ವೂಪ್ಲರ್‍ನಿಂದ `ಹೈಪೋ ಡಿಸ್ಕವರಿ' ಬಿಡುಗಡೆ : ಲೋಕಲ್ ಕಾಮರ್ಸ್ ರಾಕಿಂಗ್!

ಟೀಮ್​ ವೈ.ಎಸ್​. ಕನ್ನಡ

0


ಭಾರತೀಯ ರೀಟೇಲ್ ಉದ್ಯಮವು ಪಸ್ತುತ 490 ಬಿಲಿಯನ್ ಯುಎಸ್ ಡಾಲರ್‍ನಷ್ಟಿದೆ. ಆದರೆ ಇದರಲ್ಲಿ ಕೇವಲ ಶೇ.10 ಗ್ರಾಹಕರು ಆನ್‍ಲೈನ್​ನಲ್ಲಿ ​ ವಸ್ತುಗಳನ್ನು ಖರೀದಿಸಿದರೆ, ಶೇ.90 ಮಂದಿ ತಮ್ಮ ಹಣ ಮತ್ತು ಸಮಯವನ್ನು ಆಫ್‍ಲೈನ್ ಖರೀದಿಯಲ್ಲಿ ವ್ಯಯಿಸುತ್ತಾರೆ. ಭಾರತದ ಸಂಸ್ಥೆಗಳಾದ ಫ್ಲಿಪ್​ಕಾರ್ಟ್​, ಸ್ನ್ಯಾಪ್​ಡೀಲ್​, ಬಿಗ್‍ಬಾಸ್ಕೆಟ್ ಮುಂತಾದವುಗಳು 800 ಬಿಲಿಯನ್ ಡಾಲರ್‍ಗಳಿಗೂ ಹೆಚ್ಚು ಬಂಡವಾಳ ಹೂಡಿದ್ದು, ವಿವಿಧ ವರ್ಗಗಳಾದ ಎಫ್‍ಎಂಸಿಜಿ, ಫ್ಯಾಷನ್, ಗ್ರಾಸರಿ ಇ-ಟೇಲಿಂಗ್ ಮುಂತಾದವುಗಳ ಆನ್‍ಲೈನ್ ಮಾರಾಟದ ಬಗ್ಗೆ ಹೆಚ್ಚು ಗಮನ ಹೊಂದಿದೆ. ಹಾಗೆಯೇ, ಆಫ್‍ಲೈನ್ ರೀಟೇಲ್‍ನಲ್ಲಿ ಬಹಳಷ್ಟು ಅವಕಾಶಗಳಿದ್ದರೂ ಅಲ್ಲಿ ಸಮಸ್ಯೆಗಳು ಬಗೆಹರಿಯಬೇಕಿವೆ.

ಆಫ್‍ಲೈನ್ ರೀಟೇಲ್‍ನ ಸಮಸ್ಯೆಗಳು ಮತ್ತು ಸಲ್ಯೂಷನ್ಸ್

ಬೆಂಗಳೂರು ಮೂಲದ ವೂಪ್ಲರ್ ಸಂಸ್ಥೆಯು 2011ರಲ್ಲಿ ನಾಲ್ವರು ಮ್ಯಾಕ್‍ಫೀ ಮಾಜಿ ನೌಕರರಿಂದ ಆರಂಭವಾಯಿತು. ಇವರು ಜನರು ತಮ್ಮ ಸ್ನೇಹಿತರ ಉತ್ತಮ ಶಿಫಾರಸುಗಳು ಹಾಗೂ ಆ್ಯಪ್‍ಗಳು ಹಾಗೂ ಸಾಮಾಜಿಕ ಪ್ರಭಾವಗಳ ಮೂಲಕ ತಮ್ಮ ಸಮೀಪದ ಅಂಗಡಿಗಳಲ್ಲಿ ಹೊಸ ಉತ್ಪನ್ನಗಳನ್ನು ತಿಳಿಯಲು ಸಹಾಯ ಮಾಡಿದರು. ಅಲ್ಲದೆ, ವೂಪ್ಲರ್​​, ಈ ರೀತಿಯ ಬಿಸಿನೆಸ್‍ಗೆ ಸಹಾಯ ಮಾಡುವ ಜೊತೆಗೆ ನಂಬಲು ಅರ್ಹವಾದ ಆನ್‍ಲೈನ್ ಇರುವಿಕೆ ಮತ್ತು ಮೌತ್ ಮಾರ್ಕೆಟಿಂಗ್ ಮೂಲಕ ಹೊಸ ಗ್ರಾಹಕರನ್ನು ತಲುಪಲು ಉತ್ತಮ ವೇದಿಕೆ ಕಲ್ಪಿಸಿತು. ಹಾಗೇ, ವೂಪ್ಲರ್, ಸರಿಯಾದ ಸ್ಥಳಕ್ಕೆ ಮತ್ತು ಸಮಯಕ್ಕೆ ಸರಿಯಾಗಿ ಆದಷ್ಟೂ ಸಾಮೀಪ್ಯತೆಯುಳ್ಳ ಉತ್ಪನ್ನಗಳನ್ನು ಒದಗಿಸುತ್ತಿದೆ.

ಹೈಪರ್ ಲೋಕಲ್ ಡಿಸ್ಕವರಿ

ವೂಪ್ಲರ್, ತನ್ನ ಆ್ಯಂಡ್ರಾಯ್ಡ್ ಆ್ಯಪ್‍ನಲ್ಲಿ `ನಿಯರ್‍ಬೈ' ಎಂಬ ಹೊಸ ಅಂಶವನ್ನು ಸೇರ್ಪಡೆ ಮಾಡಿದೆ. ಇದು ಬಳಕೆದಾರರು ವಸ್ತುಗಳ ಖರೀದಿಗೆ ಮತ್ತು ತಿನಿಸುಗಳ ಸೇವನೆಗೆ ತಮ್ಮ ಹತ್ತಿರದಲ್ಲೇ ಇರುವ ಉತ್ತಮ ಅಂಗಡಿಗಳನ್ನು ಪತ್ತೆಮಾಡಲು ಸಹಕರಿಸುತ್ತದೆ. ಈ ಆ್ಯಪ್‍ನ ನಿಯರ್‍ಬೈ ಫೀಚರ್ ಬಳಕೆದಾರರು ತಮ್ಮ ಸ್ನೇಹಿತರು, ಖರೀದಿದಾರರ ಮಾಹಿತಿಯ ಆಧಾರದ ಮೇಲೆ ತಮ್ಮ ಹತ್ತಿರದ ಅಂಗಡಿಗಳಲ್ಲಿ ದೊರೆಯುವ ಉತ್ತಮ ಉತ್ಪನ್ನಗಳ ಬಗ್ಗೆ ತಿಳಿಸುತ್ತದೆ. ಒಂದು ಸರ್ಚ್ ಆಪ್ಷನ್ ಮೂಲಕ ಬರುವ ಈ ಫೀಚರ್, ಬಳಕೆದಾರರು ತಮ್ಮ ಆಯ್ಕೆಗೆ ತಕ್ಕಂತೆ ನಿಗದಿತ ಉತ್ಪನ್ನಗಳನ್ನು ವೀಕ್ಷಿಸಲು ಅವಕಾಶ ನೀಡುತ್ತದೆ. ವಸ್ತುಗಳನ್ನು ಖರೀದಿಸುವಾಗ ಮತ್ತು ಹೊರಗೆ ತಿನ್ನುವಾಗ `ಏನು, ಎಲ್ಲಿ ಮತ್ತು ಹೇಗೆ' ಎನ್ನು ವ ಅಂಶಗಳ ಬಗ್ಗೆ ಬಳಕೆದಾರರು ನಿರ್ಧರಿಸುವಲ್ಲಿ ಈ ಫೀಚರ್ ನಿರ್ಣಾಯಕ ಪಾತ್ರ ವಹಿಸುತ್ತದೆ.

`ಹೈಪರ್ ಲೋಕಲ್ ಡಿಸ್ಕವರಿ'

ಉದಾಹರಣೆಗೆ ಹೇಳುವುದಾದರೆ, ಒಬ್ಬ ಬಳಕೆದಾರ ಒಂದು ನಿರ್ದಿಷ್ಟ ಅಳತೆಯ ಹೀಲ್ಡ್ಸ್​ವುಳ್ಳ ಶೂ ಹುಡುಕುತ್ತಿದ್ದಾನೆ ಎಂದಾದರೆ, ವೂಪ್ಲರ್, ತನ್ನ ಸರ್ಚ್‍ನಲ್ಲಿ 2 ಕಿ.ಮೀ ವ್ಯಾಪ್ತಿಯಲ್ಲಿ ವ್ಯಾಪಾರಿಗಳು ಶಿಫಾರಸು ಮಾಡಿದ ಅತ್ತುತ್ತಮ ಹೀಲ್ಡ್ ಶೂಗಳ ಬಗ್ಗೆ ತಿಳಿಸುತ್ತದೆ. ಒಂದು ವೇಳೆ ಬಳಕೆದಾರ ತನಗೆ ಆ ಶೂ ಸರಿಯಾಗಿ ಹೊಂದುತ್ತದೆ ಎಂದಾದರೆ ಆ ಅಂಗಡಿಯನ್ನು ಫೋನ್, ಮೆಸೇಜ್ ಮತ್ತು ಇ-ಮೇಲ್ ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಲೂ ವೂಪ್ಲರ್​ ಸಹಾಯ ಮಾಡುತ್ತದೆ.

ಈ ಆ್ಯಪ್‍ನಲ್ಲಿ, ಹೈಪರ್‍ಲೋಕಲ್ ಡಿಸ್ಕವರಿಯನ್ನು, ಸಕ್ರಿಯಗೊಳಿಸುವುದರಿಂದ ಬೆರಳತುದಿಯಲ್ಲೇ ತಮಗೆ ಬೇಕಾದ ಅಗತ್ಯತೆಗಳು ಹಾಗೂ ಫ್ಯೂಚರ್ ಶಾಪಿಂಗ್‍ನ ಒಂದು ಚಿತ್ರಣವನ್ನು ತೋರಿಸುತ್ತದೆ. ಒಂದು ನಕ್ಷೆಯ ಮೇಲೆ ಈ ಫೀಚರ್‍ನ್ನು ಬಿಂಬಿಸಲಾಗಿದ್ದು, ಪ್ರತಿಯೊಂದು ಶಿಫಾರಸುಗಳನ್ನು ಹುಡುಕಲು ಸಹಾಯಮಾಡುತ್ತದೆ. ಈ ಆ್ಯಪ್‍ನಲ್ಲಿ ಯಾವುದೇ ಮಾಹಿತಿ ಹಾಗೂ ಪಶ್ನೆಗಳನ್ನು ಕೇಳುವುದನ್ನು ನಿಲ್ಲಿಸಿದ್ದಾರೆ ಎಂದರೆ, ಹತ್ತಿರದ ಡೀಲ್‍ಗಳು, ವಸ್ತುಗಳು ಸಂಪೂರ್ಣವಾಗಿ ಮಾರಾಟವಾಗುತ್ತಿವೆ ಎಂದರ್ಥ.

ಹೈಪರ್ ಲೋಕಲ್ ಒಂದು ದೊಡ್ಡ ಮಾರುಕಟ್ಟೆ ಎಂದಿರುವ ವೂಪ್ಲರ್ ಸಹಸಂಸ್ಥಾಪಕ ಅಂಕಿತ್ ಸಬರ್‍ವಾಲ್ ಅವರು, "ಈ ಫೀಚರ್ ಜನರು ಒಂದು ಉತ್ಪನ್ನವನ್ನು ಡಿಸ್ಕವರ್ ಮಾಡುವ ರೀತಿಯನ್ನು ಬದಲಾಯಿಸುತ್ತದೆ ಎಂದು ನಾವು ನಂಬಿದ್ದೇವೆ. ಪ್ರಸ್ತುತದಲ್ಲಿ ಇದಕ್ಕೆ ಸರಿಸಮನಾದ ಇಂಡಸ್ಟ್ರಿ ಮತ್ತೊಂದಿಲ್ಲ" ಎಂದಿದ್ದಾರೆ.

ವೂಪ್ಲರ್​ `ನಿಯರ್‍ಬೈ' ಫೀಚರ್ ತನ್ನ ಆ್ಯಂಡ್ರಾಯ್ಡ್ ಆ್ಯಪ್‍ನಲ್ಲಿ ಮಾತ್ರ ಲಭ್ಯವಿದ್ದು, ಸದ್ಯದಲ್ಲೇ ಇದು ಐಒಎಸ್ ಮತ್ತು ವಿಂಡೋಸ್ ಫೋನ್ ಆ್ಯಪ್‍ನಲ್ಲೂ ಲಭ್ಯವಾಗಲಿದೆ.

ಭಾರತದಲ್ಲಿ ಇ-ಕಾಮರ್ಸ್ ನಂತರದ ಬಹು ದೊಡ್ಡ ವಿಷಯ ಲೋಕಲ್ ಕಾಮರ್ಸ್ ಆಗಬಹುದೇ? ನೀವೇನು ಹೇಳುತ್ತೀರಿ..?

ವೂಫ್ಲರ್‍ನ ನಿಯರ್‍ಬೈ ಫೀಚರ್ ಟ್ರೈ ಮಾಡಿ ಹಾಗೂ ನಿಮ್ಮ ಫೀಡ್‍ಬ್ಯಾಕನ್ನು ನಮ್ಮೊಂದಿಗೆ ಹಂಚಿಕೊಳ್ಳಿ.


ಲೇಖಕರು: ಇಳಿಯನ್​ ಭಾಸ್ಕರ್​

ಅನುವಾದಕರು: ಚೈತ್ರ ಎನ್​.