ಸ್ಫೂರ್ತಿ ಮತ್ತು ಸಂಪ್ರದಾಯದ ಅನ್ವೇಷಣೆಯಲ್ಲಿ ಹುಟ್ಟಿದ್ದು "ಪ್ರಯೋಗ್"

ಆರ್​​.ಪಿ.

0

“ಅದು 2001ನೇ ಇಸ್ವಿ. ಮ್ಯಾನ್‍ಹಟನ್​​ನ ಒಂದು ಅಗಲವಾದ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಿದ್ದೆ. ಅಮೆರಿಕ ಮತ್ತು ಯೂರೋಪ್‍ನ ಬ್ರಾಂಡ್‍ಗಳ ಜಾಹೀರಾತುಗಳು ತಾಮುಂದು ನಾಮುಂದು ಎಂದು ಅಂಗಡಿಗಳ ಮುಂದೆ ತಲೆಎತ್ತಿದ್ದವು. ನೈಕಿ, ರಿಬಾಕ್, ಕೊಕಾಕೊಲಾ, ಪೆಪ್ಸಿ, ಬಿಎಂಡಬ್ಲ್ಯೂ, ವೋಲ್ವೊ ಇದೆಲ್ಲವೂ ನಿಮಗೆ ಗೊತ್ತಿರೋದೇ. ಅದೇ ರೀತಿ ಜಪಾನ್ ಬ್ರಾಂಡ್‍ಗಳಾದ ನಿಕಾನ್, ಕ್ಯಾನನ್, ಟೊಯೊಟಾ, ಹೊಂಡಾ, ಸೋನಿ ಇತ್ಯಾದಿಗಳು, ಕೊರಿಯನ್ ಕಂಪನಿಗಳಾದ ಹುಂಡೈ, ಎಲ್‍ಜಿ, ಸ್ಯಾಮ್ಸಂಗ್ ಮತ್ತು ಕಿಯಾ ಜಾಗಕ್ಕಾಗಿ ಸ್ಪರ್ಧೆಗೆ ಇಳಿದಿದ್ದವು. ಆ ಸಮಯದಲ್ಲಿ ನಾನು ಹೆಸರೇ ಕೇಳಿರದ ಕುಡಿಯುವ ನೀರಿನ ಬಾಟಲ್ ಬ್ರಾಂಡ್‍ನ ಬೋರ್ಡ್ ಅನ್ನು ಅಂಗಡಿಯೊಂದರಲ್ಲಿ ನೋಡಿದೆ. ಅದು ಫಿಜಿ ವಾಟರ್. ಆ ಹೆಸರನ್ನು ನೋಡಿದ ಕೂಡಲೇ ಏನೊ ಒಂದು ವಸ್ತು ಜೋರಾಗಿ ತಲೆಗೆ ಹೊಡೆದಂತೆ ಆಯಿತು!” ಎಂದರು ಪ್ರಯೋಗ್​​ನ ಸಹ ಸಂಸ್ಥಾಪಕ ಮತ್ತು ಪ್ರಚಾರ ಮುಖ್ಯಸ್ಥ ಡೇವ್ ಬ್ಯಾನರ್ಜಿ.

ಸ್ಫೂರ್ತಿ ಮತ್ತು ಸಾಕ್ಷಾತ್ಕಾರ: 

ಡೇವ್ ಜಾಹೀರಾತು ವಲಯದವರು. ಬ್ರಾಂಡ್‍ಗಳನ್ನು ಗಮನಿಸೊದು ಆತನ ಪ್ರಮುಖ ಕೆಲಸ. ಭಾರತದಲ್ಲಿ 8 ವರ್ಷ ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಮಾಡಿದ ನಂತ್ರ ಡೇವ್ ನ್ಯೂಯಾರ್ಕ್​ಗೆ ಸ್ಥಳಾಂತರಗೊಂಡು ಅಲ್ಲಿ ಜಾಹೀರಾತು ಏಜನ್ಸಿಯೊಂದನ್ನು ಶುರುಮಾಡಿದ್ದರು. ಬ್ರಾಂಡ್‍ಗಳನ್ನು ಗುರುತಿಸುವುದು, ಅದರ ಬಗ್ಗೆ ವಿಮರ್ಶೆ, ಬ್ರಾಂಡ್ ಮೌಲ್ಯದ ವಿಶ್ಲೇಷಣೆ ಆತನ ಮತ್ತೊಂದು ಗುಣ. ಫಿಜಿ ವಾಟರ್‍ನ ಕತೆ ಆತನ ಮನಸ್ಸಲ್ಲಿ ಉಳಿದುಬಿಟ್ಟಿತ್ತು. ದಕ್ಷಿಣ ಪೆಸಿಫಿಕ್‍ನ ಒಂದು ಬಿಂದುವಿನಿಂದ ಸಾಧ್ಯವಿರಬೇಕಾದ್ರೆ, ಭಾರತದಿಂದೇಕೆ ಸಾಧ್ಯವಿಲ್ಲ. ಹೀಗಾಗಿ ಡೇವ್ ಆಶ್ಚರ್ಯವಿಲ್ಲದೇ ಭಾರತಕ್ಕೆ ಬಂದುಬಿಟ್ಟರು. ಭಾರತದ ಮೊದಲ ಜಾಗತಿಕ ಗ್ರಾಹಕರ ಬ್ರಾಂಡ್‍ನ ಒಂದರ ಭಾಗವಾಗಿದ್ದೇನೆ ಅಂತಾರೆ ಡೇವ್.

ಪ್ರಯೋಗ್​​ನ ಸಹ ಸಂಸ್ಥಾಪಕಿ ಮತ್ತು ಉತ್ಪನ್ನ ಮುಖ್ಯಸ್ಥೆ ಮಲ್ಲಿಕಾ ಬರುವಾ ಇದಕ್ಕೂ ಮುನ್ನ ಕೆಲ ಕಾಲ ಲೆವಿಸ್ ಇಂಡಿಯಾದಲ್ಲಿ ವಿನ್ಯಾಸ ವಿಭಾಗದ ಮುಖ್ಯಸ್ಥೆಯಾಗಿದ್ದರು. ಫ್ಯಾಷನ್ ಜಗತ್ತಿನಲ್ಲಿ ಅಕೆಗೆ 20ವರ್ಷ್ಕಕೂ ಹೆಚ್ಚಿನ ಅನುಭವವಿದೆ. 2001ರಲ್ಲಿ ಯೋಗಕ್ಕೆ ಮನಸೋತ ಆಕೆ ಆಗಿನಿಂದಲೂ ಅಭ್ಯಾಸ ಮಾಡಿಕೊಂಡು ಬರುತ್ತಿದ್ದಾರೆ. ಆದ್ರೆ ಆಕೆಗೆ ಮಹಿಳೆಯರು ತೊಡುವ ಯೋಗ ಧಿರಿಸಿನ ವಿಷಯದಲ್ಲಿ ಅಸಮಾಧಾನವಿತ್ತು. ಬಿಸಿಯಾಗುವ ಟೈಟ್ಸ್​​ಗಳು, ಬೆವರು ಹೀರೋ ಪ್ಯಾಂಟ್‍ಗಳು, ಕ್ರೀಡಾ ಧಿರಿಸು, ಟ್ರಾಕ್ ಸೂಟ್ಸ್, ಟಿ ಶರ್ಟ್ ಮತ್ತು ಟಾಪ್‍ಗಳು ಸೌಂದರ್ಯಪ್ರಜ್ಞೆ ಇಲ್ಲದವಾಗಿದ್ದವು. ದೈಹಿಕ, ಮಾನಸಿಕ, ಆಧ್ಯಾತ್ಮಿಕ ಶಿಸ್ತಿನ ಯೋಗಕ್ಕೆ ಮತ್ತಷ್ಟು ಉತ್ತಮವಾದ್ದನ್ನು ಕೊಡಬೇಕಿತ್ತು. “ನಾವು ವಿಶ್ವದ ಅತ್ಯುತ್ತಮ ಯೋಗ ವಸ್ತ್ರದ ಬ್ರಾಂಡ್‍ ಅನ್ನು ಶುರುಮಾಡಬೇಕಿತ್ತು. ಪಾಲಿಸ್ಟರ್ ಮತ್ತು ನೈಲಾನ್ ಧಿರಿಸುಗಳನ್ನು ಯೋಗಕ್ಕೆ ಬಳಸುವುದರ ವಿರುದ್ಧ ನಾವು ಅರಿವು ಮೂಡಿಸಬೇಕಿತ್ತು” ಎನ್ನುತ್ತಾರೆ ಮಲ್ಲಿಕಾ.

ಸಂಪ್ರದಾಯ: 

ವೇದಕಾಲಕ್ಕೂ ಮುಂಚಿನಿಂದಲೂ ಯೋಗ ಭಾರತಕ್ಕೆ ಸಂಬಂಧಿಸಿದ್ದರೂ ಅದರ ಹುಟ್ಟಿನ ನಿಖರತೆ ಬಗ್ಗೆ ಸ್ಪಷ್ಟನೆ ಇಲ್ಲ. ಕ್ರಿಸ್ತಪೂರ್ವ 5 ರಿಂದ 1ನೇ ಶತಮಾನದ ಮಧ್ಯಂತರದಲ್ಲಿ ಯೋಗ ಹುಟ್ಟಿಬಹುದು. ಆದ್ರೆ ಪ್ರಚಲಿತಕ್ಕೆ ಬಂದಿದ್ದು 19 ಮತ್ತು 20ನೇ ಶತಮಾನದದಲ್ಲಿ. 1980ರ ದಶಕದಲ್ಲಿ ಯೋಗ ದೈಹಿಕ ವ್ಯಾಯಾಮ ವ್ಯವಸ್ಥೆಯಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಖ್ಯಾತಿ ಗಳಿಸಿತು. ಭಾರತದ ಸಂಪ್ರದಾಯದಲ್ಲಿ ಯೋಗ ದೈಹಿಕ ವ್ಯಾಯಾಮಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮತ್ತು ಧ್ಯಾನಕ್ಕೆ ಸಂಬಂಧಿಸಿದ್ದಾಗಿದೆ.

ಭಾರತ ಮತ್ತು ಯೋಗಕ್ಕೆ ಸಂಬಂಧಿಸಿದ ಇತಿಹಾಸ ಗಮನಿಸಿದಾಗ, ಇಷ್ಟರಲ್ಲಿ ಯಾವುದಾದರೊಂದು ಭಾರತೀಯ ಕಂಪನಿ ಶುದ್ಧತೆ ಮತ್ತು ಸ್ವಚ್ಛತೆಗೆ ಮಹತ್ವ ಕೊಡುವಂತೆ ಯೋಗ ಧಿರಿಸಿಗೆ ಕಡ್ಡಾಯ ಬದಲಾವಣೆ ತರಬೇಕಿತ್ತು. ಇದನ್ನೇ ನಾವು ಪ್ರಯೋಗ್‍ನ ತಾಂತ್ರಿಕ ಕೈಪಿಡಿಯಲ್ಲೂ ಹೇಳಿದ್ದೇವೆ. ‘ಯೋಗ ಭಾರತದಿಂದ ಬಂದದ್ದೇ ಆದಲ್ಲಿ, ನಿಜವಾದ ಯೋಗ ವಸ್ತ್ರ ಬೇರೆಡೆಯಿಂದ ಬರಲು ಸಾಧ್ಯವಿಲ್ಲ’.

ಉತ್ಪನ್ನ

ಪ್ರಯೋಗ್ ಬ್ರಾಂಡ್‍ನ ಮಾಲೀಕತ್ವವನ್ನು ಐಕ ಯೋಗವೇರ್ ಪ್ರೈವೇಟ್ ಲಿಮಿಟೆಡ್ ಹೊಂದಿದೆ. 2013ರಲ್ಲಿ ಸ್ಥಾಪನೆಯಾದರೂ 2015ರ ಫೆಬ್ರವರಿಯಿಂದ ವಸ್ತ್ರ ತಯಾರುಮಾಡಲು ಶುರುವಾಯಿತು. ಪ್ರಯೋಗ್ ಬ್ರಾಂಡ್‍ಅನ್ನು ಅಧಿಕೃತವಾಗಿ 2015ರ ಜೂನ್ 21ರಂದು ಬಿಡುಗಡೆಗೊಳಿಸಲಾಯಿತು. ಅಂದೇ ವಿಶ್ವ ಯೋಗ ದಿನಾಚರಣೆ ಇದ್ದದ್ದು ಕಾಕತಾಳೀಯ. ಅತ್ಯಂತ ವಿಶೇಷ ಯೋಗ ಧಿರಿಸಿನ ವಿನ್ಯಾಸ ಮತ್ತು ಉತ್ಪಾದನೆಗೆ ಪ್ರಯೋಗ್ ಬದ್ಧವಾಗಿದೆ.

“ನಾವು ಆಕ್ರಮಣಕಾರಿಯಾಗಿದ್ದೇವೆ. ಯೋಗ ಧಿರಿಸಿನಲ್ಲಿ ನೈಲಾನ್ ಮತ್ತು ಪಾಲಿಸ್ಟರ್ ಬಳಕೆ ಮಾಡುತ್ತಿರುವ ಎಲ್ಲಾ ಬ್ರಾಂಡ್‍ಗಳನ್ನು ನಾವು ಹೊಡೆದು ಹಾಕುತ್ತೇವೆ. ಇಷ್ಟು ದಿನ ಯೋಗಕ್ಕೆ ಜನರು ಧರಿಸುತ್ತಿದ್ದ ಬಟ್ಟೆ ಪ್ಲಾಸ್ಟಿಕ್‍ನಿಂದ ಮಾಡಿದ್ದು ಎಂಬುದನ್ನು ತಿಳಿಸಬೇಕಿದೆ. ಯೋಗಾಭ್ಯಾಸವನ್ನು ಮತ್ತಷ್ಟು ಉತ್ತೇಜಿಸಲು ನೈಸರ್ಗಿಕವಾಗಿ ಉಸಿರಾಡುವ ಬಟ್ಟೆಗಳನ್ನು ಅವರು ತೊಡಬೇಕು” ಎನ್ನುತ್ತಾರೆ ಡೇವ್.

ನೈಸರ್ಗಿಕವಾಗಿ ಹತ್ತಿ ಮತ್ತು ಮೊಡಲ್‍ನ ನೂಲುಗಳಿಂದ ತೆಗೆದ ಉಸಿರಾಡುವ ಹೈಪರ್‍ಬ್ರೆತ್ ಬಟ್ಟೆಯನ್ನು ಪ್ರಯೋಗ್ ಅಭಿವೃದ್ಧಿಪಡಿಸಿದೆ. ನಮ್ಮ ಸ್ವಾಮ್ಯದಲ್ಲಿರೋ ಇದು ನೂಲುಗಳ ಮಿಶ್ರಣದ ಬಟ್ಟೆಯಾಗಿದ್ದು, ಯೋಗಾಭ್ಯಾಸ ಮಾಡುವಾಗ ಆರಾಮವಾಗಿರುತ್ತದೆ ಮತ್ತು ಗಾಳಿಯಾಡುತ್ತದೆ. ಗುಣಮಟ್ಟ ಮತ್ತು ತಯಾರಿಕೆ ವಿಶ್ವಮಟ್ಟದಲ್ಲಿದ್ದು ಹತ್ತಿಯು ಶೇ 100 ರಷ್ಟು ಮಣ್ಣಿನಲ್ಲಿ ಕರಗುತ್ತದೆ. ಈ ಬಟ್ಟೆಯನ್ನು ಹಿಗ್ಗಿಸಲು ಇದರ ಹತ್ತಿ ನೂಲಿಗೆ ಶೇ10ರಷ್ಟು ಲೈಕ್ರಾವನ್ನು ಸೇರಿಸಲಾಗುತ್ತದೆ. ಇದರ ತಯಾರಿಕೆಯಲ್ಲಿ ಬಟ್ಟೆಯು ‘ತ್ವಚೆಗೆ ಕೇವಲ ಹತ್ತಿಯ ಅನುಭವ ಮಾತ್ರ ಕೊಡುತ್ತದೆ’. ಸಧ್ಯಕ್ಕೆ ಪ್ರಯೋಗ್‍ನಲ್ಲಿ ಮಹಿಳೆಯರ ಉಡುಗೆಗಳನ್ನು ಮಾತ್ರ ತಯಾರಿಸಲಾಗುತ್ತಿದೆ. ಧೋತಿ ಶೈಲಿಯ ನಿಲುವಂಗಿ ಮತ್ತು ಪ್ಯಾಂಟ್‍ಗಳು, ವಿವಿಧ ರೀತಿಯ ಟಾಪ್ ಗಳು, ಕಾಪ್ರಿಸ್ ಮತ್ತು ಟ್ಯೂನಿಕ್ಸ್ ಪ್ರಸಿದ್ಧಿ ಪಡೆದಿದ್ದು ಹೆಚ್ಚು ಮಾರಾಟವಾಗ್ತಿದೆ.

ಮಾರುಕಟ್ಟೆ ವಿಸ್ತರಣೆ ಮತ್ತು ಸ್ಪರ್ಧೆ: 

ಅಮೆರಿಕದಲ್ಲಿ 26 ಶತಕೋಟಿ ಡಾಲರ್‍ಗಳ ಯೋಗ ಮಾರುಕಟ್ಟೆ ಇದೆ. ಇನ್ನು ವಿಶ್ವ ಮಾರುಕಟ್ಟೆಯಲ್ಲಿ ಯೋಗಕ್ಕೆ 80ಶತಕೋಟಿ ಡಾಲರ್‍ಗಳ ವಹಿವಾಟಿದೆ. ಇದರ ಪ್ರಮಾಣ ಬಹಳ ದೊಡ್ಡದಿದೆ. ಇದನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳುವವರು ಆಶಾಶದೆತ್ತರಕ್ಕೆ ಮುಟ್ಟಬಹುದು. “90% ಕಂಪನಿಯ ವಹಿವಾಟು ಭಾರತದಿಂದ ಹೊರಗಡೆ ಆಗಬೇಕು ಅನ್ನೋದು ನಮ್ಮ ನಿರೀಕ್ಷೆ. ಅದರಲ್ಲಿ 70% ಅಮೆರಿಕ ಮತ್ತು ಕೆನಡಾದಿಂದ ಆಗಬಹುದು. ಸಧ್ಯ ಹೆಚ್ಚಿನ ವಹಿವಾಟು ಅಮೆರಿಕದ ಕ್ಯಾಲಿಫೋರ್ನಿಯಾ ಮತ್ತು ನ್ಯೂಯಾರ್ಕ್‍ನಿಂದ ಹಾಗೂ ಭಾರತದಲ್ಲಿ ದೆಹಲಿ ಮತ್ತು ಬೆಂಗಳೂರಿನಿಂದ ಆಗುತ್ತಿದೆ” ಎಂದು ಹೇಳ್ತಾರೆ ಡೇವ್.

ಈಗಿನ ಮಟ್ಟಿಗೆ ಹೇಳೋದಾದ್ರೆ ಯೋಗ ಮಾರುಕಟ್ಟೆ ಅಷ್ಟೇನೂ ವಿಶೇಷವಾಗಿಲ್ಲ. ಯೋಗ ವಸ್ತ್ರ ಬಿಡುವಿನ ಹಾಗೂ ಆಟದ ಸಮಯದ ಸಂಯೋಜನೆಯ ಧಿರಿಸಾಗಿದೆ. ವ್ಯಾಂಕೋವರ್‍ನ ಲುಲುಲೆಮನ್ ಈ ಮಾರುಕಟ್ಟೆಯ ನಾಯಕನಾಗಿದ್ದಾರೆ. ಇಲ್ಲಿರೋ ಇನ್ನೂ ಕೆಲವರೆಂದರೆ ಪ್ರಾಣ, ಯೋಗಶ್ಮೋಗ, ಗ್ಯಾಪ್ ಅಥ್ಲೀಟಾ, ನೈಕಿ, ರಿಬಾಕ್ ಮತ್ತಿತರರು.

ಹಣಕಾಸು ಮತ್ತು ಆದಾಯ ಯೋಜನೆ: 

ರಿಸೋರ್ಸ್ ಕ್ಯಾಪಿಟಲ್‍ನ ನರೇಶ್ ಮಲ್ಹೋತ್ರ ಮತ್ತು ವಾಮ್ ವೆಂಚರ್ಸ್‍ನ ಅಜಯ್ ಮಲ್ಹೋತ್ರ ಈ ಕಂಪನಿಗೆ ಹಣ ತೊಡಗಿಸಿದ್ದಾರೆ. ಇದಕ್ಕೂ ಮುನ್ನ ನರೇಶ್ ಸಿಕ್ವಿಯಾ ಕಾಪಿಟಲ್, ಕಾಫಿ ಡೇ ನಲ್ಲಿ ಕೆಲಸ ಮಾಡಿದ್ದರು ಮತ್ತು ಕೆಪಿಎಂಜಿಯಲ್ಲಿ ಪಾಲುದಾರರಾಗಿದ್ದರು. ಅಜಯ್ ಸಹ ಕೆಪಿಎಂಜಿ ಕೆಲಸ ಮಾಡಿದ್ದು, ಯುಬಿಎಸ್ ಜತೆ ಈಗ ನಿಗದಿಯಾಗಿದ್ದಾರೆ.

ಕಂಪನಿಯ ಯೋಜನೆ ಮಹತ್ವಾಕಾಂಕ್ಷೆಯಿಂದ ಕೂಡಿದೆ. ಭಾರತದ ಮೊದಲ ಜಾಗತಿಕ ಗ್ರಾಹಕ ಬ್ರಾಂಡ್ ಆಗಲು ಯೋಜನೆ ರೂಪಿಸಿದ್ದಾರೆ. ಮುಂದಿನ ನಾಲ್ಕು ವರ್ಷದಲ್ಲಿ ಕಂಪನಿ 100 ಶತಕೋಟಿ ಡಾಲರ್​​​​​ ವಹಿವಾಟು ನಡೆಸಬೇಕೆಂಬ ಗುರಿ ಹೊಂದಿದೆ. ಯೋಗಕ್ಕೆ ಅತಿದೊಡ್ಡ ಮಾರುಕಟ್ಟೆಯಾಗಿರೋ ಉತ್ತರ ಅಮೆರಿಕಾದಲ್ಲಿ ಬ್ರಾಂಡ್ ಬಗ್ಗೆ ಈಗಾಗಲೇ ಒಳ್ಳೆಯ ಮಾತುಗಳು ಕೇಳಿಬರುತ್ತಿದೆ. ಪ್ರಯೋಗ್ ಬ್ರಾಂಡ್ ನ ಪ್ರಚಾರದ ಹೊಣೆಯನ್ನು ಲಾಸ್ ಏಂಜಲಿಸ್ ನಲ್ಲಿರೋ ಎಸ್‍ಕೆಸಿ ನೋಡಿಕೊಳ್ಳುತ್ತಿದೆ.

ಪ್ರಯೋಗ್ ತಂಡ: 

ವಿಶ್ವಮಟ್ಟದ ಉತ್ಪನ್ನ ಹಾಗೂ ಜಾಗತಿಕವಾಗಿ ಬ್ರಾಂಡ್ ಬೆಳೆಸಲು ಬ್ರಾಂಡಿಂಗ್, ಮಾರ್ಕೆಟಿಂಗ್, ಜಾಹೀರಾತು ಮತ್ತು ಸಂಪರ್ಕ ತಂತ್ರಗಾರಿಕೆಗೆ ಅನುಭವವುಳ್ಳ ತಂಡವೇ ಬೇಕು. ಪ್ರಯೋಗ್‍ನ ಎಲ್ಲ ಮೂಲ ಸದಸ್ಯರು ಸಹ-ಸಂಸ್ಥಾಪಕರು ಸಹ ಆಗಿದ್ದು ಅವರ ಹಿನ್ನೆಲೆ ಮತ್ತು ಅನುಭವ ಚೆನ್ನಾಗಿದೆ.

ಐಐಎಂ ಕೊಲ್ಕತ್ತ ಮತ್ತು ಐಐಟಿ ವಿದ್ಯಾರ್ಥಿ ಸಂಜಯ್ ನಾಯಕ್‍ಗೆ ಮಾರುಕಟ್ಟೆ, ಮಾರಾಟ, ಮಾರುಕಟ್ಟೆ ಸಂವಹನ ಕ್ಷೇತ್ರದಲ್ಲಿ 32 ವರ್ಷಗಳ ಅನುಭವವಿದೆ. ಪ್ರಯೋಗ್‍ಗೆ ಸೇರೋದಕ್ಕೂ ಮುನ್ನ ಸಂಜಯ್ 9 ವರ್ಷಗಳ ಕಾಲ ಭಾರತದಲ್ಲಿರೋ ಮೆಕ್‍ಆನ್ ವರ್ಲ್ಡ್ ಗ್ರೂಪ್‍ನಲ್ಲಿ ಅಧ್ಯಕ್ಷರಾಗಿದ್ದರು.

ಸಂವಹನ ಮತ್ತು ಬ್ರಾಂಡಿಂಗ್ ಕ್ಷೇತ್ರದಲ್ಲಿರೋ ಡೇವ್ ಬ್ಯಾನರ್ಜಿ ಫಿಶ್‍ಐ ಕ್ರಿಯೇಟೀವ್‍ಗೆ ಸಿಇಓ. ಪ್ರಯೋಗ್‍ನಲ್ಲಿ ಮಾರುಕಟ್ಟೆ ಕ್ಷೇತ್ರದ ಮುಖ್ಯಸ್ಥನಾಗಿದ್ದಾರೆ. ವಿವಿಧ ಕ್ಷೇತ್ರದ ಹೆಸರುವಾಸಿ ಬ್ರಾಂಡ್‍ಗಳಿಗೆ ಡೇವ್ ಕೆಲಸ ಮಾಡಿದ್ದಾರೆ. ಸಿಎನ್‍ಎನ್‍ನಲ್ಲಿ ಇವರ ಕುರಿತಾದ ಸಾಕ್ಷ್ಯ ಚಿತ್ರ ಪ್ರಸಾರವಾಗಿದೆ. ದಿ ಎಕನಾಮಿಸ್ಟ್ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಇವರ ಬಗ್ಗೆ ಬರಹ ಪ್ರಕಟವಾಗಿದೆ.

ಡಿಜಿಟಲ್ ಡಿಸೈನ್ ಇಂಡಸ್ಟ್ರಿಯೊಂದರ ಮುಖ್ಯಸ್ಥೆ ಮಲ್ಲಿಕಾ ಬರುವಾ ಪ್ರಯೋಗ್ ನಲ್ಲಿ ಉತ್ಪನ್ನ ಮುಖ್ಯಸ್ಥೆಯಾಗಿದ್ದಾರೆ. ಈಕೆ ವಿಶೇಷವಾಗಿ ಅಂತರ್ಜಾಲ ತಂತ್ರಗಾರಿಕೆ ಮತ್ತು ಸಾಮಾಜಿಕ ಮಾಧ್ಯಮಗಳ ಬಗ್ಗೆ ನೈಪುಣ್ಯತೆ ಪಡೆದಿದ್ದಾರೆ. ಇದಕ್ಕೂ ಮೊದಲು ಪೆರ್ರಿ ಕಾರ್ಡಿನ್, ಲೆವಿಸ್ ಇವರಿಗೆ ಅತ್ಯುತ್ತಮ ಮಾನ್ಯತೆ ಕೊಟ್ಟಿವೆ.

ಮತ್ತೊಬ್ಬರು ಪ್ರಯೋಗ್‍ನಲ್ಲಿ ವಿನ್ಯಾಸ ಮುಖ್ಯಸ್ಥೆಯಾಗಿರೋ ಪ್ರಿಯಾಂಕ ಅಯ್ಯಂಗಾರ್. ನಿಫ್ಟ್ ನಲ್ಲಿ ಪದವಿ ಪಡೆದಿರೋ ಈಕೆ ಲೆವಿ ಸ್ಟ್ರಾಸ್ ಇಂಡಿಯಾದಲ್ಲಿ ಮಹಿಳಾ ಧಿರಿಸು ವಿಭಾಗದ ಮುಖ್ಯಸ್ಥೆಯಾಗಿದ್ದರು. ಡೈಯಿಂಗ್‍ನಲ್ಲಿ ಬಣ್ಣ ಪ್ರಯೋಗ ಮತ್ತು ಫ್ಯಾಬ್ರಿಕ್ ಕುಶಲ ತಂತ್ರಗಾರಿಕೆ ಇವರಿಗೆ ಇಷ್ಟದ ವಿಷಯ.

ಮಾರ್ಕೆಟಿಂಗ್: ದೇಶೀಯವಾಗಿ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗೆ ಉತ್ಪನ್ನಗಳನ್ನು ಇ-ಕಾಮರ್ಸ್ ಮೂಲಕ ಮಾತ್ರ ಮಾರಾಟ ಮಾಡಲಾಗುತ್ತಿದೆ. ಭವಿಷ್ಯದಲ್ಲಿ ವಿಶ್ವದಾದ್ಯಂತ ಯೋಗ ಸ್ಟುಡಿಯೋ ಮೂಲಕ ಹಾಗೂ ಅಮೆರಿಕದಲ್ಲಿರೋ ನೀಮನ್ ಮಾರ್ಕಸ್, ಸಾಕ್ಸ್ ಫಿಫ್ತ್ ಅವೆನ್ಯೂ ಮತ್ತು ನಾರ್ಡ್‍ಸ್ಟ್ರೋಮ್‍ನಂತಹ ಉನ್ನತ ದರ್ಜೆಯ ಮಳಿಗೆಗಳ ಮೂಲಕ ಮಾರಾಟ ಮಾಡುವ ಯೋಜನೆ ಹೊಂದಿದ್ದಾರೆ.

ಜಾಹೀರಾತು ಮತ್ತು ಬ್ರಾಂಡಿಂಗ್ ಕ್ಷೇತ್ರದಲ್ಲಿ ಅಪಾರವಾದ ಅನುಭವ ಹೊಂದಿರೋ ಸಂಜಯ್ ಮತ್ತು ಡೇವ್ ತಮ್ಮ ಜಾಹೀರಾತಿನ ಬಗ್ಗೆ ಬಹಳ ಗಂಭೀರವಾಗಿದ್ದಾರೆ. ಅತ್ಯುತ್ತಮ ಜಾಹೀರಾತು ಮತ್ತು ಮಾಹಿತಿಗಾಗಿ ಜಾಗತಿಕ ಮಾಡೆಲ್‍ಗಳು ಹಾಗೂ ಫೋಟೋಗ್ರಾಫರ್ ಪ್ರತಿಭೆಗಳೊಂದಿಗೆ ಕೆಲಸ ಮಾಡ್ತಿದ್ದಾರೆ.

ಉತ್ಪನ್ನ ಬಿಡುಗಡೆ ತಂತ್ರವಾಗಿ ‘ಫ್ರಂ ದಿ ಬರ್ತ್ ಪ್ಲೇಸ್ ಆಫ್ ಯೋಗ’ ಹೆಸರಿನ ವೆಬ್ ಫಿಲ್ಮಂ ಅನ್ನು ದೇಶದ 26 ಸ್ಥಳಗಳಲ್ಲಿ 50 ದಿನಗಳಲ್ಲಿ ಶೂಟ್ ಮಾಡಲಾಗಿದೆ. ಇದಕ್ಕೆ ಗ್ರಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಸಂಗೀತ ನೀಡಿದ್ದಾರೆ.

ಮುಂದಿನ ಹಾದಿ: 

ಉತ್ಪನ್ನ ತಯಾರಿಕೆ ಮತ್ತು ಮಾರ್ಕೆಟಿಂಗ್​​ಗೆ ಹಣವನ್ನು ಸುರಿಯಬೇಕಿದೆ. ಉತ್ತರ ಅಮೆರಿಕದಲ್ಲಿ ವಿತರಣೆಗೆ ಗಮನ ಹರಿಸಲೂ ಹೆಚ್ಚಿನ ಹಣಕಾಸು ಬೇಕಿದೆ. ಮುಂದಿನ 3 ವರ್ಷಗಳಲ್ಲಿ 15 ರಿಂದ 20 ಮಿಲಿಯನ್ ಅಮೆರಿಕನ್ ಡಾಲರ್ ಸಂಗ್ರಹಿಸಲು ಕಂಪನಿ ಯೋಜನೆ ರೂಪಿಸಿದೆ. ಆರು ವರ್ಷಗಳಲ್ಲಿ ನ್ಯೂಯಾರ್ಕ್ ಸ್ಟಾಕ್​​ ಎಕ್ಸ್​​​ಚೇಂಜ್ ನಲ್ಲಿ ಲಿಸ್ಟಿಂಗ್ ಆಗಬೇಕೆಂಬ ಯೋಜನೆ ಕಂಪನಿಯದ್ದು. ಕಂಪನಿಯ ಗುರಿ ಆಕ್ರಮಣಕಾರಿಯಾಗಿದೆ. ಆದ್ರೆ ಆಕಾಶಕ್ಕೆ ಏಣಿ ಹಾಕುವವರು ಕಡೇ ಪಕ್ಷ ಮೋಡವನ್ನಾದ್ರೂ ಮುಟ್ಟಬೇಕಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರ್ಕೆಟಿಂಗ್ ಮತ್ತು ಬ್ರಾಂಡಿಂಗ್ ಸವಾಲುಗಳು ಇವರ ಮುಂದಿದೆ. “ರೂಪಾಯಿಯೊಂದಿಗಿನ ಹೊಡೆದಾಟದಲ್ಲಿ ಡಾಲರ್‍ ಅನ್ನು ಮಾರ್ಕೆಟಿಂಗ್ ಮಾಡಬೇಕಿರೋದು ನಮ್ಮ ಮುಂದಿರೋ ಕಠಿಣ ಸವಾಲು. ಇದಕ್ಕಾಗಿ ನಾವು 60 ಬಾರಿ ಹೆಚ್ಚು ಬುದ್ಧಿವಂತರಾಗಬೇಕಿದೆ” ಎಂದು ಡೇವ್ ಪ್ರತಿಕ್ರಿಯೆ ನೀಡ್ತಾರೆ.

Related Stories