ಡಿಜಿಟಲ್​ ಪ್ರಯೋಗಕ್ಕೆ ಮುಂದಾದ ಪೊಲೀಸ್​ ಡಿಪಾರ್ಟ್​ಮೆಂಟ್​- ಕಾರ್ಡ್​ ಸ್ವೈಪಿಂಗ್​ಗೆ ತಯಾರಿ ಮಾಡಿಕೊಂಡ ಟ್ರಾಫಿಕ್​ ಪೋಲಿಸರು

ಟೀಮ್​ ವೈ.ಎಸ್​. ಕನ್ನಡ

0

 500 ಮತ್ತು 1000 ರೂಪಾಯಿ ನೋಟ್​ಗಳ ನಿಷೇಧದ ಬಳಿಕ ಪ್ಲಾಸ್ಟಿಕ್ ಕರೆನ್ಸಿ ಮತ್ತು ಕ್ಯಾಶ್​ಲೆಸ್ ಟ್ರಾನ್ಸ್ ಆ್ಯಕ್ಷನ್ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕ್ಯಾಶ್​ಲೆಸ್ ಟ್ರಾನ್ಸ್ ಆ್ಯಕ್ಷನ್​ನ ವಿಧಗಳ ಬಗ್ಗೆ ಕೂಡ ಹೆಚ್ಚಿನ ವಿಶ್ವಾಸ ಮೂಡುತ್ತಿದೆ. ಈ ಮಧ್ಯೆ ಬೆಂಗಳೂರು ಟ್ರಾಫಿಕ್ ಪೊಲೀಸರು ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಇಲ್ಲಿ ತನಕ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಿದ ತಪ್ಪಿತಸ್ಥರಿಗೆ ಟ್ರಾಫಿಕ್ ಪೊಲೀಸರು ಸ್ಥಳದಲ್ಲೇ ದಂಡ ಹಾಕಿ, ಹಣ ಪಡೆದು ಕೊಂಡು ಕಳುಹಿಸುತ್ತಿದ್ದರು. ಆದ್ರೆ ಇನ್ನು ಮುಂದೆ ಬೆಂಗಳೂರಿನ ಟ್ರಾಫಿಕ್ ಪೊಲೀಸರು ಕೂಡ ಪ್ಲಾಸ್ಟಿಕ್ ಮನಿ, ಸ್ವೈಪಿಂಗ್ ಮೆಷಿನ್ ನಲ್ಲೇ ನಿಯಮ ಮೀರಿದವರಿಂದ ದಂಡ ಕಟ್ಟಿಸಿಕೊಳ್ಳಲಿದ್ದಾರೆ.

ಪ್ಲಾಸ್ಟಿಕ್ ಮನಿ ಮತ್ತು ಡಿಜಿಟಲ್ ಟ್ರಾನ್ಸ್ ಆ್ಯಕ್ಷನ್ ಜಾರಿಗೆ ತರುವುದಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ 100 ಪಾಯಿಂಟ್ ಆಫ್ ಸೇಲ್ (PoS ) ಮೆಷಿನ್​ಗಳಿಗೆ ಆರ್ಡರ್ ಕೂಡ ಮಾಡಿದ್ದಾರೆ. ಮೂಲಕ ಕಾರ್ಡ್ ಸ್ವೈಪಿಂಗ್​ನಲ್ಲೇ ದಂಡ ಕಟ್ಟಿಸಿಕೊಳ್ಳಲು ಪ್ಲಾನ್ ಮಾಡಿದ್ದಾರೆ.

ಕಳೆದ ನವೆಂಬರ್ 8ರಂದು ಕೇಂದ್ರ ಸರ್ಕಾರ 500 ಮತ್ತು 1000 ಮುಖ ಬೆಲೆಯ ನೋಟ್​ಗಳನ್ನು ಬ್ಯಾನ್ ಮಾಡಿತ್ತು. ಇದರಿಂದಾಗಿ ಟ್ರಾಫಿಕ್ ಪೊಲೀಸರಿಗೆ ಹೆಚ್ಚು ಸಮಸ್ಯೆ ಆಗಿತ್ತು. ಟ್ರಾಫಿಕ್ ನಿಯಮ ಗಾಳಿಗೆ ತೂರಿ ಬಂದವರನ್ನು ತಡೆ ಹಿಡಿದ್ರೆ, ಅವರು ಹಳೆಯ 500 ಅಥವಾ 1000 ರೂಪಾಯಿ ನೋಟ್​ಗಳನ್ನು ನೀಡುತ್ತಿದ್ದರು. ಒಂದು ವೇಳೆ ಪೊಲೀಸರು ಒಪ್ಪದೇ ಇದ್ದರೆ, ಚಿಲ್ಲರೆಯ ನೆಪವೊಡ್ಡಿ ಎಸ್ಕೇಪ್ ಆಗುತ್ತಿದ್ದರು. ಇದು ಟ್ರಾಫಿಕ್ ಪೊಲೀಸರಿಗೆ ದೊಡ್ಡ ತಲೆ ನೋವಾಗಿತ್ತು.

ಈ ಮಧ್ಯೆ ಕಳೆದ 2 ತಿಂಗಳುಗಳಿಂದ ಟ್ರಾಫಿಕ್ ಪೊಲೀಸರು ಮತ್ತಷ್ಟು ಖಡಕ್ ಆಗಿದ್ದರು. ದಂಡ ಕಟ್ಟುವ ತನಕ ವಾಹನಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಇದು ಟ್ರಾಫಿಕ್ ಸಮಸ್ಯಗೆ ಕಾರಣವಾಗಿತ್ತು. ನಿಯಮ ಮೀರಿದವರು 200- 300 ರೂಪಾಯಿಗಳಿಗಾಗಿ ಸ್ನೇಹಿತರು ಬರುವ ತನಕ ಅಥವಾ ದುಡ್ಡು ಅರೇಂಜ್ ಆಗುವ ತನಕ ರಸ್ತೆ ಬದಿಯಲ್ಲೇ ಕಾಯುತ್ತಾ ಟ್ರಾಫಿಕ್ ಸಮಸ್ಯೆಗೂ ಕಾರಣವಾಗಿದ್ದರು.

“ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಬೆಂಗಳೂರು ಟ್ರಾಫಿಕ್​ ಪೊಲೀಸರು ಸುಮಾರು 100 PoS ಮೆಷಿನ್​ಗಳನ್ನು ಆರ್ಡರ್ ಮಾಡಲಾಗಿದೆ. ಟ್ರಾಫಿಕ್ ರೂಲ್ಸ್ ಗಾಳಿಗೆ ತೂರುವವರು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ದಂಡ ಕಟ್ಟಬಹುದು. ಈ ಮೆಷಿನ್​ಗಳನ್ನು ಇನ್ಸ್​ಪೆಕ್ಟರ್ ರ್ಯಾಂಕ್​ನ  ಆಫೀಸರ್​ಗಳು ಇಟ್ಟುಕೊಳ್ಳಲಿದ್ದಾರೆ. ಈ ಮೆಷಿನ್​ಗಳು ಪೊಲೀಸ್ ಸ್ಟೇಷನ್​ನಲ್ಲೇ ಇರಲಿವೆ. ಈ PoS ಈಗ ಎದ್ದಿರುವ ಸಮಸ್ಯೆಗಳಿಗೆ ತಕ್ಕ ಮಟ್ಟಿನ ಪರಿಹಾರ ನೀಡಲಿದೆ. ”
- ಅಭಿಷೇಕ್ ಗೋಯಲ್, ಡಿಸಿಪಿ ಟ್ರಾಫಿಕ್

ಬೆಂಗಳೂರು ಟ್ರಾಫಿಕ್ ಪೊಲೀಸರು ಪ್ಲಾಸ್ಟಿಕ್ ಮತ್ತು ಡಿಜಿಟಲ್ ಮನಿಗೆ ಪ್ರಾಯೋಗಿಕವಾಗಿ ಬೆಂಬಲವಾಗಿ ನೀಡಿದ ಹೆಮ್ಮೆಗೆ ಪಾತ್ರವಾಗಿದೆ. ಬೆಂಗಳೂರಿನಲ್ಲಿ ಮುಂದಿನ ವಾರದಿಂದ ಈ ಸ್ವೈಪಿಂಗ್ ಮೆಷಿನ್ ಮೂಲಕ ದಂಡ ಕಟ್ಟುವುದು ಜಾರಿಗೆ ಬರಲಿದೆ. ನಾಶಿಕ್​ನಲ್ಲಿ ಕಳೆದ ನವೆಂಬರ್​ನಲ್ಲಿ PoS ಮೂಲಕ ಟ್ರಾಫಿಕ್ ಪೋಲಿಸರು ದಂಡ ಕಟ್ಟುವ ವ್ಯವಸ್ಥೆಯನ್ನು ಪೈಲಟ್ ಪ್ರಾಜೆಕ್ಟ್ ಆಗಿ ಬಳಕೆ ಮಾಡಿಕೊಂಡಿದ್ದರು.

ಇದನ್ನು ಓದಿ: 100 ದಿನಗಳಲ್ಲಿ 100 ಡಿಜಿಟಲ್ ಗ್ರಾಮ- ಇದು ಐಸಿಐಸಿಐ ಬ್ಯಾಂಕ್​ ಪಣ

ನೋಟ್ ಬ್ಯಾನ್ ಬಳಿಕ ಕ್ಯಾಶ್​ಲೆಸ್ ಟ್ರಾನ್ಸ್ ಆ್ಯಕ್ಷನ್​ಗಳ ಬಗ್ಗೆ ಹೆಚ್ಚು ಗಮನ ಕೊಡಲಾಗುತ್ತಿದೆ. ಈಗಾಗಲೇ PoSಗಳ ಬಳಕೆಯನ್ನು ಎಲ್ಲೆಲ್ಲಿ ಸಾಧ್ಯವಾಗುತ್ತೋ ಅಲ್ಲೆಲ್ಲಾ ಬಳಕೆ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಈಗಾಗಲೇ ಟೋಲ್ ಪ್ಲಾಜ್ಹಾಗಳು ಸೇರಿದಂತೆ ಹಲವು ಕಡೆ ಡಿಜಿಟಲ್ ಟ್ರಾನ್ಸ್ಆ್ಯಕ್ಷನ್​ಗಳು ನಡೆಯುತ್ತಿವೆ.

ನೋಟ್ ಬ್ಯಾನ್ ಬಳಿಕ ಟ್ರಾಫಿಕ್ ನಿಯಮ ಮೀರಿದವರಿಗೂ ಸಂಕಷ್ಟ ಎದುರಾಗಿತ್ತು. ಅತ್ತ ದುಡ್ಡು ಇಲ್ಲ ಅಥವಾ ಚೇಂಜ್ ಇಲ್ಲ ಅನ್ನೋ ಸಮಸ್ಯೆ ಒಂದು ಕಡೆಯಾದ್ರೆ, ದಂಡ ಕಟ್ಟದೆ ಬಿಡೋದಿಲ್ಲ ಅನ್ನುವ ಟ್ರಾಫಿಕ್ ಪೊಲೀಸರು ಮತ್ತೊಂದೆಡೆ.

“ ನಾನು ಎಟಿಎಂನಿಂದ ದುಡ್ಡು ಬಿಡಿಸಿಕೊಳ್ಳುವ ಸಲುವಾಗಿ ನನ್ನ ದ್ವಿಚಕ್ರವಾಹನವನ್ನು ನೋ ಪಾರ್ಕಿಂಗ್ ಏರಿಯಾದಲ್ಲಿ ಬಿಟ್ಟು ಎಟಿಂ ಮುಂದಿದ್ದ ಕ್ಯೂನಲ್ಲಿ ನಿಂತಿದ್ದೆ. ಆದ್ರೆ ಸ್ವಲ್ಪ ಹೊತ್ತಿನ ಬಳಿಕ ಟ್ರಾಫಿಕ್ ಪೊಲೀಸರು ಬಂದು ನನ್ನ ವಾಹನವನ್ನು ಎತ್ತಿ ಲಾರಿಯಲ್ಲಿ ತುಂಬಿಸಿಕೊಳ್ಳುವುದನ್ನು ನೋಡಿದೆ. ಟ್ರಾಫಿಕ್ ಪೊಲೀಸರನ್ನು ಎಷ್ಟೇ ಕೇಳಿಕೊಂಡ್ರೂ ದಂಡ ಕಟ್ಟದ ವಿನಹ ನನ್ನ ಗಾಡಿಯನ್ನು ರಿಲೀಸ್ ಮಾಡಲಿಲ್ಲ. ತಕ್ಷಣಕ್ಕೆ ನನ್ನ ಕೈಯಲ್ಲಿ ದುಡ್ಡು ಇರಲಿಲ್ಲ. ಗಾಡಿಯನ್ನು ಪೊಲೀಸ್ ಸ್ಟೇಷನ್​ಗೆ ಎತ್ತಿಕೊಂಡು ಹೋದ್ರು. ನಾನು ದುಡ್ಡು ಬಿಡಿಸಿಕೊಂಡು ಪೊಲೀಸ್ ಸ್ಟೇಷನ್​ಗೆ ಹೋದ್ರೂ, ನನ್ನ ಬಳಿಯಲ್ಲಿದ್ದ 2000 ರೂಪಾಯಿ ನೋಟ್​ಗೆ ಅವರ ಬಳಿ ಚೇಂಜ್ ಇರಲಿಲ್ಲ. ನಾನು ಚೇಂಜ್ ಅರೇಂಜ್ ಮಾಡಿ ಗಾಡಿ ಬಿಡಿಸಿಕೊಳ್ಳಲು ನನಗೆ ಸುಮಾರು 5 ಗಂಟೆಗಿಂತ ಹೆಚ್ಚು ತಗುಲಿತ್ತು. ”

ಇಂತಹ ಹಲವು ಕಥೆಗಳು ನಮಗೆ ನೋಟ್ ಬ್ಯಾನ್ ಬಳಿಕ ಸಾಮಾನ್ಯವಾಗಿ ಬಟ್ಟಿದೆ. ಆದ್ರೆ ಇಂತಹ ಸಮಸ್ಯೆಗಳಿಗೆ ಪರಿಹಾರ ಹುಡುಕೋದಿಕ್ಕೆ ಸಾಧ್ಯವಾಗಿರಲಿಲ್ಲ. ಈಗ ಬೆಂಗಳೂರು ಪೊಲೀಸರು PoS ಬಳಕೆ ಮಾಡುವ ನಿರ್ಧಾರ ಮಾಡಿರುವುದರಿಂದ ಚಿಲ್ಲರೆ ಸಮಸ್ಯೆಗೆ ಪರಿಹಾರ ಸಿಗುವುದು ಗ್ಯಾರೆಂಟಿ.

ಇನ್ನು ಕಾರ್ಡ್ ಸೆಕ್ಯುರಿಟಿ ಬಗ್ಗೆಯೂ ಹೆಚ್ಚು ನಿಗಾ ಇಡಲಾಗಿದೆ. PoS ಮೆಷಿನ್ಗಳಿಗೆ ಸಂಬಂಧ ಪಟ್ಟಂತೆ ಕರೆಂಟ್ ಅಕೌಂಟ್ ಒಂದನ್ನು ತೆರೆಯಲು ಕೂಡ ಬೆಂಗಳೂರು ಟ್ರಾಫಿಕ್ ಪೊಲೀಸ್ ಮುಂದಾಗಿದೆ. PoS ಮೂಲಕ ಸಂಗ್ರಹಿಸಲಾಗುವ ಎಲ್ಲಾ ಮೊತ್ತಗಳು ಈ ಖಾತೆಗೆ ಸೇರಿಕೊಳ್ಳಲಿದೆ.

“ ಟ್ರಾಫಿಕ್ ನಿಯಮ ಉಲ್ಲಂಘಿಸಿದವರು ಕಾರ್ಡ್ ಕೊಟ್ರೆ ಆಯಿತು. ಸೈಪ್ ಮಾಡಿದ ತಕ್ಷಣ ಪಾಸ್​ವರ್ಡ್ ಎಂಟ್ರಿ ಮಾಡಬೇಕು. ಅದಾದ ಮೇಲೆ ದಂಡದ ಮೊತ್ತವನ್ನು ಎಂಟ್ರಿ ಮಾಡಬೇಕು. ಎಲ್ಲಾ ಓಕೆ ಆದಮೇಲೆ 2 ರಸೀದಿಗಳು ಪ್ರಿಂಟ್ ಆಗುತ್ತವೆ. ಒಂದನ್ನು ತಪ್ಪಿತಸ್ಥರ ಕೈಗೆ ನೀಡಿದರೆ, ಮತ್ತೊಂದನ್ನು ಟ್ರಾಫಿಕ್ ಪೊಲೀಸರು ಇಟ್ಟುಕೊಳ್ಳಿದ್ದಾರೆ. ಈ ವ್ಯವಸ್ಥೆ ಹಲವು ವಿಧಗಳಲ್ಲಿ ನೆರವಿಗೆ ಬರಲಿದೆ. ”
- ಅಭಿಷೇಕ್ ಗೋಯಲ್, ಡಿಸಿಪಿ ಟ್ರಾಫಿಕ್

ಸದ್ಯ ಬೆಂಗಳೂರು ಟ್ರಾಫಿಕ್ ಪೊಲೀಸರು ಬ್ಲಾಕ್ ಬೆರ್ರಿ ಹ್ಯಾಂಡ್ ಸೆಟ್ ಉಪಯೋಗಿಸಿಕೊಳ್ಳುತ್ತಿದ್ದಾರೆ. ಇದನ್ನು ಕೂ ಈಗ ಆಂಡ್ರಾಯ್ಡ್​ಗೆ ಅಪ್​ಗ್ರೇಡ್ ಮಾಡಲಾಗುತ್ತದೆ. ಒಟ್ಟಿನಲ್ಲಿ ಎಲ್ಲಾ ವಿಧದಿಂದಲೂ ಪ್ಲಾಸ್ಟಿಕ್ ಮನಿ ಮತ್ತು ಡಿಜಿಟಲ್ ಟ್ರಾನ್ಸ್ ಆ್ಯಕ್ಷನ್ಗಳ ಬಗ್ಗೆ ಹೆಚ್ಚು ಹೆಚ್ಚು ಗಮನ ನೀಡಲಾಗುತ್ತಿದೆ.

ಇದನ್ನು ಓದಿ:

1. ಕೆಲಸದ ಬಗ್ಗೆ ಚಿಂತೆ ಬಿಡಿ- ಜಾಬ್​ ಫಾರ್​ ಹರ್​ ಮೂಲಕ ಉದ್ಯೋಗಕ್ಕೆ ಟ್ರೈ ಮಾಡಿ..!

2. ಸಕ್ಕರೆ ಕಾಯಿಲೆ ಬಗ್ಗೆ ಟೆನ್ಷನ್​ ಬಿಟ್ಟುಬಿಡಿ- ಸೆಲ್ಫ್​ ಮ್ಯಾನೇಜ್​ ಡಯಾಬಿಟಿಸ್​ ಆ್ಯಪ್​ನ್ನು ಡೌನ್​ಲೋಡ್​ ಮಾಡಿ..!

3. "ಓಲಾ ಡ್ರೈವ್" ಈಗ ಮತ್ತಷ್ಟು ಫ್ರೆಂಡ್ಲಿ ವಿತ್ "ಓಲಾ ಪ್ಲೇ"

Related Stories

Stories by YourStory Kannada