ಕೆಲಸಕ್ಕಾಗಿ ಕನ್ನಡವಲ್ಲ.. ಪ್ರೀತಿಗಾಗಿ ಕನ್ನಡ: ರಾಧಿಕಾ ಪಂಡಿತ್​​​​​​

ಪೂರ್ವಿಕಾ

0

  • ಸೆಲೆಬ್ರಿಟಿ: ರಾಧಿಕಾ ಪಂಡಿತ್​​​, ನಟಿ
  • ನಿರೂಪಣೆ: ಪೂರ್ವಿಕಾ

ಅಪ್ಪಟ ಚೆಲುವೆ. ಮುದ್ದು ಮುಖ. ಮಾತನಾಡಿದ್ರೆ ಮತ್ತೊಮ್ಮೆ ಮಾತನಾಡಬೇಕು ಅನ್ನಿಸುವಷ್ಟು ಸ್ವಚ್ಛ ಕನ್ನಡ. ಆಕೆಗೆ ಫಿಲಂಫೇರ್​​​ ಪ್ರಶಸ್ತಿಗಳು ಸಿಕ್ಕಿವೆ. ಕನ್ನಡ ಚಿತ್ರರಂಗದ ಅದ್ಭುತ ಕಲಾವಿದೆ ಅನ್ನೋ ಪಟ್ಟವೂ ಇದೆ.

ರಾಧಿಕಾ ಪಂಡಿತ್. ಕನ್ನಡ ಚಿತ್ರರಂಗದ ಅದ್ಬುತ ಕಲಾವಿದೆ. ಚಿತ್ರರಂಗಕ್ಕೆ ಬಂದು ಏಳೇ ವರ್ಷವಾದ್ರೂ ಸಾಧಿಸಿದ್ದು ಅಪಾರ. ರಾಜ್ಯ ಪ್ರಶಸ್ತಿ ಹಾಗೂ ಮೂರು ಫಿಲ್ಮಂ ಫೇರ್‍ ಅವಾರ್ಡ್ ಗಿಟ್ಟಿಸಿಕೊಂಡಿರೋ ಏಕೈಕ ಕನ್ನಡ ನಟಿ. ಮಾತೃ ಭಾಷೆ ಕೊಂಕಣಿಯಾದ್ರು ಕೂಡ ಕನ್ನಡ ಭಾಷೆಯ ಮೇಲಿನ ಪ್ರೀತಿ ಮಾತ್ರ ಅಪಾರ. ಸದ್ಯ ಸ್ಯಾಂಡಲ್​​ವುಡ್​​ನಲ್ಲಿ ನಂಬರ್​​ 1 ಪಟ್ಟದಲ್ಲಿರೋ ಈ ನಟಿಯಕನ್ನಡದ ಮೇಲಿನ ವಿಶಿಷ್ಠ ಪ್ರೀತಿ ಎಂತದ್ದು ಅನ್ನೋದನ್ನ ಅವರ ಮಾತಲ್ಲೇ ಕೇಳಿ..

ರಾಧಿಕಾ ಪಂಡಿತ್‍ ಅಂದ ತಕ್ಷ ಣ ಅದೆಷ್ಟೋ ಅಭಿಮಾನಿಗಳು ಗೋವಾದ ಮೂಲದವರು ಅಂತ ತಿಳ್ಕೋತಾರೆ. ಆದ್ರೆ ರಾಧಿಕಾ ಕರ್ನಾಟಕದ ಹುಡುಗಿ. ಅದು ಇದೇ ಬೆಂಗಳೂರಿನವರು. ಹುಟ್ಟಿ ಬೆಳದಿದ್ದು ಬೆಂಗಳೂರಿನಲ್ಲೇ..ತಾಯಿಯ ಊರು ಗೋವಾ ಆಗಿರೋದ್ರಿಂದ ಆಗಾಗ ಗೋವಾಗೆ ಹೋಗಿ ಬರೋದು ಕಾಮನ್. ಅದನ್ನ ಬಿಟ್ಟರೆ ರಾಧಿಕಾ ಹುಟ್ಟಿ ಬೆಳೆದಿದ್ದು ಹಾಗೂ ವಿದ್ಯಾಭ್ಯಾಸವೆಲ್ಲ ಆಗಿದ್ದು ಬೆಂಗಳೂರಿನಲ್ಲೇ. ಮನೆಯಲ್ಲಿ ಕೊಂಕಣಿ ಮಾತು ಶಾಲೆ ಹಾಗೂ ಕಾಲೇಜಿನಲ್ಲಿ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ವಿದ್ಯಾಭ್ಯಾಸ. ಇದ್ರ ಮಧ್ಯೆಯಲ್ಲಿ ಸ್ನೇಹಿತರ ದಂಡು ಇದ್ದದ್ದು ಗುಜರಾತಿ ಹಾಗೂ ತೆಲುಗು ಮಾತನಾಡುವವರು. ಆದ್ರೂರಾಧಿಕಾ ಪಂಡಿತ್‍ ಇವತ್ತು ಚಿತ್ರರಂಗದಲ್ಲಿ ಸುಲಲಿತವಾಗಿ ಹಾಗೂ ಸ್ಪಷ್ಟವಾಗಿ ಇಷ್ಟಪಟ್ಟು ಕನ್ನಡ ಮಾತನಾಡುವ ನಟಿ.

ಕನ್ನಡದ ಕಂಪೇ ಸೋಕದಂತಿದ್ದ ಈ ನಟಿಗೆಕಾಲೇಜಿನ ವಯಸ್ಸಿನಲ್ಲೇ ಕನ್ನಡದ ಮೇಲಿನ ಪ್ರೀತಿ ಹಾಗೂ ಅಭಿಮಾನ ಅಪಾರವಾಗಿತ್ತು..ಇಲ್ಲೇ ಹುಟ್ಟಿಇಲ್ಲೇ ಬೆಳೆದು ಕರ್ನಾಟಕಕ್ಕೆ ಸೇರಿದವಳಾದ ನಾನು ಕನ್ನಡ ಕಲಿಯಲೇ ಬೇಕು ಅನ್ನೋ ಹಠ ಹಿಡಿದು ರಾಧಿಕಾ ಕನ್ನಡಕ ಲಿಯೋದಕ್ಕೆ ಪ್ರಾರಂಭ ಮಾಡಿದ್ರು. ಯಾವುದೇ ವಿಚಾರವನ್ನ ಇಷ್ಟ ಪಟ್ಟುಕಲಿಯಬೇಕು ಆಗ ಮಾತ್ರ ಅದು ಸುಲಭ ಸಾಧ್ಯ ಅನ್ನೋ ರಾಧಿಕಾ ಕನ್ನಡವನ್ನ ಇಷ್ಟಪಟ್ಟು ಪ್ರೀತಿಯಿಂದ ಕನ್ನಡ ಕಲಿತ್ರು. ಮೊದಲು ಆರಂಭದ ಹೆಜ್ಜೆಯಲ್ಲಿ ಕನ್ನಡಕಲಿಯೋದಕ್ಕೆ ಸಾಥ್ ನೀಡಿದ್ದು ಕಿರುತೆರೆಯ ಟೀಂ. ನಂದಗೋಕುಲ ಸೀರಿಯಲ್ ನ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ರಾಧಿಕಾ ಕನ್ನಡ ಕಲಿಯೋದಕ್ಕೆ ಮತ್ತಷ್ಟು ಪುಷ್ಠಿ ನೀಡಿದಂತಾಯ್ತು..ಅಷ್ಟೇ ಅಲ್ಲದೆ ಅವರ ಸಹಕಾರ ಕೂಡ ತುಂಬಾನೇ ಇತ್ತು ಅಂತಾರೆ ರಾಧಿಕಾ. ಕನ್ನಡ ಕಲಿಯಬೇಕಾದ್ರೆ ಯಾರೂ ನನ್ನ ಕಾಲೆಳೆಯಲಿಲ್ಲ. ಬದಲಾಗಿ ಪ್ರೋತ್ಸಾಹ ನೀಡಿದ್ರು. ಆವತ್ತಿನ ಪರಿಶ್ರಮ ಇವತ್ತು ನನಗೆ ದೊಡ್ಡ ಪಟ್ಟವನ್ನೇ ತಂದು ಕೊಟ್ಟಿದೆ ಅಂತಾರೆ ಈ ಚೆಲುವೆ.

ಎಂದಿಗೂ ಕನ್ನಡವನ್ನ ಅನಿವಾರ್ಯ ಮಾಡಿಕೊಳ್ಳದ ರಾಧಿಕಾ ಪಂಡಿತ್ ನಾನು ಕನ್ನಡವನ್ನ ಇಷ್ಟಪಟ್ಟು ಕಲಿತೆ. ಯಾವತ್ತು ನನಗೆ ಕೆಲಸಕ್ಕೆ ಉಪಯೋಗ ಆಗುತ್ತೆ ಅನ್ನೋಉದ್ದೇಶ ನನ್ನಲ್ಲಿ ಇರಲಿಲ್ಲ. ಚಿತ್ರರಂಗಕ್ಕಾಗಿ ಭಾಷೆ ಕಲಿಯಬೇಕು ಅಂತ ಇದ್ದಿದ್ರೆ ಕನ್ನಡ ಕಲಿಯೋ ಅವಶ್ಯಕತೆಯೇ ಇರಲಿಲ್ಲ. ಯಾಕಂದ್ರೆ ನಟನೆ ಬಂದಿದ್ರೆ ಸಾಕಿತ್ತು. ಆದ್ರೆ ನನಗೆ ಕನ್ನಡಕಲಿಯಲೇ ಬೇಕು ಅನ್ನೋ ಹಠ ಇತ್ತು. ನಾನು ಹುಟ್ಟಿದ್ದು ಇಲ್ಲಿ. ಬೆಳೆದಿದ್ದು ಇಲ್ಲಿ. ಏನೇ ಕಲಿತಿದ್ರು ಅದು ಇಲ್ಲೇ. ನಾನು, ಇಲ್ಲಿಯ ಭಾಷೆಯನ್ನ ಮಾತನಾಡೋದು ಅಷ್ಟೇ ಅಲ್ಲ, ಓದೋಕೆ ಬರೆಯೋದಕ್ಕೂ ಕಲಿತೆ. ಈ ಬಗ್ಗೆ ನನಗೆ ಹೆಮ್ಮೆಇದೆ. ಇನ್ನೂ ನನ್ನ ಸಿನಿಮಾಗಳಿಗೆ ನಾನೇ ಡಬ್ಬಿಂಗ್ ಮಾಡ್ತಿನಿ. ಇದರಿಂದಲೇ ನಾನು ಇವತ್ತು ಪರಿಪೂರ್ಣ ನಟಿ ಅನ್ನಿಸಿಕೊಳ್ಳೊದಕ್ಕೆ ಸಾಧ್ಯವಾಗಿರೋದು. ನಾನು ಇಲ್ಲಿವರೆಗೂ ಯಾರ ಮೇಲು ಡಪೆಂಡ್ ಆಗೋ ಅವಶ್ಯಕತೆ ಇರೋದಿಲ್ಲ. ನನ್ನ ಸ್ಕ್ರೀಪ್ಟ್ ನಾನೇ ಓದುತ್ತೇನೆ, ನಾನೇ ಬರೆಯುತ್ತೇನೆ, ಇದರ ಬಗ್ಗೆ ತುಂಬಾನೇ ಖುಷಿ ಆಗುತ್ತೆ.

ಇನ್ನು ಚಿಕ್ಕ ಸಮಯದಲ್ಲೇ ಮೂರು ಹ್ಯಾಟ್ರಿಕ್‍ ಒಂದು ರಾಜ್ಯ ಪ್ರಶಸ್ತಿ ಪಡೆದುಕೊಂಡಿರೋ ರಾಧಿಕಾ ಪಂಡಿತ್‍ ಕನ್ನಡ ಅಭಿಮಾನ ಅವರನ್ನಎಷ್ಟರ ಮಟ್ಟಿಗೆ ಆವರಿಸಿಕೊಂಡಿದೆ ಅಂದ್ರೆ ಇಷ್ಟೆಲ್ಲಾ ಫೇಮಸ್‍ ಆಗಿರೋ ರಾಧಿಕಾ ಬೇರೆ ಇಂಡಷ್ಟ್ರೀ ಯಲ್ಲಿ ಅಭಿನಯಿಸಿ ಅಲ್ಲಿಯೂ ಪ್ರಸಿದ್ದಿ ಪಡೆಯಬೇಕು ಅನ್ನೋ ಯೋಚನೆ ಕೂಡ ಮಾಡಿಲ್ಲ. ಕನ್ನಡ ನಮ್ಮಮ್ಮಕರುನಾಡು ನಮ್ಮ ಮನೆ ಅನ್ನೋ ಮನೋಭಾವ ಇರೋ ಈ ನಟಿಗೆ ಕರ್ನಾಟಕದ ಬಂಧ ಸಾಕಷ್ಟು ಗಟ್ಟಿಯಾಗಿದೆ. ರಾಧಿಕಾ ಪಂಡಿತ್‍ ಅವ್ರಿಗೆ ಇಲ್ಲಿಯ ಮನೆ ಮಗಳು ಅಂತ ಹೆಸರು ಪಡೆದಿರೋದು ಇಲ್ಲಿಯ ಜನತೆಯನ್ನ ಬಿಟ್ಟುದೂರ ಹೋಗಲು ಇಷ್ಟವಿಲ್ಲವಂತೆ.

ಇಷ್ಟೆಲ್ಲಾ ಪ್ರಸಿದ್ದಿ ,ಸಾಧನೆ ಪಡೆದಿರೋ ರಾಧಿಕಾಗೆ ಸ್ಪೂರ್ತಿ ಯಾರು ಅಂತ ಕೇಳಿದ್ರೆ ಕನ್ನಡ ಭಾಷೆ ಹಾಗೂ ಅಭಿಮಾನಿಗಳ ಪ್ರೀತಿ ಅಂತಾರೆ. ಹೌದು ಕನ್ನಡ ಕಲಿತು ಕನ್ನಡದಲ್ಲಿ ಹೆಮ್ಮೆಯ ನಟಿ ಅಂತ ಕರೆಸಿಕೊಳ್ಳೊಕೆ ಈ ಬಾಷೆಯೇ ಸ್ಪೂರ್ತಿ ಅಂತಾರೆ

ಇನ್ನು ನವೆಂಬರ್ ತಿಂಗಳಿಗೆ ಮಾತ್ರ ಕನ್ನಡದ ಕಾರ್ಯಕ್ರಮವನ್ನ ಸೀಮಿತ ಮಾಡಿ ಆಚರಣೆ ಮಾಡುವವರಿಗೆ ರಾಧಿಕಾ ಕಿವಿ ಮಾತು ಹೇಳೋದು ಹೀಗೆ. ರಾಜ್ಯೋತ್ಸವ ಆಗಲಿ ಕನ್ನಡ ಹಬ್ಬವಾಗಲಿ ಒಂದು ದಿನಕ್ಕೆ ಸೀಮಿತಿ ಆಗಬಾರದು,ಯಾಕಂದ್ರೆ ಪ್ರತಿ ದಿನವೂ ಕನ್ನಡ ನಮ್ಮ ಉಸಿರಿನಲ್ಲಿ ಬೆರತು ಹೋಗಬೇಕು ಅನ್ನೋದು ರಾಧಿಕಾ ಅಭಿಪ್ರಾಯ. ಸಿನಿಮಾ ಚಿತ್ರೀಕರಣ ,ಫ್ಯಾಮಿಲಿಯ ಜೊತೆ ಬ್ಯೂಸಿ ಆಗಿರೋ ರಾಧಿಕಾ ಕಳೆದ ವರ್ಷ ರಾಜ್ಯಾತ್ಸವಕ್ಕೆ ಯುಎಸ್​​​ಎಯಲ್ಲಿ ನಡೆದ ನಾವಿಕ ಅನ್ನೋ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಅಲ್ಲಿಯ ಕನ್ನಡಿಗರು ಹಾಗೂ ಅಲ್ಲಿಯ ಮಕ್ಕಳು ಕನ್ನಡವನ್ನ ಮಾತನಾಡೋದನ್ನ ಕಂಡುತುಂಬಾನೇ ಸಂತೋಷ ಪಟ್ಟಿದ್ದಾರೆ..ಅಷ್ಟೇ ಅಲ್ಲದೆ ಅಲ್ಲಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬೊಸ್ಟನ್​​​ನ ಮೇಯರ್‍ ತುಂಬಾನೇ ಖುಷಿ ಪಟ್ಟಿದ್ದಾರೆ ಅದರ ಜೊತೆಗೆ ಒಂದು ಭಾಷೆಯನ್ನ ಇಷ್ಟು ಸಂಭ್ರಮದಿಂದ ಆಚರಣೆ ಮಾಡ್ತಾರೆ. ಇದಕ್ಕೆಗೌರವಿಸಬೇಕು ಅನ್ನೋ ಕಾರಣದಿಂದ ಕಳೆದ ವರ್ಷದಿಂದ ಬಾಸ್ಟನ್​​ನಲ್ಲಿ ನವೆಂಬರ್ 1 ತಾರೀಖನ್ನ ಕನ್ನಡದ ದಿನ ಅಂತ ಘೋಷಣೆ ಮಾಡಿದ್ದಾರೆ. ಇಂತದೊಂದು ದಿನಕ್ಕೆ ರಾಧಿಕಾ ಪಂಡಿತ್ ಸಾಕ್ಷಿ ಆಗಿರೋದಕ್ಕೆ ತುಂಬಾನೇ ಖುಷಿಯಾಗಿದ್ದಾರೆ. ಡಬ್ಬಿಂಗ್ ವಿಚಾರವಾಗಿ ಮಾತನಾಡೋ ರಾಧಿಕಾ ಪಂಡಿತ್‍ ಡಬ್ಬಿಂಗ್​​​ನಿಂದ ಇಲ್ಲಿ ಅದೆಷ್ಟೋ ಜನರು ಕೆಲಸ ಕಳೆದುಕೊಳ್ತಾರೆ. ನಮ್ಮಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರತಿಭಾವಂತ ಕಲಾವಿದರು,ನಿರ್ದೇಶಕರು ಬರ್ತಿದ್ದಾರೆ ಅವರಿಗೇ ಅವರದ್ದೇ ಆದ ಅವಕಾಶ ಬೇಕಿದೆ. ಹಾಗಾಗಿ ಡಬ್ಬಿಂಗ್‍ ದೂರ ಇದ್ರೆನೇ ಚೆಂದ ಅನ್ಸುತ್ತೆ ಅಂತಾರೆ. ಈ ಬಾರಿಯರಾಜ್ಯೋತ್ಸವವನ್ನ ವಿಶೇಷವಾಗಿ ಆಚರಣೆ ಮಾಡಲು ಸಿದ್ದವಾಗಿರೋ ರಾಧಿಕಾ ಪಂಡಿತ್ ಬಿಡುವು ಮಾಡಿಕೊಂಡು ತಮ್ಮ ಅಭಿಮಾನಿಗಳನ್ನ ಬೇಟಿ ಮಾಡಲಿದ್ದಾರೆ. ಹುಟ್ಟುಹಬ್ಬದಂದು ಅಭಿಮಾನಿಗಳನ್ನ ಬೇಟಿ ಮಾಡಲು ಸಮಯ ಸಿಕಿಲ್ಲ ಆದ್ರಿಂದ ಈ ರಾಜ್ಯೋತ್ಸವ ಅಭಿಮಾನಿಗಳ ಜೊತೆ ಆಚರಣೆ ಅಂತಾರೆ ರಾಧಿಕಾ. 

ಒಟ್ಟಿನಲ್ಲಿ ಇಲ್ಲೇ ಹುಟ್ಟಿಇಲ್ಲೇ ಬೆಳೆದು ಕನ್ನಡ ಕಲಿಯೋದಕ್ಕೆ ಹಿಂದುಮುಂದು ನೋಡೋ ಜನರಿಗೆ ಎಂದೆಂದಿಗೂ ಸ್ಪೂರ್ತಿ ಈ ನಟಿ. ರಾಧಿಕಾ ಕನ್ನಡದಲ್ಲೇ ಆಟೋಗ್ರಾಫ್​​ ಹಾಕೋ ಮೂಲಕ ತನ್ನ ಕನ್ನಡ ಪ್ರೇಮವನ್ನು ಅಭಿಮಾನಿಗಳಿಗೂ ಹಂಚಿದ್ದಾರೆ