ಹೆಲ್ತ್​​ಕೇರ್ ಉದ್ಯಮದಲ್ಲಿ ತಾಂತ್ರಿಕತೆ-ಅಭಿವೃದ್ಧಿಯತ್ತ ಹೊಸ ಹೆಜ್ಜೆ ಇಟ್ಟ ಮೆಡ್​​ಹೆಲ್ತ್​​​ಕೇರ್

ಟೀಮ್​​ ವೈ.ಎಸ್​​.

ಹೆಲ್ತ್​​ಕೇರ್ ಉದ್ಯಮದಲ್ಲಿ ತಾಂತ್ರಿಕತೆ-ಅಭಿವೃದ್ಧಿಯತ್ತ ಹೊಸ ಹೆಜ್ಜೆ ಇಟ್ಟ ಮೆಡ್​​ಹೆಲ್ತ್​​​ಕೇರ್

Sunday November 08, 2015,

3 min Read

ನಾಲ್ವರು ಹೂಡಿಕೆದಾರರು ಮೆಡ್ ಸಂಸ್ಥೆಗೆ 1 ಲಕ್ಷ 50 ಸಾವಿರ ಯುಎಸ್ ಡಾಲರ್ ಹೂಡಿಕೆ ಮಾಡಿದ್ದಾರೆ. ಸಂಸ್ಥೆ ತನ್ನ ಮೊದಲ ಹೂಡಿಕೆಯನ್ನು ಮೇ ತಿಂಗಳಿನಲ್ಲಿ ಅಜಿತ್ ಖುರಾನಾರಿಂದ ಪಡೆದುಕೊಂಡಿತು. ಮೆಡ್ ಸಂಸ್ಥೆಯ ಸಹ ಸಂಸ್ಥಾಪಕ ಅರ್ಪಿತ್ ಕೋಠಾರಿ ಹೇಳುವಂತೆ ಮುಂಬೈ ಮತ್ತು ಇಂದೋರ್‌ನಲ್ಲಿದ್ದ ಸಂಸ್ಥೆಯನ್ನು ದೆಹಲಿ ಎನ್‌ಸಿಆರ್, ಬೆಂಗಳೂರು ಮತ್ತು ಹೈದ್ರಾಬಾದ್‌ನಲ್ಲಿ ವಿಸ್ತರಿಸಲು ಹೂಡಿಕೆಯನ್ನು ಹೆಚ್ಚಿಸಲಾಯಿತು.

ಮೊದಲ ಹಂತದ ಹೂಡಿಕೆಯನ್ನು ಉತ್ಪನ್ನ ಅಭಿವೃದ್ಧಿಗಾಗಿ ಬಳಸಿಕೊಳ್ಳಲಾಯಿತು. ತಂತ್ರಜ್ಞಾನವನ್ನು ಗಟ್ಟಿಗೊಳಿಸಿಕೊಳ್ಳಲು, ಮಾಹಿತಿ ವಿಜ್ಞಾನ ಮತ್ತು ಕಾರ್ಯಾಚರಣೆಯ ವಿಧಾನವನ್ನು ರೂಪಿಸಿಕೊಳ್ಳಲು ಬಳಸಿಕೊಳ್ಳಲಾಯಿತು.

image


ಸಂಸ್ಥೆಯ ಸಹಸಂಸ್ಥಾಪಕ ಮತ್ತು ಸಿಟಿಓ ಆಕಾಶ್ ದೀಪ್ ಸಿಂಘಾಲ್ ಹೇಳುವಂತೆ, ಎಲ್ಲಾ ಇತರ ಉದ್ಯಮಗಳಂತೆ ಮೆಡ್‌ ಸಂಸ್ಥೆಯೂ ಆ್ಯಪ್ ಮೂಲಕ ಪ್ರಚಾರ ಗಿಟ್ಟಿಸಿತ್ತು. ಆದರೆ ಕಂಪ್ಯೂಟರ್ ಬಳಕೆದಾರರಿಂದ ಪ್ರಬಲ ಬೇಡಿಕೆ ಬಂದ ಕಾರಣ, ಅವರು ಮುಂಬರುವ 3 ರಿಂದ 6 ತಿಂಗಳವರೆಗೆ ವೆಬ್ ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ

ಆರಂಭ

ಮುಂಬೈನ ಐಐಟಿಯಲ್ಲಿ ಕಲಿತಿದ್ದ ಅರ್ಪಿತ್, ಆಕಾಶ್, ಅನುರಾಗ್ ಮುಂಧಾಡರಿಂದ 2015ರ ಮೇ ತಿಂಗಳಿನಲ್ಲಿ ಆರಂಭವಾಗಿದ್ದೇ ಮೆಡ್ ಸಂಸ್ಥೆ. ಕೇವಲ ಪ್ರಮಾಣಿತ ಡಯಾಗ್ನೋಸ್ಟಿಕ್ ಲ್ಯಾಬ್ಸ್​​ ವಿವರಣೆಯನ್ನು ರೋಗಿಗಳಿಗೆ ಸಿದ್ಧಪಡಿಸಿಕೊಡುವುದಷ್ಟೇ ಅಲ್ಲ. ಅದರೊಂದಿಗೆ ಲ್ಯಾಬ್‌ಗಳ ಆಯ್ಕೆ ಮತ್ತು ದರದ ಹೋಲಿಕೆಯನ್ನು ಮಾಡುವ ಅವಕಾಶವನ್ನೂ ಮಾಡಿಕೊಡುತ್ತದೆ. ಸರ್ಕಾರದ ಕಾವಲು ನಾಯಿಯ ಅನುಪಸ್ಥಿತಿಯಲ್ಲಿ ಭಾರತದ ಅನೇಕ ಕ್ಲಿನಿಕ್‌ಗಳು ಮತ್ತು ಆಸ್ಪತ್ರೆಗಳು ರೋಗಿಗಳಿಗೆ ಅವಶ್ಯಕತೆ ಇರದ ಲ್ಯಾಬ್‌ ಟೆಸ್ಟ್‌ ಗಳನ್ನು ಮಾಡಿಸಲು ಒತ್ತಾಯಿಸುತ್ತವೆ.

ಆ್ಯಪ್‌ನ ಕಾರ್ಯಾಚರಣೆ

ಈ ಆ್ಯಪ್‌ನ ಸಹಾಯದಿಂದ ಜನರು ಕ್ಲಿನಿಕ್‌ಗಳ ಮಧ್ಯೆ ಹೋಲಿಕೆ ಮಾಡಿ ಉತ್ತಮವಾದ ಕ್ಲಿನಿಕ್‌ ಅನ್ನೇ ಆಯ್ಕೆ ಮಾಡಿಕೊಳ್ಳಬಹುದು, ಮಾನ್ಯತೆ ಪಡೆದಿರುವ ಲ್ಯಾಬ್‌ಗಳಲ್ಲಿ ಪರೀಕ್ಷಿಸಿಕೊಳ್ಳಬಹುದು, ತಮ್ಮ ಸುತ್ತಲಿನ ಉತ್ತಮ ಆಸ್ಪತ್ರೆಯನ್ನು ಆಯ್ದುಕೊಳ್ಳಬಹುದು, ಸುಮಾರು ಶೇ.70ರಷ್ಟು ಕಡಿತದೊಂದಿಗೆ ಮುಂಜಾಗ್ರತಾ ಆರೋಗ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬಹುದು ಮತ್ತು ತಮ್ಮ ಮೊಬೈಲ್‌ನಲ್ಲಿ ಆರೋಗ್ಯ ವರದಿಗಳನ್ನು ಪಡೆದುಕೊಳ್ಳಬಹುದು. ಆನ್‌ಲೈನ್ ಮೂಲಕ ಖರೀದಿಸುವ ಔಷಧಿಗಳಿಗೆ ರಿಯಾಯಿತಿ ನೀಡುವ ಯೋಜನೆಯೂ ಮೆಡ್‌ ಸಂಸ್ಥೆಯ ಭವಿಷ್ಯದ ಯೋಜನೆಗಳಲ್ಲಿ ಒಂದಾಗಿದೆ.

ಅನುರಾಗ್ ಹೇಳುವಂತೆ, ಮೆಡ್ ಸಂಸ್ಥೆ ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಹೆಲ್ತ್‌ ಕೇರ್‌ ಅನ್ನು ಇನ್ನಷ್ಟು ಸಮರ್ಥವಾಗಿಸಲು ಮತ್ತು ಕೈಗೆಟುಕುವ ದರದಲ್ಲಿ ಹೆಲ್ತ್‌ ಕೇರ್ ಉತ್ಪನ್ನಗಳನ್ನು ಮಾರಲು ಯತ್ನಿಸುತ್ತಿದೆ.

ಸಮಸ್ಯೆಯ ಪರಿಹರಿಸುತ್ತಾ...

2015ರಲ್ಲಿ ಮೆಡ್ ಸಂಸ್ಥೆ ಪ್ರತಿಷ್ಠಿತ ವರ್ಲ್ಡ್ ಕಾಂಗ್ರೆಸ್ ವೇದಿಕೆಯಡಿ ಸಾರ್ವಜನಿಕ ಆರೋಗ್ಯ ವಿಚಾರದಲ್ಲಿ ತನ್ನ ವಿಚಾರವನ್ನು ಮಂಡಿಸಿತ್ತು. ತಮ್ಮ ಸೇವೆಯನ್ನು ಬಳಸಿಕೊಳ್ಳುತ್ತಿರುವ ರೋಗಿಗಳಿಗೆ ಶೇ.80 ರಷ್ಟು ರಿಯಾಯಿತಿ ನೀಡುವ ಯೋಜನೆಯನ್ನೂ ಹಾಕಿಕೊಂಡಿದೆ.

ಅರ್ಪಿತ್ ಹೇಳುವಂತೆ, ಆ್ಯಪ್‌ನಲ್ಲಿ ಲ್ಯಾಬ್ ಮತ್ತು ಆಸ್ಪತ್ರೆಗಳಿಗೆ ಹೋಗಿ ನಿಮ್ಮನ್ನು ಪರೀಕ್ಷೆಗೊಳಪಡಿಸಿಕೊಳ್ಳುವ ಅವಕಾಶವೂ ಇದೆ. ಸಾಧ್ಯವಾದರೆ ಮನೆ ಅಥವಾ ಕಚೇರಿಗಳಿಂದಲೇ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಬಹುದು ಮತ್ತು ಕೊರಿಯರ್, ರೋಗಿಯ ಈ-ಮೇಲ್,ಆ್ಯಪ್‌ಗಳಲ್ಲಿ ಪರೀಕ್ಷಾ ವರದಿಗಳನ್ನು ಪಡೆಯಬಹುದು.

ತಪ್ಪಾಗಿ ಕಾಯಿಲೆಯನ್ನು ಪತ್ತೆ ಹಚ್ಚುವ ಸಮಸ್ಯೆಯನ್ನು ಬಗೆಹರಿಸಲು ಜನರನ್ನು ತಮ್ಮ ವೇದಿಕೆ ಮೂಲಕ ಮಾನ್ಯತೆ ಪಡೆದಿರುವ ಲ್ಯಾಬ್‌ಗಳಲ್ಲಿ ಮಾತ್ರ ಪರೀಕ್ಷಿಸಿಕೊಂಡು ಗುಣಮಟ್ಟದ ವರದಿ ಪಡೆಯುವ ಮತ್ತು ಮತ್ತೊಬ್ಬರಿಂದ ಪರೀಕ್ಷಿಸಿಕೊಳ್ಳುವ ಅವಕಾಶವನ್ನೂ ಸಹ ನೀಡುತ್ತದೆ.

ಯುವರ್ ಸ್ಟೋರಿಯಲ್ಲಿ ಲೇಖನ ಪ್ರಕಟವಾದ ನಂತರ ಮೆಡ್ ಸಂಸ್ಥೆಯ ಆ್ಯಪ್‌ನ ಪ್ರಯೋಜನ ಪಡೆಯುತ್ತಿದ್ದಾರೆ. ಒಂದು ನಿರ್ದಿಷ್ಟ ಕಾರಣಕ್ಕಾಗಿ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಹಣದ ಹೂಡಿಕೆ ಮತ್ತು ನಮ್ಮೊಂದಿಗೆ ಸೇರಿ ಕೆಲಸ ಮಾಡಲೂ ಸಹ ಆಸಕ್ತಿ ವಹಿಸಿದ್ದಾರೆ ಎಂದಿದ್ದಾರೆ ಅರ್ಪಿತ್. ಸಂಸ್ಥೆಯಲ್ಲಿ ಒಟ್ಟು 12 ಜನ ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಅನೇಕ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದನ್ನು ಮುಂದುವರೆಸಿದೆ.

ಯುವರ್ ಸ್ಟೋರಿ ದೃಷ್ಟಿಯಲ್ಲಿ ಹೆಲ್ತ್ ಕೇರ್ ಉದ್ಯಮಗಳು

ಹೆಲ್ತ್ ಕೇರ್ ವಿಭಾಗದಲ್ಲಿ 2012ರಲ್ಲಿ ಸುಮಾರು 79 ಬಿಲಿಯನ್ ಡಾಲರ್ ಗಳಿಕೆ ನಿರೀಕ್ಷೆ ಹೊಂದಿದ್ದ ಮೆಡ್ ಸಂಸ್ಥೆ, 2017ರೊಳಗೆ ಸುಮಾರು 160 ಬಿಲಿಯನ್ ಡಾಲರ್ ಗಳಿಕೆಯ ನಿರೀಕ್ಷೆ ಹೊಂದಿದೆ ಮತ್ತು 2020ರೊಳಗೆ 280 ಬಿಲಿಯನ್ ಯುಎಸ್ ಡಾಲರ್ ಗಳಿಕೆಯ ಗುರಿ ಇಟ್ಟುಕೊಂಡಿದೆ. ಇಂದು ಹೆಲ್ತ್ ಕೇರ್ ಉದ್ಯಮ ಭಾರತದಲ್ಲಿ ಆದಾಯ ಮತ್ತು ನಿರುದ್ಯೋಗ ಸಮಸ್ಯೆ ನಿವಾರಣೆ ವಿಚಾರದಲ್ಲಿ ಅತ್ಯಂತ ದೊಡ್ಡ ಕ್ಷೇತ್ರವಾಗಿ ಬೆಳೆದಿದೆ.

ಕಳೆದ ವರ್ಷ ಪ್ರಪಂಚದಾದ್ಯಂತ ಸುಮಾರು 7500 ಉದ್ಯಮಗಳು, ಹೆಲ್ತ್ ಕೇರ್ ಕ್ಷೇತ್ರಕ್ಕಾಗಿ ಡಿಜಿಟಲ್ ಸೊಲ್ಯುಷನ್‌ಗಳ ಅಭಿವೃದ್ಧಿಯತ್ತ ದೃಷ್ಟಿ ನೆಟ್ಟಿದ್ದವು. ಭಾರತದಲ್ಲಿ ಹಲವು ಉದ್ಯಮಗಳು ವೈದ್ಯಕೀಯ ಚಿಕಿತ್ಸಕರು ಮತ್ತು ಗ್ರಾಹಕರು ತಂತ್ರಜ್ಞಾನದ ಮೂಲಕ ಹತ್ತಿರವಾಗುವಂತಹ ಕಾರ್ಯಗಳನ್ನು ಮಾಡುತ್ತಿವೆ. ಆದರೆ ವಿತರಣೆ ವಿಭಾಗದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿವೆ.

ಪಾವತಿ ಹೆಲ್ತ್ ಕೇರ್ ಆ್ಯಪ್‌ ಮಾರುಕಟ್ಟೆ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ(ಸಿಎಜಿಆರ್- ಕಾಂಪೌಂಡ್ ಆ್ಯನುವಲ್ ಗ್ರೋತ್ ರೇಟ್)ದಲ್ಲಿ ಸುಮಾರು ಶೇ.33.8ರಷ್ಟು ಬೆಳವಣಿಗೆ ಹೊಂದುವ ಗುರಿ ಇಟ್ಟುಕೊಂಡಿದೆ. ಏಷ್ಯನ್ ಮಾರುಕಟ್ಟೆ, ಜಪಾನ್ ಹಾಗೂ ಭಾರತ ದೇಶಗಳು ಹೆಲ್ತ್‌ ಕೇರ್ ಆ್ಯಪ್‌ಗಳಿಗೆ ಸೂಕ್ತವಾದ ದೇಶಗಳಾಗಿವೆ ಎಂದು ನಂಬಲಾಗಿದೆ. ಹಲವು ಹೆಲ್ತ್ ಕೇರ್ ಆ್ಯಪ್ ಸಂಘಟನೆಗಳು ಆ್ಯಪ್‌ಗಳನ್ನು ಸೃಷ್ಟಿಸುತ್ತಿವೆ ಎಂದರೆ ಅದರರ್ಥ ಸಮಸ್ಯೆಗಳಿಂದ ಮುಕ್ತಿಹೊಂದಲು ತಂತ್ರಜ್ಞಾನವನ್ನು ಬಳಸಿಕೊಳ್ಳುವತ್ತ ಗಮನಹರಿಸಿವೆ ಎಂದು. ವರದಿಗಳ ಪ್ರಕಾರದಲ್ಲಿ ಭಾರತದಲ್ಲಿ 1000 ಜನರಿಗೆ 0.6ರಷ್ಟು ಮಾತ್ರ ವೈದ್ಯರಿದ್ದಾರೆ. ಇಂತಹ ಪರಿಸ್ಥಿತಿಯನ್ನು ಸುಧಾರಿಸಲು ಆ್ಯಪ್‌ಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಅತೀ ಮುಖ್ಯ ಹಾಗೂ ಅಗತ್ಯ.