ಒಂದೇ ಕ್ಲಿಕ್​- ಒಂದೇ ಮೆಸೇಜ್​​- ನಿಮ್ಮ ಮನೆ ಬಾಗಿಲಲ್ಲೇ ಇರುತ್ತೆ ತರಕಾರಿ ವ್ಯಾನ್​..!

ಟೀಮ್​ ವೈ.ಎಸ್​. ಕನ್ನಡ

ಒಂದೇ ಕ್ಲಿಕ್​- ಒಂದೇ ಮೆಸೇಜ್​​- ನಿಮ್ಮ ಮನೆ ಬಾಗಿಲಲ್ಲೇ ಇರುತ್ತೆ ತರಕಾರಿ ವ್ಯಾನ್​..!

Tuesday February 07, 2017,

2 min Read

ಈಗ ಎಲ್ಲವೂ ಕುಂತಲ್ಲೇ ಸಿಗುತ್ತೆ. ಅಗತ್ಯ ವಸ್ತುಗಳು ಕ್ಷಣ ಮಾತ್ರದಲ್ಲೇ ನಾವಿರುವ ಜಾಗಕ್ಕೆ ಬಂದು ಬೀಳುತ್ತದೆ.ಅಗತ್ಯ ವಸ್ತು ಮಾತ್ರವಲ್ಲದೆ ಊಟ -ತಿಂಡಿ ಹಣ್ಣು-ತರಕಾರಿ ಹೀಗೆ ಎಲ್ಲವೂ ಆನ್ ಲೈನ್ ನಲ್ಲಿ ಲಭ್ಯವಿರುತ್ತದೆ. ಆದ್ರೆ ಊಟ ತಿಂಡಿ ವಿಚಾರಕ್ಕೆ ಬಂದ್ರೆ ಆರೋಗ್ಯದ ಬಗ್ಗೆಯೂ ಒಂದಿಷ್ಟು ಕಾಳಜಿ ಮಾಡಬೇಕಾಗುತ್ತದೆ. ಅದಕ್ಕಾಗಿಯೇ ನೀವು ತಿನ್ನುವ ಹಣ್ಣು ತರಕಾರಿಯನ್ನ ನೀವು ಖುದ್ದಾಗಿ ಆಯ್ಕೆ ಮಾಡಿಕೊಳ್ಳಬಹುದು. ಅದೂ ಕೂಡ ನಿಮ್ಮ ಮನೆ ಬಾಗಿಲಿನಲ್ಲೇ. ನೀವಿರುವ ಜಾಗದಲ್ಲೇ. ಅದಕ್ಕಾಗಿ ನೀವು ಮಾಡಬೇಕಿರೋದಿಷ್ಟೇ ನಿಮ್ಮ ಮೊಬೈಲ್ ನಂಬರ್ ಅನ್ನ ರಿಜಿಸ್ಟರ್ ಮಾಡಿಕೊಳ್ಳಬೇಕು. 

image


ಫ್ರೆಶ್​​ವರ್ಲ್ಡ್​​ 

ಎಷ್ಟೇ ಸಂಪಾದನೆ ಮಾಡಿದ್ರು ಕೂಡ ಆರೋಗ್ಯ ಹಾಗೂ ತಿನ್ನೋ ಆಹಾರದ ವಿಚಾರದಲ್ಲಿ ಚಾನ್ಸ್ ತೆಗೆದುಕೊಳ್ಳುವುದಕ್ಕೆ ಯಾರಿಗೂ ಇಷ್ಟ ಇರುವುದಿಲ್ಲ. ಯಾಕಂದ್ರೆ ಎಲ್ಲರೂ ಕಷ್ಟ ಪಟ್ಟು ದುಡಿಯುವುದೇ ಜೀವ ಹಾಗೂ ಜೀವನಕ್ಕಾಗಿ. ಈಗಿನ ದಿನದಲ್ಲಿ ಎಲ್ಲವೂ ಬೆರಳ ತುದಿಯ ಆಯ್ಕೆಯಲ್ಲೇ ಸಿಗುತ್ತದೆ. ಹಣ್ಣು-ತರಕಾರಿಗಳು ಕೂಡ ಇದರಿಂದ ಹೊರತಾಗಿ ಇಲ್ಲ. ಬಟ್ಟೆ -ಬರೆ ಆದ್ರೆ ಕಣ್ಣಿನಲ್ಲಿ ನೋಡಿ ಆಯ್ಕೆ ಮಾಡಿಕೊಳ್ಳಬಹುದು. ಆದ್ರೆ ತಿನ್ನುವ ವಸ್ತುಗಳನ್ನ ಮುಟ್ಟಿ ನೋಡಿ ಆಯ್ಕೆ ಮಾಡಿದ್ರೆನೇ ಒಂದು ರೀತಿಯ ಸಮಾಧಾನ. ಅಂತಹವರಿಗಾಗಿಯೇ ಶುರುವಾಗಿದೆ ಫ್ರೆಶ್ ವರ್ಲ್ಡ್. ಸೂಪರ್ ಮಾರ್ಕೆಟ್​​ನಲ್ಲಿ ಲಭ್ಯವಾಗುವ ರೀತಿಯಲ್ಲಿ ಹಣ್ಣು, ತರಕಾರಿ, ಸೊಪ್ಪುಗಳು ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. 

image


ರೈತರಿಗೂ ಉಪಯೋಗವಾಗುವಂತೆ ಹಾಗೂ ಗ್ರಾಹಕರಿಗೆ ಉತ್ತಮವಾದ ಹಾಗೂ ಗುಣಮಟ್ಟ ಇರುವ ತರಕಾರಿ ಹಣ್ಣುಗಳನ್ನ ಅವರ ಮನೆ ಬಾಗಿಲಿಗೆ ಒದಗಿಸುವ ನಿಟ್ಟಿನಲ್ಲಿ ಪ್ರಾರಂಭ ಮಾಡಿದ ಸಂಸ್ಥೆ. ಸುಮಾರು ಐವತ್ತಕ್ಕೂ ಹೆಚ್ಚು ಜನರು ಇಲ್ಲಿ ಕೆಲಸ ಮಾಡುತ್ತಿದ್ದು ಚಿಕ್ಕ ಚಿಕ್ಕ ವ್ಯಾನ್​ಗಳ ಮೂಲಕ ಫ್ರೆಶ್ ತರಕಾರಿ ಹಣ್ಣು ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ಒಮ್ಮೆ ಪ್ರೆಶ್ ವರ್ಲ್ಡ್​​ಗೆ ಲಾಗಿನ್ ಆಗಿ ನಿಮ್ಮ ನಗರ ಹಾಗೂ ಫೋನ್ ನಂಬರ್ ಅನ್ನ ರಿಜಿಸ್ಟರ್ ಮಾಡಿದ್ರೆ ನಿಮ್ಮ ಮನೆಗೆ ತರಕಾರಿ ಅಂಗಡಿ ವ್ಯಾನ್​ಗಳು ಬಂದಾಗ ನಿಮ್ಮ ನಂಬರ್ ಗೆ ಮೆಸೇಜ್ ಹಾಗೂ ತರಕಾರಿ ವ್ಯಾನ್ ನಿಲ್ಲೋ ಸ್ಥಳ ಹಾಗೂ ತರಕಾರಿಗಳ ಬೆಲೆ ಮತ್ತೆ ಅಂದಿನ ವಿಶೇಷ ತರಕಾರಿಗಳ ಲಿಸ್ಟ್ ಮೆಸೆಜ್ ರೂಪದಲ್ಲಿ ಬರುತ್ತದೆ. ಇನ್ನು ಎಲ್ಲಾ ವ್ಯಾನ್​ಗಳಿಗೂ ಜಿಪಿಎಸ್ ಅಳವಡಿಸಿದ್ದು ತರಕಾರಿ ವ್ಯಾನ್ ಒಮ್ಮೆ ನಿಮ್ಮ ನಗರಕ್ಕೆ ಎಟ್ರಿ ಆದ ತಕ್ಷಣ ಮೆಸೇಜ್ ಬರುತ್ತದೆ. ಡಿಜಿಟಲ್ ವರ್ಲ್ಡ್​​ನಲ್ಲಿ ಎಲ್ಲವೂ ಡಿಜಿಟಲ್​ನಿಂದ ಕೂಡಿದ್ದು ತೂಕದಿಂದ ಹಿಡಿದು ಬಿಲ್​​ವರೆಗೂ ಎಲ್ಲವೂ ಹೈ ಕ್ವಾಲಿಟಿಯಲ್ಲೇ ವರ್ಕೌಟ್ ಆಗುತ್ತದೆ. ಸಾಕಷ್ಟು ರೈತರು ತಾವು ಬೆಳೆದ ತರಕಾರಿ ಹಾಗೂ ಹಣ್ಣುಗಳನ್ನ ಮಾರುಕಟ್ಟೆಗೆ ತರಲು ಹಾಗೂ ಮಧ್ಯವರ್ತಿಗಳಿಂದ ತಪ್ಪಿಸಿಕೊಳ್ಳಲು ಪರದಾಡುವುದನ್ನ ಅರಿತಿರೋ ರಾಜೀವ್​ರಾವ್ ಇದಕೊಂದು ಅಂತ್ಯ ಆಗಬೇಕು ಅಂತ ನಿರ್ಧರಿಸಿ ಈ ಕಾನ್ಸೆಪ್ಟ್ ಅನ್ನ ಹುಟ್ಟುಹಾಕಿದ್ರು. ಸದ್ಯ ಬೆಂಗಳೂರಿನ ಆಯ್ಧ ನಗರಗಳಲ್ಲಿ ಫ್ರೆಶ್ ವರ್ಲ್ಡ್​​ ಗಾಡಿಗಳು ಮನೆ ಮುಂದಕ್ಕೆ ತರಕಾರಿಗಳನ್ನ ಕೊಂಡೊಯ್ಯುತ್ತಿದೆ. ಇಲ್ಲಿ ತರಕಾರಿ ಕೊಳ್ಳಲೇಬೇಕು ಅನ್ನುವ ಒತ್ತಾಯ ಇಲ್ಲ. ನಿಮಗೆ ಬೇಕು ಅನ್ನಿಸಿದ್ರೆ ಮಾತ್ರ ತೆಗೆದುಕೊಳ್ಳಬಹುದು.

image


ಪ್ರತಿನಿತ್ಯ 25ಕ್ಕೂ ಹೆಚ್ಚು ವಿಧವಾದ ತರಕಾರಿಗಳು,ಹತ್ತು ರೀತಿಯ ಹಣ್ಣುಗಳು ಮತ್ತು 10 ರೀತಿಯ ಸೊಪ್ಪುಗಳನ್ನ ಫ್ರೆಶ್ ವರ್ಲ್ಡ್​​ ಗಾಡಿಗಳು ಹೊತ್ತು ತರುತ್ತವೆ. ಸದ್ಯ ಪ್ರತಿ ನಗರದಲ್ಲಿ 20ಗಾಡಿಗಳು ಓಡಾಡುತ್ತಿದ್ದು ಅದರಲ್ಲಿರುವ ಡ್ರೈವರ್​ಗಳಿಗೆ ಗ್ರಾಹಕರ ಬಳಿ ಹೇಗೆ ನಡೆದುಕೊಳ್ಳಬೇಕು ಅನ್ನುವುದರ ಬಗ್ಗೆ ಟ್ರೈನಿಂಗ್ ನೀಡಲಾಗುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ನಗರದ ಹೈಫೈ ಜೀವನಕ್ಕೆ ಹತ್ತಿರವಾಗದೆ ಹಿಂದಿನಂತೆಯೇ ನಮ್ಮ ಆಯ್ಕೆ ನೇರವಾಗಿರಬೇಕು ಅನ್ನುವವರಿಗೆ ಫ್ರೆಶ್​​ವರ್ಲ್ಡ್​​​ ಬೆಸ್ಟ್ ಆಪ್ಶನ್​​ ಅಂದ್ರೆ ತಪ್ಪಿಲ್ಲ.

ಇದನ್ನು ಓದಿ:

1. ಝೆಬುಗೇಮ್ಸ್ ಯಶಸ್ಸಿನ ಕಥೆ ಹಾಗೂ ಮಕ್ಕಳ ಸ್ಫೂರ್ತಿ

2. ಸ್ಮಾರ್ಟ್​ಫೋನ್​ನಲ್ಲೇ ಆರೋಗ್ಯ ಸಮಸ್ಯೆಗೆ ಉತ್ತರ- ಇದು "ಡಾಕ್ಟರ್ಸ್​ ಲೈವ್​" ಮ್ಯಾಜಿಕ್​

3. ಲಿಝಿಯ ಹೋರಾಟಕ್ಕೆ ಹೆದರಿ ಓಡಿತು ದುರಾದೃಷ್ಟ