ಸಾಮಾಜಿಕ ಉದ್ಯಮ ಲೋಕದ ಬೆಳವಣಿಗೆಗಳು

ಟೀಮ್​​ ವೈ.ಎಸ್​​.ಕನ್ನಡ

0

ಪ್ರತಿ ವಾರ ನಾವು ನಿಮ್ಮ ಮುಂದೆ ವಿಶ್ವದ ಅತ್ಯುತ್ತಮ ಸಾಮಾಜಿಕ ಉದ್ಯಮ ವಲಯದ ಕುರಿತ ಒಂದೊಂದು ಕಥೆಯನ್ನು ಹೇಳುತ್ತಿದ್ದೇವೆ. ಈ ವಾರವೂ ನಮ್ಮ ಬಳಿ ಕೆಲ ಅದ್ಭುತ ಕಥೆಗಳಿವೆ. ಬ್ರಿಟನ್‍ನ ಕಾರ್ನ್‍ವಾಲ್ ಕೌಂಟಿ, ಮೊದಲ ಸಾಮಾಜಿಕ ಉದ್ಯಮ ವಲಯವಾಗಿ ಗುರುತಿಸಿಕೊಂಡಿದೆ. ವಿಲ್‍ಗ್ರೋ ಮೂರು ಸಾಮಾಜಿಕ ಉದ್ದಿಮೆಗಳಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿದೆ. ಹಾಗೇ ಪುರುಷರಿಗಿಂತ ಮಹಿಳೆಯರೇ ಹೇಗೆ ಅತ್ಯಂತ ಜವಾಬ್ದಾರಿಯುತ ಉದ್ಯಮಿಗಳಾಗಲು ಸಾಧ್ಯ? ಇಷ್ಟು ಮಾತ್ರವಲ್ಲ ಇನ್ನೂ ವಿಷಯಗಳ ಕುರಿತು ನಿಮಗೆ ಮಾಹಿತಿ ನೀಡುತ್ತೇವೆ. ಹಾಗೇ ಓದುತ್ತಾ ಹೋಗಿ...

1. ಸಮಾಜಕ್ಕೆ ಒಳಿತನ್ನು ಮಾಡುವುದು - ಸಾಮಾಜಿಕ ಉದ್ಯಮವೊಂದು ಜಾಗತಿಕವಾಗಿ ಬೆಳೆದರೆ, ಬೇರೆ ಬೇರೆ ದಿಕ್ಕುಗಳಲ್ಲಿ ಏನೇನಾಗುತ್ತಿದೆ ಅನ್ನೋದನ್ನು ತಿಳಿಯುವುದು ಅಸಾಧ್ಯ. ಹೀಗಾಗಿಯೇ ಇಗ್ನೈಟರ್ ಸ್ಥಾಪಕ ಮೈಕಲ್ ಲೆವ್ಕೊವಿಟ್ಜ್ ಡೆವೆಲಪರ್‍ಗಳ ಒಂದು ತಂಡದೊಂದಿಗೆ ಡಿಜಿಟಲ್ ವೇದಿಕೆಯ ಮೂಲಕ ಸಾಮಾಜಿಕ ಬದಲಾವಣೆಗಾಗಿ ಎಲ್ಲರಿಗೂ ಲಭ್ಯವಾಗುವಂತಹ ಒಂದು ಸಾಫ್ಟ್‍ವೇರ್‍ಅನ್ನು ಅಭಿವೃದ್ಧಿಗೊಳಿಸುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಆ ಸಾಫ್ಟ್‍ವೇರ್ ಎಲ್ಲರಿಗೂ ಬಳಕೆಗೆ ದೊರೆಯಲಿದೆ. ಈ ನಿಟ್ಟಿನಲ್ಲಿ ಇಗ್ನೈಟರ್ ಜೆ.ಡಬ್ಲ್ಯೂ.ಮೆಕ್‍ಕಾನೆಲ್ ಫ್ಯಾಮಿಲಿ ಫೌಂಡೇಷನ್, ಮಾರ್ಸ್, ಅಶೋಕಾ ಹಾಗೂ ಕೆಟಲಿಸ್ಟ್ಸ್‍ಎಕ್ಸ್ ಸಂಸ್ಥೆಗಳೊಂದಿಗೆ ಕೈ ಜೋಡಿಸಿದೆ.

2. ಪುರುಷರಿಗಿಂತ ಮಹಿಳೆಯರೇ ಹೆಚ್ಚು ಜವಾಬ್ದಾರಿಯುತ ಉದ್ಯಮಿಗಳಾಗಲು 4 ಕಾರಣಗಳು – ಉದ್ಯಮಿಗಳಾಗಲು ಮಹಿಳೆಯರೇ ಹೆಚ್ಚು ಸೂಕ್ತವಾ? ಸಾಮಾಜಿಕ ಜವಾಬ್ದಾರಿ ಅನ್ನೋದು ಮಹಿಳೆಯರಿಗೆ ಎರಡನೇ ಪ್ರಕೃತಿ ಸಹಜ ಗುಣ. 2013ರಲ್ಲಿ ಅಮೆರಿಕಾದ ಟ್ರಸ್ಟ್ ಇನ್ಸೈಟ್ಸ್ ಆನ್ ವೆಲ್ತ್ & ವರ್ತ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲೂ ಇದು ನಿಜ ಅನ್ನೋದು ದೃಢಪಟ್ಟಿದೆ. ಮಹಿಳೆಯರು ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ತುಂಬಾ ಶ್ರಮಿಸುತ್ತಾರೆ ಹಾಗೂ ಅದರ ಮೂಲಕ ಸಕಾರಾತ್ಮಕ ಪರಿಣಾಮ ಬೀರಲು ಯತ್ನಿಸುತ್ತಾರೆ. ಮತ್ತು ಅವರಿಗೆ ಪುರುಷರಿಗಿಂತಾ ಹೃದಯವೈಶಾಲ್ಯತೆ ಹೆಚ್ಚು. ಹೀಗಾಗಿಯೇ ಕಂಪನಿಯನ್ನು ಮತ್ತೊಂದು ರಾಜ್ಯಕ್ಕೆ ಸ್ಥಳಾಂತರಿಸುವ, ನೌಕರರನ್ನು ಕೆಲಸದಿಂದ ವಜಾಗೊಳಿಸುವ, ತೆರಿಗೆ ಕಟ್ಟುವಾಗ ತಮ್ಮ ಉದ್ಯೋಗಿಗಳ ಸಂಬಳವನ್ನು ಕಡಿತ ಮಾಡುವ ಕೆಲಸಗಳನ್ನು ಮಹಿಳಯೆಯರು ಮಾಡುವುದಿಲ್ಲ.

3. ನೆಲ್ಸನ್ ಮಂಡೇಲಾ ಅವರಿಂದ ಉದ್ಯಮಿಗಳು ಏನನ್ನು ಕಲಿಯಬಹುದು – ರಾಜಕೀಯ ಹೋರಾಟಗಳಿಂದ ಹೆಸರುವಾಸಿಯಾದ ನೆಲ್ಸನ್ ಮಂಡೇಲಾ ಅವರಿಂದಲೂ ಇಂದಿನ ಉದ್ಯಮಿಗಳು ಸಾಕಷ್ಟು ಕಲಿಯವುದಿದೆ. 2013ರ ಡಿಸೆಂಬರ್‍ನಲ್ಲಿ ನಮ್ಮಿಂದ ದೂರಾದ ಮಂಡೇಲಾ ಅವರೇ ಸಾಮಾಜಿಕ ಉದ್ದಿಮೆಯ ಬೀಜಗಳನ್ನು ಉತ್ತಿದರು ಎನ್ನಲಾಗಿದೆ.

4. ಸಾಮಾಜಿಕ ಸಂಸ್ಥೆಗಳ ಮುಂದಾಳು, ಹಾಂಗ್‍ಕಾಂಗ್ – ಜಗಮಗ ಹೊಳೆಯುವ ಹಾಂಗ್‍ಕಾಂಗ್ ಒಂದು ಆರ್ಥಿಕ ಕೇಂದ್ರ. ಅತ್ಯಂತ ಶ್ರೀಮಂತ ಹಾಗೂ ವಿದ್ಯಾವಂತ ಜನರಿರುವ ನಗರ. 2008ರಲ್ಲಿ ನಡೆದ ಹಾಂಗ್‍ಕಾಂಗ್‍ನ ಆರನೇ ವಾರ್ಷಿಕ ಸಾಮಾಜಿಕ ಉದ್ಯಮಗಳ ಶೃಂಗಸಭೆಯಲ್ಲಿ ಸಾಮಾಜಿಕ ವಲಯದ ಬಗ್ಗೆ ಹೆಚ್ಚು ಗಮನ ಹರಿಸಲು ತೀರ್ಮಾನಿಸಲಾಗಿತ್ತು. ಅಭಿವೃದ್ಧಿಗೆ ಬೇಕಾದ ಎಲ್ಲಾ ಸೌಲಭ್ಯಗಳೂ ಇಲ್ಲಿರುವ ಕಾರಣ ಈ ಮಾಜಿ ಬ್ರಿಟಿಷ್ ವಸಾಹತುಶಾಹಿ ದೇಶ ಸಾಮಾಜಿಕ ವಲಯಗಳ ಪ್ರಮುಖ ಕೇಂದ್ರವಾಗುವಂತಹ ಎಲ್ಲಾ ನಿರೀಕ್ಷೆಗಳೂ ಇವೆ ಎನ್ನಲಾಗಿತ್ತು.

5. ಕಾರ್ನ್‍ವಾಲ್‍ಅನ್ನು ಮೊದಲ ಗ್ರಾಮೀಣ ಸಾಮಾಜಿಕ ಉದ್ಯಮ ವಲಯವನ್ನಾಗಿ ಘೋಷಣೆ – ಯುನೈಟೆಡ್ ಕಿಂಗ್‍ಡಮ್‍ನ ಸಾಮಾಜಿಕ ಉದ್ದಿಮೆಗಳ ಅಡಿಯಲ್ಲಿ ಕಾರ್ನ್‍ವಾಲ್ ಮೊತ್ತ ಮೊದಲ ಗ್ರಾಮೀಣ ಸಾಮಾಜಿಕ ಉದ್ದಿಮೆ ವಲಯವನ್ನಾಗಿ ನೋಂದಾಯಿಸಲಾಗಿದೆ. ಜೇಮಿ ಆಲಿವರ್‍ರ ಫಿಫ್ಟೀನ್ ಕಾರ್ನ್‍ವಾಲ್, ಈಡನ್ ಪ್ರಾಜೆಕ್ಟ್, ಕಮ್ಯುನಿಟಿ ಎನರ್ಜಿ ಪ್ಲಸ್ ಸೇರಿದಂತೆ ಇನ್ನೂ ಹಲವು ಸಾಮಾಜಿಕ ಉದ್ಯಮಗಳಿಗೆ ಕಾರ್ನ್‍ವಾಲ್ ಕೌಂಟಿ ಸೂರು ಕಲ್ಪಿಸಿದೆ. ಇದು ಯುಕೆನ ಇತರೆ ಕೌಂಟಿಗಳಿಗೂ ಮಾದರಿಯಾಗಿದೆ.

6. 4.80 ಲಕ್ಷ ಉಳಿತಾಯದಾರರನ್ನು ಸಕ್ರಿಯಗೊಳಿಸಿದ ಫಿಲಿಪ್ಪೀನ್ಸ್‍ನ ಕಾರ್ಡ್ ಬ್ಯಾಂಕ್ - ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಷನ್‍ರ ಧನಸಹಾಯದಿಂದ, ಗ್ರಾಮೀಣ ಫೌಂಡೇಶನ್‍ನ ಕೆಲಸಗಳಿಂದ ಕೇವಲ 4 ವರ್ಷಗಳಲ್ಲಿ ಕಾರ್ಡ್ ಬ್ಯಾಂಕ್ ಬರೊಬ್ಬರಿ 4 ಲಕ್ಷದ 80 ಸಾವಿರಕ್ಕೂ ಹೆಚ್ಚು ಫಿಲಿಪ್ಪೀನ್ಸ್‍ನ ಸ್ಥಳೀಯರಿಗೆ ಬ್ಯಾಂಕ್ ಸೇವೆ ಕಲ್ಪಿಸಿದೆ. ಎಲ್ಲವೂ ಉಳಿತಾಯ ಖಾತೆಗಳಾಗಿದ್ದು, ಈ ಮೂಲಕ ಫಿಲಿಪ್ಪೀನ್ಸ್‍ನ ಬಡ ಹಾಗೂ ಬ್ಯಾಂಕ್‍ಗಳಿಂದ ದೂರ ಉಳಿದಿದ್ದ ಜನರಿಗೆ ಸರಳವಾಗಿ ವ್ಯವಹರಿಸಲು ಸಹಾಯ ಮಾಡಲಾಗುತ್ತಿದೆ.

7. 3 ಸಾಮಾಜಿಕ ಉದ್ದಿಮೆಗಳಲ್ಲಿ ವಿಲ್‍ಗ್ರೋ ಬಂಡವಾಳ ಹೂಡಿಕೆ – ತಾನು ಬಂಡವಾಳ ಹೂಡಿರುವ ಸಂಸ್ಥೆಗಳ ಸಾಲಿಗೆ ವಿಲ್‍ಗ್ರೋ ಹೊಸದಾಗಿ ಮೂರು ಕಂಪನಿಗಳನ್ನು ಸೇರಿಸಿಕೊಂಡಿದೆ. ಒನ್‍ಬ್ರೆತ್, ಎಕೋಜೆನ್ ಸಲ್ಯೂಷನ್ಸ್ ಮತ್ತು ಆರ್ಟೂ ಕಂಪನಿಗಳಲ್ಲಿ ವಿಲ್‍ಗ್ರೋ ಹೊಸದಾಗಿ ಬಂಡವಾಳ ಹೂಡಿದೆ. ಷೇರು ಬಂಡವಾಳಗಳ ರೂಪದಲ್ಲಿ ವಿಲ್‍ಗ್ರೋ ಈ ಕಂಪನಿಗಳಲ್ಲಿ ಹೂಡಿಕೆ ಮಾಡಿದೆ. ಜೊತೆಗೆ ಆ ಕಂಪನಿಗಳಿಗೆ ಬೇಕಾದ ಸೂಕ್ತ ತರಬೇತಿ, ಸರಿಯಾದ ಸಂಪರ್ಕ ಹಾಗೂ ಪ್ರತಿಭೆಗಳನ್ನು ನೀಡುವ ಮೂಲಕ ಈ ಸಾಮಾಜಿಕ ಉದ್ಯಮಗಳಿಗೆ ಸಹಕಾರ ನೀಡುತ್ತಿದೆ.

ಲೇಖಕರು: ನೆಲ್ಸನ್​ ವಿನೋದ್​ ಮೊಸೆಸ್​​

ಅನುವಾದಕರು: ವಿಶಾಂತ್​​​


Related Stories