ನಿಮ್ಮ ಮದುವೆಯ ಪ್ಲಾನ್​​ ರೆಡಿ ಇಲ್ವಾ..? ಡೋಂಟ್​​ವರಿ..! ಇಲ್ಲಿದೆ ಸೊಲ್ಯುಷನ್​​

ಟೀಮ್​​ ವೈ.ಎಸ್​​. ಕನ್ನಡ

ನಿಮ್ಮ ಮದುವೆಯ ಪ್ಲಾನ್​​ ರೆಡಿ ಇಲ್ವಾ..? ಡೋಂಟ್​​ವರಿ..! ಇಲ್ಲಿದೆ ಸೊಲ್ಯುಷನ್​​

Wednesday November 18, 2015,

3 min Read

ಭಾರತದಲ್ಲಿ ಮದವೆ ಯೋಜಕರಿಗೆ ಯಾವಾಗಲೂ ಬಹಳ ಬೇಡಿಕೆ ಇದ್ದೇ ಇರುತ್ತದೆ. ಗೃಹಾಲಂಕಾರ, ಹೂವಿನಲಂಕಾರ, ಮದುವೆ ಅಡುಗೆಯವರು, ಕೋರಿಯೋಗ್ರಾಫರ್‍ಗಳು, ಮೇಕಪ್, ಎಲ್ಲರೂ ಸೇರಿ ನಮ್ಮ ಕನಸಿನ ಮದುವೆ ಅದ್ದೂರಿಯಾಗಿ ಆಗಲಿಂದು ಕೆಲಸ ಮಾಡುತ್ತಾರೆ. ಅದೊಂದು ಭವ್ಯವಾದ ಅನುಭವ, ಹೀಗೆ ನಮ್ಮ ಕನಸನ್ನು ನನಸಾಗಿಸಲು ಮದುವೆ ಆಯೋಜಕರು ಮುಂದಿರುತ್ತಾರೆ.

ಈ ಉದ್ಯಮ ಸ್ವಲ್ಪ ಸಮಯದ ಹಿಂದೆ ತುಂಬಾ ವಿಭಿನ್ನವಾಗಿತ್ತು. ಪ್ರತಿಯೊಂದು ಸಣ್ಣ ಪುಟ್ಟ ಕೆಲಸವನ್ನೂ ಮನೆಯವರೇ ನೋಡಿಕೊಳ್ಳಬೇಕಿತ್ತು. ಈ ರೀತಿಯ ತೊಂದರೆಗಳಿಂದ ಹೊರಬರಲೆಂದೇ ನೀತಾ ರಹೇಜಾ ಅವರು ಮದುವೆ ಸಮಾರಂಭದ ಸಲಹೆಕಾರರಾಗಿದ್ದು, ಈಗ ಭಾರತದಲ್ಲಿ ಮದವೆ ಯೋಜನೆ ಮಾಡುವವರೂ ಕೂಡ ಉದ್ಯಮ ಪ್ರವರ್ತಕರೆಂದೇ ಹೇಳಬಹುದು.

image


ಮದುವೆ ಯೋಜನೆಗೆ ಪ್ರವೇಶಸಿದ್ದು

90ರ ದಶಕದಲ್ಲಿ ನೀತಾ ಅವರು ತಮ್ಮ ಸಂಬಂಧಿಕರ ಒಂದು ಮದವೆಗೆಂದು ನ್ಯೂ ಜೆರ್ಸಿಗೆ ತೆರಳಿದ್ದಾಗ, ತನ್ನ ಸ್ನೇಹಿತರ ಜೊತೆಯಲ್ಲಿದ್ದ ಲೊರೆಟೊ ಎಂಬ ಒಬ್ಬ ವೆಡ್ಡಿಂಗ್ ಪ್ಲಾನರ್ ಅನ್ನು ಭೇಟಿ ಮಾಡಿದ್ದರು. ಅವರಿಗೆ ಮದುವೆ ಆಯೋಜನೆ ಎಂಬುದು ತುಂಬಾ ಹೊಸದು ಮತ್ತು ಅದರ ಬಗ್ಗೆ ಹೆಚ್ಚು ತಿಳಿಯಲು ಕಾತುರ ಕೂಡ. ಈ ರೀತಿಯ ಉದ್ಯೋಗವನ್ನು ಭಾರತಕ್ಕೂ ತರಬೇಕೆಂದು ಅವರು ತೀರ್ಮಾನಿಸಿದರು. ಮತ್ತೆ ನ್ಯೂ ಜೆರ್ಸಿಗೆ ತೆರಳಿ ಲೊರೆಟೋ ಬಳಿ ಮದುವೆ ಯೋಜನೆಯ ಬಗ್ಗೆ ತರಬೇತಿ ಪಡೆದರು. ಆಗಿನಕಾಲದಲ್ಲಿ ಇಂಟರ್ನೆಟ್ ಇರಲಿಲ್ಲ. ಆದ ಕಾರಣ ಅವರು ಗ್ರಂಥಾಲಯಕ್ಕೆ ಹೋಗಿ ಸಾಕಷ್ಟು ಪುಸ್ತಕಗಳನ್ನು ಓದಿ ಮದುವೆಗಳ ಬಗ್ಗೆ ತಿಳಿದುಕೊಂಡರು. ದೆಹಲಿ ಹಾಗೂ ಇತರೆ ನಗರಗಳಲ್ಲಿ ಕಾಟೇಜ್ ಎಂಪೋರಿಯಂಗಳನ್ನು ಸುತ್ತಿ, ಅಲ್ಲಿನ ಆರ್ಗೆಂಜಾ ಬಟ್ಟೆಗಳು, ಬಂಕುರ ಕುದುರೆಗಳು, ಆನೆಗಳ ಬಗ್ಗೆ ಸಂಶೋಧನೆ ಪ್ರಾರಂಭಿಸಿದರು. ಮತ್ತು ಆ ಸಾಮಗ್ರಿಗಳನ್ನು ನ್ಯೂ ಜೆರ್ಸಿಗೆ ಎಕ್ಸ್​​​ಪೋರ್ಟ್ ಕೂಡ ಮಾಡತೊಡಗಿದರು.

‘ಇದೇ ಅವಕಾಶಗಳ ಬೆನ್ನತ್ತಿ ನಾನು ವೃತ್ತಿ ಜೀವನವನ್ನು ಆರಂಭಿಸಲು ಕೊಲಂಬಿಯಾದಲ್ಲಿ ತರಬೇತಿ ಪಡೆದು ಭಾರತಕ್ಕೆ ಹಿಂತಿರುಗಿದಾಗ, ನನ್ನ ಪತಿ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ಕೊಟ್ಟರು. ಆಗ ನನಗೆ ದೆಹಲಿಯ ಮಿತ್ತಲ್ ಕುಟುಂಬದಿಂದ ಕರೆ ಬಂತು ನಾನು ಅವರ ಬಳಿಗೆ ಕುತೂಹಲದಿಂದ ಹೋದಾಗ ನನಗೆ ಮೊಟ್ಟ ಮೊದಲ ಆಫರ್ ಸಿಕ್ಕಿತು’ ಎಂದು ನೀತಾ ಹೇಳಿಕೊಳ್ಳುತ್ತಾರೆ. ಅಲ್ಲಿಯೇ ನನಗೆ ಅನ್ಸಲ್ ಕುಟುಂಬದ ಪರಿಚಯವಾಗಿ, ಅವರಿಂದ ನ್ನ ಕೆಲಸದ ಗುಣಮಟ್ಟ ಇನ್ನೂ ಹೆಚ್ಚಿತು. ಅವರು ಹೊಸ ಹೊಸ ಥೀಮ್‍ಗಳೊಂದಿಗೆ (ಮರುಭೂಮಿ, ನಿಜವಾದ ಆಡುಗಳು, ಕೃತಕ ಗುಹೆಗಳು) ಕಾರ್ಯಕ್ರಮಗಳನ್ನು ಆಯೋಜಿಸಲಾರಂಭಿಸಿದರು. ಯಾವಾಗ ಅವರ ಹೇಸರು ಪೇಜ್-3 ಯಲ್ಲಿ ಬಂತೋ ಅವರಿಗೇ ತಿಳಿಯಲಿಲ್ಲ. ಅವರು ಬಹಳಷ್ಟು ಮದುವೆಗಳನ್ನ ಮಾಡಿಸೋದಕ್ಕೆ ಶುರು ಮಾಡಿದರು, ಎಲ್ಲವೂ ವಿಭಿನ್ನವಾಗಿದ್ದವು. ಪ್ರತಿಯೊಂದು ದಿಕ್ಕು, ಜಾತಿಗಳಲ್ಲಿ ವಿಭಿನ್ನ ಆಚರಣೆಗಳಿದ್ದವು. ಈ ಹಾದಿಯಲ್ಲಿ ಅವರು ಬಹಳಷ್ಟು ಸವಾಲನ್ನು ಎದುರಿಸಬೇಕಾಯಿತು. ಏಕೆಂದರೆ ಸ್ವಲ್ಪ ಹೆಚ್ಚುಕಮ್ಮಿಯಾದರೂ ಆಚಾರ ಮತ್ತು ಆಚರಣೆಗಳಿಗೆ ಧಕ್ಕೆ ಉಂಟಾಗುವ ಸಾಧ್ಯತೆಗಳಿದ್ದವು. ಹಾಗಾಗಿ ಅವರು ಸಾಕಷ್ಟು ಸಂಶೋಧನೆಗಳನ್ನು ಮಾಡಿ, ಮದುವೆಗಳಲ್ಲಿ ಯಾವುದೇ ತೊಂದರೆಗಳಾಗಬಾರದೆಂದು "ಹೌ ಟು ಅರೇಂಜ್ ಎನ್ ಇಂಡಿಯನ್ ಮ್ಯಾರೇಜ್" ಎಂಬ ಪುಸ್ತಕವನ್ನು ಬರೆದು ಬಿಡುಗಡೆ ಮಾಡಿದರು.

ಮದುವೆ ಉದ್ಯಮದಲ್ಲಿ ಬದಲಾವಣೆಯ ಗಾಳಿ

ಪ್ರಸ್ತುತ ಜನರು ಈಗ ಚಿನ್ನ, ಮರ್ಸಿಡಿಸ್ ಕಾರ್‍ಗಳನ್ನು ಉಡುಗೊರೆಯಾಗಿ ಕೊಡಲು ಆರಂಭಿಸಿದ್ದಾರೆ, ‘ಭಾರತದ ಆರ್ಥಿಕ ಪರಿಸ್ಥಿತಿ ಕುಸಿದರೂ ಅದರ ಯಾವುದೇ ಪರಿಣಾಮ ಮದುವೆಗಳ ಮೇಲೆ ಬೀರುತ್ತಿಲ್ಲ’ ಎಂದು ನೀತಾ ಹೇಳಿಕೊಳ್ಳುತ್ತಾರೆ. ಈಗ ನೀತಾ ಅವರು ಲುಧಿಯಾನ, ಕಾನ್ಪುರ್, ಇಂದೋರ್, ದೇಶದ ಹಲವೆಡೆ ದೊಡ್ಡ ದೊಡ್ಡ ಉದ್ಯಮಿಗಳ ಕುಟುಂಬದಲ್ಲಿ ನಡೆಯುವ ಮದುವೆ ಸಮಾರಂಭಗಳನ್ನು ಪ್ಲ್ಯಾನ್ ಮಾಡಿದ್ದಾರೆ. ಉದ್ಯಮದಲ್ಲಿ ಪರಿಚಿತ ಹೆಸರಾದ ಸಿಂಘಾನಿಯಾ ಅವರ ಮದುವೆ ಕೂಟ ನೀತಾ ಅವರೇ ಯೋಜಿಸಿದ್ದಾರೆ. ಅಚ್ಚುಕಟ್ಟಾಗಿ ಹೊಸ ರೀತಿಯಲ್ಲಿ ನಿರ್ವಹಿಸಿ ಎಲ್ಲರಿಂದ ಸೈ ಎನಿಸಿಕೊಂಡಿದ್ದಾರೆ. ಅವರು ದೀರ್ಘ ಕಾಲ ಮದುವೆ ಕಾರ್ಯ ಯೋಜನೆಯನ್ನ ತೆಗೆದುಕೊಳ್ಳುವುದನ್ನು ನಿಲ್ಲಿಸಿಬಿಟ್ಟಿದ್ದರು. ಆಗ ಅವರನ್ನೇ ನಂಬಿದ್ದ ಕೆಲಸಗಾರರ ದುಸ್ಥಿತಿ ನೋಡಿ ಅವರು ಮತ್ತೆ ಕೆಲವೇ ಮದುವೆಗಳ ಕೆಲಸವನ್ನು ಒಪ್ಪಿಕೊಂಡರು.

image


ಗಮ್ಯಸ್ಥಾನ ಮದುವೆಗಳು:

ನೀತಾ ಬಾಲಿವುಡ್ ವಿನ್ಯಾಸಕರೊಂದಿಗೆ ಸೇರಿ ಒಪ್ಪಂದ ಮಾಡಿಕೊಂಡು ಸೆಟ್‍ಗಳನ್ನು ನಿರ್ಮಿಸಿದರು. ಇನ್ನೂ ಹೊಸ ಕಲ್ಪನೆಗಳೊಂದಿಗೆ ಮದುವೆ ಮಾಡಲಾರಂಭಿಸಿದರು. ಅದಷ್ಟೇ ಅಲ್ಲದೆ ಅವರು ಗೋವಾ, ಗ್ರೀಸ್ ದ್ವೀಪಗಳು ಹಾಗೂ ಮಾರಿಷಿಯಸ್‍ನ ಕಡಲ ತೀರಗಳಲ್ಲೂ ಸಾಂಪ್ರದಾಯಿಕವಾಗಿ ವಿವಾಹಗಳನ್ನು ನೆರವೇರಿಸಿದ್ದಾರೆ.

ನೀತಾ ಈಗ ಮದುವೆಗಳಿಗೆ, ಎನ್‍ಆರ್‍ಐ ಗ್ರಾಹಕರಿಗೆ ವಿವಾಹ ಸಮಾರಂಭಗಳಿಗೆ, ವೈಯಕ್ತಿಕವಾಗಿ ಅಂತರ-ಸಾಂಸ್ಕೃತಿಕ ಮದುವೆಗಳ ಬಗ್ಗೆ ಸಲಹೆಗಳನ್ನು ಕೊಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಈ ಮೂಲಕ ತಾವೂ ಹಣದ ಜೊತೆಗೆ ಒಳ್ಳೆ ಹೆಸರನ್ನೂ ಸಂಪಾದಿಸಿದ್ದಾರೆ.

ಲೇಖಕರು: ಇಂದ್ರಜಿತ್​ ಡಿ ಚೌಧರಿ

ಅನುವಾದಕರು: ವಿಶಾಂತ್​​​