ಮನೆಬಾಗಿಲಿಗೇ ಬಯಸಿದ ಚೈನೀ ಫುಡ್ : ದೆಹಲಿಯಾದ್ಯಂತ ಹ್ಯಾಪಿಹಕ್ಕಾದ ಸ್ವಾದಿಷ್ಟತೆಯ ಘಮಘಮ..!

ಟೀಮ್​​ ವೈ.ಎಸ್​. ಕನ್ನಡ

ಮನೆಬಾಗಿಲಿಗೇ ಬಯಸಿದ ಚೈನೀ ಫುಡ್ : ದೆಹಲಿಯಾದ್ಯಂತ ಹ್ಯಾಪಿಹಕ್ಕಾದ ಸ್ವಾದಿಷ್ಟತೆಯ ಘಮಘಮ..!

Monday December 21, 2015,

3 min Read

ಹಸಿವಿನಿಂದ ಕಂಗಾಲಾದವರಿಗೆ, ಅಡುಗೆ ಮಾಡೋದಿಕ್ಕೆ ಸೋಮರಿತನ ಮಾಡುವವರ ಪಾಲಿಗೆ ಗೆಳೆಯನಂತಿರುವ ನಂಬಿಗಸ್ಥ ಪಿಜ್ಜಾ ಡೆಲಿವರಿ ಸರ್ವೀಸ್ ಗಳು ಯಾವತ್ತೂ ತಮ್ಮ ಉದ್ದಿಮೆಯಲ್ಲಿ ಫೇಲ್ಯೂರ್ ಅನಿಸಿಕೊಂಡಿದ್ದೇ ಇಲ್ಲ. ಚೈನಾ ಮೂಲದ ಈ ಪಿಜ್ಜಾವನ್ನ ಡಿನ್ನರ್ ಟೈಂನಲ್ಲಿ ತಿನ್ನೋದಕ್ಕೆ ಅದೆಷ್ಟೋ ಜನರು ಹೊರಗೂ ಹೊಗ್ತಾರೆ. ಆದ್ರೆ ಖ್ಯಾತ ವೆಸ್ಟರ್ನ್ ಶೈಲಿಯ ಅದೆಷ್ಟೋ ಆಹಾರ ಪದಾರ್ಥಗಳು ಭಾರತದಲ್ಲಿ ನೆಲೆಯೂರಲು ಅವಕಾಶ ಸಿಕ್ಕಿಲ್ಲ. ಬಯಸಿದ ಫುಡ್ ಐಟಂಗಳು ಸಿಗುವುದೂ ಇಲ್ಲ. ಹೀಗಾಗಿ ಈ ರೀತಿ ಪರಿಸ್ಥಿತಿಗಳ ಲಾಭ ಪಡೆದು ಅದೆಷ್ಟೋ ಮಂದಿ ಬ್ಯುಸಿನೆಸ್ ಶುರು ಮಾಡಿ ಲಾಭ ಕಂಡಿದ್ದಾರೆ. ಇದೀಗ ದೆಹಲಿಯಲ್ಲೂ ಇಂತಹ ಪ್ರಯತ್ನಕ್ಕೆ ಕೈ ಹಾಕಿರುವ ಗೆಳೆಯರ ಬಳಗವೊಂದು ಗ್ರಾಹಕರಿಗೆ ಟೇಸ್ಟೀ ಚೈನೀಸ್ ಫುಡ್ ತಲುಪಿಸುವ ಮೂಲಕ ತಮ್ಮ ಉದ್ದಿಮೆಯಲ್ಲಿ ಯಶಸ್ಸು ಸಾಧಿಸಿದ್ದಾರೆ.

ಹ್ಯಾಪಿ ಹಕ್ಕಾ.. ದೆಹಲಿಯ ನಾಲ್ವರು ಗೆಳೆಯರು ಹುಟ್ಟುಹಾಕಿರುವ ಫುಡ್ ಕೋರ್ಟ್. ಗೌತಮ್ ಘಾಯ್, ಅರುಷಿ ವೈಶ್, ಪುನೀತ್ ಸೈನಿ ಹಾಗೂ ಚಂದರ್ ಮೋಹನ್ ಇದ್ರ ರೂವಾರಿಗಳು. ದೆಹಲಿಯಲ್ಲಿ ಕೆಲವೇ ರೆಸ್ಟೋರೆಂಟ್ ಗಳಲ್ಲಿ ಚೈನೀಸ್ ಫುಡ್ ಸಿಗುತ್ತಿತ್ತು. ಆದ್ರೆ ಜನರು ಚೇನೀಸ್ ಫುಡ್ ಗಳನ್ನ ಹೆಚ್ಚಾಗಿ ಬಯಸುವುದನ್ನ ಮನಗಂಡ ಗೌತಮ್ ಹಾಗೂ ಪುನೀತ್ ಹ್ಯಾಪಿ ಹಕ್ಕಾ ಅನ್ನೋ ಹೆಸರಿನಲ್ಲಿ ಮನೆಬಾಗಿಲಿಗೇ ಫುಡ್ ಡೆಲಿವರಿ ಸರ್ವೀಸ್ ಶುರುಮಾಡಿದ್ರು. ಬಳಿಕ ಈ ಬ್ಯುಸಿನೆಸ್ ಗೆ ಇತರರು ಸಾಥ್ ನೀಡಿದ್ರು. ಇನ್ನು ಇತರೆ ಫುಡ್ ಸರ್ವೀಸ್ ಗಳ ಬಗ್ಗೆ ಹಾಗೂ ಅದರಲ್ಲಿರುವ ಲೋಪಗಳನ್ನ ಈ ತಂಡ ಮೊದಲು ತಿಳಿದುಕೊಂಡಿತು. ಅಲ್ಲದೆ ಚೈನೀಸ್ ಫುಡ್ ಗಳನ್ನ ಆನ್ ಲೈನ್, ಸೆಂಟ್ರಲ್ ಹಾಟ್ ಲೈನ್ ನಂಬರ್ ಹಾಗೂ ಮೊಬೈಲ್ ಆಪ್ ಗಳ ಮೂಲಕ ಬಯಸಿದ ಗ್ರಾಹಕರ ಮನೆಬಾಗಿಲಿಗೆ ತಲುಪಿಸಿದ್ರು. ಈ ಮೂಲಕ ಕೆಲವೇ ದಿನಗಳಲ್ಲಿ ಈ ಸ್ಟಾರ್ಟ್ ಅಪ್ ಡೆಲ್ಲಿ ಮಂದಿಯ ಮನಗೆಲ್ಲುವಲ್ಲಿ ಯಶಸ್ಸು ಕಂಡಿದೆ.

image


“ಭಾರತದ ಮಾರುಕಟ್ಟೆಯಲ್ಲಿ ಚೈನೀಸ್ ತಿನಿಸುಗಳು ಅಷ್ಟಾಗಿ ಪ್ರಚಾರ ಪಡೆದಿಲ್ಲ. ಅದ್ರಲ್ಲೂ ಮನೆಬಾಗಿಲಿಗೇ ತಲುಪಿಸುವ ಉತ್ತಮ ಸರ್ವೀಸ್ ಗಳೂ ಇಲ್ಲ. ಹೀಗಾಗಿ ಕಡಿಮೆ ದರಕ್ಕೆ ಪ್ಯಾನ್ ಏಷ್ಯನ್ ಫುಡ್ ಗಳನ್ನ ಡೆಲಿವರಿ ಮಾಡೋದಿಕ್ಕೆ ಶುರುಮಾಡಿದೆವು ” ಗೌತಮ್ ಘಾಯ್, ಹ್ಯಾಪಿ ಹಕ್ಕಾ ಸಹಸಂಸ್ಥಾಪಕ

ಆರ್ಡರ್ ಮತ್ತು ಸರ್ವೀಸ್ ಸ್ಪೆಷಾಲಿಟಿ..

ಹ್ಯಾಪಿ ಹಕ್ಕಾ, ಕ್ವಿಕ್ ಸರ್ವೀಸ್ ರೆಸ್ಟೋರೆಂಟ್ ಗಳ ಪೈಕಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಬೇಕು ಅನ್ನೋ ವಿಜನ್ ನಮಗಿತ್ತು ಅಂತ ಗೌತಮ್ ಹೇಳುತ್ತಾರೆ. ಹೀಗಾಗಿ ಉತ್ತಮ ದರ ಹಾಗೂ ಸನಿಹದ ಸರ್ವೀಸ್ ಪಾಯಿಂಟ್ ಗಳ ಮೂಲಕ ಗ್ರಾಹಕರನ್ನ ಗೆಲ್ಲಲೇ ತಲುಪಲೇಬೇಕಾಗಿತ್ತು. ಹ್ಯಾಪಿ ಹಕ್ಕಾ ಜೊತೆಗೆ ಉತ್ತಮ ಸ್ವಾದ ಹಾಗೂ ಪ್ಯಾಕಿಂಗ್ ಸಿಸ್ಟಮ್ ನೀಡುತ್ತಿದೆ. ಅಲ್ಲದೆ ಕೆಲವು ಮಿಕ್ಸ್ ಮಾಡಲಾಗಿರುವ ರೆಡಿ ಟು ಈಟ್ ಐಟಮ್ ಗಳನ್ನೂ ನೀಡುತ್ತಿದೆ. ಇದ್ರಿಂದ ಫುಡ್ ಗಳನ್ನ ತರಿಸಿಕೊಳ್ಳುವ ಮನೆ ಮಂದಿ ಹಾಗೂ ಆಫೀಸ್ ಪರ್ಸನ್ ಗಳ ಮೆಚ್ಚುಗೆಗೆ ಪಾತ್ರವಾಗಲು ಸಾಧ್ಯವಾಗಿದೆ. ಜೊತೆಗೆ ಆರ್ಡರ್ ಗಳನ್ನ ತರಿಸಿಕೊಳ್ಳುವವರಿಗೆ ಕ್ಯಾಶ್, ಕಾರ್ಡ್ ಸೌಲಭ್ಯಗಳನ್ನ ಕಲ್ಪಿಸಲಾಗಿದೆ. ಇನ್ನು ಹ್ಯಾಪಿ ಹಕ್ಕಾದ ಡಿಶಸ್ ಗಳು 51 ರೂಪಾಯಿಂದ ಹಿಡಿದು 289 ರೂಪಾಯಿವರೆಗೂ ಲಭ್ಯವಿದೆ. ಊಟದ ದರ 99 ರೂಪಾಯಿಂದ 400 ರೂಪಾಯಿವರೆಗೂ ವಿವಿಧ ವೆರೈಟಿಗಳಲ್ಲಿ ಲಭ್ಯವಿದೆ.

“ ನಾವು ತಯಾರಿಸುವ ಆಹಾರ ವಸ್ತುಗಳಲ್ಲಿ ಕೃತಕ ವಸ್ತುಗಳ ಬಳಕೆ ಕಡಿಮೆ ಇರುತ್ತೆ. ತಾಜಾ ಹಾಗೂ ಸ್ವಚ್ಛತೆ ಕಡೆಗೂ ಗಮನ ಕೊಡಲಾಗಿದೆ. ಎಣ್ಣೆಯನ್ನ ಅಗತ್ಯವಿದ್ದಷ್ಟೇ ಬಳಸಲಾಗುತ್ತಿದ್ದು, ಗುಣಮಟ್ಟದ ತರಕಾರಿ ಹಾಗೂ ಇತರೆ ವಸ್ತುಗಳನ್ನ ಬಳಸುತ್ತೇವೆ. ಆರೋಗ್ಯಕ್ಕೆ ಪೂರಕವಾದ ಸೂಪ್ ಗಳು, ಸಲಾಡ್ ಗಳು ಹಾಗೂ ಬ್ರೌನ್ ರೈಸ್ ಕೂಡ ನಮ್ಮ ಮೆನುವಿನಲ್ಲಿದೆ ” ಗೌತಮ್ ಘಾಯ್, ಹ್ಯಾಪಿ ಹಕ್ಕಾ ಸಹಸಂಸ್ಥಾಪಕ

ಹ್ಯಾಪಿ ಹಕ್ಕಾ ಬೆಳವಣಿಗೆ..

ಹ್ಯಾಪಿ ಹಕ್ಕಾ ಪ್ರತೀ ದಿನ 400 ರಿಂದ 500 ಆರ್ಡರ್ ಗಳನ್ನ ಪಡೆಯುತ್ತಿದೆ. ಅದ್ರಲ್ಲೂ ಶೇಕಡಾ 80 ರಷ್ಟು ಕಸ್ಟಮರ್ ಗಳು ರೆಗ್ಯುಲರ್ ಆಗಿದ್ದಾರೆ. ಇಲ್ಲಿ ಆಹಾರ ವಸ್ತುಗಳನ್ನ ಸೆಂಟ್ರಲ್ ಕಿಚನ್ ನಲ್ಲಿ ತಯಾರಿ ನಂತ್ರ ವಿವಿಧ ಔಟ್ ಲೆಟ್ ಗಳಿಗೆ ಕಳಿಸಲಾಗುತ್ತದೆ. ಇದ್ರಿಂದಾಗಿ ದೆಹಲಿಯಂತ ನಗರದಲ್ಲಿ ಸ್ಟಾರ್ಟ್ ಅಪ್ ಆಗಿರುವ ಹ್ಯಾಪಿ ಹಕ್ಕಾ ಕಡಿಮೆ ನಿರ್ವಹಣಾ ವೆಚ್ಚದಲ್ಲಿ ಸರ್ವೀಸ್ ನೀಡಲು ಸಾಧ್ಯವಾಗಿದೆ. ಮುಂಬೈನ ನ್ಯೂಡಲ್ ಪ್ಲೇ ಹಾಗೂ ಚಾರ್ಕೋಲ್ ಬಿರಿಯಾನ್ ಗ್ರಾಹಕರೊಂದಿಗೆ ವ್ಯವಹಾರ ನಡೆಸುವ ಮಾದರಿಯಲ್ಲೇ ಹ್ಯಾಪಿ ಹಕ್ಕಾ ಸಾಗಿದೆ. ಸಂತ್ವ ಡೆಲಿವರಿ ನೆಟ್ ವರ್ಕ್ ಹೊಂದಿರುವ ಈ ಡೆಲಿವರಿ ಕಂಪನಿ ಇತರೆ ಟೆಕ್ನಾಲಜಿ ಡೆವಲಪ್ ಮೆಂಟ್ ಕಂಪನಿಗಳೊಂದಿಗೆ ಟೈ ಅಪ್ ಮಾಡಿಕೊಂಡು ವೆಬ್ ಹಾಗೂ ಮೊಬೈಲ್ ಆಪ್ ಗಳನ್ನ ರೂಪಿಸಿದೆ. ಈ ಸ್ಟಾರ್ಟ್ ಅಪ್ ನ ಮೊಬೈಲ್ ಆಪ್ ನೇರವಾಗಿ ಕಿಚನ್ ಗೆ ಸಂಪರ್ಕಿಸಲಾಗಿದ್ದು ಆರ್ಡರ್ ಬಗೆಗಿನ ಮಾಹಿತಿ ಸುಲಭವಾಗಿ ತಿಳಿಯುತ್ತವೆ. ಹೀಗಾಗಿ ಗ್ರಾಹಕರು ಮತ್ತು ಹ್ಯಾಪಿ ಹಕ್ಕಾದ ನಡುವೆ ಯಾವುದೇ ಮೂರನೇ ವ್ಯಕ್ತಿಗೆ ಅವಕಾಶವಿಲ್ಲ..

ತಂಡ ಮತ್ತು ಅವರ ಹೊಣೆ..

ಹ್ಯಾಪಿ ಹಕ್ಕಾದ ತಂಡದ ಸದಸ್ಯರು ವಿವಿಧ ಜವಾಬ್ದಾರಿಗಳನ್ನ ನಿಭಾಯಿಸಿದರಿಂದಲೇ ಈ ಸ್ಟಾರ್ಟ್ ಅಪ್ ಸಕ್ಸಸ್ ಆಗಿದೆ. ಟೀಂ ಲೀಡರ್ ಆಗಿ ಗುರುತಿಸಿಕೊಂಡಿರುವ ಗೌತಮ್ ಗೆ 10 ವರ್ಷಗಳ ಕಾಲ ಕಂಪನಿಯೊಂದರಲ್ಲಿ ಬ್ಯುಸಿನೆಸ್ ಪ್ರಾಕ್ಟಿಕಲ್ ಸಲ್ಯೂಷನ್ ವಿಭಾಗದಲ್ಲಿ ಕೆಲಸ ಮಾಡಿರುವ ಅನುಭವವಿದ್ದು ಸಂಪೂರ್ಣ ಪ್ಲಾನಿಂಗ್ ಇವರದ್ದಾಗಿರುತ್ತೆ. ಇನ್ನು ಅರುಶಿ ವೈಷಿ ಹ್ಯಾಪಿ ಹಕ್ಕಾದ ಸೇಲ್ಸ್ ಅಂಡ್ ಆಪರೇಷನ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪುನೀತ್ ಮಾರ್ಕೆಟಿಂಗ್ ಮತ್ತು ಸ್ಟ್ರಾಟಜಿ ಹೊಣೆ ಹೊತ್ತಿದ್ರೆ, ಚಂದನ್ ಫೈನಾನ್ಸ್ ನತ್ತ ಗಮನ ಕೊಟ್ಟಿದ್ದಾರೆ. ಹೀಗೆ ವಿವಿಧ ಜವಾಬ್ದಾರಿಗಳೊಂದಿಗೆ ಹ್ಯಾಪಿಹಕ್ಕಾ ಶುರುಮಾಡಿದ ಈ ತಂಡ ದೆಹಲಿ ಮೂಲದ ಉದ್ಯಮಿಯೊಬ್ಬರಿಂದ 1 ಕೋಟಿ ರೂಪಾಯಿ ಬಂಡವಾಳ ಹಾಕಿ ಉದ್ಯಮ ಶುರುಮಾಡಿತ್ತು. ಇದೀಗ ದೆಹಲಿಯಾದ್ಯಂತ ಹಲವು ಸ್ಟೋರ್ ಗಳನ್ನ ಸ್ಥಾಪಿಸಿ ಭರ್ಜರಿ ಲಾಭ ಪಡೆಯುತ್ತಿದೆ. ಅಲ್ಲದೆ ಮುಂದಿನ ಎರಡು ವರ್ಷಗಳಲ್ಲಿ ದೇಶಾದ್ಯಂತ 50 ಸ್ಟೋರ್ ಗಳನ್ನ ನಿರ್ಮಿಸುವುದು ಹ್ಯಾಪಿ ಹಕ್ಕಾದ ಗುರಿ..

ಲೇಖಕರು – ಸಿಂಧೂ ಕಶ್ಯಪ್

ಅನುವಾದ – ಬಿ ಆರ್ ಪಿ, ಉಜಿರೆ