಲು ಹೇಳಲಾಗಿತ್ತು. ಇದು ಎಷ್ಟು ಆಪ್ತವಾಗಿತ್ತು ಎಂದರೆ, ಒಂದು ಮಗುವಿನ ಕಣ್ಣಲ್ಲಿ ಕಣ್ಣೀರು ಹರಿದಿತ್ತು. “ಇದು ನನಗೆ ಅತ್ಯಂತ ಖುಷಿ ಕೊಟ್ಟ ಸಮಯ. ನಾನು ಆ ದೃಶ್ಯದ ಫೋಟೋ ತೆಗೆಯುವುದು ಬಿಟ್ಟರೆ ಬೇರೇನೂ ಮಾಡಲು ಸಾಧ್ಯವಾಗಲಿಲ್ಲ. ತರಗತಿ ಕೊನೆ ಹಂತದಲ್ಲಿ ಆ ಹುಡುಗ ಅಳುತ್ತಾ ಮನೆಗೆ ಹೋಗಬೇಕು ಎಂದ,” ಎನ್ನುತ್ತಾ ಘಟನೆ ವಿವರಿಸುತ್ತಾರೆ ಅಕು.

ತಮ್ಮ ಕೆಲಸವನ್ನು ಮಾಡಲು ಸರಿಯಾದ ಮಕ್ಕಳಿರುವ ಸರಿಯಾದ ಮನೆಗಳಿಗಾಗಿ ಆರಂಭದಲ್ಲಿ ಹುಡುಕಾಡಿದೆವು. ನಾನು ಮಕ್ಕಳಿಗಾಗಿ ಆರಂಭಿಸಿದ ಮೊದಲ ಹಾಡು, ಆಲ್ ವಿ ನೀಡ್ ಈಸ್ ಲವ್. ಈ ಹಾಡು ಸಂಗೀತದ ದಂತಕಥೆ ರೂಡಿ ವಾಲ್ಲಂಗ್ (ಬಾಸ್) ಮತ್ತು ಕೈತ್ ವಾಲ್ಲಂಗ್(ಸಾಂಪ್ರದಾಯಿಕ ಖಾಸಿ) ಅವರನ್ನೊಳಗೊಂಡಿದ್ದು, ಅರ್ಧದಷ್ಟು ಭಾಗವನ್ನು ಮಕ್ಕಳ ಮನೆಗಳಲ್ಲಿ, ಮತ್ತು ಉಳಿದ ಭಾಗವನ್ನು ಶಿಲ್ಲಾಂಗ್ ಮತ್ತು ಇಂಫಾಲ್​​ನ ಶಾಲ್ಲೋ ರಿವರ್ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗಿತ್ತು.

ಈವರೆಗೆ ನಾವು ಎರಡು ಹಾಡುಗಳನ್ನೂ ಪೂರ್ತಿಗೊಳಿಸಿದ್ದೇವೆ ಎನ್ನುತ್ತಾರೆ ಅಕು. ಎರಡನೇ ಹಾಡು ತುಂಬಾ ವಿಶೇಷವಾದದ್ದು ಎನ್ನುತ್ತಾರೆ ಮೋನಿಕಾ ಖಂಗೇಂಬಮ್. “ನಮ್ಮಲ್ಲಿನ ಹೆಣ್ಣುಮಕ್ಕಳ ಬಾರ್ಬಿ ಡಾಲ್ ಬೇಕು ಎಂದು ಹಠ ಹಿಡಿದಿದ್ದರು. ಆದರೆ, ಅವು ದುಬಾರಿಯಾಗಿದ್ದವು. ನಾವು ಎಮ್ಮಾ ಮಾರುಕಟ್ಟೆಗೆ ಹೋಗಿ ಕೆಲವು ಗೊಂಬೆಗಳಲ್ಲಿ ಮಕ್ಕಳಿಗೆ ಕೊಡಿಸಿದೆವು. ಅವರು ತುಂಬಾ ಖುಷಿ ಪಟ್ಟರು. ಅದಾದ ಬಳಿಕ ಅವರಿಗೆ ಸಂಗೀತದಲ್ಲಿ ಆಸಕ್ತಿ ಕೂಡಾ ಹೆಚ್ಚಾಯಿತು. ಅಕು ಬಂದ ತಕ್ಷಣ ಅವರನ್ನು ಸುತ್ತುವರಿಯಲು ಆರಂಭಿಸಿದರು. ನಾವು ಹಾಡನ್ನು ಪೂರ್ತಿಗೊಳಿಸಿದೆವು. ಅದನ್ನು ರೆಕಾರ್ಡ್ ಮಾಡಬೇಕಿತ್ತು,” ಎನ್ನುತ್ತಾರೆ ಮೋನಿಕಾ. ಈ ಹಾಡನ್ನು ಅಕು ಮತ್ತು ಮಕ್ಕಳು ಬರೆದಿದ್ದಾರೆ. ಅವರು ಗಿಟಾರ್ ಬಾರಿಸುತ್ತಾರೆ. ಕ್ರಿಯೇಟಿವ್ ಆಗಿರುತ್ತಾರೆ. ನಾವು ಅವರ ಬಗ್ಗೆ ಹೆಮ್ಮೆ ಪಡುತ್ತೇವೆ. ಆದರೆ, ಇಂಫಾಲ್​​ನಲ್ಲಿ ಪದೇಪದೇ ನಡೆಯುವ ಬಂದ್​​ಗಳಿಂದಾಗಿ ಹಾಡಿನ ಬಿಡುಗಡೆ ತಡವಾಗಿದೆ ಎನ್ನುತ್ತಾರೆ ಮೋನಿಕಾ.

image


“ಅವರ ಜೊತೆ ಕೆಲಸ ಮಾಡುವುದು ಖುಷಿ ಕೊಡುತ್ತದೆ. ನಾವು ಮಕ್ಕಳಿಂದ ಬಹಳಷ್ಟನ್ನು ಕಳೆದಿದ್ದೇವೆ. ಆದರೆ, ಮಕ್ಕಳಿಗಾಗಿ ಹಾಡು ಬರೆಯುವುದು ತುಂಬಾ ಕಷ್ಟದ ಕೆಲಸ ಎನ್ನುವುದು ಅರಿವಾಗಿದೆ,” ಎನ್ನುತ್ತಾರೆ ಅಕು. ಇದು ಮೇಲ್ನೋಟಕ್ಕೆ ಖುಷಿ ಎನ್ನಿಸುತ್ತದೆ. ಆದರೆ, ನಿಜವಾಗಿಯೂ ನಮಗೆ ತುಂಬಾ ಮನಕಲಕುವ ಘಟನೆಗಳೂ ಎದುರಾಗಿವೆ. “ನಮ್ಮ ಸಂಗೀತ ಥೆರಪಿ ತರಗತಿಗಳಲ್ಲಿ ಎಷ್ಟೋ ಮಕ್ಕಳು ಬಿಕ್ಕಿಬಿಕ್ಕಿ ಅತ್ತಿದ್ದಿದೆ. ಅಂತಹ ಮಕ್ಕಳಿಗಾಗಿ ನಾವು ಮತ್ತಷ್ಟು ಮಾಡಬೇಕಾಗುತ್ತದೆ. ನಿಮಗೆ ಗೊತ್ತೇ? ನಾವು ಅವರ ಕಥೆಗಳನ್ನು ಕೇಳಿದಷ್ಟೂ ಅವರಿಗೆ ಇನ್ನೂ ಹೆಚ್ಚಿನದ್ದನ್ನು ಮಾಡಬೇಕು ಎನ್ನಿಸುತ್ತದೆ.” ಎನ್ನುತ್ತಾ ಒಂದು ಕ್ಷಣ ಮೌನದ ಮೊರೆ ಹೋಗುತ್ತಾರೆ ಅಕು. ಅವರ ಬಳಿ ಇರುವ 62ಮಕ್ಕಳಿಗೆ ಸಹಾಯ ಮಾಡಲೂ ಅವರ ಬಳಿ ಇರುವುದು ನಿಗದಿತ ಸಂಪನ್ಮೂಲ ಮಾತ್ರ.

ಮಕ್ಕಳು ಯಾವಾಗಲೂ ದೊಡ್ಡ ಪಾಠವನ್ನೇ ಕಲಿಸುತ್ತಾರೆ. ಜೀವನ ಏನು ಎನ್ನುವುದನ್ನು ಕಲಿಸುತ್ತಾರೆ. ಹೌದು ನಾವು ಜೀವನದ ಅತ್ಯುತ್ತಮ ಮತ್ತು ಅತ್ಯಂತ ಕಠಿಣ ಪಾಠಗಳನ್ನು ಈ ಮಕ್ಕಳಿಂದಲೇ ಕಲಿತಿದ್ದೇವೆ ಎನ್ನುತ್ತಾರೆ ಅಕು ತಂಡದ ಸದಸ್ಯರು. “ನನಗೆ ಈ ಮಕ್ಕಳ ಜೊತೆ ನೂರಾರು ಸ್ಮರಣಾರ್ಹ ನೆನಪುಗಳಿವೆ. ನಾನು ಇವರ ಜೊತೆ ಕಳೆದ ಪ್ರತಿಯೊಂದು ಕ್ಷಣವೂ ನನ್ನನ್ನು ಮತ್ತಷ್ಟು ತಾಳ್ಮೆಯ ಮನುಷ್ಯನನ್ನಾಗಿ ರೂಪಿಸಿದೆ. ಮಕ್ಕಳು ನಿಮಗೆ ನಿಷ್ಕಲ್ಮಶ ಪ್ರೀತಿ ಕಲಿಸುತ್ತಾರೆ. ಪ್ರತಿಯೊಂದು ಕ್ಷಣವನ್ನೂ ಜವಬ್ದಾರಿಯುತವಾಗಿ ಕಳೆಯುವಂತೆ ಮಾಡುತ್ತಾರೆ ಎನ್ನುತ್ತಾರೆ ಮೋನಿಕಾ.

image


ಪ್ರತಿಯೊಂದು ಮಕ್ಕಳ ಹಾಗೆ, ಇವರಿಗೂ ಹುಟ್ಟುಹಬ್ಬ ಆಚರಿಸಿಕೊಳ್ಳುವ ಆಸೆ ಇರುತ್ತದೆ. ನಾನು ಕೂಡಾ ನನ್ನ ಬರ್ತ್​ಡೇ ದಿನಕ್ಕಾಗಿ ತುಂಬಾ ಕಾಯುತ್ತಿದ್ದೆ, ಎಕ್ಸೈಟ್ ಆಗುತ್ತಿದ್ದೆ. ಮಕ್ಕಳ ಮನೆಯಲ್ಲಿನ ಸಿಬ್ಬಂದಿ ಜೊತೆ ನಾನು ಈ ಬಗ್ಗೆ ಚರ್ಚಿಸಿದೆ. ಆದರೆ, ಇಲ್ಲಿ ನಾವು ಎಲ್ಲರ ಬರ್ತ್​ಡೇಯನ್ನು ಆಚರಿಸಲು ಸಾಧ್ಯವಿರಲಿಲ್ಲ. ಕಾರಣ, ಕೆಲವರ ಹುಟ್ಟಿದ ದಿನ ಆಗಲೇ ಕಳೆದು ಹೋಗಿತ್ತು. ಅಲ್ಲದೆ, ಅಲ್ಲಿ 62 ಮಕ್ಕಳಿದ್ದರು. ಅಷ್ಟೂ ಮಕ್ಕಳ ಹುಟ್ಟುಹಬ್ಬ ಆಚರಿಸಲು, ಕೇಕ್ ತರಲು ನಮ್ಮಲ್ಲಿ ಹಣಕಾಸಿನ ಸೌಲಭ್ಯ ಇರಲಿಲ್ಲ. ಹೀಗಾಗಿ ನಾವು ಗುಂಪಾಗಿ ಒಂದೇ ಹುಟ್ಟುಹಬ್ಬ ಆಚರಿಸಲು ತೀರ್ಮಾನಿಸಿದೆವು. ಆ ಮಕ್ಕಳ ಪೈಕಿ ಕೆಲವರಿಗೆ ಹುಟ್ಟಿದ ದಿನವೇ ಗೊತ್ತಿರಲಿಲ್ಲ. ಹೀಗಾಗಿ, ಎಲ್ಲರಿಗೂ ಒಂದೇ ದಿನ ಹುಟ್ಟುಹಬ್ಬ ಆಚರಿಸಲು ಆರಂಭಿಸಿದೆವು. ನಾವು ಎರಡು ದೊಡ್ಡ ಪೈನಾಪಲ್ ಕೇಕ್ ತಯಾರಿಸಿದೆವು. ಡಜನ್​​ಗಟ್ಟಲೆ ಕ್ಯಾಂಡಲ್ ಉರಿಸಿದೆವು. ಎಲ್ಲರೂ ಸೇರಿ ಅದನ್ನು ಆರಿಸಿ, ಹ್ಯಾಪಿ ಬರ್ತ್​ಡೇ ಅಸ್ ಅಂತ ಜೋರಾಗಿ ಹಾಡಿದೆವು. ಇದು ನನ್ನ ಜೀವನದ ಅತಿ ತೃಪ್ತಿದಾಯಕ ಕ್ಷಣವಾಗಿತ್ತು,” ಎಂದು ವಿವರಿಸುತ್ತಾರೆ ಮೋನಿಕಾ.

ಈ ಅಕ್ಟೋಬರ್ ವೇಳೆಗೆ ಪ್ರಾಜೆಕ್ಟ್ ಮುಗಿದಿದೆ. ಮಕ್ಕಳಿಗಾಗಿ ಅವರು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ನಾವು ಕೇವಲ ಶಾಂತಿಯನ್ನಷ್ಟೇ ಹುಡುಕೋಣ, ಅದು ಅಷ್ಟು ಕಷ್ಟವಲ್ಲ ಎನ್ನುತ್ತಾ ಮಾತು ಮುಗಿಸುತ್ತಾರೆ ಅಕು.