ಸೌಂದರ್ಯ-ಆರೋಗ್ಯ ಕಾಪಾಡಿಕೊಳ್ಳಬೇಕೆ? ನಿಮಗಾಗಿಯೇ ಇದೆ ಫಿಟ್ನೆಸ್ ಗುರು `ಬುಕ್ ಯುವರ್ ಗೇಮ್' ಆ್ಯಪ್ 

ಟೀಮ್​ ವೈ.ಎಸ್​. ಕನ್ನಡ

0

28ರ ಹರೆಯದ ದೇವಿ ಪ್ರಸಾದ್ ಬಿಸ್ವಾಲ್ ತಾವೊಬ್ಬ ಆಕ್ರಮಣಕಾರಿ ಕಾರ್ಯಾಚರಣೆಯ ಯವಕ ಎನ್ನುತ್ತಾರೆ. ಆದ್ರೆ ಅವಿಜೀತ್ ಅಲಗಥಿ ಲೆಕ್ಕಾಚಾರದ ಪ್ರಕಾರ ಅಪಾಯ ಸ್ವೀಕರಿಸುವ ಛಾತಿ ಉಳ್ಳವರು. ಈ ಇಬ್ಬರು ಮ್ಯಾನೇಜ್‍ಮೆಂಟ್ ಪದವೀಧರರ ಮಧ್ಯೆ ನಿಕಟ ಸ್ನೇಹ ಬೆಳೆದಿದ್ದು 2011ರಲ್ಲಿ `ಗೋಲ್ಡ್​​ಮನ್ ಸ್ಯಾಚ್ಸ್' ಸೇರಿದಾಗ. 2014ರಲ್ಲಿ ದೇವಿ ಪ್ರಸಾದ್ ಅವರ ಬದುಕಲ್ಲಿ ಬದಲಾವಣೆಯ ಗಾಳಿ ಬೀಸಿತ್ತು. ದೇವಿ ತಮ್ಮ ಸ್ನೇಹಿತರ ಸ್ಟ್ರೀಟ್ ಫ್ಯಾಷನ್ ಸ್ಟಾರ್ಟಪ್ ಕ್ಯಾಂಡಿಡ್ಲಿ ಕೌಚರ್‍ನಲ್ಲಿ ಕಾರ್ಯಾಚರಣೆ ಮುಖ್ಯಸ್ಥರಾಗಿ ನೇಮಕಗೊಂಡ್ರು. ಅವಿಜೀತ್ ಜೊತೆ ಸಂಪರ್ಕದಲ್ಲಿದ್ದ ದೇವಿ, ಕ್ಯಾಂಡಿಡ್ಲಿ ಕೌಚರ್‍ನಲ್ಲಿ ಹೂಡಿಕೆ ಮಾಡಿದ್ರು. 2015ರ ವೇಳೆಗೆ ದೇವಿ ಅವರಿಗೆ ಉದ್ಯಮಶೀಲತೆಯ ಹೊಸ ಪರಿಕಲ್ಪನೆ ಹೊಳೆದಿತ್ತು. ಅವರಿಗೆ ಈ ಐಡಿಯಾ ಹೊಳೆದಿದ್ದು ಅತ್ಯಂತ ಅಸಾಂಪ್ರದಾಯಿಕ ಸ್ಥಳ ಜಿಮ್‍ನಲ್ಲಿ. ದೇವಿ ಅವರ ಫ್ಲಾಟ್‍ನಲ್ಲೇ ವಾಸವಾಗಿದ್ದವರೊಬ್ರು `ಗೋಲ್ಡ್ಸ್ ಜಿಮ್'ನಲ್ಲಿ 3 ತಿಂಗಳ ಕಾಲ ತರಬೇತಿ ಪಡೆದಿದ್ರು. ದೇವಿಗೆ ಒಂದು ವರ್ಷಕ್ಕೆ ಪಾವತಿಸುವಷ್ಟು ಹಣವನ್ನು 3 ತಿಂಗಳಿಗೆ ನೀಡಿದ್ದರು. ಈ ವಿಚಾರ ಉದ್ಯಮಿಗಳಿಗೆ ನಿಜಕ್ಕೂ ಅಚ್ಚರಿ ತಂದಿತ್ತು. ಜಿಮ್ ಖಾಲಿ ಹೊಡೆಯುತ್ತಿದ್ರೂ ದುಬಾರಿ ದರ ವಿಧಿಸ್ತಾ ಇರೋದು ಅರಿವಿಗೆ ಬಂದಿತ್ತು.

ಗರಿಷ್ಠ ಬಳಕೆಯ ಕೊರತೆಯಿಂದ ಫಿಟ್ನೆಸ್ ಕೇಂದ್ರಗಳು ಅಸಮರ್ಪಕ ನಿರ್ವಹಣಾ ಬ್ಯುಸಿನೆಸ್‍ಗಳಾಗ್ತಿವೆ ಅನ್ನೋದನ್ನು ದೇವಿ ಅರ್ಥಮಾಡಿಕೊಂಡ್ರು. ಬಹುತೇಕ ಜಿಮ್‍ಗಳು ದಿನದ 17 ಗಂಟೆಗಳು ತೆರೆದೇ ಇರುತ್ತವೆ, ಆದ್ರೆ ಅದನ್ನು ಬಳಸಿಕೊಳ್ಳುವುದು ಕೇವಲ 4 ಗಂಟೆಗಳು ಮಾತ್ರ. ಶೇ.15-20 ಗ್ರಾಹಕರ ಪೈಕಿ ಫಿಟ್ನೆಸ್ ತರಬೇತಿಗಾಗಿ ಭಾರತದಲ್ಲಿ ಸದಸ್ಯತ್ವ ನವೀಕರಿಸುವವರ ಸಂಖ್ಯೆ ಕೇವಲ 0.4ರಷ್ಟಿದೆ. ಇದು ಏಷ್ಯಾದಲ್ಲೇ ಅತ್ಯಂತ ಕಡಿಮೆ. ಇದನ್ನೆಲ್ಲ ಅರ್ಥಮಾಡಿಕೊಂಡ ದೇವಿ, `ಬುಕ್ ಯುವರ್ ಗೇಮ್' ಅಪ್ಲಿಕೇಷನ್ ಅಭಿವೃದ್ಧಿಪಡಿಸುವ ಐಡಿಯಾದೊಂದಿಗೆ ಅವಿಜೀತ್ ಅವರ ಬಳಿ ತೆರಳಿದ್ರು. 2016ರ ಜನವರಿ 31ರಂದು ದೇವಿ ಹಾಗೂ ಅವಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಇದನ್ನು ಓದಿ: ಇಲ್ಲಿ ಗೃಹಣಿಯರಿಂದ ತಯಾರಾಗುತ್ತೆ ವೆರೈಟಿ ವೆರೈಟಿ ಚಾಕಲೇಟ್...!

`ಬುಕ್ ಯುವರ್ ಗೇಮ್' ಆರಂಭಿಸುವ ಗುರಿ

ಸದ್ಯ ಬಿವೈಜಿ ಆ್ಯಂಡ್ರಾಯ್ಡ್ ಪ್ಲೇ ಸ್ಟೋರ್‍ನಲ್ಲಿ ಮಾತ್ರ ಲಭ್ಯವಿದೆ. ಬಿವೈಜಿ ಆ್ಯಪ್ ಮೂಲಕ ಗ್ರಾಹಕರು ತಮಗೆ ಹೊಂದಾಣಿಕೆಯಾಗಬಲ್ಲ ಬೆಲೆಯಲ್ಲಿ ಫಿಟ್ನೆಸ್ ಅವಧಿಗಳನ್ನು ಬುಕ್ ಮಾಡಬಹುದು. ಬಿವೈಜಿ ಆ್ಯಪ್ ಮೂಲಕ ಫಿಟ್ನೆಸ್ ಸದಸ್ಯತ್ವ ಅಥವಾ ಫಿಟ್ನೆಸ್ ಅವಧಿಯನ್ನು ಬುಕ್ ಮಾಡಿಕೊಳ್ಳಬಹುದು. ತಮಗೆ ಬೇಕಾದ ಸ್ಥಳದಲ್ಲಿ ವರ್ಕೌಟ್ ನೌ ಆಯ್ಕೆ ಮಾಡಿಕೊಂಡು ಪ್ರತಿ ಸೆಶನ್‍ಗೆ ಹಣ ಪಾವತಿಸಬಹುದು. ವರ್ಕೌಟ್ ನೌ ಆಪ್ಷನ್‍ನಲ್ಲಿ 20-300 ರೂಪಾಯಿ ವರೆಗಿನ ಸೆಶನ್‍ಗಳು ಲಭ್ಯವಿವೆ. ಬಿವೈಜಿ ಆ್ಯಪ್‍ನ ಐಓಎಸ್ ಆವೃತ್ತಿಯನ್ನು ಕೂಡ ಬಿಡುಗಡೆ ಮಾಡಲಾಗ್ತಿದೆ.

ಬರೀ ಜಿಮ್ ಮಾತ್ರವಲ್ಲ, ಯೋಗ, ಝುಂಬಾ, ಕ್ರಾಸ್‍ಫಿಟ್, ಮಾರ್ಶಲ್ ಆರ್ಟ್ಸ್​​ , ಸ್ವಿಮ್ಮಿಂಗ್, ಸ್ಕೇಟಿಂಗ್, ಕಿಡ್ಸ್ ಝೋನ್ ಎಲ್ಲವನ್ನೂ ಬುಕ್ ಯುವರ್ ಗೇಮ್ ಆ್ಯಪ್ ಮೂಲಕ ಬುಕ್ ಮಾಡಿಕೊಳ್ಳಬಹುದು. ಕ್ರೀಡಾ ತರಬೇತಿ ಹಾಗೂ ಬೇಸಿಗೆ ಶಿಬಿರಗಳಿಗೆ ಕೂಡ ನೀವು ಪ್ರವೇಶ ಪಡೆಯಬಹುದು. ಸದ್ಯ ಶೇ.30ರಷ್ಟು ಗ್ರಾಹಕರು ಗ್ರೂಪ್ ಸೆಷನ್‍ಗಳಿಗೆ ಚಂದಾದಾರರಾಗುತ್ತಿದ್ದಾರೆ. ಮುಂದಿನ 3 ತಿಂಗಳುಗಳೊಳಗೆ ಕ್ರೀಡಾ ತರಬೇತಿ ಹಾಗೂ ಫ್ರೀಲಾನ್ಸ್ ಪರ್ಸನಲ್ ಟ್ರೈನರ್‍ಗಳನ್ನು ಈ ವೇದಿಕೆಯ ಮೂಲಕ ಪರಿಚಯಿಸಲು ಯೋಜನೆ ರೂಪಿಸಲಾಗಿದೆ. ಇದರಿಂದ ಫ್ರೀಲಾನ್ಸ್ ಫಿಟ್ನೆಸ್ ತಜ್ಞರು ವಿವಿಧ ಕೇಂದ್ರಗಳ ಮೂಲಕ ಸದಸ್ಯರಿಗೆ ತರಬೇತಿ ನೀಡಬಹುದು.

ಸಿಆರ್‍ಎಂ ಸೊಲ್ಯೂಶನ್ ಮೂಲಕ ಬಿವೈಜಿ ಕನ್ಸಲ್ಟೆನ್ಸಿಯನ್ನೂ ಆರಂಭಿಸಿದೆ. ಜಿಮ್‍ನಲ್ಲಿ ಎಷ್ಟು ಜನರಿದ್ದಾರೆ? ಆದ್ಯತೆಯ ವರ್ಕೌಟ್‍ಗಳು ಯಾವುವು? ರಿಪೀಟ್ ಗ್ರಾಹಕರು ಯಾರು? ಹೀಗೆ ಜಿಮ್‍ನ ಸಂಪೂರ್ಣ ಒಳನೋಟವನ್ನು ನೀವು ತಿಳಿದುಕೊಳ್ಳಬಹುದು. ಇಂತಹ ಸೌಲಭ್ಯ ಬೇರೆ ಎಲ್ಲೂ ಲಭ್ಯವಿಲ್ಲ ಎನ್ನುತ್ತಾರೆ ಅವಿ. ಸದಸ್ಯರ ನಿರ್ವಹಣೆ, ವೇಳಾಪಟ್ಟಿ ನಿರ್ವಹಣೆ, ಲೀಡ್ ಜನರೇಶನ್, ನೌಕರರ ನಿರ್ವಹಣೆ ಎಲ್ಲದಕ್ಕೂ ಜಿಮ್‍ಗಳಿಗೆ ಇದು ನೆರವಾಗಲಿದೆ. ಬಹುತೇಕ ಎಲ್ಲಾ ಜಿಮ್‍ಗಳಲ್ಲಿ ಡೆಸ್ಕ್​​ ಟಾಪ್‍ಗಳ ಬಳಕೆ ಕಡಿಮೆಯಾಗಿರೋದ್ರಿಂದ ಈ ಸೌಲಭ್ಯವನ್ನು ಮೊಬೈಲ್‍ಗೆ ಸೀಮಿತಗೊಳಿಸಲಾಗಿದೆ.

ಮೆಟ್ರಿಕ್ಸ್ ಬೆನ್ನಟ್ಟಿ...

10-65 ವರ್ಷದೊಳಗಿನವರೇ ಬಿವೈಜಿಯ ಪ್ರಮುಖ ಟಾರ್ಗೆಟ್. ದೆಹಲಿ, ಮುಂಬೈ, ಪುಣೆ, ಬೆಂಗಳೂರು ಮತ್ತು ಭುವನೇಶ್ವರ್‍ನಲ್ಲಿ ಸಂಸ್ಥೆ ಕಾರ್ಯಾಚರಿಸುತ್ತಿದೆ. ಟೈರ್-2 ನಗರಗಳಲ್ಲಿ ಜನರು ಫಿಟ್ನೆಸ್ ಬಗ್ಗೆ ಹೆಚ್ಚು ವಿವೇಚನೆ ಹೊಂದಿದ್ದು ಅದಕ್ಕಾಗಿ ವೆಚ್ಚ ಮಾಡಲು ಸಿದ್ಧವಿದ್ದಾರೆ, ಆದ್ರೆ ಸೌಲಭ್ಯಗಳ ಲಭ್ಯತೆಯ ಬಗ್ಗೆ ಅರಿವಿಲ್ಲ. ಇದೇ ಕಾರಣಕ್ಕೆ ಟೈರ್-2 ಸಿಟಿಗಳನ್ನು ಆಯ್ದುಕೊಂಡಿದ್ದೇವೆ ಎನ್ನುತ್ತಾರೆ ಅವಿ ಹಾಗೂ ದೇವಿ. ಜೊತೆಗೆ ಟೈರ್ 2 ನಗರಗಳಲ್ಲಿ ಮೂಲಸೌಕರ್ಯ ಮತ್ತು ಸಂಪನ್ಮೂಲಗಳ ಕೊರತೆ ಇದೆ. ಟೈರ್-2 ಸಿಟಿಗಳಲ್ಲಿ ಹೊಸದಾಗಿ ಆರಂಭವಾಗ್ತಿರೋ ಫಿಟ್‍ನೆಸ್ ಬ್ಯುಸಿನೆಸ್‍ನ ವೆಚ್ಚ ಹಾಗೂ ಬೇಡಿಕೆಗಳ ಬಗ್ಗೆ ಮಾಹಿತಿ ಪೂರೈಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ.

780ಕ್ಕೂ ಹೆಚ್ಚು ಫಿಟ್ನೆಸ್ ಕೇಂದ್ರಗಳೊಂದಿಗೆ ಬಿವೈಜಿ ಟೈಅಪ್ ಮಾಡಿಕೊಂಡಿದೆ. ಕಾರ್ಯಾಚರಣೆ ಆರಂಭಿಸಿ 40 ದಿನಗಳೊಳಗೆ 3030ಕ್ಕೂ ಹೆಚ್ಚು ವಹಿವಾಟು ನಡೆಸಿದೆ. ಪ್ರತಿದಿನ 10 ಕೇಂದ್ರಗಳು ಈ ವೇದಿಕೆಗೆ ಸೇರ್ಪಡೆಯಾಗುತ್ತಿವೆ. ಶೇ.99 ಗ್ರಾಹಕರು ಫಿಟ್ನೆಸ್ ತರಬೇತಿ ಆಯ್ದುಕೊಳ್ಳುತ್ತಿದ್ದಾರೆ, ಅವರಲ್ಲಿ ಶೇ.80ರಷ್ಟು ಮಂದಿ ಎರಡಕ್ಕೂ ಹೆಚ್ಚು ವಹಿವಾಟು ನಡೆಸಿದ್ದಾರೆ. ವಿಶೇಷ ಅಂದ್ರೆ ಬಿವೈಜಿ ಮಾರ್ಕೆಟಿಂಗ್‍ಗಾಗಿ ನಯಾಪೈಸೆ ವೆಚ್ಚಮಾಡಿಲ್ಲ. ಬಿವೈಜಿ ಆ್ಯಪ್ ಅನ್ನು 4500 ಮಂದಿ ಡೌನ್‍ಲೋಡ್ ಮಾಡಿಕೊಂಡಿದ್ದು, 1700 ಬಳಕೆದಾರರು ಸಕ್ರಿಯ ವ್ಯವಹಾರ ಮಾಡುತ್ತಿದ್ದಾರೆ.

ಇನ್ನು 6 ತಿಂಗಳುಗಳಲ್ಲಿ ಬಿವೈಜಿ ವೇದಿಕೆಯಲ್ಲಿ 2000 ಫಿಟ್ನೆಸ್ ಕೇಂದ್ರಗಳನ್ನು ಹೊಂದಲು ಉದ್ದೇಶಿಸಲಾಗಿದೆ. ಜೊತೆಗೆ 10000 ಫ್ರೀಲಾನ್ಸ್ ತರಬೇತುದಾರರನ್ನಿಟ್ಟುಕೊಂಡು 2 ಲಕ್ಷ ಗ್ರಾಹಕರಿಗೆ ಜಿಮ್ ಸೌಲಭ್ಯ ಒದಗಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಪ್ರತಿ ವಹಿವಾಟಿಗೂ ಸರ್ವೀಸ್ ಪ್ರೊವೈಡರ್‍ಗಳಿಂದ ಶೇ.20ರಷ್ಟು ಕಮಿಷನ್ ಪಡೆಯುವ ಮೂಲಕ ಬಿವೈಜಿ ಆದಾಯ ಗಳಿಸುತ್ತಿದೆ. ಸದ್ಯ ಬಿವೈಜಿ ಅಪ್ಲಿಕೇಷನ್ ಉಚಿತವಾಗಿದ್ದು, ಗ್ರಾಹಕರಿಗೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಇನ್ನು ಬಿ2ಬಿ ಸಿಆರ್‍ಎಂ ಸೊಲ್ಯೂಶನ್‍ಗಾಗಿ 1,000 ರೂಪಾಯಿ ಪ್ರಯೋಗ ಶುಲ್ಕ ಪಡೆಯುತ್ತಿದೆ. ಫಿಟ್ನೆಸ್ ಕೇಂದ್ರಗಳು ಸಂಪೂರ್ಣ ಚಂದಾದಾರರಾದ ಮೇಲೆ ಇದನ್ನು 3000 ರೂಪಾಯಿಗೆ ಹೆಚ್ಚಿಸಲಾಗುತ್ತದೆ.

ಬಿವೈಜಿಯ ಮೊದಲ ತಿಂಗಳ ಆದಾಯ 1 ಲಕ್ಷ ರೂಪಾಯಿಗಿಂತಲೂ ಕಡಿಮೆಯಿತ್ತು. 2016ರ ಆಗಸ್ಟ್ ವೇಳೆಗೆ ಪ್ರತಿ ತಿಂಗಳ ಆದಾಯವನ್ನು 25 ಲಕ್ಷ ರೂಪಾಯಿಗೆ ಹೆಚ್ಚಿಸಿಕೊಳ್ಳಲು ಉದ್ದೇಶಿಸಲಾಗಿದೆ. ಏಂಜೆಲ್ ಸುತ್ತಿನಲ್ಲಿ 2 ಕೋಟಿ ರೂಪಾಯಿ ಬಂಡವಾಳ ಗಿಟ್ಟಿಸಿಕೊಳ್ಳುತ್ತಿರುವ ಸಂಸ್ಥೆ ಸಿರೀಸ್-ಎ ಫಂಡಿಂಗ್ ಮೇಲೂ ಕಣ್ಣಿಟ್ಟಿದೆ.

ಭವಿಷ್ಯದೆಡೆಗೆ ಓಟ...

ಇನ್ನು 5 ತಿಂಗಳುಗಳಲ್ಲಿ ಪಲ್ಸ್ ವೇದಿಕೆಯನ್ನು ಇನ್ನಷ್ಟು ಉತ್ತಮಪಡಿಸಲಾಗುತ್ತದೆ. ನಗರದಲ್ಲಿ ನಡೆಯುವ ಎಲ್ಲ ಫಿಟ್ನೆಸ್ ಈವೆಂಟ್‍ಗಳ ವಿವರವನ್ನುಳ್ಳ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಗುತ್ತದೆ. ಇನ್ನೊಂದೆಡೆ ಗ್ರಾಹಕರಿಗೆ ಪ್ರೇರಣೆ ಉಂಟುಮಾಡುವ ಸಂಬಂಧ ಇರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ. ``ಫಿಟ್ನೆಸ್ ಘಟಕಗಳ ಯಶಸ್ಸು ಸಂಪೂರ್ಣವಾಗಿ ಗ್ರಾಹಕರ ಪ್ರೇರಣೆಯನ್ನು ಆಧರಿಸಿದೆ'' ಅನ್ನೋದು ದೇವಿ ಪ್ರಸಾದ್ ಅವರ ಅಭಿಪ್ರಾಯ. ದೇಹಧಾಢ್ರ್ಯ ಪಟುಗಳನ್ನು ಪರಸ್ಪರ ಸಂಪರ್ಕಿಸಿ ಅವರಿಗೆ ನೆರವಾಗಲು ಕೂಡ ಯೋಜನೆ ಸಿದ್ಧವಾಗಿದೆ. ಅಷ್ಟೇ ಅಲ್ಲ ಬಿವೈಜಿ ಸಹ ಸಂಸ್ಥಾಪಕರು ಪ್ರತಿಯೊಬ್ಬ ಗ್ರಾಹಕರ ಪ್ರೊಫೈಲ್‍ಗಳನ್ನು ಕೂಡ ನಿರ್ವಹಣೆ ಮಾಡುತ್ತಿದ್ದು, ಆರೋಗ್ಯ ಹಾಗೂ ಪ್ರದರ್ಶನದ ಬಗ್ಗೆ ಗಮನಹರಿಸುತ್ತಿದ್ದಾರೆ.

ಭಿನ್ನತೆ ಏನಿದೆ..?

ಭಾರತದಲ್ಲಿ ಅಮೆರಿಕದ ಕ್ಲಾಸ್‍ಪಾಸ್ ಮಾದರಿಯ ಅನೇಕ ಅಳವಡಿಕೆಗಳಿವೆ, ಮಾರುಕಟ್ಟೆ ಕೂಡ ಶುದ್ಧತ್ವದ ಸನಿಹದಲ್ಲಿದೆ. ಜಿಮ್‍ಪಿಕ್, ಪ್ಲೇಆ್ಯಂಡ್‍ಲಿವ್‍ನಂತಹ ಕೆಲ ಸಂಸ್ಥೆಗಳಿಗೆ ಬಿವೈಜಿ ಪೈಪೋಟಿ ಒಡ್ಡುತ್ತಿದೆ. ಗಂಟೆಗಳ ಲೆಕ್ಕದಲ್ಲಿ ಗ್ರಾಹಕರು ಶುಲ್ಕ ಪಾವತಿಸಿ ಫಿಟ್ನೆಸ್ ತರಬೇತಿ ಪಡೆಯುವ ಸೌಲಭ್ಯವುಳ್ಳ ಜಿಮರ್ ಕೂಡ ಬಿವೈಜಿ ಸಂಸ್ಥೆಯ ಪ್ರಮುಖ ಪ್ರತಿಸ್ಪರ್ಧಿ. ಇನ್ನು ಜಿಮ್‍ಪಿಕ್ ಇತ್ತೀಚೆಗಷ್ಟೆ ಫಿಟ್ನೆಸ್ ಪಾಪಾವನ್ನು ಸ್ವಾಧೀನಪಡಿಸಿಕೊಂಡಿದೆ. ಫಿಟ್ಟರ್ನಿಟಿ ಕೂಡ ಜಾಹೀರಾತುಗಳ ಮೂಲಕ ಗಮನಸೆಳೆಯುತ್ತಿದೆ.

ತಮ್ಮ ಆದಾಯ ಮಾದರಿ ಮತ್ತು ಕಮಿಷನ್‍ಗಳಲ್ಲಿ ಟ್ವಿಸ್ಟ್ ನೀಡುವ ಮೂಲಕ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಈ ಸಂಸ್ಥೆಗಳು ಕಸರತ್ತು ಮಾಡುತ್ತಿವೆ. ಬಿವೈಜಿ ಸಂಪೂರ್ಣ ಸೈಕಲ್ ಮೂಲಕ ಜಿಮ್‍ನಲ್ಲಿ ಗ್ರಾಹಕರ ದಿನನಿತ್ಯದ ಹಾಜರಾತಿಯ ಲೆಕ್ಕ ಇಡುತ್ತಿದೆ. ಬಿವೈಜಿಯ ಬಿ2ಬಿ ಸೊಲ್ಯೂಶನ್, ಭಾರತದ ಕನೆಕ್ಟ್‍ಪಿಡೀಯಾ ಜೊತೆ ಪೈಪೋಟಿಗಿಳಿದಿದೆ.

ವಿಶೇಷ ಅಂದ್ರೆ ಕಳೆದ 2 ವರ್ಷಗಳಿಂದ ಫಿಟ್ನೆಸ್ ಸ್ಟಾರ್ಟಪ್‍ಗಳು ಭಾರೀ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಭವಿಷ್ಯದಲ್ಲಿ ಇವುಗಳ ಸ್ಥಿತಿ ಏನಾಗುತ್ತೆ ಅನ್ನೋದೇ ಮುಂದಿರುವ ಕುತೂಹಲ.

ಲೇಖಕರು: ತಾರುಷ್ ಭಲ್ಲಾ

ಅನುವಾದಕರು: ಭಾರತಿ ಭಟ್ 

ಇದನ್ನು ಓದಿ

1. ಮನೆ ಮಾಲೀಕರ ಆಪ್ತಮಿತ್ರ ಈ ಜೆನಿಫೈ

2. ಅನ್ನದಾತರಿಗೆ ಬೆನ್ನೆಲುಬಾದ ಸಾಫ್ಟ್​​ ವೇರ್ ಎಂಜಿನಿಯರ್ - ಸಾಲದ ಸುಳಿಗೆ ಸಿಲುಕಿದ್ದ ರೈತರಿಗೆ ಹೊಸ ಬದುಕು ಕಟ್ಟಿಕೊಟ್ಟ `ಆರ್ಗೆನಿಕ್ ಮಂಡ್ಯ'

3. 

Related Stories