ಫ್ರೀಲ್ಯಾನ್ಸರ್‌ಗಳಿಗೆ ಸೂಕ್ತ ಅವಕಾಶ ಒದಗಿಸುತ್ತಿರುವ ಹೈರಡೋನಸ್ ಸಂಸ್ಥೆ

ಟೀಮ್​​ ವೈ.ಎಸ್​​.

ಫ್ರೀಲ್ಯಾನ್ಸರ್‌ಗಳಿಗೆ ಸೂಕ್ತ ಅವಕಾಶ ಒದಗಿಸುತ್ತಿರುವ ಹೈರಡೋನಸ್ ಸಂಸ್ಥೆ

Friday October 30, 2015,

4 min Read

ನೀವು ಒಂದು ಉದ್ಯಮವನ್ನು ಆರಂಭಿಸಿದ್ದು, ಆ ಉದ್ಯಮಕ್ಕಾಗಿ ಪ್ರೀಲ್ಯಾನ್ಸರ್‌ ಪ್ರತಿಭೆಗಳನ್ನು ನೀವು ಹುಡುಕುವುದು ಅಷ್ಟು ಸುಲಭದ ಕೆಲಸ ಅಲ್ಲ ಎಂಬುದು ನಿಮಗೆ ಅರಿವಾಗುತ್ತದೆ. ಗುಣಮಟ್ಟ, ನಿಗದಿತ ಸಮಯದೊಳಗೆ ಕಾರ್ಯ ಮುಗಿಸುವುದು, ಸಂಪರ್ಕಗಳು ಯಾವುದೇ ಉದ್ಯಮದ ಪ್ರಮುಖ ಅಂಶಗಳು, ಮತ್ತು ಸವಾಲುಗಳು. ಇಂತಹ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ಹೈರೆನೋಡಸ್ ಎಂಬ ಸಂಸ್ಥೆಯನ್ನು ಆರಂಭಿಸಿದರು ಪಂಕಜ್, ಸುನಿಲ್, ಶಿವ ಮತ್ತು ಪ್ರದೀಪ್. ಇದೊಂದು ಹೈಪರ್ ಲೋಕಲ್ ಮಾರುಕಟ್ಟೆ ಸ್ಥಳವಾಗಿದ್ದು, ಈ ಮೂಲಕ ಉದ್ಯಮಗಳಿಗೆ ಫ್ರೀಲ್ಯಾನ್ಸರ್‌ಗಳನ್ನು ಮತ್ತು ಫ್ರೀಲ್ಯಾನ್ಸರ್‌ಗಳಿಗೆ ಉದ್ಯಮಗಳಲ್ಲಿ ಕೆಲಸಮಾಡುವ ಅವಕಾಶವನ್ನು ಒದಗಿಸುವ ಸಂಸ್ಥೆಯಾಗಿದೆ.

ಈ ನಾಲ್ವರೂ 3 ವರ್ಷಗಳಿಂದ ಒಂದೇ ತಂಡವಾಗಿ ಜುಲೈ ಸಿಸ್ಟಮ್ ಎಂಬ ಸಂಸ್ಥೆಯಲ್ಲಿ ಸಾಸ್ ಅಂಡ್ ಪಾಸ್ ಮೊಬೈಲ್ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸುವುದರಲ್ಲಿ ತೊಡಗಿಕೊಂಡಿದ್ದರು. ಇದೇ ವೇಳೆ ಪಂಕಜ್‌ ಫ್ರೀಲ್ಯಾನ್ಸರ್‌ಗಳನ್ನು ನೇಮಿಸಿಕೊಳ್ಳುವಲ್ಲಿ ಹಲವು ಸಂಘಟನೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನಿಸಿದರು. ಈ ಸಮಸ್ಯೆ ಬಗೆಹರಿಸಲು ಅನೇಕ ದಾರಿಗಳನ್ನು ಚಿಂತಿಸುತ್ತಿದ್ದರು.

image


ವಿಫಲತೆ ಮತ್ತು ಪುನರಾರಂಭ

ಶೀಘ್ರದಲ್ಲೇ ಈ ನಾಲ್ವರು ಅನೇಕ ಕಂಪನಿಗಳಿಗಾಗಿ ಫ್ರೀಲ್ಯಾನ್ಸರ್‌ಗಳ ಬಗ್ಗೆ ಖಚಿತ ಉಲ್ಲೇಖ ಆಧಾರದ ವೇದಿಕೆಯೊಂದನ್ನು ನಿರ್ಮಿಸಿದರು ಮತ್ತು ಟಿಲ್ಯಾಬ್ಸ್ ಸಂಸ್ಥೆಯ ಭಾಗವಾದರು. ಉದ್ಯಮಕ್ಕೆ ಅಗತ್ಯವಿರುವ ಹೂಡಿಕೆಯನ್ನೂ ಗಳಿಸಿಕೊಂಡರು. ದುರಾದೃಷ್ಟವೆಂದರೆ, ಕೇವಲ ಲಿಂಕ್ಡ್​​​ಇನ್ ಮತ್ತು ಫೇಸ್‌ಬುಕ್​​ನಂತಹ ಸಾಮಾಜಿಕ ಜಾಲತಾಣಗಳನ್ನೇ ಆಧಾರವಾಗಿಟ್ಟುಕೊಂಡಿದ್ದ ಅವರ ಸಂಸ್ಥೆಯನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಬೇಕಾಯಿತು.

ಹೈರೆನೋಡಸ್ ಎಂಬುದು ಈ ತಂಡದ 3ನೇ ಉದ್ಯಮದ ಆರಂಭವಾಗಿತ್ತು. ಪಂಕಜ್ ಮತ್ತು ಅವರ ತಂಡದವರು ಹಿಂದಿನ ಉದ್ಯಮಕ್ಕೆ ಫ್ರೀಲ್ಯಾನ್ಸರ್‌ಗಳನ್ನು ಬಳಸಿಕೊಂಡಿದ್ದರು. ಅವರ ಹಿಂದಿನ ಉದ್ಯಮಕ್ಕಾಗಿ ಲೋಗೋ ವಿನ್ಯಾಸಕಾರ ಮತ್ತು ವಿಷಯ ಬರಹಗಾರರನ್ನು ಹುಡುಕುವುದು ಬಹಳ ಕಷ್ಟವಾಗಿತ್ತು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ ಪ್ರದೀಪ್. ಫ್ರೀಲ್ಯಾನ್ಸರ್‌ಗಳಿಗೆ ಅನೇಕ ವೆಬ್‌ಸೈಟ್‌ಗಳಲ್ಲಿ ಬೇಡಿಕೆ ಇಟ್ಟರೂ ಯಾವೊಬ್ಬ ಒಳ್ಳೆಯ ಫ್ರೀಲ್ಯಾನ್ಸರ್ ಅನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಒಪ್ಪಿಕೊಂಡಿದ್ದ 5 ಕೆಲಸಗಳನ್ನು ಬಿಟ್ಟುಕೊಡಬೇಕಾಯಿತು ಮತ್ತು ಪಂಚತಾರಾ ಮೌಲ್ಯದ ಫ್ರೀಲ್ಯಾನ್ಸರ್‌ಗಳಿಗೆ ಮರುಪಾವತಿಯನ್ನೂ ಮಾಡಬೇಕಾಯಿತು.

ಸಾಮಾನ್ಯ ಸಮಸ್ಯೆಗಳನ್ನು ಪರಿಹರಿಸುತ್ತಾ...

ಈಗಾಗಲೇ ಇರುವ ಸ್ವತಂತ್ರ ಉದ್ಯಮದ(ಫ್ರೀಲ್ಯಾನ್ಸಿಂಗ್ ಸೊಲ್ಯುಷನ್) ಪರಿಹಾರಗಳು, ಕಂಪನಿಗಳ ಬೇಡಿಕೆಯನ್ನು ಪೂರೈಸುವಲ್ಲಿ ವಿಫಲವಾಗಿವೆ. ಅಲ್ಲದೇ ಬಹುತೇಕ ಫ್ರೀಲ್ಯಾನ್ಸರ್‌ಗಳು ವೆಬ್‌ಸೈಟ್‌ನಲ್ಲೂ ಲಭ್ಯವಾಗುವುದಿಲ್ಲ. ಫ್ರೀಲ್ಯಾನ್ಸಿಂಗ್ ಕ್ಷೇತ್ರದಲ್ಲಿರುವ ಅವಕಾಶಗಳು ಎಷ್ಟು ದೊಡ್ಡವೆಂಬುದು ನಮಗೆ ಕೂಡಲೇ ಅರಿವಿಗೆ ಬಂತು. ನಾವು ಕೂಡಲೇ ಫ್ರೀಲ್ಯಾನ್ಸಿಂಗ್ ಕ್ಷೇತ್ರದಲ್ಲಿರುವ ವಿಷಯಗಳೇ ನಮ್ಮ ಅತೀ ದೊಡ್ಡ ಸಮಸ್ಯೆಗಳೇನು ಎಂಬುದನ್ನು ತಿಳಿದುಕೊಳ್ಳುವುದೇ ನಮ್ಮ ಸವಾಲಾಯಿತು ಎನ್ನುತ್ತಾರೆ ಹೈರೆನೋಡಸ್ ಸಂಸ್ಥೆಯ ಸಹಸಂಸ್ಥಾಪಕ ಪ್ರದೀಪ್.

ಹೀಗಾಗಿ ತಮ್ಮ ಸ್ವಲ್ಪ ಸಮಯವನ್ನು ಗ್ರಾಹಕನ್ನು ಹುಡುಕುವುದರಲ್ಲಿ, ಅನೇಕ ಉದ್ಯಮಿಗಳ ಜೊತೆ ಚರ್ಚಿಸುವುದಲ್ಲೇ ಕಳೆದರು. ಇದರಿಂದ ಸಮಸ್ಯೆ ಏನೆಂಬುದನ್ನು ಅನೇಕ ಸಂಘಟನೆಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿ ಅವರಿಗೆ ಸಮಸ್ಯೆಯ ಸ್ವರೂಪವನ್ನು ಅರ್ಥಮಾಡಿಸುವಲ್ಲಿ ಸಫಲರಾದರು. ಸ್ಥಳೀಯ ಫ್ರೀಲ್ಯಾನ್ಸರ್‌ಗಳೊಂದಿಗೆ, ನೌಕರರ ನೇರ ಸಂಪರ್ಕ ಏರ್ಪಡಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸುವ ನಿರ್ಧಾರ ಮಾಡಿದರು ಪ್ರದೀಪ್ ಮತ್ತವರ ತಂಡವರು. ಹತ್ತಿರದಲ್ಲೇ ಇರುವ ಫ್ರೀಲ್ಯಾನ್ಸರ್‌ಗಳನ್ನು ಸಂಪರ್ಕಿಸುವುದು ಅಷ್ಟೊಂದು ಕಷ್ಟದ ಕೆಲಸವೇನಲ್ಲ, ಅವರೊಂದಿಗೆ ನೇರವಾಗಿ ಮಾತನಾಡಿ, ಸಾಧ್ಯವಾದರೆ ಗ್ರಾಹಕರ ಕಚೇರಿಗಾಗಿ ಕೆಲಸ ಮಾಡುವಂತೆ ಮಾಡಬಹುದು.

ಉದ್ಯಮದ ಆರಂಭದ ಹಂತಕ್ಕೆ ಫ್ರೀಲ್ಯಾನ್ಸರ್‌ಗಳೇ ಉತ್ತಮ ಆಯ್ಕೆ. ಅನೇಕ ಉದ್ಯಮಗಳು ಆರಂಭದಲ್ಲಿ ತಮ್ಮ ಕಾರ್ಯದ ಬಗ್ಗೆ ಸರಿಯಾದ ಮಾಹಿತಿ ಹೊಂದಿರುವುದಿಲ್ಲ. ಕೆಲವು ಸಂಪನ್ಮೂಲಗಳು ಚಾಣಾಕ್ಷತೆಯಿಂದಲೂ ಕೆಲಸ ಮಾಡಬಹುದು. ಆದರೆ ಸಮಯದ ಒತ್ತಡದಿಂದ ಅವರ ಬಳಿ ಫ್ರೀಲ್ಯಾನ್ಸರ್‌ಗಳಿಗೆ ನೀಡಬಹುದಾದಷ್ಟು ವಿಸ್ತೃತವಾದ ಮಾಹಿತಿ ಇರುವುದಿಲ್ಲ.

ಉದ್ಯಮಗಳಿಗೆ ಅನೇಕ ಬಾರಿ ತಮ್ಮೊಂದಿಗೆ ಸೇರಿ ಕಾರ್ಯನಿರ್ವಹಿಸುವಂತಹ ಫ್ರೀಲ್ಯಾನ್ಸರ್‌ಗಳ ಅಗತ್ಯ ಇರುತ್ತದೆ. ಆದರೆ ದೂರದ ಫ್ರೀಲ್ಯಾನ್ಸರ್‌ಗಳು ಸಂಸ್ಥೆಯ ಜೊತೆಯಲ್ಲಿದ್ದೇ ಕಾರ್ಯನಿರ್ವಹಿಸುವುದು, ಅವಧಿಯೊಳಗೆ ಕಾರ್ಯನಿರ್ವಹಿಸುವುದು, ಸಮನ್ವಯತೆಯ ಸವಾಲುಗಳಿಂದಾಗಿ ಕೆಲಸ ಮಾಡುವುದು ಕಷ್ಟ ಎನ್ನುತ್ತಾರೆ ಪ್ರದೀಪ್.

ಹೈರೆನೋಡೆಸ್ ಸಂಸ್ಥೆ ಬೆಳೆದ ರೀತಿ

ಬಹಳಷ್ಟು ಹೂಡಿಕೆದಾರರು ಪೂರ್ಣಕಾಲಿಕ ಉದ್ಯೋಗಿಗಳನ್ನೇ ನೇಮಿಸಿಕೊಳ್ಳುತ್ತಾರೆ. ಏಕೆಂದರೆ ಅವರಿಗೆ ಫ್ರೀಲ್ಯಾನ್ಸಿಂಗ್ ಎಂಬುದು ಉದ್ಯಮದ ಆರ್ಥಿಕತೆಯನ್ನು ಸುಧಾರಿಸುವಲ್ಲಿ ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದೆನಿಸುತ್ತದೆ.

ಅನೇಕ ಚರ್ಚೆಗಳ ನಂತರ ನಮ್ಮ ಹೃದಯ ಹೇಳಿದಂತೆ ಕೇಳಲು ಮತ್ತು ಉದ್ಯಮಗಳಲ್ಲಿ ಫ್ರೀಲ್ಯಾನ್ಸರ್‌ಗಳನ್ನೂ ಭಾಗಿಯಾಗುವಂತೆ ಮಾಡಲು ನಿರ್ಧರಿಸಿದೆವು ಎನ್ನುತ್ತಾರೆ ಪ್ರದೀಪ್. ಈ ಬಗ್ಗೆ ಅನೇಕ ಉದ್ಯಮಿಗಳು ಹಾಗೂ ಜನರೊಂದಿಗೆ ಚರ್ಚಿಸಿದಾಗ ಅವರು ಈ ಯೋಜನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಅವರ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ಅವರ ಮೇಲಿದ್ದರಿಂದ ಅವರ ಅನುಮಾನವೂ ಸಹಜವೇ ಆಗಿತ್ತು.

ಒಮ್ಮೆ ಕೋರ್ ಟೀಮ್ ರಚನೆಯಾದ ನಂತರ ಸಂಹಸಂಸ್ಥಾಪಕರು ಎಂವಿಪಿ(ಮಿನಿಮಮ್ ವಯಬಲ್ ಪ್ರಾಡಕ್ಟ್- ಉತ್ಪನ್ನದ ಕನಿಷ್ಠ ಸಾಮರ್ಥ್ಯ)ಯನ್ನು ಬಿಡುಗಡೆಗೊಳಿಸಲು ನಿರ್ಧರಿಸಿದರು. ಈ ಕುರಿತು 2 ತಿಂಗಳಿನೊಳಗೆ ಆ್ಯಪ್‌ನ ಮೊದಲ ಆವೃತ್ತಿಯನ್ನು ಬಿಡುಗಡೆಗೊಳಿಸಿದರು.

ಬೆಳವಣಿಗೆ

ಜೂನ್ ಮಧ್ಯಭಾಗದಲ್ಲಿ ಬಿಡುಗಡೆಗೊಳಿಸಿದ ಹೈರೆನೋಡಸ್ ಸಂಸ್ಥೆಯ ಆ್ಯಪ್ ಅನ್ನು ಈಗಾಗಲೇ 1000ಕ್ಕೂ ಹೆಚ್ಚು ಜನ ಡೌನ್‌ಲೋಡ್ ಮಾಡಿ ಬಳಸುತ್ತಿದ್ದಾರೆ. 150ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಆ್ಯಪ್‌ ಮೂಲಕ ತಿಳಿಸಲಾಗುತ್ತಿದೆ. ದಿನನಿತ್ಯದ ಬಳಕೆದಾರರಿಗೆ ಈ ಆ್ಯಪ್‌ ಬಹಳ ಉಪಯೋಗಕಾರಿಯಾಗಿದೆ. 70ಕ್ಕೂ ಹೆಚ್ಚು ಬಳಕೆದಾರರು ಆ್ಯಪ್ ಮುಖಾಂತರ ಚಟುವಟಿಕೆಯಿಂದಿದ್ದಾರೆ.

ಆ್ಯಪ್‌ ಸ್ಟೋರ್‌ನಲ್ಲಿ ಈ ಹೈರೆನೋಡಸ್ ಆ್ಯಪ್‌ಗೆ ನಿರಂತರವಾಗಿ ಫೈವ್ ಸ್ಟಾರ್ ರೇಟಿಂಗ್ ದೊರೆಯುತ್ತಿದೆ. ಆ್ಯಪ್ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. 25ಕ್ಕೂ ಹೆಚ್ಚು ದೇಶಗಳ ಜನರಲ್ಲಿ ಈ ಆ್ಯಪ್ ಆಸಕ್ತಿ ಮೂಡಿಸಿದೆ. ಉತ್ತಮ ಫ್ರೀಲ್ಯಾನ್ಸರ್‌ಗಳ ಅಗತ್ಯ ಕೇವಲ ಭಾರತಕ್ಕಲ್ಲ ಇಡೀ ಪ್ರಪಂಚಕ್ಕೆ ಇದೆ ಎಂಬುದು ಪ್ರದೀಪ್ ಅವರ ಅಭಿಮತ.

ಹೈರೆನೋಡಸ್‌ನ ಐಓಎಸ್ ಆ್ಯಪ್ ಯಾವಾಗ ಬಿಡುಗಡೆಯಾಗಲಿದೆ ಎಂದು ಅನೇಕರು ವಿಚಾರಿಸುತ್ತಿದ್ದಾರೆ. ಉದ್ಯೋಗಗಳಿಗಾಗಿ, ಆ್ಯಂಡ್ರಾಯ್ಡ್ ಫೋನ್ ಹೊಂದಿರದ ಕೆಲ ಫ್ರೀಲ್ಯಾನ್ಸರ್‌ಗಳ ಜೊತೆ ಆಫ್‌ಲೈನ್ ಸಂಪರ್ಕದಲ್ಲಿದೆ ಸಂಸ್ಥೆ. ಅಂಥವರಿಗಾಗಿ ಫೇಸ್‌ಬುಕ್‌ ಪೇಜ್‌ನಲ್ಲಿಯೂ ಅವಕಾಶಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ ಎನ್ನುತ್ತಾರೆ ಪ್ರದೀಪ್.

ಸದ್ಯಕ್ಕೆ ನೌಕರರು ಮತ್ತು ಫ್ರೀಲ್ಯಾನ್ಸರ್‌ಗಳಿಗೆ ಆ್ಯಪ್ ಉಚಿತವಾಗಿ ದೊರಕುತ್ತಿದೆ. ಫ್ರೀಲ್ಯಾನ್ಸಿಂಗ್ ಕ್ಷೇತ್ರದ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಲು ಈ ವೇದಿಕೆ ಸಮರ್ಥವಾದ ನಂತರ ಪಾವತಿ ಆಯ್ಕೆಯನ್ನು ಪರಿಚಯಿಸಲೂ ಸಂಸ್ಥೆ ಚಿಂತಿಸುತ್ತಿದೆ. ಸಂಸ್ಥೆ ತನ್ನ ಗುರಿಯನ್ನು ತಲುಪಲು ಕೆಲವೇ ಹೆಜ್ಜೆಗಳ ಅಂತರದಲ್ಲಿದೆ.

ಭವಿಷ್ಯದಲ್ಲಿ ಫ್ರೀಲ್ಯಾನ್ಸಿಂಗ್ ಕ್ಷೇತ್ರದಲ್ಲೇ ಬೆಳೆಯಲು ಇಚ್ಛಿಸುವ ಫ್ರೀಲ್ಯಾನ್ಸರ್‌ಗಳಿಗೆ ಉಪಯೋಗವಾಗುವಂತೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಹೈರೆನೋಡಸ್ ಜೊತೆ ಸೇರಿರುವ ಫ್ರೀಲ್ಯಾನ್ಸರ್‌ಗಳಿಗೆ ಕೇಳಿಕೊಳ್ಳಲಾಗಿದೆ.

ಮಾರುಕಟ್ಟೆ

ಉದ್ಯಮದ ಮಾರುಕಟ್ಟೆ ಸಾಮೂಹಿಕ ಪ್ರತಿಭೆಗಳನ್ನು ಹೊಂದಿರುವುದರಲ್ಲಿ ಅನುಮಾನವೇ ಇಲ್ಲ. ವರದಿಗಳ ಪ್ರಕಾರ ಶೇ.45ರಷ್ಟು ಏಷಿಯಾ ಪೆಸಿಫಿಕ್ ನೌಕರರು ಪ್ರತಿಭೆಗಳ ಕೊರತೆಯ ಕಾರಣದಿಂದ ಉದ್ಯಮದ ಖಾಲಿಹುದ್ದೆಗಳನ್ನು ತುಂಬುವಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಭಾರತದ ಶೇ.67ರಷ್ಟು ಉದ್ಯಮಗಳೂ, ಜಾಗತಿಕ ಮಟ್ಟದಲ್ಲಿ ಶೇ.34ರಷ್ಟು ಉದ್ಯಮಗಳು ಈ ಸಮಸ್ಯೆಯನ್ನು ಎದುರಿಸುತ್ತಿವೆ

ನವದೆಹಲಿ ಮೂಲದ ಟ್ಯಾಲೆಂಟ್ ಪ್ಯಾಡ್ ಸಂಸ್ಥೆ(ಈ ಮೊದಲು ಟ್ಯಾಲೆಂಟ್ ಆಕ್ಷನ್ ಎಂಬ ಹೆಸರಿನಲ್ಲಿದ್ದ ಸಂಸ್ಥೆ) ಬಹಿರಂಗಪಡಿಸಿದ ಫಂಡ್ ಅನ್ನು ಹೆಲಿಯಾನ್ ಅಡ್ವೈಸರ್ಸ್ ನಿಂದ ಪಡೆದುಕೊಂಡಿದೆ. ಪ್ರಸ್ತುತ ಈ ಸಂಸ್ಥೆ, ಇನ್‌ಮೊಬಿ, ಮೇಕ್ ಮೈ ಟ್ರಿಪ್, ಸ್ನ್ಯಾಪ್‌ಡೀಲ್, ಮಿಂತ್ರಾ ಮತ್ತು ಬುಕ್ ಮೈ ಶೋನಂತಹ 150 ಕಂಪನಿಗಳ ಜೊತೆ ಕಾರ್ಯನಿರ್ವಹಿಸುತ್ತಿದೆ.

ಮ್ಯಾಟ್ರಿಕ್ಸ್ ಪಾರ್ಟ್‌ನರ್ಸ್‌ನ ನಿರ್ದೇಶಕರಾದ ತರುಣ್ ಡಾವ್ಡಾ ಹೇಳುವಂತೆ, ಭಾರತದ ಹುಡುಕಾಟ ಮತ್ತು ಉದ್ಯೋಗಾವಕಾಶಗಳ ಮಾರುಕಟ್ಟೆ 1 ಬಿಲಿಯನ್ ಯುಎಸ್ ಡಾಲರ್ ಆಗಿದ್ದು ಸಂಯುಕ್ತ ವಾರ್ಷಿಕ ಬೆಳವಣಿಗೆ ದರ ಷೇ.20ರಷ್ಟಿದೆ. ಆನ್‌ಲೈನ್ ಮೂಲಕ ನೇಮಕಾತಿ ಪ್ರಕ್ರಿಯೆ ಗುಣಮಟ್ಟದ್ದಾಗಿದ್ದು ಕಂಪನಿಗಳ ಗುಣಮಟ್ಟಕ್ಕೆ ಹೊಂದಿಕೆಯಾಗುವ ಅಭ್ಯರ್ಥಿಗಳು ಕಂಪನಿಗಳಿಗೆ ದೊರಕುತ್ತಾರೆ.

ಐಡಿಜಿ ಸಂಸ್ಥೆಯ ಉಪಾಧ್ಯಕ್ಷರಾಗಿರುವ ವೆಂಕಟೇಶ್ ಪೆಡ್ಡಿಯವರೂ ಸಹ ಈ ಬಗ್ಗೆ ತಿಳಿಸುತ್ತಾರೆ. ಭಾರತದಲ್ಲಿ ಆನ್‌ಲೈನ್ ಮೂಲಕ ನೇಮಕಾತಿ ಪ್ರಕ್ರಿಯೆ ಕಳೆದ 10 ವರ್ಷಗಳಲ್ಲಿ ಅಷ್ಟೊಂದು ಪ್ರಗತಿ ಕಂಡಿಲ್ಲ. ಆದರೆ ಕಳೆದ ಕೆಲ ವರ್ಷಗಳಿಂದ ಉದ್ಯಮ ಕ್ಷೇತ್ರದಲ್ಲಿ ವಿಭಿನ್ನ ದೃಷ್ಟಿಕೋನವಿಟ್ಟುಕೊಂಡು ಕೆಲಸ ಮಾಡುತ್ತಿರುವ ಸಂಸ್ಥೆಗಳು ಆರಂಭವಾಗುತ್ತಿವೆ. ಭಾರತದಲ್ಲಿ ನೇಮಕಾತಿ ತಂತ್ರಜ್ಞಾನಕ್ಕಾಗಿ ವಾರ್ಷಿಕ ಆದಾಯದಲ್ಲಿ 1.5 ಬಿಲಿಯನ್ ಯುಎಸ್ ಡಾಲರ್‌ನಷ್ಟು ಹಣವನ್ನು ಹೂಡಿಕೆ ಮಾಡಲಾಗುತ್ತಿದೆ. ಇದು 2020ರ ವೇಳೆಗೆ ಸುಮಾರು 4 ರಿಂದ 5 ಬಿಲಿಯನ್ ಯುಎಸ್ ಡಾಲರ್‌ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ ವೆಂಕಟೇಶ ಪೆಡ್ಡಿ.