ತರಗತಿಯ ಅನುಭವದಲ್ಲಿ ಪರಿವರ್ತನೆ ತರುವತ್ತ ಎಜುಕೇಶನ್ ಸಾಫ್ಟ್‌ ವೇರ್ ಆ್ಯಪ್​​ಗಳ ಹೆಜ್ಜೆ

ಟೀಮ್​ ವೈ.ಎಸ್​​.

ತರಗತಿಯ ಅನುಭವದಲ್ಲಿ ಪರಿವರ್ತನೆ ತರುವತ್ತ ಎಜುಕೇಶನ್ ಸಾಫ್ಟ್‌ ವೇರ್ ಆ್ಯಪ್​​ಗಳ ಹೆಜ್ಜೆ

Monday September 28, 2015,

3 min Read

ಭಾರತದಲ್ಲಿ 25ವರ್ಷಕ್ಕೂ ಕೆಳಗಿರುವ ಯುವಜನತೆಯ ಸಂಖ್ಯೆ 550ಮಿಲಿಯನ್​ಗಿಂತಲೂ ಹೆಚ್ಚಿದೆ. 1.2 ಬಿಲಿಯನ್ ಜನಸಂಖ್ಯೆಯಲ್ಲಿ ಶೇ.32ರಷ್ಟು 0-14ವರ್ಷ ವಯಸ್ಸಿನವರಿದ್ದಾರೆ. ಅಮೆರಿಕಾದ ಜನಸಂಖ್ಯೆಗೆ ಹೋಲಿಸಿದರೆ ಭಾರತದಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಅಗತ್ಯವಿರುವ ಜನರ ಸಂಖ್ಯೆ ಹೆಚ್ಚಿದೆ.

ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಅಮೋಘ ಬೆಳವಣಿಗೆಗೆ ಯುವಜನತೆ ನೀಡುತ್ತಿರುವ ಪ್ರಾಮುಖ್ಯತೆ ಮತ್ತು ತಂತ್ರಜ್ಞಾನದ ಬಳಕೆಯ ಕೊಡುಗೆ ಅಪೂರ್ವವಾದದ್ದು. ಇದರಿಂದ ಶಿಕ್ಷಣದತ್ತ ಹೆಚ್ಚಿನ ಒಲವು ಮತ್ತು ಆಕ್ರಮಣಕಾರಿ ಉಪಕ್ರಮಗಳನ್ನು ಕೈಗೊಳ್ಳುತ್ತಿರುವ ಉದ್ಯಮಿಗಳ ಸಂಖ್ಯೆಯೂ ಹೆಚ್ಚುತ್ತಿದೆ.

ಯುನಿಟಸ್ ಸೀಡ್ ಫಂಡ್(ಯುಎಸ್‌ಎಫ್‌) ಕೇವಲ ಶಿಕ್ಷಣ ಕ್ಷೇತ್ರ ಒಂದರಿಂದ ಸರಿ ಸುಮಾರು ಶೇ.17ರಷ್ಟು ಮೊತ್ತ ಗಳಿಸುತ್ತದೆ. 2014ಕ್ಕೆ ಹೋಲಿಸಿದರೆ 2015ರ ಮೊದಲಾರ್ಧದಲ್ಲಿ ಶಿಕ್ಷಣಸಂಸ್ಥೆಗಳಿಂದ ಶೇ. 13ರಷ್ಟು ಆದಾಯ ಬಂದಿತ್ತು. ಶಿಕ್ಷಣ ತಂತ್ರಜ್ಞಾನ ಕ್ಷೇತ್ರದಲ್ಲಿ ಬೃಹತ್ ಉದ್ದಿಮೆದಾರರು ಹೂಡಿಕೆ ಮಾಡಲು ಆಸಕ್ತರಾಗಿದ್ದಾರೆ. 2015ರ ಏಪ್ರಿಲ್ ತಿಂಗಳಿನಲ್ಲಿ ಅಂದಾಜು 40 ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು 5 ಮುಖ್ಯ ಶಿಕ್ಷಣ ತಂತ್ರಜ್ಞಾನದ ಆರಂಭಿಕ ಉದ್ಯಮಗಳಿಗೆ ಹೂಡಿಕೆ ಮಾಡಲಾಗಿದೆ.

ಇಂದಿನ ಸ್ಮಾರ್ಟ್‌ ಫೋನ್ ಹಾಗೂ ಅಂತರ್ಜಾಲ ಸುಲಭ ವ್ಯವಸ್ಥೆಯಲ್ಲಿ ಶೈಕ್ಷಣಿಕ ಸಂಬಂಧಿ ತಂತ್ರಜ್ಞಾನಗಳ ಒಡೆತನ ಹೊಂದಿರುವ ಉದ್ದಿಮೆಗಳು ಕನಿಷ್ಟ ಗುಣಮಟ್ಟದ ಸಾರ್ವಜನಿಕ ಶಿಕ್ಷಣ ಪೂರೈಸಲು ಶಕ್ತವಾಗಿದೆ. ಈ ತಂತ್ರಜ್ಞಾನದ ಕೆಲವು ಅಭಿವೃದ್ಧಿ ಹೊಂದಿದ ಮಾದರಿಗಳು ಹೊಸ ಹೊಸ ಪ್ರಯೋಗದ ಮೂಲಕ ಶೈಕ್ಷಣಿಕ ತಾಂತ್ರಿಕತೆಯನ್ನು ಮೇಲ್ದರ್ಜೆಗೇರಿಸಿದೆ.

image


ಯುನಿಟಸ್ ಸೀಡ್ ಫಂಡ್ ಅಥವಾ ಯುಎಸ್ಎಫ್ ಇತ್ತೀಚೆಗಷ್ಟೇ ಸಿಲ್ವೆಂಟ್ ಅನ್ನುವ ಸಲಹಾ ಸಂಸ್ಥೆಯ ಸ್ಟಾರ್ಟ್ ಎಜು (Smart Edu) ಅನ್ನುವ ನಿರ್ದಿಷ್ಟ ವಿಭಾಗದ ಜೊತೆ ಕೈಜೋಡಿಸಿದೆ. ದೇಶದಾದ್ಯಂತ ಶೈಕ್ಷಣಿಕ ತಂತ್ರಜ್ಞಾನ ಸಂಬಂಧಿ ಉದ್ಯಮಗಳ ಪ್ರಾರಂಭಕ್ಕೆ ಅಗತ್ಯವಿರುವ ಮೂಲಧನ ಹೂಡಿಕೆ ಮಾಡುವ ಜೊತೆಗೆ ಮಾರ್ಗದರ್ಶನ, ಸಹಾಯ ಹಾಗೂ ಜಾಗೃತಿ ಮೂಡಿಸುವತ್ತ ಸ್ಟಾರ್ಟ್ ಎಜು (Smart Edu) ಗಮನ ಹರಿಸಿದೆ. 12 ಸಹಭಾಗಿ ಸಂಸ್ಥೆಗಳ (ವರ್ಷನ್ 1ಎ,1ಬಿ) ಸಹಯೋಗದೊಂದಿಗೆ ಸ್ಟಾರ್ಟ್ ಎಜು (Smart Edu) ಈಗಾಗಲೇ ಸುಮಾರು 106 ಬಗೆಯ ಶಿಕ್ಷಣ ಸಂಬಂಧಿ ಅಪ್ಲಿಕೇಶನ್‌ಗಳನ್ನು ಸಿದ್ಧಪಡಿಸಿ ಪ್ರಮೋಟ್ ಮಾಡಿದೆ.

ಭೌಗೋಳಿಕವಾಗಿ ವಿಭಾಗಿಸುವುದಾದರೆ, ಇದು ಭಾರತದ ದಕ್ಷಿಣ ಭಾಗದಲ್ಲಿ ಶೇ.50ರಷ್ಟು, ಉತ್ತರದಲ್ಲಿ ಶೇ. 25ರಷ್ಟು, ಪಶ್ಚಿಮದಲ್ಲಿ ಶೇ.18ರಷ್ಟು, ಪೂರ್ವದಲ್ಲಿ ಶೇ. 7ರಷ್ಟು ಆದಾಯ ಗಳಿಸಿದೆ. 26 ಅಪ್ಲಿಕೇಶನ್‌ಗಳೊಂದಿಗೆ ದೆಹಲಿ ಜೊತೆಗೆ ಪೈಪೋಟಿ ನಡೆಸಿದೆ ಬೆಂಗಳೂರು. ನವದೆಹಲಿಯಲ್ಲಿ ಸುಮಾರು 16 ಉದ್ದಿಮೆದಾರರು ಇದೇ ತಾಂತ್ರಿಕತೆಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಶೇ. 65ರಷ್ಟು ಕಂಪನಿಗಳು ತಮ್ಮ ಸಿದ್ಧ ಅಪ್ಲಿಕೇಶನ್‌ಗಳ ಮೂಲಕ ಆದಾಯಗಳಿಸತೊಡಗಿವೆ. ಈ ಉದ್ಯಮದ ಅತೀ ಮುಖ್ಯ ಮಾರುಕಟ್ಟೆಯೆಂದರೆ ನೂತನವಾಗಿ ಆರಂಭವಾಗುತ್ತಿರುವ ಶಾಲೆ, ಕಾಲೇಜುಗಳು, ಉನ್ನತ ಶಿಕ್ಷಣ ಸಂಸ್ಥೆಗಳು. ಈ ವಿದ್ಯಾಸಂಸ್ಥೆಗಳಿಗೆ ಅಗತ್ಯವಿರುವ ಶಿಕ್ಷಣ ಸಂಬಂಧಿ ತಂತ್ರಜ್ಞಾನದ ಸಾಫ್ಟ್​ವೇರ್​​ ಸೇವೆಯನ್ನು ಸ್ಮಾರ್ಟ್​ಎಜು (Smart Edu)ನಂತಹ ಸಂಸ್ಥೆಗಳು ಒದಗಿಸುತ್ತಿವೆ.

ಆದಾಯ ಗಳಿಕೆಯ ಸ್ಪರ್ಧೆಯಲ್ಲಿ ಲಾಬಿನ್ ಆ್ಯಪ್ ಮುನ್ನಡೆ ಗಳಿಸಿದೆ( ಇದು ಯುಎಸ್ಎಫ್‌ನಿಂದ ಸುಮಾರು 60 ಲಕ್ಷ ರೂ. ಹೂಡಿಕೆ ಪಡೆದಿತ್ತು) ಗೆಟ್ಸೆಟ್ ಸಾರ್ಟೆಡ್ ಆ್ಯಪ್ ಜೊತೆಗೆ ಪೈಪೋಟಿ ನಡೆಸಿದ ಸ್ಟಾರ್ಟ್ ಎಜು (Smart Edu) 2ನೇ ಸ್ಥಾನ ಗಳಿಸಿದೆ.

ಟಾರ್ಗೆಟ್ ಕಸ್ಟಮರ್ ಮೂಲಕ ಈ ಸಂಸ್ಥೆಗಳು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳು ಆಡಳಿತ ಮಂಡಳಿಗಳನ್ನು ಆಕ್ರಮಿಸಿಕೊಳ್ಳುತ್ತವೆ. ಪ್ರತ್ಯೇಕವಾಗಿ ಅಥವಾ ಸಾರ್ವತ್ರಿಕವಾಗಿ ತಮ್ಮ ಟೂಲ್‌ಗಳನ್ನು ಗ್ರಾಹಕರಿಗೆ ಒದಗಿಸುತ್ತವೆ. ಉದಾಹರಣೆಗೆ ವೇದಾಂತು ಅನ್ನುವವರು ತಮ್ಮ ತಂತ್ರಜ್ಞಾನದ ಟೂಲ್ ಒಂದನ್ನು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಒದಗಿಸುವ ಇಚ್ಛೆ ಹೊಂದಿದ್ದಾರೆ ಅಂತಿಟ್ಟುಕೊಳ್ಳೋಣ. ಇಲ್ಲಿ ಅವರು ಅಭಿವೃದ್ಧಿಪಡಿಸಿದ ಟೂಲನ್ನು ಆನ್‌ಲೈನ್ ಮೂಲಕ ಪ್ರಚಾರ ಮಾಡಿಕೊಳ್ಳಬಹುದು. ಶಾಲೆ ಹಾಗೂ ಇತರ ವಿದ್ಯಾ ಸಂಸ್ಥೆಗಳಲ್ಲಿ ಇತ್ತೀಚೆಗೆ ಪ್ರಚಾರ ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿ ಹಾಗೂ ಶಿಕ್ಷಕರ ಸುಗಮ ಸಂವಾದದ ಆ್ಯಪ್ ಫ್ಲಿನ್ ಟಿ ಇದೇ ರೀತಿಯ ಶಿಕ್ಷಣ ಸಂಬಂಧಿ ತಂತ್ರಜ್ಞಾನದ ಸಾಫ್ಟ್ ವೇರ್ ಟೂಲ್. ಈ ಕ್ಷೇತ್ರದಲ್ಲಿ ಅತೀ ಮುಖ್ಯವಾಗಿ ಗಮನಹರಿಸಲ್ಪಡುತ್ತಿರುವುದು ಶಿಕ್ಷಣ ಅಗತ್ಯತೆಗಳನ್ನು ಪೂರೈಸುವ ಕ್ಲಾಸ್‌ ರೂಂ ಹಾಗೂ ಇಂಟರ್‌ನೆಟ್ ಶಿಕ್ಷಣದ ತಂತ್ರಜ್ಞಾನಿಕ ಟೂಲ್‌ಗಳ ಅಭಿವೃದ್ಧಿ.

ಎರಡನೆಯದಾಗಿ ಟ್ಯಾಬ್‌ಲೆಟ್ ಹಾಗೂ ಮೊಬೈಲ್ ಆ್ಯಪ್‌ಗಳಲ್ಲಿ ಈ ಶೈಕ್ಷಣಿಕ ಸಾಫ್ಟ್‌ ವೇರ್ ಟೂಲ್‌ಗಳನ್ನು ಇನ್‌ಸ್ಟಾಲ್ ಮಾಡುವ ವ್ಯವಸ್ಥೆ. ಎಜುಟೋರ್‌ನಂತಹ ಟೂಲ್‌ಗಳು ಇಂದಿನ ಡಿವೈಸ್‌ಗಳಲ್ಲಿ ಶೈಕ್ಷಣಿಕ ತಂತ್ರಜ್ಞಾನ ಅಳವಡಿಸುತ್ತಿದೆ. ಕ್ಲೌಡ್ ಸಂಸ್ಥೆ ಮೂಲದ ಇಆರ್‌ಪಿ ಫೆಡೆನಾ ಬಳಕೆದಾರರ ಸ್ನೇಹಿ ಡ್ಯಾಶ್‌ಬೋರ್ಡ್ ಅನ್ನು ಶಿಕ್ಷಕರಿಗೆ, ಬೋಧಕೇತರ ವರ್ಗಕ್ಕೆ, ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ನಿಗದಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರಿಗೆ ಲಾಗಿನ್ ಸೌಲಭ್ಯದೊಂದಿಗೆ ನೀಡುತ್ತಿದೆ. ಕ್ಯೂರಿಯಾಸಿಟಿ ಸಂಸ್ಥೆ, ಶಾಲೆಗಳಿಗೆ ವೈಜ್ಞಾನಿಕ ಕಲಿಕಾ ಸಾಮಗ್ರಿ ಮತ್ತು ಚಟುವಟಿಕೆಯ ಮೂಲ ವಿಜ್ಞಾನದ ಬೋಧನೆಗೆ ಸಹಾಯಕವಾಗುವ ಕಸ್ಟಮೈಸ್ ಮಾಡಲ್ಪಟ್ಟ ಒಂದು ಕಾರ್ಯಕ್ರಮವನ್ನು ಒದಗಿಸುತ್ತಿದೆ.

15 ಮಿಲಿಯನ್ ಯುಎಸ್ ಡಾಲರ್ ಹೂಡಿಕೆಯ ಸಿಂಪ್ಲಿಲರ್ನ್, 5 ಮಿಲಿಯನ್ ಯುಎಸ್ ಡಾಲರ್ ಹೂಡಿಕೆಯ ವೇದಾಂತು, 10 ಮಿಲಿಯನ್ ಡಾಲರ್‌ ಹೂಡಿಕೆಯ ಟಾಪರ್, 4 ಮಿಲಿಯನ್ ಯುಎಸ್ ಡಾಲರ್ ಹೂಡಿಕೆಯ ಎಂಬೈಬ್ ಸಂಸ್ಥೆಗಳು ಈ ಉದ್ಯಮಕ್ಕೆ ಹೊಸದಾಗಿ ಕಾಲಿಟ್ಟಿವೆ. 2010ರಿಂದ ಎಜು ಟೆಕ್ ವಿಭಾಗದಲ್ಲಿ ಬಂಡವಾಳ ಹೂಡಿಕೆ ಏರುಗತಿಯನ್ನು ಕಂಡಿದೆ. ಇವುಗಳನ್ನೆಲ್ಲಾ ಗಮನಿಸಿದರೆ ಬಹುಪಾಲು ಉದ್ಯಮಿಗಳು ಸಂಭಾವ್ಯ ಸಮರ್ಥ ಏರಿಕೆಯ ಕಡೆಗೆ ಗಮನ ಹರಿಸುತ್ತಿದ್ದಾರೆ. ನೂತನ ಪ್ರಬಲ ತಂತ್ರಜ್ಞಾನಗಳಿಂದ ಈ ವಿಭಾಗದಲ್ಲಿ ಉದ್ಯಮಗಳು ಯಶಸ್ಸಿನತ್ತ ಸಾಗಿದೆ ಎಂಬುದು ಸಾಬೀತಾಗುತ್ತದೆ. ಪ್ರಸ್ತುತ ಹಲವು ಮಂದಿ ಶೈಕ್ಷಣಿಕ ಉದ್ಯಮಿಗಳು ತಂತ್ರಜ್ಞಾನದೊಂದಿಗೆ ಅನೇಕ ಪ್ರಯೋಗಗಳನ್ನು ಕೈಗೊಂಡಿದ್ದಾರೆ. ನೂತನ ತಂತ್ರಜ್ಞಾನ ಮತ್ತು ಉದ್ಯಮದ ಏರುಗತಿಯನ್ನು ಹೊರತುಪಡಿಸಿ ಗ್ರಾಹಕರನ್ನು ಸೆಳೆಯುವುದೂ ಕೂಡ ದೊಡ್ಡ ಸವಾಲಾಗಿದೆ. ಈ ಬದಲಾವಣೆಗಳನ್ನು ಶಾಲೆಗಳು ಒಪ್ಪಿಕೊಳ್ಳುತ್ತವೆಯೇ?, ಶಿಕ್ಷಣದಲ್ಲಿ ತಂತ್ರಜ್ಞಾನದ ಈ ರೀತಿಯ ಬಳಕೆ ಅವರಿಗೆ ನಿಜವಾಗಿಯೂ ಮನವರಿಕೆಯಾಗುವುದೇ? ಅಥವಾ ಅವರು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಅವರ ಹಳೆಯ ವಿಧಾನಕ್ಕೆ ಅಂಟಿಕೊಂಡಿರುತ್ತಾರೆಯೇ? ಎಂಬ ಪ್ರಶ್ನೆಗಳಿಗೆ ಉತ್ತರವಿನ್ನೂ ದೊರೆತಿಲ್ಲ.

ಡಿಜಿಟಲ್ ಪ್ಲಾಟ್‌ಫಾರಂ ಮೂಲಕ ಹೆಚ್ಚಿನ ರೂಪಾಂತರದೊಂದಿಗೆ ವೇಗದ ಬೆಳವಣಿಗೆಗೆ ಶಿಕ್ಷಣ ಕ್ಷೇತ್ರ ಸಾಕ್ಷಿಯಾಗಿದೆ. ಅತ್ಯುತ್ತಮ ತಂತ್ರಜ್ಞಾನವೇ ಸರಿಯಾದ ಕಲಿಕಾ ಸಾಮಗ್ರಿ ಎಂಬುದನ್ನು ಪರಿಚಯಿಸುವ ಸ್ಪರ್ಧೆಯಲ್ಲಿ ಕೇವಲ ಸಮಸ್ಯೆಗಳನ್ನು ಬಗೆಹರಿಸುವುದು, ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಳ್ಳುವಂತೆ ಗಮನಹರಿಸುವುದೇ ಸಂಸ್ಥಾಪಕರಿಗೆ ದೊಡ್ಡ ಸಮಸ್ಯೆ. ಮೈಕಲ್ ಬಿ.ಹಾರ್ನ್ ಮತ್ತು ಹೆದರ್ ಸ್ಟೀಕರ್ ಅವರ ಬ್ಲೆಂಡೆಡ್: ಯೂಸಿಂಗ್ ಡಿಸ್ರಪ್ಟಿವ್ ಇನ್ನೋವೇಶನ್ ಟು ಇಂಪ್ರೂವ್ ಸ್ಕೂಲ್ ಎಂಬ ಪುಸ್ತಕದಲ್ಲಿ ಪ್ರತಿಪಾದಿಸುವಂತೆ ತಂತ್ರಜ್ಞಾನ ಸಲುವಾಗಿಯೇ ನೂತನ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದರ ಕುರಿತು ಶೈಕ್ಷಣಿಕ ತಂತ್ರಜ್ಞಾನದ ಯಶಸ್ವಿ ವಿನ್ಯಾಸಗಾರರು ಗಮನಹರಿಸಬೇಕು.