ಉದಾರ ಕಲೆಯಿಂದ ಕೋಡಿಂಗ್‍ಗೆ ಹೋಗುವುದು ಹೇಗೆ?

ಟೀಮ್​​ ವೈ.ಎಸ್​​.

0

ಸಿಎಸ್ ಹಿನ್ನೆಲೆ ಹೊಂದಿರದವರು ಗಣಿತದ ಬದಲು ಶಬ್ಧಗಳನ್ನು, ಭೌತಶಾಸ್ತ್ರದ ಬದಲು ತತ್ವಶಾಸ್ತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರಿಗೆ ಕೋಡಿಂಗ್ ಅನ್ನೋದು ಭಯ ಹುಟ್ಟಿಸುವ ವಿಚಾರ. ಫೇಸ್‍ಬುಕ್ ಪ್ರಾಡಕ್ಟ್ ಮ್ಯಾನೇಜರ್ ರಿ ಬಾನ್ ಅವರಿಗೂ ಹಾಗೇ ಅನಿಸಿತ್ತು. ತಮ್ಮ ಹೈಸ್ಕೂಲ್ ದಿನಗಳಲ್ಲೇ ರಿ ಬಾನ್ ಅವರಿಗೆ ಕ್ಯಾಲ್ಕುಲಸ್ ಅಂದ್ರೆ ಭಯವಿತ್ತು. ಕೋಡಿಂಗ್ ಕಲಿಕೆ ಕೂಡ ಇಷ್ಟೇ ಭಯಾನಕ ಅನುಭವವಾಗಬಹುದೆಂಬ ಹಿಂಜರಿಕೆ ಕಾಡಿತ್ತು. ಫೇಸ್‍ಬುಕ್‍ನ ಕೋಡ್‍ಬೇಸ್ ಅನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ರಿ ಬಾನ್ ಎಂಜಿನಿಯರಿಂಗ್ ಬೂಟ್ ಕ್ಯಾಂಪ್ ಸೇರಿಕೊಂಡ್ರು. ಎಂಜಿನಿಯರಿಂಗ್ ಸಹೋದ್ಯೋಗಿಗಳ ಜೊತೆ ಅನುಭೂತಿ ಬೆಳೆಸಿಕೊಳ್ಳುವುದು ಹಾಗೂ ತಮ್ಮಲ್ಲಿರುವ ನಿಜವಾದ ಸಮಸ್ಯೆಯನ್ನು ಅರಿಯುವುದು ಅವರ ಉದ್ದೇಶವಾಗಿತ್ತು. ತಂತ್ರಜ್ಞಾನದ ಗಂಧ ಗಾಳಿಯೇ ಇಲ್ಲದ ಕೋಡರ್ ಕಲಿತ ಪಾಠಗಳು ಇಲ್ಲಿವೆ.

1. ಬೆಳವಣಿಗೆಯ ಮನಸ್ಸಿರಲಿ - ಯಶಸ್ಸಿಗೆ ಪ್ರಾಧಾನ್ಯತೆ ನೀಡಿ...

ನಿಮ್ಮ ಕ್ರಮಗಳು ಏನನ್ನು ಆದೇಶಿಸುತ್ತವೆಂಬುದನ್ನು ನಿಮಗೆ ನೀವೇ ಹೇಳಿಕೊಳ್ಳಿ. ಹಾರ್ವರ್ಡ್ ಸ್ಟಡಿಯಲ್ಲಿ ಸ್ಟಿರಿಯೋಟೈಪ್ ವಿಧಾನವಿರುತ್ತೆ. ಮಹಿಳಾ ಅಭ್ಯರ್ಥಿಗಳು ಗಣಿತದಲ್ಲಿ ಕಳಪೆ ಪ್ರದರ್ಶನ ನೀಡುತ್ತಾರೆ ಅನ್ನೋ ಭಾವನೆಯಿದೆ. ಯಾವುದೇ ಒಂದು ವಿಷಯದಲ್ಲಿ ನಿಮ್ಮ ಪ್ರದರ್ಶನ ಕೆಟ್ಟದಾಗಿದೆ ಎಂದುಕೊಂಡರೆ ಅದು ಸ್ವಯಂ ನೆರವೇರಿಕೆಯ ಕ್ರಿಯೆಯಾಗಿ ಮಾರ್ಪಡುತ್ತದೆ. ಬೆಳವಣಿಗೆಗೆ ಮನಸ್ಸು ಬದಲಾಯಿಸುವುದರಿಂದ ಋಣಾತ್ಮಕ ಮೂಲದ ಪರಿಣಾಮಗಳನ್ನು ಪ್ರತಿರೋಧಿಸಬಹುದು. ನಿಜಕ್ಕೂ ನಿಮ್ಮಲ್ಲಿ ಸುಧಾರಿಸುವ ಮನಸ್ಸಿದ್ದರೆ, ಅದನ್ನು ನೀವು ನಂಬಿದ್ರೆ ವಾಸ್ತವವಾಗಿಯೂ ನೀವು ಸುಧಾರಿಸುತ್ತೀರಾ.

ಬೆಳವಣಿಗೆಯ ಮನಸ್ಥಿತಿ ನಿಮ್ಮ ಕಲಿಕೆಯ ಸಾಮರ್ಥ್ಯ ಹಾಗೂ ವೇಗವನ್ನು ಹೆಚ್ಚಿಸುತ್ತದೆ. ಸ್ಥಿರ ಮನಸ್ಥಿತಿಯುಳ್ಳವರು ತಮ್ಮ ಲಕ್ಷಣ ಶಾಶ್ವತ ಎಂದು ಭಾವಿಸುತ್ತಾರೆ. ಅವರು ಗಣಿತದಲ್ಲಿ ಹಿಂದಿದ್ರೆ ಸದಾ ಗಣಿತದಲ್ಲಿ ದುರ್ಬಲರಾಗಿಯೇ ಇರುತ್ತಾರೆ. ಬೆಳವಣಿಗೆಯ ಮನವಸ್ಥಿತಿಯುಳ್ಳವರು ಪರಿಶ್ರಮಪಟ್ರೆ ದೌರ್ಬಲ್ಯವನ್ನು ಮೆಟ್ಟಿನಿಲ್ಲಲು ಸಾಧ್ಯವೆಂದು ಭರವಸೆ ಇಡುತ್ತಾರೆ.

ರಿ ಬಾನ್ ಕೂಡ ಹತ್ತಾರು ಸವಾಲುಗಳನ್ನು ಎದುರಿಸಿದ್ದಾರೆ. ಆತಂಕ ನಮ್ಮನ್ನು ಬೆಳವಣಿಗೆಯತ್ತ ಕೊಂಡೊಯ್ಯುತ್ತದೋ ಅಥವಾ ಬೇಸರ ನಮ್ಮನ್ನು ಬೆಳವಣಿಗೆಯತ್ತ ಕೊಂಡೊಯ್ಯುತ್ತದೋ ಎಂಬ ಪ್ರಶ್ನೆಯನ್ನು ಅವರಿಗೆ ಅವರೇ ಕೇಳಿಕೊಂಡಿದ್ದಾರೆ. ಆರಾಮದಯಕ ವಲಯದಿಂದ ನಿಮ್ಮನ್ನು ನೀವು ಹೊರಹಾಕಿದಾಗ ಒತ್ತಡ ಸಹಜ. ಆದ್ರೆ ಸ್ವಲ್ಪ ಮಟ್ಟಿಗೆ ಒತ್ತಡ ಒಳ್ಳೆಯದು ಅದು ನಿಮ್ಮ ಪ್ರದರ್ಶನವನ್ನು ಉತ್ತಮಪಡಿಸುತ್ತದೆ. ಇದನ್ನು ಅವರು ಉತ್ಪಾದಕ ಅಸ್ವಸ್ಥತೆ ಎಂದು ಕರೆದಿದ್ದಾರೆ. ನಿಮ್ಮಲ್ಲಿರುವ ದೌರ್ಬಲ್ಯವನ್ನು ಮೆಟ್ಟಿನಿಲ್ಲಲು ಮತ್ತು ನಿಮಗೆ ತೊಂದರೆಯಾಗ್ತಿರೋ ವಿಷಯವನ್ನು ಸವಾಲಾಗಿ ಸ್ವೀಕರಿಸಲು ಉತ್ಪಾದಕ ಅಸ್ವಸ್ಥತೆ ನೆರವಾಗುತ್ತದೆ. ಇದರಿಂದ ನಿಮ್ಮ ವೈಯಕ್ತಿಕ ಬೆಳವಣಿಗೆಯೂ ಸಾಧ್ಯ. ಹಾಗಾಗಿ ಬೆಳವಣಿಗೆಯ ಮನಸ್ಥಿತಿ ನಿಮ್ಮದಾಗಿರಲಿ.

ಬೂಟ್ ಕ್ಯಾಂಪ್‍ನಲ್ಲಿದ್ದಾಗಲೆಲ್ಲ ತಾವು ಆತ್ಮವಿಶ್ವಾಸವನ್ನಿಟ್ಟುಕೊಂಡೇ ಹುಟ್ಟಿಲ್ಲ, ಅದನ್ನು ಬೆಳೆಸಿಕೊಳ್ಳಲು ಹುಟ್ಟಿದ್ದೇನೆಂಬುದನ್ನು ರಿ ಬಾನ್ ನೆನಪಿಸಿಕೊಳ್ತಿದ್ರು. ಟಾಮ್ ಸ್ಟೊಕೀ ಅವರ ಪ್ರಕಾರ "ಸ್ವಯಂ ಅರಿವು ಮತ್ತು ಬೆಳವಣಿಗೆಯ ಮನಸ್ಥಿತಿ ಆತ್ಮವಿಶ್ವಾಸದ ಮೂಲ''.

2. ನಿಮ್ಮ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಅಡಗಿಸಲು ಶಿಸ್ತನ್ನು ರೂಢಿಸಿಕೊಳ್ಳಿ...

ತುಂಬಾ ಭಾವನಾತ್ಮಕ ಮನಸ್ಥಿತಿಯವರು, ತುಂಬಾ ಬರೆಯುವವರಿಗೆ ಕೋಡಿಂಗ್, ಭಾವನೆಗಳನ್ನು ಅಡಗಿಸುವುದು ಹೇಗೆಂಬುದನ್ನು ಕಲಿಸುತ್ತದೆ. ಸಮರಾಂಗಣದಲ್ಲಿ ತಾವು ಕೂಡ ಹತಾಶೆ ಹಾಗೂ ಭಾವನೆಗಳ ಜೊತೆ ಹೋರಾಡಿರೋದಾಗಿ ರಿ ಬಾನ್ ಹೇಳಿಕೊಂಡಿದ್ದಾರೆ. ಮೆದುಳಿನ ಒಂದು ಭಾಗ ನಮ್ಮ ಭಾವನಾತ್ಮಕ ಪ್ರತಿಕ್ರಿಯೆ, ನಿರ್ಧಾರ ಕೈಗೊಳ್ಳುವಿಕೆ ಹಾಗೂ ಸಮಸ್ಯೆ ಬಗೆಹರಿಸುವಿಕೆಗೆ ಕಾರಣ. ಮೊದಲು ಯೋಚಿಸಿ ಆಮೇಲೆ ಪ್ರತಿಕ್ರಿಯಿಸುವುದನ್ನು ಕೋಡಿಂಗ್ ಅವರಿಗೆ ಕಲಿಸಿದೆಯಂತೆ.

3. ನೀವು ಎಂಜಿನಿಯರ್ ಆಗಿರಬೇಕೆಂದೇನಿಲ್ಲ, ಅವರಂತೆ ಕಲಿಕೆ ಸಾಮರ್ಥ್ಯ ಬೆಳೆಸಿಕೊಳ್ಳಿ...

ಕೀಳರಿಮೆ ಬೆಳೆಸಿಕೊಳ್ಳುವುದು ಸುಲಭ. 10,000 ಗಂಟೆಗಳ ಕೋಡಿಂಗ್ ಕಲಿಕೆ ಅಸಾಧ್ಯ ಎಂಬ ಭಾವನೆ ಮೂಡುವುದು ಸಹಜ. ಹಾಗಾಗಿ ನೀವು ಎಂಜಿನಿಯರ್ ಆಗಿರಬೇಕೆಂದೇನೂ ಇಲ್ಲ. ಅವರಂತೆ ಕಲಿತರೆ ಸಾಕು. ಎಂಜಿನಿಯರ್‍ಗಳಂತೆ ಯೋಚಿಸುವುದರಿಂದ ಪ್ರಾಡಕ್ಟ್ ಮ್ಯಾನೇಜರ್‍ಗಳು, ಪ್ರಾಜೆಕ್ಟ್ ಮ್ಯಾನೇಜರ್‍ಗಳು, ಮಾರ್ಕೆಟಿಂಗ್‍ನವರಿಗೂ ಪ್ರಯೋಜನವಿದೆ. ಎಂಜಿನಿಯರ್‍ಗಳಂತೆ ಯೋಚಿಸುವುದೆಂದ್ರೆ ಸಮಸ್ಯೆಗಳ ಮೇಲೆ ಗಮನಹರಿಸಿದಂತೆ.

4. ಕಠಿಣವಾಗಿದ್ದರೂ ಹೋರಾಟ ನಿಮಗೆ ಒಳ್ಳೆಯದು...

ವಿದ್ಯಾರ್ಥಿಗಳ ಸಾಮರ್ಥ್ಯಕ್ಕಿಂತ ಸ್ವಲ್ಪ ಹೆಚ್ಚಿನ ಕೆಲಸವನ್ನೇ ಶಿಕ್ಷಕರು ನೀಡುತ್ತಾರೆ ಎಂಬುದನ್ನು ಯುಎಲ್‍ಸಿಎ ಮನಶಾಸ್ತ್ರಜ್ಞ ಜಿಮ್ ಸ್ಟಿಗ್ಲರ್ ಅರ್ಥಮಾಡಿಕೊಂಡಿದ್ರು. ವಿದ್ಯಾರ್ಥಿಗಳು ಆ ಕಾರ್ಯದಲ್ಲಿ ಸಫಲರಾದ್ರೆ ಪರಿಶ್ರಮ ಮತ್ತು ಹೋರಾಟದಿಂದ ಇದು ಸಾಧ್ಯವಾಯ್ತು ಎನ್ನುತ್ತಾರೆ. ಜಪಾನ್‍ನ ಶಿಕ್ಷಕರು ಬುದ್ಧಿವಂತಿಕೆಯನ್ನು ಗುರುತಿಸುವುದಿಲ್ಲ, ಪ್ರದರ್ಶನಕ್ಕೆ ಕಾರಣ ಹುಡುಕುವುದಿಲ್ಲ. ಪರಿಶ್ರಮ ಮತ್ತು ಹಠದ ಮೂಲಕವೇ ಸಾಧಿಸುತ್ತಾರೆ. ಪರಿಣಾಮ ಕಲಿಕೆ ಕಠಿಣ ಮತ್ತು ಹೋರಾಟ ಅನಿವಾರ್ಯ ಎಂಬ ಮನಸ್ಥಿತಿಯಿಂದ್ಲೇ ವಿದ್ಯಾರ್ಥಿಗಳು ಹೊರಬರುತ್ತಾರೆ. ಹೋರಾಟ ಅನ್ನೋದು ಸಾರ್ವಕಾಲಿಕ ಸತ್ಯ ಮತ್ತು ಬದುಕಿನ ಅನಿವಾರ್ಯತೆ. ಹೋರಾಡುವ ಮನಸ್ಸಿದ್ದರೆ ಸಮಸ್ಯೆಗಳು ನಿಮ್ಮೆದುರು ನಿಲ್ಲೋದೇ ಇಲ್ಲ.

Related Stories