ಸ್ಟಾರ್ಟ್ ಟೆಲ್ ಅವಿವ್ ಸ್ಪರ್ಧೆಯಲ್ಲಿ ಜಯಗಳಿಸಿದ ಮುಂಬೈ ಮೂಲದ ಆಡಿಯೋ ಕಂಪಾಸ್ ಸಂಸ್ಥೆ

ಟೀಮ್​​ ವೈ.ಎಸ್​​. ಕನ್ನಡ

ಸ್ಟಾರ್ಟ್ ಟೆಲ್ ಅವಿವ್ ಸ್ಪರ್ಧೆಯಲ್ಲಿ ಜಯಗಳಿಸಿದ ಮುಂಬೈ ಮೂಲದ ಆಡಿಯೋ ಕಂಪಾಸ್ ಸಂಸ್ಥೆ

Sunday December 06, 2015,

2 min Read

ಸ್ಟಾರ್ಟ್ ಟೆಲ್ ಅವಿವ್- ಇಂಡಿಯಾ ಪೈನಲ್ಸ್ ಸ್ಪರ್ಧೆಯಲ್ಲಿ ಆಡಿಯೋ ಕಂಪಾಸ್ ಎಂಬ ಮುಂಬೈ ಮೂಲದ ಸಂಚಾರಿ ಪ್ರಯಾಣ ಮಾರ್ಗದರ್ಶನ ಸಂಸ್ಥೆ ವಿಜೇತ ಸಂಸ್ಥೆಯಾಗಿ ಹೊರಹೊಮ್ಮಿದೆ. ಈ ಸಂಸ್ಥೆ ಸೆಪ್ಟೆಂಬರ್‌ನಲ್ಲಿ ಇಸ್ರೇಲ್‌ನಲ್ಲಿ ನಡೆದ ಡಿಜಿಟಲ್ ಲೈಫ್ ಡಿಸೈನ್ ಫೆಸ್ಟಿವಲ್‌ನಲ್ಲಿ ಭಾಗಿಯಾಗುವ ಅವಕಾಶ ಪಡೆದಿತ್ತು. ಬಹುರಾಷ್ಟ್ರೀಯ ನೂರಕ್ಕೂ ಹೆಚ್ಚು ಉದ್ಯಮಗಳು, ಹೂಡಿಕೆದಾರರು ಮತ್ತು ಪ್ರಪಂಚದಾದ್ಯಂತ ಇರುವ 20ಕ್ಕೂ ಹೆಚ್ಚು ಸಂಸ್ಥೆಗಳು ಇದರಲ್ಲಿ ಭಾಗಿಯಾಗಿದ್ದವು. ಈ ಆರ್ಥಿಕ ವರ್ಷದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಭಾರತದಿಂದ 100 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ದೆಹಲಿಯಲ್ಲಿ ಏರ್ಪಡಿಸಲಾಗಿದ್ದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ 6ಝೆನೆ ಟೆಕ್ನಾಲಜೀಸ್, ಎಕ್ಸ್ ಎಲ್ ಪಿಎಟಿ ಟಿಟಿ ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್, ಲಿಂಕ್‌ಸ್ಮಾರ್ಟ್ ಟೆಕ್ನಾಲಜೀಸ್, ವಿಡ್ ಗ್ಯಾರ್ ಮೀಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಆಡಿಯೋ ಕಂಪಾಸ್ ಮತ್ತು ಲ್ಲೋಟ್ ಫೈ ಸಂಸ್ಥೆಗಳು ಭಾಗಿಯಾಗಿದ್ದವು.

ಇಸ್ರೇಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಬಗ್ಗೆ ಕಂಪನಿಯ ಸಿಇಒಖುಷಿ ವ್ಯಕ್ತಪಡಿಸಿದ್ದಾರೆ. ಇದರಿಂದ ಇಸ್ರೇಲ್‌ಗೆ ಹೋಗುವ ಅವಕಾಶ ನಮಗೆ ಸಿಕ್ಕಿತ್ತು ಮತ್ತು ಅನೇಕ ಬಹುರಾಷ್ಟ್ರೀಯ ಉದ್ಯಮಗಳ ಬಗ್ಗೆ ತಿಳಿಯಲು, ಉದ್ಯಮಿಗಳನ್ನು ಭೇಟಿಮಾಡಲು ಇದೊಂದು ಒಳ್ಳೆಯ ಅವಕಾಶ ಮಾಡಿಕೊಟ್ಟಿತ್ತು ಎಂದಿದ್ದಾರೆ ಆಡಿಯೋ ಕಂಪಾಸ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಓ ಗೌತಮ್ ಶೇವಾಕ್ರಮಣಿ. ಸ್ಪರ್ಧೆಯಲ್ಲಿ ಭಾಗಿಯಾಗಿದ್ದ 6 ಫೈನಲಿಸ್ಟ್‌ ಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಇದರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ತೀರ್ಪುಗಾರರಿಗೆ ನಿಜಕ್ಕೂ ಕಷ್ಟಕರವಾಗಿತ್ತು.

image


2011ರಲ್ಲಿ ಆರಂಭವಾದ ಆಡಿಯೋ ಕಂಪಾಸ್ ಸಂಸ್ಥೆ ಸಂಚಾರಿ ಪ್ರಯಾಣ ಮಾರ್ಗದರ್ಶಕ ವೇದಿಕೆಯಾಗಿದೆ. ಇದು ಮೊಬೈಲ್ ಫೋನ್ ಮುಖಾಂತರ ಧ್ವನಿ ಮುಖಾಂತರ ಪ್ರಯಾಣ ಮಾರ್ಗದರ್ಶಿಯಂತೆ ಕೆಲಸ ಮಾಡುತ್ತಿದೆ. ಭಾರತ, ಭೂತಾನ್ ಮತ್ತು ಸಿಂಗಪೂರ್‌ನಲ್ಲಿನ ಆಸಕ್ತಿದಾಯಕ 1200 ಪ್ರದೇಶಗಳ ಕುರಿತು ಮಾಹಿತಿ ನೀಡುತ್ತಿರುವ ಈ ಸಂಸ್ಥೆ, ಮುಂದಿನ ತಿಂಗಳಲ್ಲಿ ಓಮನ್‌ನಲ್ಲೂ ತನ್ನ ಸೇವೆಯನ್ನು ವಿಸ್ತರಿಸುವ ಉದ್ದೇಶ ಹೊಂದಿದೆ. ಕಳೆದ ವರ್ಷ ಬ್ಲುಮೆ ವೆಂಚರ್ಸ್ ಮತ್ತು ಉರ್‌ಶಿಲ್ ಕೇರ್ಕರ್ ಸೇರಿದಂತೆ ಹೂಡಿಕೆದಾರರ ಸಮೂಹದಿಂದ 400,000 ಯುಎಸ್ ಡಾಲರ್ ಹೂಡಿಕೆಯನ್ನೂ ಪಡೆದುಕೊಂಡಿದೆ.

ಲಭ್ಯತೆ ಮತ್ತು ಮಾರುಕಟ್ಟೆಯಲ್ಲಿ ಬೆಳವಣಿಗೆ ಸಾಧಿಸುವುದು ಯಾವುದೇ ಸಂಸ್ಥೆಗೆ ಅತ್ಯಂತ ಮುಖ್ಯವಾದ ಅಂಶವಾಗಿದೆ. ಉತ್ಪನ್ನದ ಲಭ್ಯತೆಯು ಮಾರ್ಕೆಟ್‌ನಿಂದಲೇ ದೊರಕುತ್ತದೆ. ಮಾರುಕಟ್ಟೆಯಲ್ಲಿ ಯೋಜನೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದರೆ, ಆ ಮೂಲಕ ಉದ್ಯಮ ಬೆಳೆಯಲು ಮಾರುಕಟ್ಟೆ ಸಹಕರಿಸಿದರೆ ಮಾತ್ರ ಲಭ್ಯತೆ ಅವಕಾಶ ದೊರಕುತ್ತದೆ ಎನ್ನುತ್ತಾರೆ ಇವೆಲಿನ್ ಲರ್ನಿಂಗ್ ಸಿಸ್ಟಮ್ಸ್ ನ ಸಂಸ್ಥಾಪಕ ನಿರ್ದೇಶಕ ಪ್ರವೀಣ್ ತ್ಯಾಗಿ. ಇವರು ತೀರ್ಪುಗಾರರ ಪೈಕಿ ಒಬ್ಬರಾಗಿದ್ದರು.

ತೀರ್ಪುಗಾರರ ಸಮಿತಿಯಲ್ಲಿ ಟ್ರಿಫೆಕ್ಟಾ ಕ್ಯಾಪಿಟಲ್ ಪಾರ್ಟ್‌ನರ್ಸ್‌ನ ಮ್ಯಾನೇಜಿಂಗ್ ಪಾರ್ಟ್‌ನರ್ ರಾಹುಲ್ ಖನ್ನಾ, ಎಂ ಕಾರ್ಬನ್ ಟೆಕ್ ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ನಿರ್ದೇಶಕ ರಾಜೇಶ್ ರಾಜ್ದಾನ್, ಲೈಟ್ಸ್ ಸ್ಪೀಡ್ ಉದ್ಯಮದ ಭಾರತದ ಉದ್ಯಮ ಹೂಡಿಕೆದಾರರಾದ ದೇವ್ ಖರೆ ಮತ್ತು ಇವೆಲಿನ್ ಲರ್ನಿಂಗ್ ಸಿಸ್ಟಮ್ಸ್ ನ ಸಂಸ್ಥಾಪಕ ನಿರ್ದೇಶಕ ಪ್ರವೀಣ್ ತ್ಯಾಗಿ ಇದ್ದರು.

ಅಂತಿಮ ಹಣಾಹಣಿಯಲ್ಲಿ ಇಸ್ರೇಲ್‌ನ ಸಾರ್ವಜನಿಕ ರಾಜತಾಂತ್ರಿಕ ಸಮಾಲೋಚನಾ ಸಚಿವ ಡಿಟ್ಝಾ ಫ್ರೋಯಿಂ ಸಹ ಉಪಸ್ಥಿತರಿದ್ದರು. ಯೋಜನೆಗಳು, ಕನಸುಗಳು ಮತ್ತು ಅವಕಾಶಗಳನ್ನು ತೆಗೆದುಕೊಳ್ಳುವ ಧೈರ್ಯವಹಿಸುವುದು ಹೊಸತನ ಮತ್ತು ಉದ್ಯಮಶೀಲತೆಯ ಪ್ರಮುಖ ಅಂಶಗಳು. ಭದ್ರತೆ, ಸಮಾಜ, ಸಂಸ್ಕೃತಿ ಮತ್ತು ಆರ್ಥಿಕತೆಯಲ್ಲಿ ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಈ ಅಂಶಗಳು ಅಗತ್ಯವಾಗಿರುತ್ತದೆ. ಭಾರತೀಯರು ಮತ್ತು ಇಸ್ರೇಲಿಯನ್ನರ ಮಧ್ಯೆ ಇರುವ ಹೋಲಿಕೆಗಳನ್ನು ಈ ಕಾರ್ಯಕ್ರಮದಲ್ಲಿ ಕಾಣಬಹುದು. ಭವಿಷ್ಯದಲ್ಲಿ ಎರಡೂ ರಾಷ್ಟ್ರಗಳು ಸೇರಿ ಕಾರ್ಯನಿರ್ವಹಿಸುವ ಬಗ್ಗೆ ಭರವಸೆ ಇದೆ ಎಂದಿದ್ದಾರೆ ಡಿಟ್ಝಾ ಫ್ರೋಯಿಂ.

ಸ್ಟಾರ್ಟ್ ಟೆಲ್ ಅವಿವ್ ಎಂಬುದು ಇಸ್ರೇಲಿ ವಿದೇಶಾಂಗ ಸಚಿವಾಲಯ ಮತ್ತು ಟೆಲ್ ಅವಿವ್ ಗ್ಲೋಬಲ್ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದವು. ಈ ಸ್ಪರ್ಧೆಯಲ್ಲಿ ವಿವಿಧ ದೇಶಗಳ ಉದ್ಯಮಗಳು ಭಾಗಿಯಾಗಿದ್ದವು.

ಲೇಖಕರು: ತೌಸಿಫ್​ ಆಲಮ್​​

ಅನುವಾದಕರು: ವಿಶ್ವಾಸ್​​​