ಡಿಸೈನರ್ "ಬೋಟಿಕ್ " ! ಮಹಿತಾ ಪ್ರಸಾದ್ ಡಿಸೈನ್ಸ್

ಟೀಮ್​ ವೈ.ಎಸ್​. ಕನ್ನಡ

4

ಇವತ್ತು ಬೆಂಗಳೂರಿನಲ್ಲಿ ಪ್ರತಿದಿನ ಹೊಸ ಹೊಸ ಫ್ಯಾಷನ್​​ಗಳು ಲಗ್ಗೆ ಇಡುತ್ತಿವೆ. ಇದರ ಹಿಂದೆ ಹಲವಾರು ಫ್ಯಾಷನ್ ಡಿಸೈನರ್ಸ್ ಕನಸುಗಳು ಕೆಲಸ ಮಾಡುತ್ತವೆ. ಜೊತೆಗೆ ಬೋಟಿಕ್​ಗಳು ಇಂದು ಒಂದು ದೊಡ್ಡ ಸ್ವಂತ ಉದ್ಯೋಗದ ಅವಕಾಶವಾಗಿ ಬೆಳೆದು ನಿಂತಿವೆ. ಇದನ್ನು ಮನಗಂಡು ತಮ್ಮದೇ ಸ್ವಂತ ಬೋಟಿಕ್ ಮೂಲಕ ಡಿಸೈನರ್ ವೇರ್​​ಗಳನ್ನು ತಯಾರಿಸಿ ಬೆಂಗಳೂರಿನ ಲೀಡಿಂಗ್ ಡಿಸೈನರ್​ಗಳಲ್ಲಿ ಒಬ್ಬರು ಎಂದು ಖ್ಯಾತಿ ಗಳಿಸಿದವರಲ್ಲಿ ಮಹಿತಾ ಪ್ರಸಾದ್ ಕೂಡ ಒಬ್ಬರು.

ಮೊದಲ ಹಾದಿ

ಚೆನೈನಲ್ಲಿ ನ್ಯೂಸ್ ವಾಹಿನಿಯೊಂದರಲ್ಲಿ ನ್ಯೂಸ್ ಸ್ಟೈಲಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಹಿತಾ,ಮದುವೆ ನಂತರ ಬೆಂಗಳೂರಿಗೆ ಬರುತ್ತಾರೆ. ಇಲ್ಲಿ ಡಿಸೈನರ್ ಸ್ಟೋರ್ ಒಂದರಲ್ಲಿ ಫ್ಯಾಷನ್ ಕನ್ಸಲ್ಟಂಟ್ ಆಗಿ ಕೆಲಸಕ್ಕೆ ಸೇರುತ್ತಾರೆ. ನಂತರ ತಮ್ಮ ಪತಿ ಜೊತೆಗೂಡಿ ಮಹಿತಾ ಪ್ರಸಾದ್ ಎನ್ನುವ ಬೋಟಿಕ್ ಆರಂಭಿಸುತ್ತಾರೆ. ಆರಂಭದಲ್ಲಿ ಸಣ್ಣ ಅಂಗಡಿಯಿಂದ ಪ್ರಾರಂಭವಾದ ಈ ಬೋಟಿಕ್ ಇಂದು ಹೆಚ್ಎಸ್ಆರ್ ಲೇ ಔಟ್​​ನಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ.

ಇದನ್ನು ಓದಿ: ಜಾಗತಿಕ ಭಾವೈಕ್ಯ ಸಾರುವ "ದಿ ಒನ್ ಸಾಂಗ್"

ಕೈ ಹಿಡಿದ ಗೆಲುವು

ಮೊದ ಮೊದಲು ಕಸ್ಟಮರ್ಸ್​ಗಳಿಂದ ಆರ್ಡರ್ ಪಡೆದು ತಾವೇ ಡ್ರೆಸ್ ವಿನ್ಯಾಸ ಮಾಡಿ ಹೊರಗಡೆ ಟೈಲರ್ ಒಬ್ಬರಿಗೆ ಅದನ್ನು ಸ್ಟಿಚ್ ಮಾಡಲು ನೀಡುತ್ತಿದ್ರು. ನಂತರ ಪ್ರತಿದಿನ ಆರ್ಡರ್ಸ್ ಸಂಖ್ಯೆ ಹೆಚ್ಚಾಗ ತೊಡಗಿದಾಗ ತಮ್ಮದೇ ಸ್ವಂತ ಶಾಪ್ ಪ್ರಾರಂಭಿಸಿದ್ರು. ಆರಂಭದಲ್ಲಿ ಒಬ್ಬ ಉದ್ಯೋಗಿಯನ್ನು ನೇಮಿಸಿಕೊಂಡು ಹಂತ ಹಂತವಾಗಿ ಬೆಳೆದರು. ಯಾವ ಮಟ್ಟಕ್ಕೆ ಆರ್ಡರ್ಸ್ ಬರಲು ಪ್ರಾರಂಭವಾಯಿತು ಅಂದ್ರೆ ಇಂದು ಮಹಿತಾ ಅವರ ಬೋಟಿಕ್​​ನಲ್ಲಿ 10 ಜನ ಕೆಲಸ ನಿರ್ವಹಿಸುತ್ತಿದ್ದಾರೆ.

ಅಪ್​ಡೇಟೆಡ್ ಯಶಸ್ವಿ ಮಂತ್ರ

ಮಹಿತಾ ಡಿಸೈನ್ ಮಾಡುವ ಡಿಸೈನ್​ಗಳು ಯೂನಿಕ್ ಆಗಿರುತ್ತದೆ. ಕಸ್ಟಮರ್ ಫ್ರೆಂಡ್ಲಿಯಾಗಿರುವುದರಿಂದ, ಗ್ರಾಹಕರ ಅಭಿರುಚಿಗೆ ಅನುಗಣವಾಗಿ ಸಾಕಷ್ಟು ಅಧ್ಯಯನ ಮಾಡಿ ಡ್ರೆಸ್ ಡಿಸೈನ್ ಮಾಡುತ್ತಾರೆ. ಇದಕ್ಕಾಗಿ ಹಲವಾರು ಫ್ಯಾಷನ್ ಶೋಗಳನ್ನು ಗಮನಿಸುತ್ತಾರೆ, ಪ್ರಕೃತಿಯಿಂದಲೂ ಸ್ಪೂರ್ತಿ ಪಡೆಯುತ್ತಾರೆ. ಅಷ್ಟೇ ಅಲ್ಲದೇ ಇವರು ಡಿಸೈನ್ ಮಾಡುವ ಬ್ರೈಡಲ್ ವೇರ್​​ಗಳಿಗೆ ಎಲ್ಲಿಲ್ಲದ ಬೇಡಿಕೆ. ಇನ್ನು ಕಿಡ್ಸ್ ವೇರ್​ಗಳು ಅಷ್ಟೇ ಆಕರ್ಷಕವಾಗಿರುತ್ತವೆ. ಹೊಸ ಹೊಸ ಟ್ರೆಂಡ್​​ಗಳನ್ನು ಬಹುಬೇಗ ಕ್ಯಾಚ್ ಮಾಡುವ ಮಹಿತಾ ಟ್ರೆಂಡ್​ಗೆ ಅನುಗುಣವಾಗಿ ಡ್ರೆಸ್ ಡಿಸೈನ್ ಮಾಡ್ತಾರೆ. ಇದು ಅವರ ಯಶಸ್ಸಿನ ಗುಟ್ಟು ಹೌದು.

ಸೇವಿಂಗ್ಸ್​ನಿಂದ ಬ್ಯಾಂಕ್ ಬ್ಯಾಲೆನ್ಸ್ ತನಕ

ಆರಂಭದಲ್ಲಿ ತಮ್ಮ ಸೇವಿಂಗ್ಸ್ ಸೇರಿಸಿ ಒಂದುವರೆ ಲಕ್ಷದಲ್ಲಿ ಬೋಟಿಕ್ ಆರಂಭಿಸುತ್ತಾರೆ. ಆ ನಂತರ ತಮ್ಮ ಪತಿಯೊಡಗೂಡಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಇದನ್ನು ಬೆಳೆಸುತ್ತಾರೆ. ಸದ್ಯ ಅತಿ ಹೆಚ್ಚು ಯಶಸ್ವಿಯಾಗಿ ಬೋಟಿಕ್ ನಡೆಯುತ್ತಿದ್ದು, ಇನ್ನು ಉತ್ತಮ ಮಟ್ಟದಲ್ಲಿ ಅದನ್ನು ಬೆಳೆಸುವ ನಿಟ್ಟಿನಲ್ಲಿದ್ದಾರೆ ಮಹಿತಾ.

ಸಾಗುತಿರಲಿ ಪಯಣ

ಇನ್ನು ಯಾವುದೇ ಸ್ಟಾರ್ಟ್ಅಪ್ ಆಗಲಿ ಆರಂಭದಲ್ಲಿ ಕಷ್ಟ ಇದ್ದದ್ದೇ, ಅದರಂತೆಯೇ ಮಹಿತ ಅವರಿಗೂ ಕೂಡ ಆರಂಭದಲ್ಲಿ ಸರಿಯಾದ ಕೆಲಸಗಾರರ ಆಯ್ಕೆ, ಹಣದ ತೊಂದರೆ, ಗ್ರಾಹಕರನ್ನು ಸೆಳೆಯುವುದು ಸೇರಿದಂತೆ ನಾನಾ ಕಷ್ಟಗಳು ಬಂದರೂ ಛಲಬಿಡದೇ ಮುನ್ನುಗಿದ್ರು. ಆ ನಂತರ ನಿಧಾನವಾಗಿ ಎಲ್ಲ ಒಂದು ಹಂತಕ್ಕೆ ಬಂತು ಅಂತಾರೆ.

ಫ್ಯಾಷನ್ ಕಾಳಜಿ

ಇನ್ನು ಮಹಿತಾ ಕಸ್ಟಮರ್ಸ್ ಬಾಡಿ ಟೈಪ್​ಗೆ ಅನುಗುಣವಾಗಿ ಮತ್ತು ಇವತ್ತಿನ ರನ್ನಿಂಗ್ ಟ್ರೆಂಡ್​ಗೆ ಪೂರಕವಾಗಿ ಡ್ರೆಸ್ ಡಿಸೈನ್ ಮಾಡುತ್ತಾರೆ. ತಮ್ಮ ಬೊಟಿಕ್​ನಲ್ಲೇ 10 ಜನರಿಗೆ ಕೆಲಸವನ್ನು ನೀಡಿದ್ದಾರೆ ಕೂಡ. ಇದಿಷ್ಟೆ ಅಲ್ಲದೇ ಹಲವಾರು ಮಾಡೆಲ್​ಗಳಿಗೆ ಡಿಸೈನ್ ಮಾಡುತ್ತಾರೆ. ಅಲ್ಲದೇ ಫ್ಯಾಷನ್ ಶೋಗಳಲ್ಲೂ ಮಹಿತಾ ವಿನ್ಯಾಸ ಮಾಡಿದ ಡ್ರೆಸ್​​ಗಳು ಹೆಚ್ಚು ಸೌಂಡ್ ಮಾಡಿವೆ.

ಲಾಸ್ಟ್ ಡಿಸೈನ್

ಒಟ್ಟಲ್ಲಿ ಬಟ್ಟೆಗಳ ಬಗ್ಗೆ ಆಸೆ ಪಡುವ ಹೆಣ್ಣು ಮಕ್ಕಳು ಇಂದು ಫ್ಯಾಷನ್ ಲೋಕದಲ್ಲಿ ಆರ್ಥಿಕವಾಗಿ ಹೆಚ್ಚು ಸಬಲರಾಗ್ತಿರೋದು ಒಳ್ಳೆಯ ಬೆಳವಣಿಗೆ. ಬದಲಾಗುತ್ತಿರೋ ಫ್ಯಾಷನ್ ಬಗ್ಗೆ ಅರಿವು ಮತ್ತು ಅಷ್ಟೇ ಆತ್ಮವಿಶ್ವಾಸದಿಂದ ಅದನ್ನು ನಿಭಾಯಿಸಿದ್ರೆ ಈ ಕ್ಷೇತ್ರದಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ ಅನ್ನೋಕೆ ಮಹಿತಾ ಉತ್ತಮ ಉದಾಹರಣೆ.

ಇದನ್ನು ಓದಿ:

1. "ಗ್ರೀನ್ ಕಾರ್ಪೆಟ್" ಹಾಸಿತು ಆಧುನಿಕ ಪಾಟ್ ಬ್ಯುಸಿನೆಸ್

2. ಸ್ಟಾರ್ಟ್ಅಪ್ ಲೋಕದಲ್ಲಿ ಹೊಸ ಪ್ರಯೋಗ- ಸದ್ದು ಮಾಡುತ್ತಿದೆ ನಿಕಿತಾ ಲಲ್ವಾನಿಯ ಸೈಕಲ್ ಸಿಟಿ

3. ಆನ್​ಲೈನ್​ನಲ್ಲಿ ಕನ್ನಡ ಅಭಿವೃದ್ಧಿಗಾಗಿ ಪಣ ತೊಟ್ಟ ಟೆಕ್ಕಿಗಳು

Related Stories