ಸ್ಟಾರ್ಟ್ ಅಪ್ಸ್​ ಅಥವಾ ವಿನೂತನ ಯೋಜನೆಗಳಿಗೆ ಸೆಬಿ ಸಹಾಯಹಸ್ತ

ಟೀಮ್​​ ವೈ.ಎಸ್​​. ಕನ್ನಡ

1

ವಿನೂತನ ಯೋಜನೆಗಳಿಗೆ ಅಂದರೆ ಸ್ಟಾರ್ಟ್ ಅಪ್ಸ್​ ಪ್ರಸ್ತಾಪಗಳಿಗೆ ಆರ್ಥಿಕ ಬಲ ತುಂಬಲು ಸೆಬಿ ಮುಂದೆ ಬಂದಿದೆ. ಇಐಪಿಒ ಅಂದರೆ ಆನ್​​ಲೈನ್ ಮೂಲಕ ಸಂಪನ್ಮೂಲ ಸಂಗ್ರಹಕ್ಕೆ ಚಿಂತನೆ ಮಾಡಿದೆ. ಸಾರ್ವಜನಿಕ ಶೇರುಗಳನ್ನು ಆನ್​​​ಲೈನ್ ಮೂಲಕ ಪಡೆಯಲು ಅನುಮತಿ ನೀಡಲಾಗುತ್ತದೆ. ಬಂಡವಾಳ ಸಂಗ್ರಹ ನಿಟ್ಟಿನಲ್ಲಿ ಸೆಬಿ ನೀತಿಯ ಸರಳೀಕರಣ ಹಾಗೂ ನೋಂದಾವಣೆಗೆ ಹೊಸ ವೇದಿಕೆ ಕಲ್ಪಿಸುವತ್ತ ಚಿಂತನೆ ನಡೆಸಿದೆ.

ನಾರಾಯಣ ಮೂರ್ತಿ ಮಾತು

ಸೆಬಿಯ ಆಡಳಿತ ಮಂಡಳಿಯಿಂದ ಅಂತಿಮ ಅನುಮೋದನೆ ಪಡೆದ ಬಳಿಕ ಶೀಘ್ರದಲ್ಲಿ ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆಗಳಿವೆ. ಇದು ವಿನೂತನ ತಂತ್ರಜ್ಞಾನದ ಬಳಕೆ ಜೊತೆ ಜೊತೆಗೆ ಮಾರುಕಟ್ಟೆಯಲ್ಲಿನ ಪೂರ್ಣ ಲಾಭ ಪಡೆಯಲು ಸ್ಟಾರ್ಟ್ ಅಪ್​​ ಯೋಜನೆಗಳಿಗೆ ಅವಕಾಶ ಒದಗಿ ಬರಲಿದೆ. ಈ ಸಂಬಂಧ ಸೆಬಿ ರಚಿಸಿದ ಉನ್ನತ ಸಮಿತಿಯ ಶಿಫಾರಸಿನ ಅನ್ವಯ ಈ ನಿರ್ಧಾರಕ್ಕೆ ಬರಲಾಗಿದೆ.

ಸಾರ್ಟ್ ಅಪ್​ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಹೊಸ ಮಾರ್ಗ ಸೂಚಿ ಅನ್ವಯ, ಪರ್ಯಾಯ ಬಂಡವಾಳ ಎತ್ತುವಳಿ ವೇದಿಕೆ ಕಲ್ಪಿಸಲು ಸೆಬಿ ನಿರ್ಧರಿಸಿದೆ. ಸಂಸ್ಥೆಗಳು ಮತ್ತು ಅತೀ ಹೆಚ್ಚು ಆದಾಯ ಹೊಂದಿರುವವರಿಂದ ನಿಧಿ ಎತ್ತಲು, ವಿನೂತನ ಯೋಜನೆಗಳಿಗೆ ಸಾಧ್ಯವಾಗಲಿದೆ.

ಆದರೆ ರಿಸ್ಕ್ ಹೆಚ್ಚಿರುವ ಹಿನ್ನೆಲೆಯಲ್ಲಿ ಚಿಲ್ಲರೆ ಹೂಡಿಕೆದಾರರ ಪ್ರವೇಶ ನಿರ್ಬಂಧಿಸಲಾಗಿದೆ. ಹಿತಾಸಕ್ತಿ ರಕ್ಷಣೆಗೆ ಕೂಡ ಕ್ರಮ ಕೈಗೊಳ್ಳಲಾಗಿದೆ. ಬಂಡವಾಳ ಸಂಗ್ರಹಿಸುವ ಮೊದಲು ಇರುವ ಸಂಪನ್ಮೂಲವನ್ನು ಆರು ತಿಂಗಳ ಅವಧಿಗೆ ನಿರ್ಬಂಧಿಸುವ ಷರತ್ತು ಕೂಡ ಒಳಗೊಂಡಿದೆ. ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಿಸಿದ ಬಳಿಕ ಶೇಕಡಾ 20ರಷ್ಟು ಸಂಪತ್ತನ್ನು ಮೂರು ವರ್ಷಗಳ ಕಾಲ ಲಾಕ್ ಇನ್ ಟೈಮ್ ಎಂದು ನಿಗದಿಪಡಿಸಲಾಗಿದೆ. ಇದು ಸದ್ಯ ಇರುವ ವ್ಯವಸ್ಥೆಯಾಗಿದೆ.

ಸರಳವಾಗಲಿದೆ ಕಾನೂನು

ವಿನೂತನ ಯೋಜನೆಗಳಿಗೆ ಅಂದರೆ ಸ್ಟಾರ್ಟ್ ಅಪ್​​ ಯೋಜನೆಗಳನ್ನು ನೋಂದಾಯಿಸುವ ಸಂಬಂಧ ಕಾನೂನು ಸರಳಗೊಳಿಸಲು ಸೆಬಿ ನಿರ್ಧರಿಸಿದೆ. ಮುಖ್ಯವಾಗಿ ಗುರಿ ಬಗ್ಗೆ ಮಾಹಿತಿ ನೀಡಿದರೆ ಸಾಕು. ಅತ್ಯಂತ ಸಂಕೀರ್ಣ ದಾಖಲೆ ಸಲ್ಲಿಕೆ ಬೇಡ ಎಂಬ ನಿರ್ಧಾರಕ್ಕೆ ಸೆಬಿ ಬಂದಿದೆ. ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಮಾನದಂಡ ಅನುಸರಿಸಿದರೆ ಸಾಕು ಎಂಬ ಸೂಚನೆ ನೀಡಿದೆ.

ಸಾಫ್ಟ್​​ ವೇರ್ ಅಭಿವೃದ್ಧಿ,ಇ-ಕಾರ್ಮಸ್, ಹೊಸ ಆಲೋಚನೆಯ ಹೊಸ ತಲೆಮಾರಿನ ಉದ್ಯಮಗಳು ಇದರ ವ್ಯಾಪ್ತಿಗೆ ಒಳಪಪಡಲಿವೆ ಎಂದು ಪಿಟಿಐ ಸುದ್ದಿ ಸಂಸ್ಥೆ ಇತ್ತೀಚೆಗೆ ವರದಿ ಮಾಡಿತ್ತು. ಕಾನೂನಿನ ಸರಳೀಕರಣದಿಂದಾಗಿ ಹೊಸ ಸಂಸ್ಥೆಗಳಿಗೆ ದೇಶದೊಳಗೆ ಬಂಡವಾಳ ಸಂಗ್ರಹಿಸಲು ಸಾಧ್ಯವಾಗಲಿದೆ. ವಿದೇಶಗಳತ್ತ ನಿಧಿಗಾಗಿ ದೃಷ್ಟಿ ಹರಿಸುವುದು ತಪ್ಪಲಿದೆ.

ಸಮಗ್ರ ಮಾರ್ಗ ಸೂಚಿ ಸಿದ್ಧಪಡಿಸುತ್ತಿರುವ ಸೆಬಿ, ಇಲೆಕ್ಟ್ರಾನಿಕ್ ಆರಂಭಿಕ ಶೇರು ಮಾರಾಟಕ್ಕೆ ಸಂಬಂಧಿಸಿದಂತೆ ಸಮಗ್ರ ಕಾರ್ಯಸೂಚಿ ಸಿದ್ಧಪಡಿಸುತ್ತಿದೆ. ಆರಂಭದಲ್ಲಿ ದೇಶಾದ್ಯಂತ ಹಬ್ಬಿರುವ ಬ್ರೋಕರ್ ಟರ್ಮಿನಲ್ಸ್​​​ ಬಳಸಿ ಆನ್​​​ಲೈನ್ ಖರೀದಿಗೆ ಹಸಿರು ನಿಶಾನೆ ನೀಡಲಾಗುವುದು.ಇದಲ್ಲದೆ ಷೇರು ನೋಂದಾಯಿಸಲು ಕನಿಷ್ಠ ಕಾಲಾವಕಾಶ ಕೂಡ ಸೆಬಿ ನಿಗದಿಪಡಿಸಲಿದೆ. ಈಗಿರುವ 12 ದಿನಗಳ ಬದಲಾಗಿ ಕೇವಲ ಮೂರು ದಿನಗಳಲ್ಲಿ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ಷೇರುಗಳ ಬಿಡುಗಡೆಯಿಂದಾಗಿ ಕಾಗದ ಪತ್ರಗಳ ಮುದ್ರಣ ವೆಚ್ಚ ಕಡಿಮೆಯಾಗಲಿದೆ. ಹಳ್ಳಿಗಳಲ್ಲಿ ಇರುವ ಚಿಲ್ಲರೆ ಹೂಡಿಕೆದಾರರನ್ನು ಸಂಪರ್ಕಿಸಲು ಇದರಿಂದ ಸಾಧ್ಯವಾಗಲಿದೆ.

ಮೊಬೈಲ್ ಅಪ್ಲಿಕ್ಲೇಶನ್ ಮೂಲಕ ಸಾರ್ವಜನಿಕ ಶೇರು ಖರೀದಿ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಚೌಕಟ್ಟು ಸಿದ್ಧಪಡಿಸುವತ್ತ ಸೆಬಿ ಹೆಜ್ಜೆ ಇಟ್ಟಿದೆ. ಆಡಳಿತ ಮಂಡಳಿಯ ಸಭೆಯಲ್ಲಿ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ.

ಎಸ್ ಎಂ ಎಸ್ ಮೂಲಕ ಅಲರ್ಟ್ ಸೇರಿದಂತೆ ಹಲವು ಹೊಸ ವಿನೂತನ ಕ್ರಮಗಳನ್ನು ಜಾರಿಗೆ ತರಲಿದೆ.

ಹೀಗೆ ಸ್ಟಾರ್ಟ್ ಅಪ್​​ ಯೋಜನೆಗಳಿಗೆ ನಿಧಿ ಸಂಗ್ರಹ ಕುರಿತಂತೆ ಸೆಬಿ ಹೊಸ ಪ್ರಸ್ತಾವನೆ ಸಲ್ಲಿಸಿದೆ.

ಸಣ್ಣ ಮತ್ತು ಮಾಧ್ಯಮ ಸಂಸ್ಥೆಗಳ ನೋಂದಾವಣೆ ನೀತಿ ಸರಳೀಕರಣ ಅದೃಶ್ಯ ಹೂಡಿಕೆದಾರ ಅಂದರೆ ಏಂಜೆಲ್ ಹೂಡಿಕೆಗೆ ಸಂಬಂಧಿಸಿದಂತೆ ಸೆಬಿಯಿಂದ ನಿಯಮಾವಳಿ ರಚಿಸಿದೆ. ನಾರಾಯಣ ಮೂರ್ತಿ ಅಧ್ಯಕ್ಷತೆಯಲ್ಲಿ ಸೆಬಿ ಸಮಿತಿಯನ್ನೂ ರಚನೆ ಮಾಡಿದೆ.

ಅನುವಾದಕರು: ಎಸ್​​.ಡಿ.