ಟಿ ಶರ್ಟ್ ಮೇಲೆ ಕನ್ನಡ ಅಭಿಮಾನ- ಸ್ಟಾರ್ಟ್​ಅಪ್​ನ ಸಾಧನೆಗೆ ಗ್ರಾಹಕರು ಕೊಟ್ರು ಬಹುಮಾನ..! 

ಟೀಮ್​ ವೈ.ಎಸ್​. ಕನ್ನಡ

0

ಆಧುನಿಕ ಜಗತ್ತಿನಲ್ಲಿ ಟಿ ಶರ್ಟ್​ಗಳು ಯುವ ಜನತೆಯ ಅಚ್ಚುಮೆಚ್ಚಿನ ಉಡುಪಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಟಿ ಶರ್ಟ್​ಗಳನ್ನು ಮಾರಾಟ ಮಾಡಲು ಸಾಕಷ್ಟು ಆನ್​ಲೈನ್ ತಾಣಗಳು ಬಂದಿವೆ. ಅವುಗಳಲ್ಲಿ ಸಾಕಷ್ಟು ಬ್ರಾಂಡ್​ಗಳು ಇರುತ್ತವೆ. ಹೀಗಿರುವಾಗ ನಮ್ಮದೇ ಕನ್ನಡದ ಸಂಸ್ಕೃತಿ ಪರಂಪರೆ ಹಾಗೂ ಮಾತೃ ಭಾಷೆಯನ್ನು ಪ್ರತಿನಿಸುವ ಬ್ರಾಂಡ್ ಇದ್ದರೆ ಹೇಗೆ ನಮಗೆ ಇನ್ನೂ ಸಂತೋಷವಾಗುತ್ತದೆ.

ಸಾಕಷ್ಟು ಜನರ ಬೇಡಿಕೆಯನ್ನು ಅರಿತುಕೊಂಡು ಕೆಲ ಕನ್ನಡಿಗರ ತಂಡವೊಂದು ಸ್ಟಾರ್ಟ್ಅಪ್ ಆರಂಭ ಮಾಡಿದ್ದು ಅದಕ್ಕೆ ‘ಹೆಮ್ಮೆಯ ಕನ್ನಡಿಗ’ ಎಂಬ ಹೆಸರಿಟ್ಟಿದೆ. ಈ ಸ್ಟಾರ್ಟ್ಅಪ್​ನಲ್ಲಿ ಕನ್ನಡ ಬರಹ, ಅಕ್ಷರಗಳಿರುವ ಟಿ ಶರ್ಟ್​ಗಳನ್ನು ‘ಹೆಮ್ಮೆಯ ಬ್ರಾಂಡ್’ ಹೆಸರಲ್ಲಿ ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಮಾರಾಟ ಮಾಡುತ್ತಿದೆ.

ಇದನ್ನು ಓದಿ: ಬೀದಿನಾಯಿಗಳ ಪಾಲಿನ “ದೇವರು”- 700ಕ್ಕೂ ಹೆಚ್ಚು ಬೀದಿನಾಯಿಗಳ ಪಾಲಿಗೆ ಆಶ್ರಯದಾತ ಸಾಫ್ಟ್ಎಂಜಿನಿಯರ್..!

ಸಂಪೂರ್ಣವಾಗಿ ಕನ್ನಡಗಿರೇ ತುಂಬಿರುವ ಈ ಕಂಪನಿಯ ಹೆಸರು ಯುನೈಟೆಡ್  ಸ್ಕ್ವೇರ್ ಎಂದು. ಧಾರವಾಡದ ಸಮೀರ್ ದೇಸಾಯಿ ಇದರ ಸಂಸ್ಥಾಪಕರು. ಸಮೀರ್ ದೇಸಾಯಿ ಮೊದಲು ಇನ್ಫೋಸಿಸ್, ಬಾಷ್​ನಂತಹ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ಬೆಂಗಳೂರಿನಲ್ಲಿ ಒಮ್ಮೆ ಒಂದು ಅಂಗಡಿಯಲ್ಲಿ ಯುಎಸ್ ಪೋಲೋ ಎಂಬ ಬ್ರಾಂಡ್ ಟಿ ಶರ್ಟ್ ನೋಡಿ ನಮ್ಮ ಕನ್ನಡದ ಬ್ರಾಂಡ್​ನ್ನು ಏಕೆ ಸೃಷ್ಟಿ ಮಾಡಬಾರದು ಎಂದು ತೀರ್ಮಾನಿಸಿ ಇದನ್ನು ಐಬಿಎಂನಲ್ಲಿ ಕೆಲಸ ಮಾಡುತ್ತಿದ್ದ ಅವರ ಗೆಳೆಯ ಮನೀಷ್ ಬಗ್ಗೆ ಈ ಐಡಿಯಾದ ಬಗ್ಗೆ ಹೇಳಿದಾಗ ಅವರು ಅದಕ್ಕೆ ಸಮ್ಮತಿಸಿದರು. ಇವರ ಜತೆಗೆ ಲೆನೋವಾದ ಮಾರುಕಟ್ಟೆ ಮುಖ್ಯಸ್ಥ ಮಹೇಶ್ ಕೈ ಜೋಡಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತು

ಮೊದಲಿಗೆ ಈ ಮೂವರ ತಂಡ ಮೊಟ್ಟ ಮೊದಲಿಗೆ ಫೇಸ್​ಬುಕ್, ಟ್ವಿಟರ್​ಗಳಲ್ಲಿ ಹೊಸ ತರಹದ ಟಿ ಶರ್ಟ್​ಗಳ ಮೇಲೆ ಕನ್ನಡದ ಪದಗಳು ಇರುವಂತೆ ಡಿಸೈನ್ ಮಾಡಿ ಹರಿ ಬಿಟ್ಟರು, ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು. ಬಳಿಕ ಆರ್ಡರ್ ತೆಗೆದುಕೊಳ್ಳಲು ಆರಂಭಿಸಿದರು. ಸದ್ಯ ಅವರದ್ದೆ ಆದ ಒಂದು ವೆಬ್​ಸೈಟ್ ಅಭಿವೃದ್ಧಿ ಪಡಿಸಿ ನಂತರ ಅದರ ಮೂಲಕ ಸರ್ವೀಸ್ ನೀಡಲು ಆರಂಭಿಸಿದರು. ನಿಮಗೆ ಇಷ್ಟದ ಸಾಹಿತ್ಯ ತುಣಿಕಿನ ಬರಹವಿರುವ ಟಿ ಶರ್ಟ್, ಜಾಕೆಟ್ ಅಲ್ಲದೆ ಲ್ಯಾಪ್​ಟಾಪ್​ನ ಬ್ಯಾಕ್ ಕವರ್ ಸಹ ಸಿಗುತ್ತದೆ.

ಮೂರು ಜನರಿಂದ ಆರಂಭವಾದ ಈ ತಂಡದಲ್ಲಿ ಈಗ 18 ಮಂದಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ 16 ಮಂದಿ ಕನ್ನಡಿಗರು ‘ಹೆಮ್ಮೆಯ ಕನ್ನಡಿಗ’ ಆರಂಭವಾದಾಗ ಮೊದಲ ವರ್ಷ ಸುಮಾರು 4000 ಟಿ ಶರ್ಟ್​ಗಳನ್ನು ಮಾರಾಟ ಮಾಡಲಾಗಿತ್ತು. ಮೊದಲ ವರ್ಷವೇ 10 ಲಕ್ಷಕ್ಕೂ ಹೆಚ್ಚು ಬಿಸಿನೆಸ್ ಮಾಡಿದ್ದರು. ಇದೇ ಸಂದರ್ಭದಲ್ಲಿ ಗಾಂಚಲಿ ಬಿಡಿ ಕನ್ನಡ ಮಾತಾಡಿ, ಎಲ್ಲರೊಳಗೊಂದಾಗು ಮಂಕುತಿಮ್ಮ, ಕನ್ನಡ ಕಲರವ, ಬಾರಿಸು ಕನ್ನಡ ಡಿಂಡಿಮವ, ಸೇರಿದಂತೆ ಸಾಕಷ್ಟು ಟಿ ಶರ್ಟ್​ಗಳನ್ನು ಡಿಸೈನ್ ಮಾಡಲಾಗಿತ್ತು. 9 ಸಾವಿರಕ್ಕೂ ಹೆಚ್ಚು ಟಿ ಶರ್ಟ್​ಗಳು ಮಾರಾಟವಾಗಿ ಕಂಪನಿಗೆ 40 ಲಕ್ಷ ರೂಪಾಯಿ ಲಾಭವೂ ಆಯಿತು. ಹೀಗೆ ತನ್ನ ಮಾರುಕಟ್ಟೆಯನ್ನು ದಿನೇ ದಿನೇದೊಡ್ಡದು ಮಾಡಿಕೊಳ್ಳುತ್ತಿರುವ ಹೆಮ್ಮೆಯ ಕನ್ನಡಿಗ ಬ್ರಾಂಡ್ ಈ ವರ್ಷ ಸುಮಾರು 15 ಸಾವಿರ ಟಿ ಶರ್ಟ್ ಮಾರಾಟ ಮಾಡುವ ಗುರಿಯನ್ನು ಸಮೀರ್ ದೇಸಾಯಿ ತಂಡದವರು ಹೊಂದಿದ್ದಾರೆ.

ಈ ಬ್ರಾಂಡ್ ನಮ್ಮ ರಾಜ್ಯದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ಬಹು ಬೇಡಿಕೆ ಹೊಂದಿದೆ. ಕಳೆದ ಎರಡುಮೂರು ವರ್ಷಗಳಲ್ಲಿ ಜರ್ಮನಿ, ಅಮೇರಿಕಾ, ಸಿಂಗಾಪೂರ್​ಗಳಿಂದ ಆರ್ಡರ್ ಬಂದಿತ್ತು. ಇನ್ನು ಕೆಲವು ತಿಂಗಳಿನಲ್ಲಿ ಇನ್ನೂ ಹೆಚ್ಚಿನ ಬೇಡಿಕೆ ಬರಲಿದೆ ಎನ್ನುವ ಆಸೆಯಲ್ಲಿದ್ದಾರೆ.

ಇನ್ನು ಈ ಟಿಶರ್ಟ್​ಗಳ ಬೆಲೆ 300 ರಿಂದ 800 ರವರೆಗೆ ಇದೆ. ಸದ್ಯದಲ್ಲೆ ಕನ್ನಡ ಕಲಾವಿದರನ್ನು ಗುರುತಿಸಿ ಅವರ ಚಿತ್ರಗಳುಳ್ಳ ಬಟ್ಟೆಗಳನ್ನು ತಾರಿಸಿ ಹಾಗೂ ಆ್ಯಪ್ ಒಂದನ್ನು ಸಿದ್ಧಪಡಿಸುವ ಯೋಚನೆ ತಂಡಕ್ಕಿದೆ. ಒಟ್ಟಿನಲ್ಲಿ ಈ ಬ್ರಾಂಡ್ ಮೂಲಕ ಕನ್ನಡದ ಟಿ ಶರ್ಟ್​ಗಳು ಸಿಗುವಂತಾಗಿದೆ.

ಇದನ್ನು ಓದಿ:

1. ಫ್ಲೈ ಓವರ್ ಕೆಳಗೆ ಊಟ ಹಾಕುವ ಅನ್ನದಾತ - ಫ್ಲೈ ಓವರ್​ ಕೆಳಗೆ ಅನ್ನ ಹಾಕುವ ಮಹಾಪುರುಷ

2. ನಿಮಗಿಷ್ಟವಿರುವ ಕೆಲಸ ಮಾಡಿ- ಕೈ ತುಂಬಾ ಸಂಬಳ ಪಡೆಯಿರಿ

3. ಸನ್ಯಾಸಿ, ಯೋಗ ಗುರು, ಉದ್ಯಮಿ, ಕುಂಚ ಕಲಾವಿದ ಸಕಲಕಲಾ ವಲ್ಲಭ ಭರತ್ ಠಾಕುರ್

Related Stories