ಫೇಸ್ ಬುಕ್ ಮೆಸೆಂಜರ್ ಗೆ ದಿಟ್ಟ ಉತ್ತರ ಕೊಟ್ಟ ಭಾರತದ ಐಐಎಂ-ಬಿ ಗ್ರ್ಯಾಜುಯೆಟ್ಸ್ ...

ಟೀಮ್​ ವೈ.ಎಸ್​. ಕನ್ನಡ

ಫೇಸ್ ಬುಕ್ ಮೆಸೆಂಜರ್ ಗೆ ದಿಟ್ಟ ಉತ್ತರ ಕೊಟ್ಟ ಭಾರತದ ಐಐಎಂ-ಬಿ ಗ್ರ್ಯಾಜುಯೆಟ್ಸ್ ...

Sunday March 20, 2016,

3 min Read

ಸ್ಮಾರ್ಟ್ ಫೋನ್ ಬಂದ ಮೇಲೆ ಜಗತ್ತು ಅಂಗೈಯಲ್ಲೇ ಅನ್ನೋ ಭಾವ ಸಹಜವಾಗೇ ಶುರುವಾಗಿದೆ. ಅದ್ರಲ್ಲೂ ಮೊಬೈಲ್ ಇಂಟರ್​​ನೆಟ್ ಹಾಗೂ ಮೆಸೆಜ್ ಗಳ ಬಳಕೆ ಹೆಚ್ಚಾದ ಮೇಲಂತೂ ಪರಸ್ಪರ ಸಂಪರ್ಕವೂ ಸುಲಭವಾಗಿದೆ. ಫೋನ್ ಕಾಲ್ ಗಳ ಕಿರಿಕಿರಿ ಅನುಭವಿಸುತ್ತಿರುವವರು, ಇಲ್ಲಾ ಸಂದೇಶಗಳನ್ನ ಕ್ಷಿಪ್ರವಾಗಿ ಸಂಕ್ಷಿಪ್ತವಾಗಿ ಹಂಚಿಕೊಳ್ಳ ಬಯಸುವವರು ಮೆಸ್ ಗಳ ಮೊರೆ ಹೋಗುತ್ತಿದ್ದಾರೆ. ಅದ್ರಲ್ಲೂ ಸ್ಮಾರ್ಟ್ ಫೋನ್ ಗಳ ಈ ಯುಗದಲ್ಲಿ ಮೆಸೆಜ್ ಗಳಿಗೆ ಪೂರಕವಾದ ಆಪ್ ಗಳ ಸಂತೆಯೇ ಗೂಗಲ್ ನಲ್ಲಿ ಲಭ್ಯವಿದೆ. ಅದ್ರಲ್ಲೂ ಫೇಸ್ ಬುಕ್ ಮೆಸೆಂಜರ್ ಅಂತೂ ಇನ್ನಿಲ್ಲದ ಜನಪ್ರಿಯತೆ ಪಡೆದುಕೊಂಡಿದ್ದು ಕೋಟ್ಯಾಂತರ ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನೂ ಹಲವು ಮೆಸೆಜ್ ಆಪ್ ಗಳಂತೂ ಇಲ್ಲದ ಪ್ರಯೋಗಗಳನ್ನ ನಡೆಸುವ ಮೂಲತ ಸ್ಪರ್ಧಿಗಿಳಿದಿವೆ. ಮಾರ್ಕೆಟ್ ನಲ್ಲಿ ಈ ರೀತಿಯ ಸ್ಪರ್ಧೆಯ ಕಾವು ಹೆಚ್ಚುತ್ತಿರುವಂತೆ ಗುರುಗಾಂವ್ ದಿಢೀರನೆ ಗಮನ ಸೆಳೆಯುತ್ತಿದೆ. ಯಾಕಂದ್ರೆ ಗುರುಗಾಂವ್ ನಲ್ಲಿ ಹುಟ್ಟಿಕೊಂಡಿರುವ ಯಾನಾ ಕಂಪನಿ ಮೆಸೆಜ್ ಟೂಲ್ ಗಳ ಪೈಕಿ ಅತೀ ಹೆಚ್ಚು ಗಮನ ಸೆಳೆಯುತ್ತಿದೆ. ಎಲ್ಲಿವರೆಗೂ ಅಂದ್ರೆ ಇದು ಫೇಸ್ ಬುಕ್ ಮೆಸೆಂಜರ್ ಗೇ ಪೈಪೋಟಿ ನೀಡುವಷ್ಟರ ಮಟ್ಟಿಗೆ ಬೆಳೆಯುತ್ತಿದೆ.

image


ಆದ್ರೆ ಯಾನಾ ಕೇವಲ ಮಸೆಜ್ ಗೆ ಮಾತ್ರ ಸೀಮೀತವಾಗಿಲ್ಲ. ಪೂರಕವಾದ ಇತರೆ ಟೂಲ್ಸ್ ಗಳನ್ನ ಗ್ರಾಹಕರಿಗೆ ನೀಡುವ ಮೂಲಕ ಅಪಾರ ಮೆಚ್ಚಿಗೆ ಪಾತ್ರವಾಗಿದೆ. ಕ್ಯಾಬ್ ಬುಕ್ಕಿಂಗ್, ದಿನಸಿ ಪದಾರ್ಥಗಳ ಬುಕ್ಕಿಂಗ್ ಗಳಂತಹ ಸರ್ವೀಸ್ ಗಳನ್ನೂ ಒದಗಿಸಿದೆ. ಫ್ರೆಂಡ್ಸ್ ಗಳೊಂದಿಗೆ ಚಾಟ್ ಮಾಡುತ್ತಲೇ ಈ ಎಲ್ಲಾ ಅಂಶಗಳನ್ನ ಬಳಸಿಕೊಳ್ಳಲು ಇಲ್ಲಿ ಅವಕಾಶ ನೀಡಲಾಗಿದೆ.

ಇದನ್ನು ಓದಿ: ಜನರನ್ನು ಆಕರ್ಷಿಸುತ್ತಿರುವ ಬಾರ್ಬೆಕ್ಯು ರೆಸ್ಟೋರೆಂಟ್...

ಯಾನಾದ ಆರಂಭಿಕ ದಿನಗಳು..

ಯಾನಾದ ಸಂಹಸ್ಥಾಪಕ ರಾಹುಲ್ ಗುಪ್ತಾ ತಮ್ಮ ಉದ್ದೇಶ ಹಾಗೂ ಕಂಪನಿಯ ಟಾರ್ಗೆಟ್ ಬಗ್ಗೆ ತುಂಬಾ ಸರಳವಾಗಿ ವಿವರಿಸುತ್ತಾರೆ. ಎಲ್ಲಾ ಸರ್ವೀಸ್ ಗಳನ್ನೂ ಮೊಬೈಲ್ ನ ಒಂದೇ ಸ್ಥಳದಲ್ಲಿ ಸಿಗುವಂತೆ ಮಾಡುವುದು ನಮ್ಮ ಮುಖ್ಯ ಉದ್ದೇಶವಾಗಿತ್ತು. ನಮಗೆ ಈ ಪ್ರಯತ್ನ ನಡೆಸಲು ಸ್ಫೂರ್ತಿ ಅಮೆರಿಕಾ ಮೂಲದ ಮ್ಯಾಜಿಕ್ ಟೆಕ್ಸ್ಟಿಂಗ್ ಆಪ್. ಇದ್ರಲ್ಲಿ ಮೆಸೆಜ್ ಚಾಟಿಂಗ್ ನ ಜೊತೆಗೆ ಎಲ್ಲವೂ ಮನೆ ಬಾಗಿಲಿಗೇ ಬಂದು ತಲುಪುತ್ತದೆ. ಕಳೆದ ಫೆಬ್ರವರಿ ಮ್ಯಾಜಿಕ್ ನಲ್ಲಿ ಕೇವಲ 48 ಗಂಟೆಗಳಲ್ಲಿ 17 ಸಾವಿರ ಮೆಸೆಜ್ ಗಳು ವರ್ಗಾವಣೆಗೊಂಡಿವೆ. ಇದೇ ನಮಗೆ ಪ್ರೇರಣೆ ನೀಡಿತು ಅಂತಾರೆ ರಾಹುಲ್ ಗುಪ್ತಾ..

image


ಬೆಂಗಳೂರಿನಲ್ಲಿ ಐಐಎಂ ಗ್ರ್ಯಾಜುಯೇಷನ್ ಮುಗಿಸಿದ ರಾಹುಲ್ ನಂತ್ರ ಹಾಂಗ್ ಕಾಂಗ್ ನ ಗೋಲ್ಡ್ ಮ್ಯಾನ್ ಸಾಕ್ಸ್ ಸೇರಿಕೊಂಡ್ರು. ಆದ್ರೆ ಅದಾಗಲೇ ತಾಂತ್ರಿಕವಾಗಿ ಅವರು ಹೊಸ ಅನ್ವೇಷಣೆಯಲ್ಲಿ ತೊಡಗಿಸಿದ್ರು. ಅದ್ರಲ್ಲೂ ಜಿಎಸ್ ತಂತ್ರಜ್ಞಾನವನ್ನ 2013ರಲ್ಲೇ ಅಭಿವೃದ್ಧಿ ಪಡಿಸಿದ್ರು. ಅಲ್ಲದೆ 2014ರಲ್ಲಿ ನರೇಂದ್ರ ಮೋದಿಯವರ ಎಲೆಕ್ಷನ್ ಕ್ಯಾಂಪನ್ ನಲ್ಲೂ ಭಾಗವಹಿಸಿದ್ರು. ವಿಶೇಷ ಅಂದ್ರೆ ಅತ್ಯಂತ ಪ್ರಸಿದ್ಧ ಕಾರ್ಯಕ್ರಮ ಚಾಯ್ ಪೇ ಚರ್ಚಾದ ರೂವಾರಿ ಈ ರಾಹುಲ್ ಗುಪ್ತಾ.. ಎಲೆಕ್ಷನ್ ಮುಗಿದ ಕೂಡ್ಲೆ ರಾಹುಲ್ ದೆಹಲಿಗೆ ತೆರಳಿದ್ರು. ಅಲ್ಲಿ ತಮ್ಮ ಗೆಳೆಯರಾದ ಅಂಕಿತ್ ಶರ್ಮಾ, ಆಶೀಶ್ ಗುಪ್ತಾ ಅವರನ್ನ ಭೇಟಿಯಾದ್ರು. ನಂತ್ರ ಅಲ್ಲಿ ಈ ಮೂವರು ಒಂದಾಗಿ ಹೊಸತನದ ಬಗ್ಗೆ ಯೋಚಿಸಿದ್ರು.

image


ಹಲೋ, ಯಾನಾ... !

ಭರ್ಜರಿ ಪ್ಲಾನಿಂಗ್ ನ ಜೊತೆಗೆ ಒಂದಾದ ಈ ಮೂವರು ಗೆಳೆಯರ ತಂಡ ಮ್ಯಾಜಿಕ್ ನಂತೆ ಹೊಸ ಅನ್ವೇಷಣೆಯಲ್ಲಿ ತೊಡಗಿದ್ರು. ಅಲ್ಲದೆ ವಾಟ್ಸಪ್ ನಂತೆ ನಂಬರ್ ರಿಜಿಸ್ಟ್ರೇಷನ್ ಮಾಡಿಕೊಳ್ಳವ ಪ್ರಯೋಗಕ್ಕೆ ಮುಂದಾದ್ರು. ಇದ್ರ ಫಲವಾಗಿ 2015ರ ಮೇ ಮತ್ತು ಜೂನ್ ತಿಂಗಳಲ್ಲಿ 50 ಸಾವಿರ ಮೆಸೆಜ್ ಗಳು ವರ್ಗಾವಣೆಗೊಂಡಿರೋದು ವಿಶೇಷ. ಇದೀಗ ಯಾನ ಮೆಸೆಜ್ ಜೊತೆಗೆ ನಿತ್ಯದ ಅಗತ್ಯದ ವಸ್ತುಗಳಾದ ಟೊಮ್ಯಾಟೋ, ಆಲೂಗಡ್ಡೆ , ಬ್ರೆಡ್ ಇತರೆ ವಸ್ತುಗಳನ್ನ ಪೂರೈಸುತ್ತಿದೆ. ಅಲ್ಲದೆ ಕ್ಯಾಬ್ ಗಳನ್ನ ಬುಕ್ ಮಾಡುವ ಅವಕಾಶ ನೀಡಿ ಇತರೆ ಸರ್ವೀಸ್ ಗಳ ಬಗ್ಗೆಯೂ ಮಾಹಿತಿ ನೀಡುತ್ತಿದೆ. ಕ್ರಮೇಣ ಗೂಗಲ್ ನಲ್ಲಿ ಗಟ್ಟಿಯಾಗಿ ನೆಲೆಯೂರುತ್ತಿರುವ ಯಾನ 10 ಸಾವಿರ ಬಳಕೆದಾರರನ್ನ ಹೊಂದಿರುವುದು ವಿಶೇಷ.

ಇನ್ನೂ ಒಂದು ಹೆಜ್ಜೆ ಮುಂದಿಡಲು ಯೋಚಿಸುತ್ತಿರುವ ಯಾನ ಸದ್ಯದಲ್ಲೇ ಫುಡ್ ಆರ್ಡರ್ ಮತ್ತು ರಿಚಾರ್ಜ್ ನಂತಹ ಸರ್ವೀಸ್ ಗಳನ್ನ ನೀಡಲು ಚಿಂತಿಸುತ್ತಿದೆ. ಅಲ್ಲದೆ ಟ್ರಾವೆಲ್ ಮತ್ತು ಮೂವೀ ಟಿಕೆಟ್ ಗಳ ಬುಕ್ಕಿಂಗ್ ಅವಕಾಶ ನೀಡುವತ್ತಲೂ ಯೋಜನೆ ರೂಪಿಸಿದೆ. ಇನ್ನು ಶಾಪಿಂಗ್ ಚಾರ್ಟಿಂಗ್ ನಂತಹ ವಿನೂತನ ಟೂಲ್ಸ್ ಗಳನ್ನೂ ಯಾನಾ ನೀಡುತ್ತಿದೆ. ಅಲ್ಲದೆ ಈಗಾಗಲೇ ಮಾರ್ಕೆಟ್ ನಲ್ಲಿ ಹೆಸರುಗಳಿಸಿರುವ ಪೆಪ್ಪರ್ ಟಾಪ್, ಝೂಪ್ ನವ್, ಓಲಾ, ಉಬರ್, ಹೌಸ್ ಜಾಯ್, ಜೆಟ್ ಸೆಟ್ ಕ್ಲೀನ್ ನಂತಹ ಸರ್ವೀಸ್ ಗಳಂತೆಯೇ ಯಾನ ವಿಶೇಷವಾಗಿ ಗ್ರಾಹಕರನ್ನ ತಲುಪುವ ನಿರೀಕ್ಷೆಯಲ್ಲಿದೆ.

ಯಾನಾ ಈಗಾಗಲೇ ದೆಹಲಿ, ಗುರುಗಾಂವ್, ನೋಯ್ಡಾ, ಬೆಂಗಳೂರು, ಮುಂಬೈ, ಪುಣೆ ಮತ್ತು ಹೈದ್ರಾಬಾದ್ ನಲ್ಲಿ ಆಕ್ಟೀವ್ ಆಗಿದೆ. ಅಲ್ಲದ ಭವಿಷ್ಯದಲ್ಲಿ ಹೈದ್ರಾಬಾದ್, ಕೊಲ್ಕತ್ತಾ, ಅಹಮದಾಬಾದ್ ಹಾಗೂ ಚೆನ್ನೈನತ್ತಲೂ ಚಿತ್ತ ನೆಟ್ಟಿದೆ. ಹೀಗೆ ಕೇವಲ ಮೆಸೆಂಜರ್ ಆಗಿ ಮಾತ್ರ ಬೆಳೆಯದ ಯಾನಾ ಇದೀಗ ಇತರೆ ಸರ್ವೀಸ್ ಗಳಿಗೂ ತೆರೆದುಕೊಳ್ಳುವ ಮೂಲಕ ಫೇಸ್ ಬುಕ್ ಸೇರಿದಂತೆ ಇತರೆ ಫ್ಲಾಟ್ ಫಾರ್ಮ್ ಗಳಿಗೆ ಪ್ರಬಲ ಪೈಪೋಟಿಯೊಡ್ಡುತ್ತಿದೆ.

ಲೇಖಕರು – ತರೂಶ್ ಬಲ್ಲಾ

ಅನುವಾದ – ಸ್ವಾತಿ, ಉಜಿರೆ 

ಇದನ್ನು ಓದಿ

1. ಆನ್​ಲೈನ್​ನಲ್ಲಿ ಪೂಜಾ ಸಾಮಗ್ರಿ: ದೇಶ ವಿದೇಶದಲ್ಲೂ ಸತೀಶ್ ಸ್ಟೋರ್ಸ್​ನ ಕಮಾಲ್

2. ಊರಿಗೆ ಹೋಗಬೇಕಾ..? ಹಾಗಾದ್ರೆ, ನಿಮ್ಮ ಸಾಕುಪ್ರಾಣಿಯನ್ನ ಇಲ್ಲಿ ಬಿಡಿ..!

3. ಆನ್‍ಲೈನ್‍ನಲ್ಲೂ ಸಿಗುತ್ತೆ ಪೂಜೆಗೆ ಬೇಕಾಗುವ ವಸ್ತುಗಳು