5ಸಿ ಹೆಲ್ತ್ ಕೇರ್: ಜೀವವೇ ಅಮೂಲ್ಯ..!

ಟೀಮ್​​ ವೈ.ಎಸ್​​.

0

ಒಂದು ದಿನ ಬೆಳಗಿನ ವಾಕ್‌ಗೆ ಹೋಗಿದ್ದ ಮಿತೀಶ್ ಚಿಟ್ನಾವಿಸ್ ಸ್ನೇಹಿತ ಇದ್ದಕ್ಕಿದ್ದಂತೆ ಬಿದ್ದು ಸಾವನ್ನಪ್ಪಿದರು. ಇದರಿಂದ ಅವರ ಸಂಸಾರ ಅನಾಥವಾಯಿತು.

ಇಂದು ಜನರಿಗೆ ತಮ್ಮ ಆರೋಗ್ಯ ಹೇಗೆ ಹಾಳಾಗುತ್ತಿದೆ ಎಂಬ ವಿಷಯವೇ ಅರ್ಥವಾಗುತ್ತಿಲ್ಲ. ವೈದ್ಯರ ಬಳಿ ಹೋದರೆ ಇನ್ನೆಷ್ಟು ಖರ್ಚಿನ ದಾರಿಗಳು ಕಾದಿದೆಯೋ ಎಂಬ ಹೆದರಿಕೆಯಿಂದ ವೈದ್ಯರ ಬಳಿ ಹೋಗಿ ತಪಾಸಣೆಯನ್ನೂ ಮಾಡಿಸಿಕೊಳ್ಳುತ್ತಿಲ್ಲ.

ಸ್ನೇಹಿತನ ಆಕಸ್ಮಿಕ ಮರಣ ಮಿತೀಶ್ ಚಿಟ್ನಾವಿಸ್ ಮತ್ತು ಬಾಲಉನ್ನಿಕೃಷ್ಣನ್‌ಗೆ ಹೆಲ್ತ್ 5ಸಿ ಸಂಸ್ಥೆ ಸ್ಥಾಪಿಸಲು ಪ್ರೇರಕವಾಯಿತು. ಬೆಂಗಳೂರು ಮೂಲದ ಪಿಡಿಹೆಚ್‌ಪಿ ಟೆಕ್ ಕಂಪನಿ ಜನರಿಗೆ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುವಂತೆ ಕಾರ್ಯನಿರ್ವಹಿಸುತ್ತಿದೆ.

ಚಿಟ್ನಾವಿಸ್ ಎಂಫಸಿಸ್‌ಗೆ ಮುಖ್ಯ ಕಾರ್ಯದರ್ಶಿ ಹಾಗೂ ಖಾಸಗಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದವರು. ಒಬೋಪೇ ಸಂಸ್ಥೆಯ ಕಾರ್ಯಗಳಿಗೆ ಉಪಾಧ್ಯಕ್ಷರಾಗಿದ್ದವರು. ಇನ್ನು ಬಾಲಉನ್ನಿಕೃಷ್ಣನ್ ಐಐಎಂನ ವಿದ್ಯಾರ್ಥಿಯಾಗಿದ್ದವರು. ಬಳಿಕ ರೆಡಿಫ್.ಕಾಮ್‌, ಆನ್ ಮೊಬೈಲ್ ಗ್ಲೋಬಲ್, ಒಬೋಪೇ, ನೋಕಿಯಾ ಇಂಡಿಯಾದಂತಹ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ 20 ವರ್ಷಗಳ ಅನುಭವವನ್ನು ಹೊಂದಿದ್ದಾರೆ.

ಹೆಲ್ತ್ ಸಿ ಕಂಪನಿಯ ಸಹ ಸಂಸ್ಥಾಪಕರಾಗಿರುವ ಮಿತೀಶ್ ಚಿಟ್ನಾವಿಸ್ ಹೇಳುವಂತೆ, 2 ಲಕ್ಷ ರೂ.ಗಳ ಬಂಡವಾಳ ಹೂಡಿಕೆಯೊಂದಿಗೆ 2011ರಲ್ಲಿ ಹೆಲ್ತ್5 ಸಿ ಕಂಪನಿ ಸ್ಥಾಪನೆಯಾಯಿತು. ದೃಢವಾದ, ಗ್ರಾಹಕ ಸ್ನೇಹಿ ಆರೋಗ್ಯ ವೇದಿಕೆ, ಬಳಸಲು ಸುಲಭವಾದ ಸಂಸ್ಥೆಯನ್ನು ರೂಪಿಸುವುದೇ ಹೆಲ್ತ್‌5ಸಿಯ ಗುರಿ.

ಬಾಲ ಉನ್ನಿಕೃಪ್ಣನ್​​, ಸಹಸಂಸ್ಥಾಪಕ
ಬಾಲ ಉನ್ನಿಕೃಪ್ಣನ್​​, ಸಹಸಂಸ್ಥಾಪಕ

ಎಲ್ಲಾ ಹೊಸಕಂಪನಿಗಳಂತೆ ಬಂಡವಾಳ ಹೂಡಿಕೆಯೇ ನಮ್ಮ ಕಂಪನಿಗಿದ್ದ ಸವಾಲು. ಹೀಗಾಗಿ ನಮ್ಮ ತಂಡ 27 ಮಂದಿಯಿಂದ 5 ಜನರಿಗೆ ಇಳಿಯಿತು. ಇಂದು ಹೆಲ್ತ್ ಸಿ ಕಂಪನಿಯಲ್ಲಿ 11 ಮಂದಿ ಕೆಲಸಗಾರರಿದ್ದಾರೆ.

ಸಮಗ್ರ (comprehensive), ಸ್ಥಿರ (consistent) , ಸಹಯೋಗ (collaborative), ನಾಗರೀಕ (citizen) ಮತ್ತು ಕಾಳಜಿ(care)ಯೇ ಹೆಲ್ತ್5 ಸಿಯ 5 ಸಿಗಳ ಅರ್ಥ. ಆಗಿಂದಾಗ್ಗೆ ವೈದ್ಯರ ಭೇಟಿ, ಸ್ವಯಂ ವಿಶ್ಲೇಷಣೆ, ಸಮಯಕ್ಕೆ ಸರಿಯಾಗಿ ಔಷಧಿ ಸೇವನೆ ಇವುಗಳು ವ್ಯಕ್ತಿಯ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಮಿತಿಶ್​ ಚಿಟ್ನಾವಿಸ್​​, ಸಹಸಂಸ್ಥಾಪಕ
ಮಿತಿಶ್​ ಚಿಟ್ನಾವಿಸ್​​, ಸಹಸಂಸ್ಥಾಪಕ

ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕೆಲಸ ಮಾಡುತ್ತಿರುವ ಹೆಲ್ತ್ 5ಸಿ ಕಂಪನಿ ಆರೋಗ್ಯದ ಕಾಳಜಿಯನ್ನು ಕೇವಲ ಆಸ್ಪತ್ರೆಯ 4 ಗೋಡೆಗಳಿಗೆ ಸೀಮಿತಗೊಳಿಸಿಲ್ಲ.

ಇದುವರೆಗೆ ಭಾರತದ ಅಪೋಲೋ ಡೆಂಟಲ್‌ನಿಂದ ಆರಂಭಿಸಿ ಎಸ್‌ಆರ್‌ಎಲ್ ಲ್ಯಾಬ್ಸ್, ಅಪೋಲೋ ಕ್ಲಿನಿಕ್, ವಾಸನ್ ಐಕೇರ್‌ಗಳಂತಹ 139 ಆಸ್ಪತ್ರೆಗಳು ಮತ್ತು ಡಯಾಗ್ನೋಸ್ಟಿಕ್ ಸೆಂಟರ್​ಗಳ ಜೊತೆಗೆ ಹೆಲ್ತ್ 5ಸಿ ಕಂಪನಿ ಕೈಜೋಡಿಸಿದೆ.

ಮೊದಲಿಗೆ 2 ದೊಡ್ಡ ಇನ್ಸುರೆನ್ಸ್ ಕಂಪನಿಗಳು, ಕೆಲ ಕಾರ್ಪೋರೇಟ್ ಸಂಸ್ಥೆಗಳ ಟೆಲಿಕಾಂ ಆಪರೇಟರ್‌ಗಳು ಹೆಲ್ತ್‌5ಸಿಯ ಗ್ರಾಹಕರಾಗಿದ್ದರು. ಪ್ರಸ್ತುತ ತನ್ನ ಸ್ವತಂತ್ರ ಆ್ಯಪ್‌ಗಳನ್ನು ಬಳಸುತ್ತಿರುವ 4,50,000 ಜನರನ್ನು ಹೊಂದಿದೆ ಹೆಲ್ತ್‌5ಸಿ ಕಂಪನಿ. ಹೆಲ್ತ್‌5ಸಿ ಕಂಪನಿಯ ಸಹ ಸಂಸ್ಥಾಪಕ ಬಾಲ ಉನ್ನಿಕೃಷ್ಣನ್ ಹೇಳುವಂತೆ ಇಂತಹ ಕೆಲ ಆ್ಯಪ್​ಗಳಿಂದ ಕಂಪನಿಗೆ ಆದಾಯವೂ ಬರುತ್ತಿದೆ.

ಮಾತ್ರೆಗಳನ್ನು ಗುರುತಿಸುವ ಆ್ಯಪ್(ಪಿಲ್ ಐಡೆಂಟಿಫೈಯರ್ ಆ್ಯಪ್)..!

ಹೆಲ್ತ್‌5ಸಿಯ ಮೊಬೈಲ್ ಆ್ಯಪ್‌ಗಳು ಆಂಡ್ರಾಯ್ಡ್ ಮತ್ತು ಐಒಸಿ ಫೋನ್‌ಗಳಲ್ಲಿ ಲಭ್ಯವಿದೆ. ತನ್ನ ಡಾಟಾಬೇಸ್‌ನಲ್ಲಿರುವ ಔಷಧಗಳ ಸಂಗ್ರಹದಿಂದ ಪಿಲ್ ಐಡೆಂಟಿಫೈಯರ್ ಆ್ಯಪ್ ಗ್ರಾಹಕನಿಗೆ ಅಗತ್ಯವಿರುವ ಮಾತ್ರೆಗಳು ಯಾವುದು? ಎಂಬುದನ್ನು ಸರಿಯಾಗಿ ಕಂಡುಹಿಡಿಯುತ್ತದೆ. ಗಾತ್ರ, ಆಕಾರ, ಬಣ್ಣಗಳ ಮುಖಾಂತರ ಮಾತ್ರೆಗಳನ್ನು ಕಂಡುಹಿಡಿಯುವಂತೆ ಈ ಆ್ಯಪ್ ರೂಪಿಸಲಾಗಿದೆ. ಅಮೆರಿಕ ಮೂಲದ ಪಾಲುದಾರರೊಂದಿಗೆ ಈ ಆ್ಯಪ್‌ನ್ನು ಕಂಡುಹಿಡಿಯಲಾಯಿತು.

ಭಾರತಕ್ಕಿಂತ ಅಮೆರಿಕಾ ಮಾರುಕಟ್ಟೆಯಲ್ಲಿ ಔಷಧಗಳನ್ನು ಆನ್‌ಲೈನ್ ಮುಖಾಂತರ ಆರ್ಡರ್ ಮಾಡುವ ವಿಧಾನ ಹೆಚ್ಚಾಗಿ ಬಳಕೆಯಾಗುತ್ತಿದೆ ಎನ್ನುತ್ತಾರೆ ಬಾಲ ಉನ್ನಿಕೃಷ್ಣನ್. ಸಣ್ಣ ಬಾಕ್ಸ್‌ಗಳ ಮೂಲಕ ಔಷಧಗಳನ್ನು ಶಿಪ್ಪಿಂಗ್ ಮತ್ತು ವಿತರಣೆ ಮಾಡುತ್ತಾರೆ.

ಅಮೆರಿಕಾದ ಮಾರುಕಟ್ಟೆಯಲ್ಲಿ ಮೆಡಿಕಲ್ ಶಾಪ್‌ಗಳಲ್ಲಿ ಕಂಟೈನರ್‌ಗಳಲ್ಲಿ ತುಂಬಿಸಿಟ್ಟ ಕೆಲವು ವರ್ಗದ ದುರ್ಬಲ ಮಾತ್ರೆಗಳನ್ನು ಗುರುತಿಸಲು ಈ ಪಿಲ್ ಐಡೆಂಟಿಫೈಯರ್ ಆ್ಯಪ್ ಅತೀ ಅಗತ್ಯವಿದೆ.

ವೇಗವಾಗಿ ಬೆಳೆಯುತ್ತಿರುವ ಸಂಸ್ಥೆ

ಕೆಪಿಎಂಜಿಯ ಪ್ರಕಾರ ಆರೋಗ್ಯ ತಂತ್ರಜ್ಞಾನದ ಮಾರುಕಟ್ಟೆ ಸುಮಾರು 3500 ಕೋಟಿ ವ್ಯವಹಾರ ಮಾಡಲಿದೆ ಎಂಬ ಅಂದಾಜಿದೆ. ಪ್ರತಿವರ್ಷ ಅಂದಾಜು ಶೇ.18ರಿಂದ 20 ರಷ್ಟು ಅಭಿವೃದ್ಧಿ ಸಾಧಿಸಲಿದೆ. ಚಿಟ್ನಾವಿಸ್ ಗುರುತಿಸಿರುವಂತೆ ಹೆಲ್ತ್‌5ಸಿ, ದೂರದ ನಿರ್ವಹಣೆ ಹಾಗೂ ಹೆಲ್ತ್‌ಕೇರ್‌ ದಾಖಲಾತಿಗಳ ಗಣಕೀಕರಣದ ಗುರಿ ಹೊಂದಿದೆ.

ಹೆಲ್ತ್ 5ಸಿಯ ಗ್ರಾಹಕರ ಪಟ್ಟಿಯಲ್ಲಿ ನೆಕ್ಸ್ಟ್ ಜೆನ್ ಡೇಟಾ ಸೆಂಟರ್ ಹಾಗೂ ಕೆಲವು ಬೆಂಗಳೂರು ಮತ್ತು ಮುಂಬೈನ ಪ್ರತಿಷ್ಟಿತ ಆಸ್ಪತ್ರೆಗಳ ಹೆಸರಿದೆ. ಅವುಗಳಲ್ಲಿ ಸುಹಾಸ್ ಡಯಾಗ್ನೋಸ್ಟಿಕ್, ಅಭಯ್ ಆಸ್ಪತ್ರೆ, ಬಿಜಿಎಸ್, ಪೂಜಾ ಆಸ್ಪತ್ರೆ, ಎಕ್ಸ್‌ಪ್ರೆಸ್ ಕ್ಲಿನಿಕ್, ಕೇರ್ ಪ್ಯಾಟ್ರೂನ್ಸ್ ಮತ್ತು ಚಿರಾಗ್ ಆಸ್ಪತ್ರೆ ಮುಖ್ಯವಾದವು. ಹೊಸದಾಗಿ ಆರಂಭವಾಗುವ ಈ ಕ್ಷೇತ್ರದ ಉದ್ಯಮಗಳು ಆಲ್ಮೋಂಡ್ಸ್ ಹಾಗೂ ಜೆಎಲ್‌ಟಿಯ ವಿಮೆಯನ್ನು ಹೊಂದಿರುತ್ತದೆ.

ಹೆಲ್ತ್‌5ಸಿ ತನ್ನ ಗ್ರಾಹಕರ ಮುಂದೆ ಸಾಕಷ್ಟು ಆಯ್ಕೆಯ ಸ್ವಾತಂತ್ರ್ಯ ಕಲ್ಪಿಸುವ ಇಚ್ಛೆ ಹೊಂದಿದೆ ಅಂತಾರೆ ಉನ್ನಿಕೃಷ್ಣನ್. ಹೆಲ್ತ್‌ 5ಸಿ ಸರಿಸುಮಾರು 200 ಹೆಲ್ತ್‌ ಕೇರ್ ಸೌಕರ್ಯ ಒದಗಿಸುವ ಸಂಸ್ಥೆಗಳೊಂದಿಗೆ ಕೈಜೋಡಿಸಿದೆ. ಗ್ರಾಹಕರಿಗೆ ವೈದ್ಯಕೀಯ ನೆರವು ಹಾಗೂ ಅರೆ ಅಂಶದ ಆದಾಯಗಳಿಕೆ ಇದರ ಯೋಜನೆ. ಪ್ರಸ್ತುತ ಈ ಹೆಲ್ತ್ ಕೇರ್ ಉದ್ಯಮ ಬಾಂಗ್ಲಾದೇಶದ ಹೆಲ್ತ್‌ ಕೇರ್‌ಗಳಂತೆ ಮೊಬೈಲ್ ಆಪರೇಟಿಂಗ್ ವ್ಯವಸ್ಥೆ ಹೊಂದಿದೆ. ಸುಮಾರು 11 ಮಿಲಿಯನ್ ಗ್ರಾಹಕರಿಗೆ ಸೇವೆ ಒದಗಿಸಿದ ಡೇಟಾಬೇಸ್ ದಾಖಲೆ ಲಭ್ಯವಿದೆ.

ಕಾರ್ಪೋರೇಟ್ ಕಂಪನಿಗಳ ಜೊತೆ ವ್ಯವಹರಿಸುವಾಗ ಹೆಲ್ತ್ 5 ಸಿ ಆ ಕಂಪನಿಗಳ ಮಾನವ ಸಂಪನ್ಮೂಲ ಇಲಾಖೆಯ ಸಂಪರ್ಕ ಹೊಂದಿರುತ್ತದೆ. ಈ ಮೂಲಕ ಸದೃಢ ಆರೋಗ್ಯ ಹೊಂದುವ ನಿಟ್ಟಿನಲ್ಲಿ ಕೆಲವು ಕಾರ್ಯಯೋಜನೆಗಳನ್ನು ಸಿದ್ಧಪಡಿಸಿಕೊಳ್ಳುತ್ತದೆ.

ಇಂದು ಕಾರ್ಪೋರೇಟ್ ಕಂಪನಿಗಳ ಉದ್ಯೋಗಿಗಳು ಕೆಲಸದ ಒತ್ತಡಗಳ ಮಧ್ಯೆ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸುತ್ತಿಲ್ಲ. ರಕ್ತದೊತ್ತಡ, ಕೊಲೆಸ್ಟ್ರಾಲ್, ಥೈರಾಯ್ಡ್, ತೂಕ ಹಾಗೂ ಇನ್ನಿತರ ಸಮಸ್ಯೆಗಳು ಅವರನ್ನು ಬಾಧಿಸುತ್ತವೆ. ಹೆಲ್ತ್ 5 ಸಿ ಸಂಸ್ಥೆಯ ಕಾರ್ಪೋರೇಟ್ ಯೋಜನೆ, ಆ ನಿರ್ದಿಷ್ಟ ಸಂಸ್ಥೆಯ ಎಲ್ಲಾ ಉದ್ಯೋಗಿಗಳ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಂಡು ಅದಕ್ಕೆ ಸೂಕ್ತವಾದ ಚಿಕಿತ್ಸೆ ನೀಡುವತ್ತ ಗಮನ ಹರಿಸುತ್ತದೆ.

ನಮ್ಮ ಸಂಸ್ಥೆಯ ತೂಕ ಕಳೆದುಕೊಳ್ಳುವ ಸವಾಲಿನ ನಿರ್ವಹಣೆ ನಮ್ಮ ಅತೀ ಮುಖ್ಯ ಯಶಸ್ಸು. ವೈಯಕ್ತಿಕವಾಗಿ ಡಯಟ್ ಯೋಜನೆ, ಫಿಟ್ನೆಸ್ ಪ್ಲಾನ್ ಹಾಗೂ ತೂಕ ನಿರ್ವಹಣೆಗೆ ಸಂಬಂಧಿಸಿದಂತೆ ನೀಡುವ ತರಬೇತಿ ಆ ಉದ್ಯೋಗಿಗಳಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗಿದೆ ಎಂದು ಉನ್ನಿಕೃಷ್ಣನ್ ದೃಢಪಡಿಸಿದ್ದಾರೆ.

ಹೆಲ್ತ್‌5ಸಿ ಸಂಸ್ಥೆ ಸಂಸ್ಥಾಪಕರನ್ನೂ ಸೇರಿ 15 ಪೂರ್ಣಕಾಲಿಕ ಕೆಲಸಗಾರರನ್ನು ಹೊಂದಿದೆ. ಇದರ ಕಾರ್ಪೋರೇಟ್ ಆರೋಗ್ಯ ನಿರ್ವಹಣೆ ಯೋಜನೆಯನ್ನು ಸಂಸ್ಥೆಯ ಪರಿಣಿತ ಆರೋಗ್ಯಾಧಿಕಾರಿಗಳೇ ನಿರ್ವಹಿಸುತ್ತಿದ್ದಾರೆ.

ಗಣಕೀಕೃತ ಆರೋಗ್ಯ ವೇದಿಕೆ

ಡಿಜಿಟಲ್ ಹೆಲ್ತ್ -ಸೆಲ್ಫ್ ಕೇರ್ ಹಾಗೂ ಕಟ್ಟಡ- ವೈದ್ಯ, ರೋಗಿಗಳ ನಡುವಿನ ಸಂಬಂಧಗಳು ಮುಂದಿನ 3 ವರ್ಷಗಳ ಬೃಹತ್ ಸವಾಲಾಗಿದೆ. ಹೆಲ್ತ್‌ 5ಸಿ ಈಗಾಗಲೇ ಈ ಎಲ್ಲಾ ದಾಖಲೆಗಳ ಸಮರ್ಪಕ ಬಳಕೆಗಾಗಿ ರೋಗಿಗಳ ವಿಭಾಗವೊಂದನ್ನು ತೆರೆದು ಟೆಲಿ ಹೆಲ್ತ್/ ಟೆಲಿಮೆಡಿಸಿನ್, ರೋಗಿಗಳ ಶೈಕ್ಷಣಿಕ ಟೂಲ್, ಯೋಗ ಮುಂತಾದ ಸಾಮರ್ಥ್ಯ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಎಂಹೆಲ್ತ್ ಅಪ್ಲಿಕೇಶನ್ ಮತ್ತು ಇತರೆ ಹತ್ತು ಹಲವು ವಿಚಾರಗಳನ್ನು ಗಣಕೀಕೃತಗೊಳಿಸುತ್ತಿದೆ. ಹೆಲ್ತ್ 5ಸಿ 21,500ರೂ.ಗಳಿಂದ 23,000 ವಹಿವಾಟು ನಡೆಸುತ್ತಿದೆ.

ಮುಂದಿನ ಯೋಜನೆ

ಇಎಂಇಎ, ಸಾರ್ಕ್‌ ರಾಷ್ಟ್ರ ಹಾಗೂ ಭಾರತದಲ್ಲಿ ತನ್ನ ಬೆಳವಣಿಗೆ ಮತ್ತು ವಿಸ್ತರಣಾ ಯೋಜನೆ ಅನ್ವಯ ಹೆಲ್ತ್‌ 5ಸಿ ಸುಮಾರು 10 ಮಿಲಿಯನ್ ಚಂದಾದಾರರನ್ನು ಹೊಂದುವ ಆಲೋಚನೆ ಮಾಡುತ್ತಿದೆ. ಹೆಲ್ತ್‌ 5ಸಿಯ ಕಾರ್ಪೋರೇಟ್ ಯೋಜನೆ(ಚಂದಾದಾರಿಕೆಯ ಮಾದರಿ) ಇದೀಗ ಅತೀಹೆಚ್ಚು ಆದಾಯ ತರುವ ಯೋಜನೆಯಾಗಿ ಬದಲಾಗಿದೆ. 2016ರಲ್ಲಿ ಕಂಪನಿ 1 ಕೋಟಿ ರೂ. ಟರ್ನ್ ಓವರ್ ಸಾಧಿಸುವ ಗುರಿಹೊಂದಿದೆ ಎಂದು ಹೇಳುತ್ತಾರೆ ಚಿಟ್ನಾವಿಸ್.

ಹೆಲ್ತ್ ಕೇರ್ ಸೇವೆಗಳನ್ನು ಹುಡುಕುವವರ ಹಾಗೂ ಸೌಲಭ್ಯಗಳನ್ನು ಒದಗಿಸುವವರ ಸಂಪರ್ಕ ಸಾಧಿಸಿ ಮಾಹಿತಿಗಳನ್ನು ಹಂಚುವ ಹಾಗೂ ವೈದ್ಯಕೀಯ ನೆರವು ಒದಗಿಸುವ ಪರಿಪೂರ್ಣ ಸೇವೆಯ ಸಾಮರ್ಥ್ಯ ಸಾಧಿಸುವತ್ತ ಹೆಲ್ತ್ 5ಸಿ ಆರೋಗ್ಯಪೂರ್ಣವಾಗಿ ಹೆಜ್ಜೆ ಇಡುತ್ತಿದೆ.

Related Stories