ಸಣ್ಣ ಹೂಡಿಕೆಗಳನ್ನ ನಿಭಾಯಿಸುವುದು ಕಷ್ಟವಲ್ಲ : ನಿಮ್ಮ ನೆರವಿಗೆ ಅರಿಸ್ಟಾಟಲ್.. !

ಟೀಮ್​​ ವೈ.ಎಸ್​​. ಕನ್ನಡ

0

ಸಣ್ಣ ಸಣ್ಣ ಹೂಡಿಕೆಗಳನ್ನ ಮಾಡುವುದು ಹಾಗೂ ಅವುಗಳನ್ನ ಸಮರ್ಥವಾಗಿ ನಿಭಾಯಿಸುವುದು ಸಾಮಾನ್ಯರ ಗುರಿಯಾಗಿರುತ್ತೆ. ಹಾಗೇ ಸಣ್ಣ ಸಣ್ಣ ಉದ್ದಿಮೆದಾರರಿಗೂ ಸಂಕೀರ್ಣ ಹೂಡಿಕೆಗಳತ್ತಲೇ ಗಮನ ಹೆಚ್ಚು. ಆದ್ರೆ ಉತ್ಪಾದನೆ ಹಾಗೂ ಸೇವೆಯತ್ತ ಹೆಚ್ಚು ಗಮನ ಕೊಡುವವರಿಗೆ ಅವುಗಳನ್ನ ನಿರ್ವಹಿಸುವುದು ಅಷ್ಟು ಸುಲಭದ ವಿಚಾರವಲ್ಲ. ಕೆಲವು ಕಂಪೆನಿಗಳಂತೂ ಫೈನಾನ್ಸ್ ಸಮಸ್ಯೆಗಳ ಪರಿಹಾರಕ್ಕಾಗೇ ಇನ್ನಿಲ್ಲದ ದುಬಾರಿ ವೆಚ್ಚಗಳನ್ನ ಮಾಡುತ್ತವೆ. ಹೀಗಾಗಿ ಅದೆಷ್ಟೋ ಮಂದಿ ಗೊಂದಲಗಳ ಸಹವಾಸನೇ ಬೇಡ ಅಂತ ಸಣ್ಣ ಹಾಗೂ ಸಂಕೀರ್ಣ ಹೂಡಿಕೆಗಳಿಂದ ದೂರವುಳಿಯುತ್ತಾರೆ. ಆದ್ರೆ ಇಂತಹ ಗೊಂದಲಗಳನ್ನ ಪರಿಹರಿಸಿ ಅವರಿಗೆ ಸಹಕಾರ ನೀಡಲು ನಿಂತಿರುವ ಸಂಸ್ಥೆ ಅರಿಸ್ಟಾಟಲ್ ಕನ್ಸಲ್ಟೆನ್ಸಿ.

2010ರಲ್ಲಿ ಹುಟ್ಟಿಕೊಂಡಿರುವ ಅಧಿಕೃತ ಸಂಸ್ಥೆ ಅರಿಸ್ಟಾಟಲ್ ಕನ್ಸಲ್ಟೆನ್ಸಿ ಅಕೌಂಟ್ ಹಾಗೂ ಫೈನಾನ್ಸಿಯಲ್ ಗೆ ಸಂಬಂಧಿಸಿದ ಸೇವೆ ನೀಡುತ್ತಿದೆ. ಸದ್ಯ ದೆಹಲಿ, ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಸಂಸ್ಥೆ ವೇತನಾಧಾರಿತ ಖಾತೆಗಳ ಹೊರಗುತ್ತಿಗೆ ಪಡೆದು ಸಲಹೆಗಳನ್ನ ನೀಡುತ್ತಿದೆ. ಅಲ್ಲದೆ ಭಾರತದ ಹಲವು ಬಹುರಾಷ್ಟ್ರೀಯ ಕಂಪೆನಿಗಳೊಂದಿಗೆ ಅರಿಸ್ಟಾಟಲ್ ಕನ್ಸಲ್ಟೆನ್ಸಿ ಕಾರ್ಯನಿರ್ವಹಿಸುತ್ತಿದೆ.

‘ಅರಿಸ್ಟಾಟಲ್ ’ಗಳಾದ ಸಂಜೀವ್ ಲಾಂಬಾ – ದೀಪಕ್ ಧಮೀಜಾ..

ಕೊಲ್ಕತ್ತಾದ ಐಐಎಮ್ ನಲ್ಲಿ ಪದವಿ ಪಡೆದಿದ್ದ ದೀಪಕ್ ವೆಂಚರ್ ಈಸ್ಟ್ ಟಿನೆಸ್ ಫಂಡ್ ( VET ) ನಲ್ಲಿ ಇನ್ ವೆಸ್ಟ್ ಮೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ರು. ಈ ವೇಳೆ ಹಲವು ಆರಂಭಿಕ ಹಂತದಲ್ಲಿದ್ದ ಸಣ್ಣ ಹೂಡಿಕೆದಾರರನ್ನು ಭೇಟಿಯಾಗಿಅವರೊಂದಿಗೆ ಕಾಲ ಕಳೆದಿದ್ರು. ಅವರಲ್ಲಿ ಬಹಳಷ್ಟು ಮಂದಿ ತಮ್ಮ ಕಂಪೆನಿಯ ಫೈನಾನ್ಸ್ ಮತ್ತು ಅಕೌಂಟನ್ನ ಯಾರಾದಾರೂ ನೋಡಿಕೊಳ್ಳುವಂತಿದ್ದರೆ ತಮ್ಮ ಕೆಲಸ ಸಲೀಸು ಅಂತ ಭಾವಿಸಿದ್ದವರೇ ಹೆಚ್ಚಾಗಿದ್ರು. ಹೂಡಿಕೆ ಮತ್ತು ನಿರ್ವಹಣೆ ಮಧ್ಯೆ ಇದ್ದ ಈ ದೊಡ್ಡ ಅಂತರವನ್ನ ಗಮನಿಸಿದ ದೀಪಕ್, ತಕ್ಷಣ ಇದಕ್ಕೊಂದು ಯೋಜನೆ ರೂಪಿಸಿದ್ರು.

“ಬೇರೆ ಬೇರೆ ಹೂಡಿಕೆದಾರರೊಂದಿಗೆ ಮಾತುಕತೆ ನಡೆಸಿದಾಗ ಅವರೆಲ್ಲಾ ಫೈನಾನ್ಶಿಯಲ್ ಮತ್ತು ಕಾನೂನಿನ ವಿಚಾರದಲ್ಲಿ ಸಮಸ್ಯೆ ಹೊಂದಿರುವುದು ತಿಳಿಯಿತು. ಆದ್ರೆ ಅವರೆಲ್ಲಾ ಆರಂಭಿಕ ದಿನಗಳಲ್ಲಿ ಇದ್ದಿದ್ದರಿಂದಾಗಿ ಹೂಡಿಕೆಯ ಸಮಸ್ಯೆಗಳನ್ನ ಬಗೆಹರಿಸಲು ದುಬಾರಿ ಸೇವೆಗಳ ಮೊರೆ ಹೋಗಲು ಹಿಂದೇಟು ಹಾಕ್ತಾ ಇದ್ರು ” ಅಂತ ದೀಪಕ್ ವಿವರಿಸ್ತಾರೆ.. ಹೂಡಿಕೆದಾರರ ಈ ಮನಸ್ಥಿತಿಯನ್ನ ಬಳಸಿಕೊಂಡ ದೀಪಕ್ ಹಾಗೂ ಸಂಜೀವ್ ಲಾಂಬಾ ಅರಿಸ್ಟಾಟಲ್ ಕನ್ಸಲ್ಟೆನ್ಸಿ ಅನ್ನೋ ಕಂಪನಿಯನ್ನ ಹುಟ್ಟುಹಾಕಿದ್ರು.

ಅರಿಸ್ಟಾಟಲ್ ಕನ್ಸಲ್ಟೆನ್ಸಿ ಮೊದಲು ಶುರುವಾಗಿದ್ದು ದೆಹಲಿಯಲ್ಲಿ.. ಸಣ್ಣ ಮಟ್ಟದಲ್ಲಿ ಶುರುವಾದ ಈ ಕಂಪೆನಿಯನ್ನ ಇನ್ನಷ್ಟು ಬಲಗೊಳಿಸಲೇಬೇಕು ಅಂತ ಸಂಜೀವ್ ಲಾಂಬಾ, ದೀಪಕ್ ಧಮೀಜಾ ನಿರ್ಧರಿಸಿದ್ರು. ಆದ್ರೆ ಅವರ ಈ ಹಾದಿ ಅಷ್ಟು ಸುಲಭವಾಗಿರಲಿಲ್ಲ..

“ ಫೈನಾನ್ಸಿಯಲ್​​ಗೆ ​ ಸಂಬಂಧಿಸಿದ ಹೊರಗುತ್ತಿಗೆಗಳನ್ನ ನೀಡುವಾಗ ಅದೆಷ್ಟೋ ಕಂಪನಿಗಳು ಗೊಂದಲಗಳಲ್ಲಿರುತ್ತವೆ. ಹೀಗಾಗಿ ಕ್ಲೈಂಟ್ ಗಳ ನಂಬಿಕೆ ಗಳಿಸುವುದು ಬಹಳ ಮುಖ್ಯ. ಅಲ್ಲದೆ ಕಂಪನಿಗಳ ಆಂತರಿಕ ಗೌಪ್ಯತೆಗಳನ್ನ ಕಾಯ್ದುಕೊಳ್ಳುವುದು ದೊಡ್ಡ ಸವಾಲು ” ಅಂತ ದೀಪಕ್ ಧಮೀಜಾ ಅರಿಸ್ಟಾಟಲ್ ಕನ್ಸಲ್ಟೆನ್ಸಿ ಬೆಳೆದು ಬಂದ ಹಾದಿಯನ್ನ ನೆನಪಿಸಿಕೊಳ್ಳುತ್ತಾರೆ.

21 ದಿನಗಳ ಕ್ರೋಢಿಕರಣ ಪ್ರಕ್ರಿಯೆ..

ಆರಂಭಿಕ ಹಂತದ ಸಣ್ಣ ಹೂಡಿಕೆದಾರು ಅನುಭವ ಹೊಂದಿರುವ ವ್ಯಕ್ತಿಗಳಿಂದ ತಕ್ಷಣ ಫಲಿತಾಂಶ ಸಿಗುವ ಸಲಹೆಗಳನ್ನ ನಿರೀಕ್ಷಿಸುತ್ತಾರೆ. ಇದಕ್ಕಾಗಿ ಹಲವರು ದುಬಾರಿ ವೆಚ್ಚ ಮಾಡಿದ್ರೂ, ವ್ಯರ್ಥವಾಗುವುದು ಅವರ ಅಮೂಲ್ಯವಾದ ಸಮಯ ಮಾತ್ರ. ಹೀಗಿದ್ರೂ ಬಹಳಷ್ಟು ಸಲ ತೆರಿಗೆ ಹಾಗೂ ಇತರೆ ದೂರುಗಳನ್ನ ಪರಿಹರಿಸುವುದರಲ್ಲೇ ಶ್ರಮ ವ್ಯರ್ಥವಾಗುತ್ತವೆ. ಹೀಗಾಗಿ ಅರಿಸ್ಟಾಟಲ್ ಕನ್ಸಲ್ಟೆನ್ಸಿ ಯಾವುದೇ ಕಂಪೆನಿಗಳ ಕೆಲಸ ಶುರುಮಾಡುವುದಕ್ಕೆ ಮೊದಲು 21 ದಿನಗಳ ಕಾಲ ಕ್ರೋಢೀಕರಣ ಪ್ರಕ್ರಿಯೆ ನಡೆಸುತ್ತದೆ.

ಇದಿಷ್ಟೇ ಅಲ್ಲದೆ ಅರಿಸ್ಟಾಟಲ್ ಕನ್ಸಲ್ಟೆನ್ಸಿ ಸಂಕೀರ್ಣ ಹೂಡಿಕೆದಾರರ ಅಗತ್ಯಕ್ಕೆ ತಕ್ಕಂತೆ ಫೈನಾನ್ಸ್ ಸಪೋರ್ಟನ್ನೂ ನೀಡುತ್ತದೆ. ಇವುಗಳ ನಿರ್ವಹಣೆಗಾಗೇ ಈ ಕಂಪನಿ ವಿಶೇಷ ತಂಡವನ್ನ ಹೊಂದಿದೆ. ಹೀಗಾಗಿ ಅದೆಷ್ಟೋ ಕಂಪನಿಗಳಿಗೆ ಶೇಕಡಾ 25ರಿಂದ 30 ರಷ್ಟು ಸಂಭಾವ್ಯ ನಷ್ಟವನ್ನ ತಪ್ಪಿಸಿದೆ. ಹೀಗಿದ್ರೂ ಅರಿಸ್ಟಾಟಲ್ ಕನ್ಸಲ್ಟೆನ್ಸಿ ಪಡೆಯುವ ಚಾರ್ಜ್ ಕಂಪನಿಗೆ ಅನುಗುಣವಾಗಿ ತಿಂಗಳಿಗೆ 40 ಸಾವಿರದಿಂದ 15 ಲಕ್ಷ ಮಾತ್ರ.. ಕೇವಲ ದೊಡ್ಡ ಕಾರ್ಪೋರೇಟ್ ಕಂಪೆನಿಗಳು ಮಾತ್ರ ಫೈನಾನ್ಶಿಯಲ್ ಲಾಭ ಪಡೆಯುವುದಲ್ಲ.. ಸಣ್ಣ ಹೂಡಿಕೆದಾರರಿಗೂ ಅದು ತಲುಪಬೇಕು ಅನ್ನೋದು ಅರಿಸ್ಟಾಟಲ್ ಕನ್ಸಲ್ಟೆನ್ಸಿಯ ಮೂಲ ಉದ್ದೇಶ.

ಕ್ಲೈಂಟ್ ಗಳ ಸ್ವಾಧೀನ..

ಇಷ್ಟೆಲ್ಲಾ ಇದ್ರೂ ಅರಿಸ್ಟಾಟಲ್ ಕನ್ಸಲ್ಟೆನ್ಸಿಗೆ ಆರಂಭದಲ್ಲಿ ಕ್ಲೈಂಟ್ ಗಳನ್ನ ತಲುಪುವ ಹಾದಿ ಅಷ್ಟು ಸರಳವಾಗಿರಲಿಲ್ಲ. ಈ ಕಂಪೆನಿಯೊಂದಿಗೆ ಮೊದಲು ಟೈ ಅಪ್ ಆಗಿದ್ದು ರಾಯಲ್ ಬ್ಯಾಂಕ್ ಆಪ್ ಸ್ಕಾಟ್ ಲೆಂಡ್ ಹಾಗೂ ಇಂಡಿಯಾ ಹಾಸ್ಪಿಟಲಿಟಿ ಕಾರ್ಪೋರೇಷನ್.. ಇದೀಗ ತನ್ನ ವ್ಯಾಪ್ತಿಯನ್ನ ಹೆಚ್ಚಿಸಿಕೊಂಡಿರುವ ಅರಿಸ್ಟಾಟಲ್ ಕನ್ಸಲ್ಟೆನ್ಸಿ ದೆಹಲಿ, ಚೆನ್ನೈ ಹಾಗೂ ಬೆಂಗಳೂರಿನಲ್ಲಿ 40ಕ್ಕೂ ಹೆಚ್ಚು ಕ್ಲೈಂಟ್ ಗಳನ್ನ ಹೊಂದಿದೆ. ಇದ್ರಲ್ಲಿ ಜಬಾಂಗ್, ಫ್ಯಾಪ್ ಫರ್ನೀಷ್, ಫುಟ್ ಪಾಂಡಾ, ಟೊಲೆಕ್ಸೋ, ಗೋಜಾವಾಸ್ ನಂತಹ ಪ್ರಮುಖ ಕಂಪನಿಗಳನ್ನ ಒಳಗೊಂಡಿವೆ. ಇದರಿಂದಾಗಿ ಅರಿಸ್ಟಾಟಲ್ ಕನ್ಸಲ್ಟೆನ್ಸಿ ಕಂಪನಿಯ ವರ್ಷದ ಆದಾಯ 4 ಕೋಟಿ ರೂಪಾಯಿಗೆ ತಲುಪಿದ್ದು, ಮುಂದಿನ ವರ್ಷ 6 ಕೋಟಿ ತಲುಪುವ ಟಾರ್ಗೇಟ್ ಹೊಂದಿದೆ. ಹೀಗೆ ಬೆಳೆಯುತ್ತಿರುವ ಅರಿಸ್ಟಾಟಲ್ ಕನ್ಸಲ್ಟೆನ್ಸಿ ನಿಜಕ್ಕೂ ಸಣ್ಣ ಹೂಡಿಕೆದಾರರ ಪಾಲಿಗೆ ಅರಿಸ್ಟಾಟಲ್.

ಲೇಖಕರು: ಅಪರಾಜಿತ ಚೌಧರಿ
ಅನುವಾದಕರು: ಬಿ ಆರ್ ಪಿ

Related Stories