ವೃತ್ತಿ ಬದುಕನ್ನು ಕಟ್ಟುವ- ಕೆಡುವುವ ಅನುಭವ- ಡೆಲಿವರಿ ಫಂಕ್ಷನ್ ಫಾರ್ 'ವಿರ್ತುಸ'ದ ಕಥೆ

ಟೀಮ್​​ ವೈ.ಎಸ್​​.ಕನ್ನಡ

ವೃತ್ತಿ ಬದುಕನ್ನು ಕಟ್ಟುವ- ಕೆಡುವುವ ಅನುಭವ- ಡೆಲಿವರಿ ಫಂಕ್ಷನ್ ಫಾರ್ 'ವಿರ್ತುಸ'ದ ಕಥೆ

Tuesday November 24, 2015,

4 min Read

ದರ್ಶನ್​ ಪೈ ಹೈದ್ರಾಬಾದ್‍ನ ಡೆಲಿವರಿ ಫಂಕ್ಷನ್ ಫಾರ್ ವಿರ್ತುಸಾದ ಉಪಾಧ್ಯಕ್ಷೆ ಹಾಗೂ ಮುಖ್ಯಸ್ಥೆ, ಇದೊಂದು ಪ್ರಸಿದ್ಧ ಮಾಹಿತಿ ತಂತ್ರಜ್ಞಾನ ಪೂರೈಸುವ ಕಂಪನಿ. ಆಕೆಯ ತಂಡ ಯುಎಸ್, ಯುಕೆ, ಯೂರೋಪ್, ಮಿಡಲ್ ಈಸ್ಟ್, ಹಾಗೂ ಏಶಿಯಾದ ಹಲವು ದೇಶಗಳಿಗೆ ಐಟಿ ಸಲ್ಯೂಷನ್ಸ್​​​ಗಳನ್ನ ಪೂರೈಸುತ್ತದೆ. ಗ್ರಾಹಕರಿಗೆ ಪೂರೈಕೆಯಲ್ಲಿ ಅತ್ಯುತ್ತಮ ಅನುಭವ, ಸಿಬ್ಬಂದಿಯೊಂದಿಗಿನ ಉತ್ತಮ ಒಡನಾಟ ಹಾಗೂ ಯಶಸ್ಸಿಗೆ ಆಕೆಯೇ ಕಾರಣ.

ದರ್ಶನ ಅವರು ಕಳೆದ 20 ವರ್ಷಗಳಿಂದ ವಿಪ್ರೋ, ಕ್ಯಾಪ್‍ಜೆಮಿನಿ, ಹಾಗೂ ಪತ್ನಿ ಕಂಪ್ಯೂಟರ್ಸ್‍ನಂತಹ ಹಲವು ಮುಂಚೂಣಿ ಸಾಫ್ಟ್​​​ವೇರ್ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ, ಅನುಭವ ಪಡೆದಿದ್ದಾರೆ. ಪ್ರಪಂಚದ ಹಲವು ದೇಶಗಳಿಗೆ ಅಧಿಕ ಪ್ರಮಾಣದ, ಮಲ್ಟಿ ಮಿಲಿಯನ್ ಡಾಲರ್ ಮೊತ್ತದ ಐಟಿ ಸಲ್ಯೂಷನ್ಸ್​​​ಗಳನ್ನ ಗ್ರಾಹಕರಿಗೆ ನೀಡಿದ್ದಾರೆ. ಯುರೋಪ್, ಅಮೇರಿಕಾ, ಆಸ್ಟ್ರೇಲಿಯಾ, ಸಿಂಗಾಪೂರ್, ಜಪಾನ್‍ನಂತ ದೇಶಗಳಿಗೆ ರೀಟೈಲ್ ಹಾಗೂ ಸಿಪಿಜಿ, ಹಣಕಾಸು, ಶಕ್ತಿ ಹಾಗೂ ಉಪಯುಕ್ತತೆ, ಪ್ರಯಾಣ ಹಾಗೂ ವಿರಾಮ, ಲಾಜಿಸ್ಟಿಕ್ಸ್ ಹಾಗೂ ಸರ್ಕಾರಿ ವಲಯಗಳಲ್ಲೂ ಸಲ್ಯೂಷನ್ಸ್ ಪೂರೈಸಿದ್ದಾರೆ.

image


ಇತ್ತೀಚೆಗಷ್ಟೇ, ವಿರ್ತುಸಾದ ಗ್ರಾಹಕರಿಗೆ ಕ್ಲಿಷ್ಟಕರವಾದ ಸಮಸ್ಯೆಗಳನ್ನೂ ಭೇದಿಸಿಕೊಟ್ಟಿರುವ ಹಾಗೂ ಆಕೆಯ ಉತ್ತಮ ಕಾರ್ಯಕ್ಕಾಗಿ, ಇಂಡೋ-ಅಮೇರಿಕಾದ ಚೇಂಬರ್ ಆಫ್ ಕಾಮರ್ಸ್, 'ಬೆಸ್ಟ್ ವುಮನ್ ಕಾರ್ಪೋರೇಟ್ ಲೀಡರ್' ಎನ್ನುವ ಪ್ರಶಸ್ಥಿ ನೀಡಿ ಗೌರವಿಸಿದೆ. ಮುಂಬೈ ಯೂನಿವರ್ಸಿಟಿಯಲ್ಲಿ ಇಂಜಿನಿಯರಿಂಗ್ ಪದವಿ ಹಾಗೂ ಮುಂಬೈನ ಐಐಟಿಯಲ್ಲಿ ಮಾಸ್ಟರ್ಸ್ ಇನ್ ಟೆಕ್ನಾಲಜಿ ಮುಗಿಸಿದ್ದಾರೆ ದರ್ಶನ ಪೈ.

ದರ್ಶನ ಪೈ ಯುವರ್ ಸ್ಟೋರಿಯೊಂದಿಗೆ ಆಕೆಯ ವೃತ್ತಿ ಬದುಕಿನ ಏಳು ಬೀಳುಗಳು ಹೇಗಿತ್ತು ಅನ್ನೋದನ್ನ ಹಂಚಿಕೊಂಡಿದ್ದಾರೆ.

ಬಾಲ್ಯ ಹಾಗೂ ಕುಟುಂಬ

ನಮ್ಮದು ಮಧ್ಯಮ ವರ್ಗದ ಕುಟುಂಬ, ನಾವು ವಿದ್ಯಾಭ್ಯಾಸಕ್ಕೆ ಹಾಗೂ ಒಳ್ಳೆಯ ವ್ಯಕ್ತಿತ್ವಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿ ಬೆಳೆದವರು. ನಾನು ನನ್ನ ಕುಟುಂಬದೊಂದಿಗೆ ಹೆಚ್ಚಿನ ಒಡನಾಟ ಇಟ್ಟುಕೊಂಡಿದ್ರೂ, ಚಿಕ್ಕ ವಯಸ್ಸಿನಲ್ಲೇ ಸ್ವತಂತ್ರವಾಗಿ ಬದುಕುವುದನ್ನು ಕಲಿತಿದ್ದೆ. ಈ ಸ್ವಾಂತ್ರ್ಯವೇ ನನಗೆ ಮುಂದೆ ನನ್ನ ನಿರ್ಧಾರಗಳನ್ನ ನಾನೇ ತೆಗೆದುಕೊಳ್ಳುವುದು ಸೇರಿದಂತೆ ನನ್ನ ಬದುಕಿನ ಹಾದಿಯನ್ನ ನಾನೇ ನಿರ್ಧರಿಸಲು ಸಹಾಯವಾಯಿತು. ನನ್ನ ಪತಿ ಆಭರತೀಯ ನೌಕಾಸೇನೆಯಲ್ಲಿ ಕೆಲಸ ಮಾಡುತ್ತಾರೆ. ನನ್ನ ತಂದೆ ತಾಯಿ ಹಾಗೂ ನನ್ನ ಮಗ ಎಲ್ಲಾ ಸಮಯದಲ್ಲೂ ನಾನೊಬ್ಬ ಮಹಿಳಾ ನಾಯಕಿಯಾಗಿ ಬೆಳೆಯಲು ಕಾರಣರಾಗಿದ್ದಾರೆ.

ಕ್ಯಾಪ್ ಜಿಮಿನಿ, ಪತ್ನಿನಕಂಪ್ಯೂಟರ್ಸ್ ಹಾಗೂ ವಿಪ್ರೋದಲ್ಲಿ ನಾನು ಕಲಿತ ಪಾಠಗಳು

ಮುಂಬೈ ಐಐಟಿಯಿಂದ ಮಾಸ್ಟರ್ಸ್ ಪಡೆದುಕೊಂಡ ನಂತ್ರ ನಾನು ಪತ್ನಿ ಕಂಪ್ಯೂಟರ್ಸ್‍ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದೆ. ಕಾಲೇಜಿನಿಂದ ಕಾಪೊರೇಟರ್ ಫೀಲ್ಡ್‍ಗೆ ನನ್ನ ಎಂಟ್ರಿಯಾಗಿದ್ದು ಒಂದು ದೊಡ್ಡ ಬದಲಾವಣೆಯನ್ನೇ ತಂದಿತ್ತು. ಕಾರ್ಪೋರೇಟ್ ಸಂಸ್ಕೃತಿ ಹಾಗೂ ದೊಡ್ಡ ತಂಡಗಳೊಂದಿಗೆ ಕೆಲಸ ಮಾಡುವುದು ಬಹುದೊಡ್ಡ ಪಾಠವಾಗಿತ್ತು. ಯುಎಸ್ ನ ಮುಂಚೂಣಿ ಕಂಪನಿ 'ಕ್ಯಾಡ್ ಸಾಫ್ಟ್​​​ವೇರ್'ನ ಮೈಗ್ರೇಷನ್ ಪ್ರೋಗ್ರಾಮ್‍ನಲ್ಲಿ ನಾನೂ ಕೆಲಸ ಮಾಡಿದೆ. ಪತ್ನಿ ಸಂಸ್ಥೆಯಲ್ಲಿ 8 ವರ್ಷಗಳ ಕಾಲ ದುಡಿದು ತಾಂತ್ರಿಕ ವಲಯ ಹಾಗೂ ಮ್ಯಾನೇಜ್‍ಮೆಂಟ್ ಸ್ಕಿಲ್ಸ್​​​ಗಳಲ್ಲೂ ಪರಿಣಿತಿ ಪಡೆದುಕೊಂಡೆ. 1999ರಲ್ಲಿ ನಾನು ಪತ್ನಿ ಸಂಸ್ಥೆಯನ್ನ ತೊರೆಯುವ ವೇಳೆಗೆ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಹಲವು ಪ್ರಾಜೆಕ್ಟ್​​​ಗಳನ್ನ ನಿಭಾಯಿಸುತ್ತಿದ್ದೆ.

ನನ್ನ ವೃತ್ತಿ ಬದುಕು ಆರಂಭವಾದ ದಿನಗಳಲ್ಲಿ ನಾನು ಹೊಸ ಟೆಕ್ನಾಲಜಿ ಹಾಗೂ ಹೊಸ ಟ್ರೆಂಡ್‍ಗಳ ಬಗ್ಗೆ ಗಮನ ಹರಿಸುತ್ತಿದ್ದೆ. ವಿವಿಧ ಸಂಸ್ಥೆಗಳ ಸಂಸ್ಕೃತಿ ಹಾಗೂ ಕಡಿಮೆ ಅವಧಿಯಲ್ಲಿ ವ್ಯಾಪಾರದ ಸಂದರ್ಭಗಳನ್ನ ಅರಿತುಕೊಳ್ಳುತ್ತಿದ್ದ ನನ್ನ ಗುಣ ಕಾರ್ಪೋರೇಟ್ ಏಣಿಯನ್ನ ವೇಗವಾಗಿ ಹತ್ತಲು ಸಹಾಯ ಮಾಡಿತು.

"ನಿನ್ನ ಆಸಕ್ತಿಯನ್ನ ಹಿಂಬಾಲಿಸಿ, ಅದನ್ನ ನಿನ್ನ ಶಕ್ತಿಯಿಂದ ಬೆಳೆಸುತ್ತಾ ಹೋಗು' ಇದು ನನ್ನ ಫಿಲಾಸಫಿ. ಪ್ರತಿಭೆ ಹಾಗೂ ಆಸಕ್ತಿಗೆ ತಕ್ಕ ಕೆಲಸವನ್ನ ಆರಿಸಿಕೊಂಡಾಗ ಉತ್ತಮ ಕಾರ್ಯನಿರ್ವಹಣೆ ಸಾಧ್ಯ. ಮತ್ತೊಬ್ಬರ ಬದುಕನ್ನ ಕಟ್ಟುವ ಅಥವಾ ಒಡೆಯುವವರೊಂದಿಗೆ ಹ್ಯಾಗೆ ಕೆಲಸ ಮಾಡುತ್ತೇವೆ ಎನ್ನುವುದು ಮುಖ್ಯವಾಗತ್ತೆ. ಗ್ರಾಹಕರ ಬಿಸಿನೆಸ್‍ನ ಅರ್ಥೈಸಿಕೊಳ್ಳುವ ನನ್ನ ಗುಣ ನನಗೆ ಗ್ರಾಹಕರ ಮಟ್ಟದಲ್ಲಿ ಒಳ್ಳೆಯ ಸಂಬಂಧ ಹಾಗೂ ಅನುಭವ ಗಳಿಸುವಲ್ಲಿ ಸಹಾಯವಾಗಿದೆ.

ಹನ್ನೆರೆಡು ವರ್ಷಗಳ ನಂತ್ರ ವಿವಿಧ ತಾಂತ್ರಿಕ ಹಾಗೂ ಮ್ಯಾನೇಜ್‍ಮೆಂಟ್ ರೋಲ್‍ಗಳನ್ನ ನಿಭಾಯಿಸಿದ ಮೇಲೆ , ಕ್ಯಾಪ್ ಜೆಮಿನಿಯಲ್ಲಿ ಯುಕೆ ಪ್ರಾಂತ್ಯದ ಗ್ರಾಹಕರಿಗೆ ಸಲ್ಯೂಷನ್ ಪೂರೈಸುವ ಜವಾಬ್ದಾರಿ ಹೆಗಲೇರಿತು. ಇದು ಲೀಡರ್‍ಶಿಪ್‍ನ ಮೊದಲ ಹೆಜ್ಜೆ. ವಿಪ್ರೋದಲ್ಲಿ ಟ್ರಾನ್ಸ್‍ಪೋರ್ಟೇಷನ್, ಲಾಜಿಸ್ಟಿಕ್ಸ್ ಹಾಗೂ ಸರ್ಕಾರಿ ವಲಯದಲ್ಲಿ ಡೆಲಿವರಿ ಫಂಕ್ಷನ್‍ಗಳನ್ನ ನಿರ್ವಹಿಸುತ್ತಿದ್ದೆ.

'ವಿರ್ತುಸಾದ' ವೇಗದ ಯಶಸ್ಸು ನನಗೆ ಖುಷಿ ಕೊಟ್ಟಿದೆ. ಇದು ಸಂಸ್ಥೆಯನ್ನ ಹೊಸ ಆವಿಷ್ಕಾರದತ್ತ ಕೊಂಡೊಯ್ಯಲು ಸಪೂರ್ತಿದಾಯಕವಾಗಿದೆ. ನನಗೆ ವೈಯಕ್ತಿಕವಾಗಿ ಇದು ಅತ್ಯುತ್ತಮ ಅನುಭವ ಹಾಗೂ ಅವಕಾಶವಾಗಿದೆ.

ಅಡಚಣೆಗಳನ್ನ ಆಲಂಗಿಸು , ಅವೇ ನಿನ್ನನ್ನ ಮುಂದೆ ಕೊಂಡೊಯ್ಯುತ್ತವೆ

ನನ್ನ ಪತಿ ಭಾರತೀಯ ನೌಕಾದಳದಲ್ಲಿ ಕಾರ್ಯ ನಿರ್ವಹಿಸುತ್ತಾರೆ, ಪ್ರತಿ ಐದು ವರ್ಷಗಳಿಗೊಮ್ಮೆ ಬೇರೆಡೆಗೆ ವರ್ಗವಾಣೆಯಾಗುತ್ತಾರೆ. ನಾನು ಹಾಗೂ ನನ್ನ ಪತಿ ಜೀವನದಲ್ಲಿ ತೆಗೆದುಕೊಂಡ ಬಹು ನಿರ್ಧಾರ,ಕಾರ್ಪೋರೇಟ್ ವಲಯದಲ್ಲೇ ಕೆಲಸ ಮುಂದುವರೆಸುವುದು. ಒಂದು ಕಂಪನಿಯಲ್ಲಿ ಐದು ವರ್ಷಗಳ ಕಾಲ ಕೆಲಸ ನಿರ್ವಹಿಸುವುದು ವೃತ್ತಿ ಬದುಕಿನ ಒಳ್ಳೆಯ ಬೆಳವಣಿಗೆ ಹಾಗೂ ಅನುಭವ. ನನಗೆ ಇಂದು ಲಭಿಸಿರುವ ನಾಯಕ ಸ್ಥಾನ ನನ್ನ ಕೆರಿಯರ್‍ನಲ್ಲಿ ನಾನು ತೆಗೆದುಕೊಂಡ ಸರಿಯಾದ ನಿರ್ಣಯಗಳಿಂದ ಸಿಕ್ಕಿರುವಂತಾದ್ದು. ಈ ಐದು ವರ್ಷಗಳಲ್ಲಿ ನನಗೆ ಅಡ್ಡಿಯಾದ ಅಡಚಣೆಗಳೇ ನನ್ನ ವೇಗವಾಗಿ ಬೆಳೆಯುವಂತೆ ಮಾಡಿದ್ದು, ಹಾಗೂ ಬದುಕಿನ ಹಲವು ಪಾಠಗಳನ್ನ ಕಲಿಸಿಕೊಟ್ಟಿದ್ದು. ನಾನು ಹಿಂದೆ ತಿರುಗಿ ನೋಡಿದಾಗ, ನಾನು ನಡೆದುಬಂದ ಮಾರ್ಗದಲ್ಲಿ ನನ್ನ ಕುಟುಂಬ ನನಗೆ ಸಹಾಯ ಮಡಿರುವುದು ಬಗ್ಗೆ ನನಗೆ ಹೆಮ್ಮೆಯಾಗುತ್ತದೆ,

ವ್ಯಕ್ತಿತ್ವ ಬೆಳೆಸಿಕೊಳ್ಳುವ ಸೀಕ್ರೆಟ್ ಟಿಪ್ಸ್

ನಿಮ್ಮಿಷ್ಟ ವಲಯವನ್ನೇ ಆಯ್ಕೆ ಮಾಡಿಕೊಳ್ಳಿ, ನಿಮಗಿಷ್ಟವಾಗುವ ಕೆಲಸಗಳನ್ನೇ ಮಾಡಿ, ನಿಮ್ಮ ಹೃದಯದ ಮಾತುಗಳನ್ನ ಆಲಿಸಿ. ಮೂರು ವಿಚಾರಗಳನ್ನ ನಾನು ಯಾವಾಗ್ಲೂ ಹೇಳಲು ಇಷ್ಟ ಪಡುತ್ತೇನೆ, ಸಕಾರಾತ್ಮಕ ನಡತೆ, ಪ್ರಾಮಾಣಿಕ ಪ್ರಯತ್ನ ಹಾಗೂ ವೃತ್ತಿ ಮೆಲಿನ ಪ್ರೀತಿಯನ್ನ ಎಂದಿಗೂ ಮನದಲ್ಲಿರಿಸಿಕೊಂಡಿರನೇಕು.

ಶಕ್ತಿ ಹಾಗೂ ಯುಕ್ತಿಯನ್ನ ಬಳಸಿಕೊಂಡು ಕಡಿಮೆ ಅವಧಿಯಲ್ಲೇ ಕಾರ್ಪೋರೇಟ್ ಏಣಿಯನ್ನ ಏರುವುದು ಕಷ್ಟವಲ್ಲ. ನಿಮ್ಮ ಕನಸನ್ನ ನನಸಾಗಿಸಿಕೊಳ್ಳಲು ಸಂಪೂರ್ಣ ಮನಸಿಟ್ಟು ಕೆಲಸ ಮಾಡಬೇಕು, ಆ ವೇಳೆ ನಿಮ್ಮ ಕೆಲಸಕ್ಕೆ ಸಾಥ್ ನೀಡ್ತಿರೋದೇನು, ಕಷ್ಟ ಕೊಡ್ತಿರೋದು ಏನು ಅನ್ನೋದು ತಿಳಿಯತ್ತೆ. ಪ್ರತಿನಿತ್ಯ ವ್ಯಾಯಾಮವನ್ನ ಕಡ್ಡಾಯವಾಗಿ ಮಾಡಬೇಕು. ನಾನು ಈ ಎಲ್ಲಾ ನಿಯಮಗಳನ್ನೂ ಪಾಲಿಸುತ್ತಾ ಬಂದಿದ್ದೇನೆ, ಹಾಗಾಗಿ ಎಂದಿಗೂ ಚುರುಕುತನ ನನ್ನಲ್ಲಿರತ್ತೆ.

ನಿಮ್ಮನ್ನ ನೀವು ಅರ್ಥೈಸಿಕೊಳ್ಳಲು ಹಾಗೂ ಹೊಸತನಕ್ಕೆ ಆಗಾಗ ಸಮಯ ಮೀಸಲಿರಿಸಿ. ಸಂಗೀತ, ಕ್ರೀಡೆ, ತೋಟಗಾರಿಕೆ, ಧ್ಯಾನ, ಪ್ರಯಾಣ, ಹೀಗೆ ನಿಮಗಿಷ್ಟವಾದ ಕೆಲಸವನ್ನ ಮಾಡೋದ್ರಿಂದ ಬದುಕಲ್ಲಿ ಎಂದಿಗೂ ಹೊಸತನವಿರತ್ತೆ. ನಿಮ್ಮಲ್ಲಿ ಸ್ಪೂರ್ತಿ ತುಂಬುತ್ತಾ ಎಲ್ಲ ಸಮಯದಲ್ಲೂ ನಿಮ್ಮ ಬೆಂಬಲಕ್ಕಿರುವವರೊಂದಿಗೆ ಹೆಚ್ಚಿನ ಒಡನಾಟವಿಟ್ಟುಕೊಂಡ್ರೆ,ಕಷ್ಟ ದಿನಗಳನ್ನೂ ಸುಲಭವಾಗಿಸಬಹುದು.

ನಾಯಕತ್ವದ ಗುಣಗಳು

ನಿಮ್ಮ ಗುರಿ ಹಾಘೂ ಸಾಧನೆಗಳನ್ನ ಆಗಾಗ ನೆನಪಿಸಿಕೊಳ್ಳಬೇಕು. ನಿಮ್ಮದೇ ತಂಡವನ್ನ ರಚನೆ ಮಾಡಿ- ನಿಮ್ಮ ಸ್ನೇಹಿತರು, ಸಂಬಂಧಿಕರು, ಸಹೋದ್ಯೋಗಿಗಳು, ಹೀಗೆ ಹಿತಬಯಸುವವರನ್ನ ಜೊತೆಗಿರಿಸಿಕೊಳ್ಳಿ. ಅವರ ಸಲಹೆ ಸೂಚೆನೆಗಳನ್ನ ಅಗತ್ಯ ಬಿದ್ದಾಗ ಪಡೆದುಕೊಳ್ಳಿ.

ನಿಮ್ಮ ಗುರಿ ತಲುಪುವತ್ತ ಚಿತ್ತ ನೆಟ್ಟುಕೊಳ್ಳಿ. ಎಷ್ಟೇ ಕಷ್ಟ ಬಂದ್ರೂ ಹಠಬಿಡದೇ ಮಾಡಿತೋರಿಸಿ. ಸವಾಲುಗಳನ್ನ ಸ್ವಾಗತಿಸಿ. ಯಶಸ್ಸು ಚಿಕ್ಕದಾದ್ರೂ ದೊಡ್ಡದಾದ್ರೂ ಆಚರಿಸಿ, ನಿಮಗೆ ಸಹಾಐ ಮಾಡಿದರಿಗೊಂದು ಥ್ಯಾಂಕ್ಸ್ ಹೇಳಿ. ಅಗತ್ಯವಿರುವ ಬದಲಾವಣೆಗಳನ್ನ ಮಾಡಿಕೊಂಡು ಮುಂದೆ ಸಾಗಿ.

ಕುಟುಂಬ, ಸಿಬ್ಬಂದಿ, ಗ್ರಾಹಕ ಎಲ್ಲರೂ ಖುಷ್

ಪ್ರತಿಭಾವಂತರನ್ನ ಗುರುತಿಸಿ, ಅವರಿಗೆ ಆಗಾಗ ಪ್ರಮೋಷನ್ ನೀಡುವಷ್ಟು ಕಲೆ ನನ್ನಲ್ಲಿದೆ. ಬಡ್ತಿ ನೀಡುವುದು, ಅವರನ್ನ ಮತ್ತೊಂದು ಲೆವೆಲ್‍ಗೆ ಕೊಂಡೊಯ್ಯುವುದು ಅವರ ವೃತ್ತಿ ಬದುಕಿಗೂ ಒಂದು ತಿರುವನ್ನ ನೀಡತ್ತೆ.

ಗ್ರಾಹಕರಿಗೆ ಏನು ಬೇಕು ಅನನೋದನ್ನ ನಾನು ಮನಗಂಡಿದ್ದೇನೆ. ಇದ್ರಿಂದ ನನ್ನ ತಂಡ ಗ್ರಾಹಕರಿಗೆ ಏನು ಬೇಕು ಅದನ್ನ ನೀಡುವಂತೆ ಮಾಡುತ್ತೇನೆ. ಗ್ರಾಹಕರ ತೃಪ್ತಿ ಹಾಘೂ ಸಿಬ್ಬಂದಿಯ ಸಂತಸ ನನ್ನನ್ನ ಮತ್ತಷ್ಟು ಪ್ರೇರೇಪಿಸುತ್ತಾ ಬಂದಿವೆ.

ನನ್ನ ಮಗನೊಂದಿಗೆ ಕಾಳ ಕಳೆಯುವುದು, ನನ್ನ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು , ಹಿಂದೂಸ್ತಾನಿ ಸಂಗೀತ ಕೇಳುವುದು ಹಾಗೂ ನ್ನನ್ ಫಿಟ್‍ನೆಸ್ ಮಂತ್ರ ನನ್ನ ಬದುಕನ್ನು ಮುನ್ನಡೆಸುತ್ತಿವೆ.

ಲೇಖಕರು: ವರ್ಷಾ ಅದುಸುಮಿಲಿ

ಅನುವಾದಕರು: ಪಿ.ಅಭಿನಾಷ್​​​