"ಟ್ರಂಪ್​"ಕಾರ್ಡ್​ ಆಟಕ್ಕೆ ಮುನ್ನಣೆ- ಕುತೂಹಲಕ್ಕೆ ತೆರೆ ಎಳೆದ ಅಮೆರಿಕ ಚುನಾವಣೆ

ಟೀಮ್​ ವೈ.ಎಸ್​. ಕನ್ನಡ

0

ಬರಾಕ್ ಒಬಾಮ ಅಮೆರಿಕ ಅಧ್ಯಕ್ಷ ಪಟ್ಟದಿಂದ ನಿರ್ಗಮಿಸಲಿದ್ದಾರೆ. ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ವಿರುದ್ಧ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದಾರೆ.

ಈ ಬಾರಿ ಅಮೆರಿಕದಲ್ಲಿ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ನಡುವೆ ಅಧ್ಯಕ್ಷ ಪಟ್ಟಕಾಗಿ ಜಿದ್ದಾಜಿದ್ದಿನ ಹಣಾಹಣ ನಡೆದಿತ್ತು. ರಿಪಬ್ಲಿಕನ್ ಪಕ್ಷದಿಂದ ಅಭ್ಯರ್ಥಿಯಾಗಿದ್ದ ಟ್ರಂಪ್, ಹಿಲರಿಗಿಂತ ಮುನ್ನಡೆ ಸಾಧಿಸಿ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆ. ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಗೆಲುವು ಸಾಧಿಸುವ ಮೂಲಕ ಟ್ರಂಪ್ ಅಮೆರಿಕದ ಅಧ್ಯಕ್ಷ ಪಟ್ಟವನ್ನು ಏರಿದ್ದಾರೆ. 

ಅಮೆರಿಕದ ಅಧ್ಯಕ್ಷರಾಗಲು 270 ಪ್ರತಿನಿಧಿಗಳ ಬೆಂಬಲ ಬೇಕಿತ್ತು. ಆದರೆ ಇಲ್ಲಿ ಟ್ರಂಪ್ 276 ಮತಗಳನ್ನು ಗಳಿಸಿ ಅಧ್ಯಕ್ಷ ಪಟ್ಟಕ್ಕೇರಿದ್ದಾರೆ. ಅಮೆರಿಕದ 45ನೇ ಅಧ್ಯಕ್ಷರಾಗಿದ್ದಾರೆ ಟ್ರಂಪ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. 23 ಪ್ರಾಂತ್ಯಗಳಲ್ಲಿ ಗೆಲುವು ಸಾಧಿಸಿದ ಟ್ರಂಪ್ ಒಟ್ಟು 276 ಮತಗಳನ್ನು ಗಳಿಸಿ ಅಮೆರಿಕ ಅಧ್ಯಕ್ಷರಾಗಲು ಅರ್ಹತೆ ಗಿಟ್ಟಿಸಿದ್ದಾರೆ. ಇತ್ತ, 13 ಪ್ರಾಂತ್ಯಗಳಲ್ಲಿ ಗೆಲುವು ಸಾಧಿಸಿದ್ದ ಹಿಲರಿ 218 ಮತಗಳನ್ನು ಗಳಿಸಿದ್ದಾರೆ.

ಅಮೆರಿಕಾದ 45ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದಾರೆ. ಅಮೆರಿಕನ್ನರ ವಿಶ್ವಾಸವನ್ನು ಪಡೆಯುವಲ್ಲಿ ಟ್ರಂಪ್ ಯಶಸ್ವಿಯಾಗಿದ್ದಾರೆ. ಟ್ರಂಪ್ ಅಬ್ಬರದ ನಡುವೆ ಹಿಲರಿ ಕ್ಲಿಂಟನ್ ರಾಜಕೀಯ ಅನುಭವ ಮಯಾವಾಗಿದೆ. ಅಚ್ಚರಿ ಅಂದ್ರೆ ಟ್ರಂಪ್ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಕೇವಲ 18 ತಿಂಗಳಷ್ಟೇ ಕಳೆದಿದೆ. ಆದ್ರೆ ಈಗ ಎಲ್ಲರ ಲೆಕ್ಕಾಚಾರ ಉಲ್ಟಾ ಮಾಡಿ ರಿಪಬ್ಲಿಕನ್ ಪಕ್ಷದಿಂದ ಗೆದ್ದು ಅಮೆರಿಕದ ಅಧ್ಯಕ್ಷರಾಗಿ ಅಚ್ಚರಿ ಹುಟ್ಟಿಸಿದ್ದಾರೆ. ಅಮೆರಿಕದ ಓಹಿಯೊ, ಫ್ಲೋರಿಡಾ ಹಾಗೂ ನಾರ್ಥ್ ಕರೋಲಿನಾದಲ್ಲಿ ಮುನ್ನಡೆ ಪಡೆಯುವ ಮೂಲಕ ಟ್ರಂಪ್ ವಿಜಯವನ್ನು ಖಾತ್ರಿ ಪಡಿಸಿದರು.

ಬಿಲಿಯನೇರ್, ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಡೊನಾಲ್ಡ್ ಟ್ರಂಪ್, ಮೊದಲ ಬಾರಿಗೆ ಅಮೆರಿಕದಲ್ಲಿ ಮಹಿಳೆಯೊಬ್ಬಳು ಅಧಿಕಾರಕ್ಕೇರುವ ಲೆಕ್ಕಾಚಾರವನ್ನು ಉಲ್ಟಾ ಮಾಡಿದ್ದಾರೆ. 70 ವರ್ಷದ ಟ್ರಂಪ್ ಅಮೆರಿಕಾದ ರಾಷ್ಟ್ರಾಧ್ಯಕ್ಷರಾಗಿ ಶ್ವೇತಭವನ ಪ್ರವೇಶಿಸಲಿದ್ದಾರೆ. ಇಂಡಿಯಾನದ ಗವರ್ನರ್ ಆಗಿ ಆಯ್ಕೆಯಾಗಿರುವ  ಮೈಕ್ ಪೆನ್ಸ್ ಅಮೆರಿಕದ ಉಪಾಧ್ಯಕ್ಷರಾಗಿ ಕಾರ್ಯ ಚಟುವಟಿಕೆ ಆರಂಭಿಸಲಿದ್ದಾರೆ.

ಇದನ್ನು ಓದಿ:

1. ಕಾಳಧನಿಕರ ಮೇಲೆ ಮೋದಿ 'ಸರ್ಜಿಕಲ್ ಸ್ಟ್ರೈಕ್' : 500-1000 ರೂ. ನೋಟುಗಳ ಮುದ್ರಣ, ಚಲಾವಣೆ ಬಂದ್ 

2. ಕ್ಯಾಬ್​ ಸೇವೆಗಳಲ್ಲಿ ಬಿಗ್​ ಫೈಟ್​-OLAಕ್ಕೆ ಅಗ್ರಪಟ್ಟದ ತವಕ- ಉಬರ್​ಗೆ ಸವಾಲು ಎದುರಿಸುವುದೇ ಕಾಯಕ

3. ಸ್ಮಾರ್ಟ್​ ಇದ್ದರಷ್ಟೇ ಸಾಕಾಗೋದಿಲ್ಲ- ದೆಹಲಿ-ಎನ್​ಸಿಆರ್​ನಲ್ಲಿ ಹುಟ್ಟಿದ ಮೊಬೈಲ್​ ಆ್ಯಪ್​ಗಳ ಕಥೆಯನ್ನೂ ಕೇಳಿ..!

 

Related Stories

Stories by YourStory Kannada