3 ಗಂಟೆ ಮುಂಚಿತವಾಗಿ ಬುಕ್ ಮಾಡಿ- ಮನೆ ಬಾಗಿಲಿಗೆ ಬರಲಿದೆ ಫ್ರೆಶ್​ ಹಣ್ಣು ತರಕಾರಿ..!

ಟೀಮ್​ ವೈ.ಎಸ್​.ಕನ್ನಡ

1

ಜಗತ್ತು ಬದಲಾಗುತ್ತಿದೆ. ಬೆರಳಂಚಿನಲ್ಲಿ ಎಲ್ಲಾ ವ್ಯವಹಾರಗಳು ನಡೆದು ಬಿಡುತ್ತಿದೆ. ಡಿಜಿಟಲ್​ ಕ್ರಾಂತಿ ಎಲ್ಲವನ್ನೂ ಬದಲಿಸಿದೆ. ಆನ್​ಲೈನ್​ ಶಾಪಿಂಗ್​ ತಾಣಗಳು ಎಲ್ಲರಿಗೂ ಪರಿಚಿತವಾಗುತ್ತಿವೆ. ಇ-ಕಾಮರ್ಸ್​ ಕ್ಷೇತ್ರದ ಅಭಿವೃದ್ಧಿ ಗ್ರಾಹಕರ ಮತ್ತು ಉದ್ಯಮಿಗಳ ನಡುವಿನ ಅಂತರವನ್ನು ಕಡಿಮೆ ಮಾಡಿದೆ. ಅಷ್ಟೇ ಅಲ್ಲ ಗ್ರಾಹಕರ ಖರೀದಿ ಆಸೆಯನ್ನು ತುಂಬಾ ಸುಲಭ ಮಾಡಿ ಬಿಟ್ಟಿದೆ. ಮಾರಾಟಗಾರರಿಗೂ ಆನ್​ಲೈನ್​ ಲಾಭದಾಯಕ ಕ್ಷೇತ್ರವಾಗಿ ಬದಲಾಗುತ್ತಿದೆ.

ಇಲ್ಲಿ ತನಕ ಬಟ್ಟೆ, ಎಲೆಕ್ಟ್ರಾನಿಕ್ಸ್​ ಐಟಮ್​ಗಳು ಸೇರಿದಂತೆ ಅನೇಕ ವಸ್ತುಗಳು ಮನೆಬಾಗಿಲಿಗೆ ಬರುತ್ತಿದ್ದವು. ಆದ್ರೆ ಈಗ ಅದಕ್ಕೆ ನ್ಮ​ತ್ತೊಂದು ಸೇರ್ಪಡೆಯಾಗಿದೆ. ಇನ್ನು ಮುಂದೆ ಹಾಪ್‍ಕಾಮ್ಸ್ ಮುಂದೆ ಹೋಗಿ ಕ್ಯೂ ನಿಂತು ತರಕಾರಿ ಕೊಳ್ಳುವ ಟೆನ್ಷ ಇಲ್ಲ. ಬದಲಿಗೆ ಆನ್‍ಲೈನ್‍ನಲ್ಲಿ ಬುಕ್ ಮಾಡಿದರೆ ನಿಮ್ಮ ಮನೆ ಬಾಗಿಲಿಗೆ ತರಕಾರಿಯನ್ನು ತಲುಪಿಸುವ ವ್ಯವಸ್ಥೆಬಂದಿದೆ. ಗ್ರಾಹಕರು ಇಂದಿನಿಂದ ತರಕಾರಿ, ಸೊಪ್ಪು ಹಾಗೂ ಹಣ್ಣುಗಳನ್ನು ಎಲ್ಲವನ್ನು ಆನ್‍ಲೈನ್ ಮೂಲಕ ಖರೀದಿಸಬಹುದು. ಹಣ್ಣು-ತರಕಾರಿಗಳನ್ನು ಹೊತ್ತೊಯ್ಯುವ ವಾಹನವನ್ನು ಹಾಪ್‍ಕಾಮ್ಸ್ ವತಿಯಿಂದ ವ್ಯವಸ್ಥೆ ಮಾಡಲಾಗಿದೆ.

ಮೂರು ಗಂಟೆಯಲ್ಲಿ ತರಕಾರಿ

ಕೇವಲ ಮೂರು ಗಂಟೆ ಮೊದಲು ತಮಗೆ ಬೇಕಾದ ಪದಾರ್ಥಗಳನ್ನು ಆನ್‍ಲೈನ್‍ನಲ್ಲಿ ಬುಕ್ ಮಾಡಿದರೆ, ಗ್ರಾಹಕರ ಮನೆ ಬಾಗಿಲಿಗೆ ತಾಜಾ ಹಣ್ಣು, ತರಕಾರಿಗಳು ಪೂರೈಕೆಯಾಗಲಿವೆ. ಜಯನಗರ, ಜೆ.ಪಿ.ನಗರ, ಕೋರಮಂಗಲ, ಇಂದಿರಾನಗರ ಮತ್ತು ಬಿ.ಟಿ.ಎಂ. ಲೇಔಟ್‍ಗಳಲ್ಲಿ ಆನ್‍ಲೈನ್ ಸೇವೆ ಜಾರಿಗೆ ತರಲಾಗಿದೆ. ಪ್ರತಿ ಬಡಾವಣೆಗೆ ಮೂರರಿಂದ ಐದು ಮಳಿಗೆಗಳಲ್ಲಿ ಈ ಸೇವೆ ಲಭ್ಯವಿರಲಿದೆ. ಆದರೆ ಆ ಮಳಿಗೆಯಿಂದ ಗ್ರಾಹಕರ ವಿಳಾಸವು ಕೇವಲ 3 ಕಿಲೋಮೀಟರ್​ ಅಂತರದಲ್ಲಿರಬೇಕು.

ಇದನ್ನು ಓದಿ: ಸ್ವೈಪಿಂಗ್​ ಮಷಿನ್​ಗಳಿಗೆ ಸಿಗಲಿದೆ ಬಹುಭಾಷೆಯ ಟಚ್​- ಡಿಜಿಟಲ್​ ಪಾವತಿ ವ್ಯವಸ್ಥೆಗೆ ಹೊಸ ​ಕಿಕ್​

ಹುನ್ನರ್ವಿ ಟೆಕ್ನಾಲಜಿಸ್ ಸಹಭಾಗಿತ್ವದೊಂದಿಗೆ ಆರಂಭಿಸಿರುವ ಆನ್‍ಲೈನ್ ಸೇವೆಯು ಮೊದಲ ಹಂತದಲ್ಲಿ ಜಯನಗರ, ಜೆ.ಪಿ.ನಗರ, ಕೋರಮಂಗಲ, ಇಂದಿರಾನಗರ ಮತ್ತು ಬಿ.ಟಿ.ಎಂ. ಲೇಔಟ್‍ಗಳಲ್ಲಿ ಜಾರಿಗೆ ತರಲಾಗಿದ್ದು ಮುಂದಿನ ದಿನಗಳಲ್ಲಿ ಗ್ರಾಹಕರ ಪ್ರತಿಕ್ರಿಯೆ ನೋಡಿ ಇತರೆ ಬಡಾವಣೆಗಳಲ್ಲಿ ಆನ್‍ಲೈನ್ ಸೇವೆ ವಿಸ್ತರಣೆ ಮಾಡಲಾಗುತ್ತದೆ. ಹಾಪ್‍ಕಾಮ್ಸ್ ಸಂಸ್ಥೆಯು ತೋಟಗಾರಿಕೆ ಉತ್ಪನ್ನಗಳನ್ನು ಪೂರೈಸುತ್ತದೆ. ಉಳಿದಂತೆ ಬುಕ್ ಮಾಡಿಕೊಳ್ಳುವುದು, ಪದಾರ್ಥಗಳನ್ನು ಗ್ರಾಹಕರಿಗೆ ತಲುಪಿಸುವುದು, ಇತ್ಯಾದಿ ಎಲ್ಲಾ ಕಾರ್ಯಗಳನ್ನು ಖಾಸಗಿ ಸಂಸ್ಥೆ ನಿರ್ವಹಿಸಲಿದೆ.

ಆನ್‍ಲೈನ್ ಮೂಲಕ ಇಂಡೆಂಟ್ ನೀಡುವ ಗ್ರಾಹಕರು 250 ರಿಂದ 500ರೂಪಾಯಿ ವರೆಗಿನ ಮೌಲ್ಯದ ಡೆಲಿವರಿಗೆ 25 ರೂಪಾಯಿ, 501 ರಿಂದ 1000 ರೂಪಾಯಿವರೆಗಿನ ಮೌಲ್ಯದ ಡೆಲಿವರಿಗೆ 50 ರೂಪಾಯಿ,ಹಾಗೂ 1001 ರೂಪಾಯಿ ಮತ್ತು ಅದಕ್ಕಿಂತ ಮೇಲ್ಪಟ್ಟ ಮೌಲ್ಯದ ಡೆಲಿವರಿಗೆ 75 ರೂಪಾಯಿ ಡೆಲಿವರಿ ಚಾರ್ಜ್ ಅನ್ನು ಗ್ರಾಹಕರು ನೀಡಬೇಕು.  ಹಾಪ್‍ಕಾಮ್ಸ್​ನಿಂದ ಹಣ್ಣು, ತರಕಾರಿಗಳ ಹೋಂ ಡೆಲಿವರಿಗೆ ಸಂಪರ್ಕಿಸಲು ವೆಬ್‍ಸೈಟ್ ಅಥವಾ ದೂರವಾಣಿ: 080-266575988, 26575977 ಸಂಖ್ಯೆಗಳಣ್ನು ಕೂಡ ಸಂಪರ್ಕ ಮಾಡಬಹುದು. 

ಎಲ್ಲೆಲ್ಲಿ ಆನ್‍ಲೈನ್ ಸೇವೆ ಲಭ್ಯ

ಜಯನಗರ: ಮಳಿಗೆ ಸಂಖ್ಯೆ 5, ಶಾಪಿಂಗ್ ಕಾಂಪ್ಲೆಕ್ಸ್ 4ನೇ ಬ್ಲಾಕ್, ಜಯನಗರ. ಮಳಿಗೆ ಸಂಖ್ಯೆ 58, 3ನೇ ಬ್ಲಾಕ್ ಬೈರಸಂದ್ರ, ಜಯನಗರ. ಮಳಿಗೆ ಸಂಖ್ಯೆ 77, 1 ನೇ ಮುಖ್ಯ ರಸ್ತೆ, 7ನೇ ಬ್ಲಾಕ್, ಜಯನಗರ. ಮಳಿಗೆ ಸಂಖ್ಯೆ 79, ರಾಜಲಕ್ಷ್ಮಿ ನರ್ಸಿಂಗ್ ಹೋಂ ಹತ್ತಿರ ಜಯನಗರ. ಮಳಿಗೆ ಸಂಖ್ಯೆ 216, 19 ನೇ ಮುಖ್ಯ ರಸ್ತೆ, 4ನೇ ಟಿ. ಬ್ಲಾಕ್ ಜಯನಗರ. ಮಳಿಗೆ ಸಂಖ್ಯೆ 217, 9 ನೇ ಮುಖ್ಯ ರಸ್ತೆ, 4 ನೇ ಬ್ಲಾಕ್ ಜಯನಗರ.

ಜೆ.ಪಿ.ನಗರ: ಮಳಿಗೆ ಸಂಖ್ಯೆ 144, 25 ನೇ ಮುಖ್ಯ ರಸ್ತೆ, 1ನೇ ಹಂತ ಜೆ.ಪಿ.ನಗರ. ಮಳಿಗೆ ಸಂಖ್ಯೆ 148, ಅಂಬರೀಷ್ ಮನೆ ಪಕ್ಕ, 2 ನೇ ಹಂತ ಜೆ.ಪಿ.ನಗರ. ಮಳಿಗೆ ಸಂಖ್ಯೆ 268, ಮಿನಿಫಾರೆಸ್ಟ್ 3 ನೇ ಹಂತ ಜೆ.ಪಿ.ನಗರ. ಮಳಿಗೆ ಸಂಖ್ಯೆ 243, 14 ನೇ ಮುಖ್ಯ ರಸ್ತೆ, 1ನೇ ಹಂತ, ಜೆ.ಪಿ.ನಗರ. ಮಳಿಗೆ ಸಂಖ್ಯೆ 258, 16 ನೇ ಕ್ರಾಸ್, 18 ನೇ ಮೈನ್, 5ನೇ ಹಂತ, ಜೆ.ಪಿ.ನಗರ.

ಕೋರಮಂಗಲ: ಮಳಿಗೆ ಸಂಖ್ಯೆ 152, 4ನೇ ಕ್ರಾಸ್, 1ನೇಮುಖ್ಯ ರಸ್ತೆ, 8ನೇ ಬ್ಲಾಕ್, ಕೋರಮಂಗಲ. ಮಳಿಗೆ ಸಂಖ್ಯೆ 256, ವೆಂಕಟಾಪುರ ಮುಖ್ಯ ರಸ್ತೆ, 1ನೇ ಬ್ಲಾಕ್, ಕೋರಮಂಗಲ.

ಇಂದಿರಾನಗರ: ಮಳಿಗೆ ಸಂಖ್ಯೆ 72, ಸೋಮೇಶ್ವರ ರಸ್ತೆ, ಕೇಂಬ್ರಿಡ್ಜ್ ಎಕ್ಸ್​ಟೆನ್ಷನ್, ಹಲಸೂರು. ಮಳಿಗೆ ಸಂಖ್ಯೆ 92, ಕೇಂಬ್ರಿಡ್ಜ್ ರಸ್ತೆ, ಪೊಲೀಸ್ ಸ್ಟೇಷನ್ ಹತ್ತಿರ, ಹಲಸೂರು. ಮಳಿಗೆ ಸಂಖ್ಯೆ 119, ಮಿರಾಂಡ ಸ್ಕೂಲ್ ಹತ್ತಿರ, ಹೆಚ್.ಎ.ಎಲ್. 3ನೇ ಹಂತ. ಮಳಿಗೆ ಸಂಖ್ಯೆ 114, ಇಂದಿರಾನಗರ ಕ್ಲಬ್ ಹಿಂ`Áಗ, ಎಚ್‍ಎಎಲ್ 3ನೇ ಹಂತ. ಮಳಿಗೆ ಸಂಖ್ಯೆ 118, 13 ನೇ ಮುಖ್ಯ ರಸ್ತೆ, ಎಚ್.ಎ.ಎಲ್. 2ನೇ ಹಂತ.

ಬಿ.ಟಿ.ಎಂ.ಲೇಔಟ್ : ಮಳಿಗೆ ಸಂಖ್ಯೆ 254, 16 ನೇ ಮುಖ್ಯ ರಸ್ತೆ, ಬಿ.ಟಿ.ಎಂ. 1ನೇ ಘಟ್ಟ. ಈ ಯಾವುದೇ ಮಳಿಗೆಯಿಂದ ಆನ್‍ಲೈನ್‍ನಲ್ಲಿ ಬುಕ್ ಮಾಡಿ ಪದಾರ್ಥಗಳನ್ನು ಮನೆ ಬಾಗಿಲಿಗೆ ತರಿಸಿಕೊಳ್ಳಬೇಕೆಂದರೆ 3 ಕಿ.ಮೀ. ವ್ಯಾಪ್ತಿಯೊಳಗಿರಬೇಕು. ಒಟ್ಟಿಲ್ಲಿ ಫ್ರೆಶ್​​ ಹಣ್ಣುಗಳನ್ನು ತಿನ್ನಬೇಕು ಅಂತ ಆಸೆ ಇಟ್ಟುಕೊಂಡಿರುವವರು ಹಾಪ್​ಕಾಮ್ಸ್​ನ ಹೊಸ ಪ್ರಯತ್ನವನ್ನು ಪರೀಕ್ಷಿಸಿ ನೋಡಬಹುದು.

ಇದನ್ನು ಓದಿ:

1. ಫೋಟೋಗಳೇ ಮಾತಾಗಿ ಕಥೆ ಹೇಳುತ್ತವೆ..!

2. 10*10 ಚಿಕ್ಕಕೋಣೆಯಿಂದ 1,000 ಕೋಟಿಯ ಮಾಲೀಕನಾದ ತನಕ..!

3. ನಾಯಿಗಳ ಪಾಲಿಗೆ ಸ್ವರ್ಗ- ಬೆಂಗಳೂರಿನಲ್ಲಿದೆ "ಡಾಗ್ಸ್​ಪಾರ್ಕ್​"

Related Stories