ಉರ್ದು ಭಾಷೆಯ ಸೌಂದರ್ಯ – ಶ್ರೀಮಂತಿಕೆ ಹೆಚ್ಚಿಸಿದ ರೆಹ್ಕ್ತಾ ಫೌಂಡೇಷನ್..

ಟೀಮ್​ ವೈ.ಎಸ್​. ಕನ್ನಡ

0

ಪ್ರತೀ ಭಾಷೆಗೂ ತನ್ನದೇ ಆದ ಅಸ್ಥಿತ್ವ ಹಾಗೂ ಮಹತ್ವವಿರುತ್ತದೆ. ಪ್ರತೀ ಭಾಷೆಯಲ್ಲೂ ಅದರದ್ದೇ ಆದ ಸೊಗಡು ಹಾಗೂ ಇತಿಹಾಸವಿರುತ್ತದೆ. ಇನ್ನು ಭಾಷೆಗಳೇ ಇಲ್ಲದ ನಮ್ಮ ಬದುಕನ್ನ ಊಹಿಸಿಕೊಳ್ಳೋದೂ ಸಾಧ್ಯವಿಲ್ಲ. ಭಾಷೆ ಕೇವಲ ಸಂವಹನವಷ್ಟೇ ಅಲ್ಲ.. ಅದೊಂದು ಅಭಿವ್ಯಕ್ತಿ ಮಾಧ್ಯಮ ಅನ್ನೋದ್ರಲ್ಲಿ ಅನುಮಾನವಿಲ್ಲ. ಇನ್ನು ಭಾಷೆ ಒಂದು ಜನಾಂಗದ, ಪ್ರಾಂತ್ಯದ ಅಥವಾ ಒಂದು ಸಂಸ್ಕೃತಿಯ ಬಿಂಬವಾಗಿರುತ್ತದೆ. ಹೀಗಾಗೆ ನಮ್ಮ ನಿಮ್ಮ ನಡುವೆ ಭಾಷೆಗೆ ಇಷ್ಟೊಂದು ಮಹತ್ವ.. ಅಷ್ಟೊಂದು ಸೆಳೆತ. ಹೀಗೆ ಹಳೆಯ ಭಾಷೆಯಗಳ ಸಾಲಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವುದು ಉರ್ದು. 800 ವರ್ಷಗಳ ಇತಿಹಾಸ ಹೊಂದಿರುವ ಉರ್ದು ಶ್ರೀಮಂತಿಕೆ ಹಾಗೂ ಆಳವನ್ನ ಹೊಂದಿರುವುದು ವಿಶೇಷ. ಇನ್ನು ಉರ್ದುವನ್ನ ಅತಿಯಾಗಿ ಪ್ರೀತಿಸುವರು, ಉರ್ದುವಿನಲ್ಲೇ ವಿಶೇಷವಾದುದನ್ನ ಸಾಧಿಸಿದವರನ್ನೂ ಕಾಣಬಹುದು. ಅಲ್ಲದೆ ಉರ್ದು ಈಗ ಭಾರತದ ಪ್ರಮುಖ ಭಾಷೆಗಳ ಸಾಲಲ್ಲಿ ಗುರುತಿಸಿಕೊಳ್ಳುತ್ತಿದೆ. ಜಾಗತೀಕರಣಗೊಳ್ಳುವತ್ತಲೂ ಹೆಜ್ಜೆ ಇಟ್ಟಿರುವ ಉರ್ದು ತನ್ನ ವ್ಯಾಪ್ತಿಯನ್ನ ವಿಸ್ತರಿಸುತ್ತಿದೆ. ಮಾರ್ಕೆಟ್, ಶಾಪಿಂಗ್ ಸೆಂಟರ್, ಮಾಲ್ ಮತ್ತು ಟೆಕ್ನಾಲಜಿಗಳಲ್ಲಿ ಇಂಗ್ಲೀಷ್ ಬಳಕೆಯಾಗುತ್ತಿರುವಂತೆ ಕೆಲವೆಡೆ ಉರ್ದು ಹೆಚ್ಚು ಚಾಲ್ತಿಗೆ ಬರ್ತಿದೆ.

ಇನ್ನು ಉರ್ದು ಭಾಷೆಯ ಸಾಹಿತ್ಯವೂ ಶ್ರೀಮಂತವಾಗಿದೆ. ಇಲ್ಲಿ ಓದುಗರು ಹಾಗೂ ಬರಹಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಉರ್ದು ಭಾಷೆಯ ಕವನಗಳನ್ನ ಮೆಚ್ಚಿಕೊಳ್ಳುವವರಿಗೇನೂ ಇಲ್ಲಿ ಕಮ್ಮಿ ಇಲ್ಲ. ಇದೀಗ ಉರ್ದು ಕವನಗಳಿಗಾಗೇ ಒಂದು ವೇದಿಕೆ ಸೃಷ್ಠಿಯಾಗಿದೆ. ಅದುವೇ ರೆಹ್ಕ್ತಾ ಫೌಂಡೇಷನ್. ರೆಹ್ಕ್ತಾ ಫೌಂಡೇಷನ್ ನಲ್ಲಿ 1,700 ಕವಿಗಳು, 35 ಸಾವಿರ ಘಜಲ್ಸ್ , ನಸಮ್ಸ್ ಮತ್ತು ಶಾಹಿರಿಗಲಿರೋದು ವಿಶೇಷ. ಇನ್ನು ರೋಮನ್, ದೇವನಾಗರಿ ಹಾಗೂ ಉರ್ದು ಸ್ಕ್ರಿಪ್ಟ್ ಗಳನ್ನ ರೆಹ್ಕ್ತಾ ಫೌಂಡೇಷನ್ ಆನ್ ಲೈನ್ ನಲ್ಲೂ ಸರಬರಾಜು ಮಾಡುತ್ತಿದೆ. 4,300 ಆಡಿಯೋ ಕವಿತೆಗಳು, 4,100 ವಿಡಿಯೋಗಳು ಮತ್ತು 17 ಸಾವಿರ ಈ ಬುಕ್ ಗಳು ಇಲ್ಲಿವೆ. ಹೀಗಾಗಿ ಉರ್ದು ಭಾಷೆಯಲ್ಲಿ ಅತೀ ದೊಡ್ಡ ಭಾಷೆಯ ಹಬ್ಬ ನಡೆಯುತ್ತಿದೆ.

ಇದನ್ನು ಓದಿ: ರಾಜಸ್ಥಾನಿ ಪುಲ್ಕಾಸ್​​ ಟೇಸ್ಟ್​​ ನೋಡಿ.. ಅಮ್ಮ ಮಗಳ ಕಥೆ ಕೇಳಿ..!

ರೆಹ್ಕ್ತಾ ಫೌಂಡೇಷನ್ ಗ್ರೂಪ್ ಎಲ್ಲಾ ವಯೋಮಿತಿ ಸದಸ್ಯರನ್ನ ಒಳಗೊಂಡಿರೋದು ಇದ್ರ ಹೆಚ್ಚುಗಾರಿಕೆ. ಅದ್ರಲ್ಲೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೂ ಇದರತ್ತ ಆಕರ್ಷಿತರಾಗಿದ್ದಾರೆ. ಪ್ರೇಮಿಗಳಿಗಂತೂ ತಮ್ಮ ಭಾವನೆಗಳನ್ನ ಅಭಿವ್ಯಕ್ತಿ ಪಡಿಸಲು ಉರ್ದು ಮುಖ್ಯ ವೇದಿಕೆಯಾಗಿರೋದು ವಿಶೇಷ. ಜೊತೆಗೆ ಉರ್ದುವನ್ನ ತಿರಸ್ಕರಿಸಿದ್ದವರೂ ಕೂಡ ಇದೀಗ ಈ ಭಾಷೆಯನ್ನ ಪ್ರೀತಿಸುತ್ತಾ ಇದ್ರ ಸಾಹಿತ್ಯದ ಸವಿಯನ್ನ ಸವಿಯಲು ಮುಂದಾಗುತ್ತಿದ್ದಾರೆ. ಈ ಎಲ್ಲಾ ಯಶಸ್ಸಿನ ಹಿಂದೆ ಇರುವ ಏಕೈಕ ವ್ಯಕ್ತಿ ಸಂಜೀವ್ ಸರಾಫ್. ಸಣ್ಣ ಕವಿತೆಗಳಲ್ಲಿ ಆಸಕ್ತಿ ಹೊಂದಿದ್ದ ಸಂಜೀವ್ ಇದೀಗ ಇದಕ್ಕಾಗೇ ಕಲ್ಪಿಸಿರೋ ಅಪೂರ್ವ ವೇದಿಕೆ ರೆಹ್ಕ್ತಾ ಫೌಂಡೇಷನ್.

ಬ್ಯುಸಿನೆಸ್ ಮೆನ್ ಆಗಿರುವ ಸಂಜೀವ್ ಸರಾಫ್ ಕೇವಲ ಒಂದೇ ಕ್ಷೇತ್ರದತ್ತ ಗಮನಕೊಟ್ಟವರಲ್ಲ. ತಮ್ಮ ಹೆಸರು ಹಾಗೂ ಬ್ರಾಂಡ್ ನ ಪ್ರಸಿದ್ಧಿಗಾಗಿ ಸದಾ ಯೋಚಿಸುತ್ತಿದ್ದವರು. ಅಲ್ಲದೆ ಹೊಸತನವನ್ನ ಸದಾ ಕಲಿಯಲು ಇಷ್ಟಪಡುತ್ತಿದ್ದ ಸಂಜೀವ್ ಭಾಷೆಯೊಳಗಿನ ಶ್ರೀಮಂತಿಕೆಯನ್ನ ಅರ್ಥಮಾಡಿಕೊಳ್ಳಲು ಸದಾ ಯತ್ನಿಸುತ್ತಾರೆ. “ ನಾನು ಪ್ಲೊಪ್ಲೆಕ್ಸ್ ಶುರುಮಾಡಿದಾಗ ಹೊಸತನದ ಬಗ್ಗೆ ಯೋಚಿಸುತ್ತಿದೆ. ಏನನ್ನಾದ್ರೂ ಹೊಸತನವನನ್ನ ಅರ್ಥಗರ್ಭಿತವಾಗಿ ಶುರುಮಾಡಲು ಯೋಚಿಸುತ್ತಿದ್ದೆ. ನನಗೆ ಚಿಕ್ಕಂದಿನಿಂದಲೂ ಉರ್ದು ಭಾಷೆ ಮೇಲೆ ಒಲವಿತ್ತು. ಆದ್ರೆ ಅದರೊಂದಿಗೆ ಭಾವನೊತ್ಮಕ ಸಂಬಂಧ ಬೆಳೆಸಿಕೊಳ್ಳುವುದು ಹಾಗೂ ಅದನ್ನ ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಹಾಗಂತ ಅದನ್ನ ಬಿಡಲೂ ಸಿದ್ಧನಿರಲಿಲ್ಲ. ಭಾರತದಲ್ಲಿ ನನಗೆ ಉರ್ದುವನ್ನ ಬೆಳೆಸಬೇಕು ಅನ್ನೋ ಆಕಾಂಕ್ಷೆ ಇತ್ತು. ಹೀಗಾಗಿ ರೆಹ್ಕ್ತಾ ಫೌಂಡೇಷನ್ ಶುರುಮಾಡಿದೆ ” ಅಂತ ಸಂಜೀವ್ ತಾವು ಹುಟ್ಟು ಹಾಕಿದ ಫೌಂಡೇಶನ್ ಬಗ್ಗೆ ಹೇಳುತ್ತಾರೆ. ಅವರ ಈ ಪ್ರಯತ್ನಕ್ಕೆ ಗೆಳೆಯರ ಸಾಥ್ ಕೂಡ ಸಿಕ್ಕಿದೆ.

ರೆಹ್ಕ್ತಾ ಫೌಂಡೇನ್ ನಲ್ಲಿ 17 ಮತ್ತು 18ನೇ ಶತಮಾನದಲ್ಲಿ ಇದ್ದ ಉರ್ದುವಿನ ಶೈಲಿಯನ್ನ ತಿಳಿಸಲಾಗುತ್ತಿದೆ. ಇನ್ನು ರೆಹ್ಕ್ತಾಅಂದ್ರೆ ಮಿಶ್ರಣ ಅಂತ ಅರ್ಥ. ಇದ್ರ ಬಗ್ಗೆ ಸಂಪೂರ್ಣವಾಗಿ ಅಭ್ಯಾಸ ನಡೆಸಿರುವ ಸಂಜೀವ್ ಸಾಹಿತ್ಯ ಹಾಗೂ ಬರವಣಿಗೆಯನ್ನ ಇನ್ನಷ್ಟು ಗಟ್ಟಿಗೊಳಿಸಲು ಯತ್ನಿಸುತ್ತಿದ್ದಾರೆ. ಅಲ್ಲದೆ ಮೇಧಾವಿಗಳು, ಪ್ರೊಫೆಸರ್ ಗಳು, ಬರಹಗಾರರ ನೆರವಿನಿಂದ ಪರಿಶ್ರಮ ಪಡುತ್ತಿದ್ದಾರೆ. ಅಲ್ಲದೆ ಉರ್ದು ಭಾಷೆಯಲ್ಲೇ ಸಂವಹನ ಹಾಗೂ ಚರ್ಚಾಕೂಟಗಳನ್ನ ನಡೆಸುವ ಮೂಲಕ ಭಾಷೆಗೆ ಇನ್ನಷ್ಟು ಬಲ ತುಂಬುತ್ತಿದ್ದಾರೆ. ಇನ್ನು ಇವೆಲ್ಲಾ ಅವತರಣಿಕೆಗಳನ್ನ ಆಡಿಯೋ ಹಾಗೂ ವಿಡಿಯೋಗಳನ್ನ ಹೊರಬಿಡುತ್ತಿರುವುದರಿಂದ ರೆಹ್ಕ್ತಾ ಫೌಂಡೇಷನ್ ಇನ್ನಷ್ಟು ಪ್ರಭಾವಿಯಾಗಿ ಬೆಳೆಯುತ್ತಿದೆ.

ಸಂಜೀವ್ ಹಾಗೂ ಅವರ ತಂಡ ಉರ್ದು ಭಾಷೆಯಲ್ಲೇ ಹಬ್ಬಗಳನ್ನ, ಪ್ಯಾನಲ್ ಡಿಸ್ಕಷನ್ ಗಳನ್ನ ಹಾಗೂ ಮುಖಾಮುಖಿಗಳನ್ನ ನಡೆಸುತ್ತಿದೆ. ಈ ಮೂಲಕ ರೆಹ್ಕ್ತಾ ಭರ್ಜರಿಯಾಗಿ ಕಾರ್ಯಚಟುವಟಿಕೆಗೆ ಇಳಿದಿದೆ. ಇನ್ನು ಇದ್ರ ಫಲವೆಂಬುವಂತೆ 2015ರಲ್ಲಿ 15 ಸಾವಿರ ಉರ್ದು ಪ್ರೇಮಿಗಳನ್ನ ಸೆಳೆಯೋದ್ರಲ್ಲಿ ಯಶಸ್ಸು ಕಂಡಿದ್ದಾರೆ ಸಂಜೀವ್ . ಅಲ್ಲದೆ 60ಕ್ಕೂ ಹೆಚ್ಚು ಕವಿಗಳು, ಆರ್ಟಿಸ್ಟ್ ಗಳು, ಕಾದಂಬರಿಕಾರರು ಹಾಗೂ ಪತ್ರಕರ್ತರ ಮೆಚ್ಚುಗೆಗೂ ಪಾತ್ರವಾಗಿದ್ದಾರೆ. ಹೀಗೆ ಭಾಷೆಯನ್ನ ಕೇವಲ ಪ್ರೀತಿಸದೆ ಅದನ್ನ ಬೆಳೆಸುವತ್ತಲೂ ಗಮನ ಕೊಟ್ಟಿರುವ ಸಂಜೀನ್ ರೆಹ್ಕ್ತಾ ಫೌಂಡೇಷನ್ ನಿಂದಾಗಿ ವಿಶೇಷವಾಗಿ ಗುರುತಿಸಿಕೊಳ್ಳುತ್ತಾರೆ.

ಲೇಖನ – ಸೌರವ್ ರಾಯ್

ಅನುವಾದ – ಸ್ವಾತಿ, ಉಜಿರೆ

ಇದನ್ನು ಓದಿ

1. ಭವಿಷ್ಯದ ಭಾರತದಲ್ಲಿ ಇ - ಕಾಮರ್ಸ್ ಉದ್ಯಮದ ಕ್ರಾಂತಿ.. !

2. ಬಂದಿದೆ ಪ್ಲಾಸ್ಟಿಕ್ ಕರಗಿಸುವ ಬ್ಯಾಕ್ಟೀರಿಯಾ..!

3. ಡಾಮಿನೋಸ್ ಸ್ಟೈಲ್ ನಲ್ಲಿ ದೇಸೀ ಫುಡ್ : ಕ್ವಿಕ್ ಸರ್ವೀಸ್ ರೆಸ್ಟೋರೆಂಟ್ ಬ್ಯುಸಿನೆಸ್ ನಲ್ಲಿ ನಲ್ಲಿ ಡಮ್ಮಾ ಡಮ್ ಹೊಸ ಹೆಜ್ಜೆ.

Related Stories