ಕೆಎಸ್ಆರ್​​ಟಿಸಿ ಬಸ್ ನಿಲ್ದಾಣದಲ್ಲಿ ವೈ-ಫೈ..!

ಎನ್​​.ಎಸ್​. ರವಿ

ಕೆಎಸ್ಆರ್​​ಟಿಸಿ ಬಸ್ ನಿಲ್ದಾಣದಲ್ಲಿ ವೈ-ಫೈ..!

Thursday January 28, 2016,

2 min Read

ಕೆಎಸ್ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಬರುವ ತನಕ ಏನ್ ಮಾಡೋದು ಎಂಬ ಪ್ರಶ್ನೆ ಎಲ್ಲರನ್ನು ಒಂದಲ್ಲ ಒಂದು ಸಲ ಕಾಡುವುದು ಸಾಮಾನ್ಯ. ಯಾಕಂದ್ರೆ, ಬಸ್ ಸರಿಯಾದ ಸಮಯಕ್ಕೆ ಬರಲ್ಲ. ಅನೇಕ ಸಲ ನಾವೇ ಸಮಯಕ್ಕಿಂತ ಬೇಗ ಬಂದು ಬಸ್​ಗಾಗಿ ಕಾಯುತ್ತ ಕುಳಿತಿರುತ್ತೇವೆ. ಏನಾದ್ರು ಮಾಡಬೇಕು ಅಂದ್ರೆ ಸರಿಯಾಗಿ ನೆಟ್ ಕೂಡ ವರ್ಕ್ ಆಗಲ್ಲ. ಆದರೆ ಈ ಎಲ್ಲ ಸಮಸ್ಯೆಗಳಿಗೆ ಸಾರಿಗೆ ಸಂಸ್ಥೆ ಈಗ ಪೂರ್ಣವಿರಾಮವಿಟ್ಟಿದೆ.

image


ಹೌದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ರಾಜ್ಯದ 13 ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಗಳಲ್ಲಿ ಉಚಿತ ಇಂಟರ್​​ನೆಟ್‌ ಒದಗಿಸುವ ಮಹತ್ವದ ಕಾರ್ಯ ಪ್ರಾರಂಭಿಸಿದೆ. ಬಸ್​​ ನಿಲ್ದಾಣಗಳಲ್ಲಿ ಸರಿಯಾದ ಸಮಯಕ್ಕೆ ಬಸ್ ಬಾರದೆ ಇದ್ದಾಗ ಬೇಜಾರಾದ್ರೆ ಚಿಂತಿಸಬೇಕಿಲ್ಲಾ, ಯಾಕಂದ್ರೆ, ರಾಜ್ಯ ರಸ್ತೆ ಸಾರಿಗೆ ನಿಗಮ ತನ್ನ 13 ಬಸ್ ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ ನೀಡುತ್ತಿದೆ. ಉತ್ತಮ ಗುಣಮಟ್ಟದ ವೈಫೈ ಇದಾಗಿದ್ದು. ಹಲವು ಬ್ಯುಸಿನೆಸ್​​ಮೆನ್​​ಗಳು , ಮತ್ತು ಜನಸಾಮಾನ್ಯರು ಬಸ್​ ನಿಲ್ದಾಣದಲ್ಲಿಯೇ ತಮ್ಮ ಕೆಲವನ್ನು ಮಾಡಿಕೊಳ್ಳಬಹುದು. ಬೇಜಾರ್ ಆದ್ರೆ, ಅಲ್ಲೇ ವಾಟ್ಸ್​​ಆ್ಯಪ್, ಫೇಸ್​​ಬುಕ್​ನಂತಹ ಸಮಾಜಿಕ ವೆಬ್ ತಾಣಗಳಲ್ಲಿ ಸಮಯ ಕಳೆಯಬಹುದು.

ಇಂಟರ್​ನೆಟ್ ಅವಶ್ಯಕತೆಯನ್ನು ಮನಗಂಡಿರುವ ಸಾರಿಗೆ ಸಂಸ್ಥೆ, ಈಗಾಗಲೇ ವೈಫೈ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದು, ರಾಜ್ಯದ 13 ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಗಳಾದ, ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣ ಮತ್ತು ಶಾಂತಿನಗರ ಬಸ್‌ ನಿಲ್ದಾಣ ಹಾಗೂ ಹಾಸನ, ಮಂಡ್ಯ, ಮಡಿಕೇರಿಯಲ್ಲಿ ಈ ಸೇವೆ ಪ್ರಾರಂಭವಾಗಿದೆ.ಲ್ಯಾಪ್‌ಟಾಪ್‌,ಮೊಬೈಲ್, ಟ್ಯಾಬ್ಲೆಟ್ ಬಳಕೆದಾರರು ಈ ಸೇವೆಯನ್ನು ಉಪಯೋಗಿಸುತ್ತಿದ್ದಾರೆ. ಉತ್ತಮ ಸೇವೆಯಿಂದ ಜನರು ಸಂತಸ ಪಡುತ್ತಿದ್ದಾರೆ ಎಂತಾರೆ, ವ್ಯವಸ್ಥಾಪಕ ನಿರ್ದೇಶಕರಾದ, ಶ್ರೀ ರಾಜೇಂದರ್ ಕುಮಾರ ಕಟಾರಿಯಾ.

image


ವೈಫೈ ಬಳಕೆ ಮಾಡುವುದು ಹೇಗೆ..?

ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣಗಳಲ್ಲಿ ಲಭ್ಯವಿರುವ ವೈ-ಫೈ ಸೇವೆಯನ್ನು ಪಡೆಯಲು ಐ-ಆನ್ ವೈ-ಫೈ ನೆಟ್ ವರ್ಕ್‌ ಅಥವಾ ಗೂಗಲ್‌ ಪ್ಲೇಸ್ಟೋರ್‌ನಿಂದ ಉಚಿತವಾಗಿ ಐ-ಆನ್ ವೈ-ಫೈ ಅಪ್ಲಿಕೇಶನ್‌ ಡೌನ್‌ಲೋಡ್ ಮಾಡಿಕೊಳ್ಳಬೇಕು. ಬಸ್ ನಿಲ್ದಾಣಗಳಲ್ಲಿ ಮೊಬೈಲ್‌, ಲ್ಯಾಪ್‌ಟಾಪ್‌ ಅಥವಾ ಟ್ಯಾಬ್ಲೆಟ್‌ನಲ್ಲಿ ಲಭ್ಯವಿರುವ ವೈ-ಫೈನಲ್ಲಿ, ಐ-ಆನ್ ವೈ-ಫೈ ಆಯ್ಕೆ ಮಾಡಬೇಕು. ಅಲ್ಲಿ 10 ಅಂಕಿಯ ಮೊಬೈಲ್ ನಂಬರ್ ನೀಡಿ, ನೊಂದಣಿ ಮಾಡಿಕೊಂಡರೆ ವೈ-ಫೈ ಪಾಸ್‌ಪರ್ಡ್, ಎಸ್‌ಎಂಎಸ್ ರೂಪದಲ್ಲಿ ದೊರೆಯಲಿದೆ. ಪಾಸ್​​ವರ್ಡ್ ಹಾಕಿ ಉಚಿತ ಇಂಟರ್‌ನೆಟ್ ಸಂಪರ್ಕ ಪಡೆಯಬಹುದಾಗಿದೆ ಎಂದು ನಿಗಮ ತಿಳಿಸಿದೆ. ಕ್ಷಣಮಾತ್ರದಲ್ಲಿಯೆ ಇದೆಲ್ಲವೂ ಅಗಿಬೀಡುತ್ತದೆ.

ಈಗ ಸ್ಮಾರ್ಟ್ ಆಗಿರುವ ಪ್ರಯಾಣಿಕರಿಂದ ರಾಜ್ಯ ರಸ್ತೆ ಸಾರಿಗೆ ನಿಗಮದ ಈ ಮಹ್ವದ ಹೆಜ್ಜೆಗೆ, ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಉತ್ತಮ ಹೈ ಸ್ಪೀಡ್ ಇಂಟರ್ನೆಟ್ ಲಭ್ಯವಾಗುತ್ತಿರುವುದು ಸಂತಸದ ವಿಷಯ. ಉಚಿತ ವೈಫೈ ಆದ್ರೂ ಹೈಟೆಕ್ ಆಗಿದೆ. ಥಟ್ ಅಂತ ಬಳಸಲು ಯಾವುದೇ ತಲೆನೋವಿಲ್ಲ ಎನ್ನುತ್ತಾರೆ ವೈ-ಫೈ ಬಳಸಿದ ಪ್ರಯಾಣಿಕರು..

ಪ್ರಯಾಣಿಕರಿಗೆ ಬೇಸರವಾಗದಿರಲಿ, ಬಸ್ಸುಗಳು ಬರೋತನಕ, ಬಂದ್ ಬಸ್ ಬಿಡುವ ತನಕ, ಏನಾದ್ರು ಬೇಜಾರಾದ್ರೆ ಉಚಿತವಾಗಿ ವೈಫೈ ಬಳಸಿ ಮನರಂಜನೆ ಪಡೆಯಲು ಪ್ರಾಯೋಗಿಕವಾಗಿ ವೈಫೈ ಸೇವೆ ಆರಂಭಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳಲಿ ಈ ಸೇವೆ ಅತಿ ಶೀಘ್ರದಲ್ಲಿಯೆ ಲಭ್ಯವಾಗಲಿದೆ. ಸ್ಮಾರ್ಟ್ ಜನಿರಿಗಾಗಿ ಸ್ಮಾರ್ಟ್ ಸೇವೆ ನೀಡಲು ಪ್ರಯಾಣಿಕರನ್ನು ಸಾರಿಗೆ ಸಂಸ್ಥೆಯತ್ತ ಸೆಳೆಯಲು ಕೆಎಸ್ಆರ್​ಟಿಸಿ ಉತ್ತಮ ಬಸ್ ಸೇವೆ ಜೊತೆಗೆ ವೈ-ಫೈ ಸೌಲಭ್ಯ ನೀಡುವ ಮೂಲಕ ಜನರಿಗೆ ಮತ್ತಷ್ಟೂ ಹತ್ತಿರವಾಗಿದೆ.