15,000 ಯುವ ನಿರುದ್ಯೋಗಿಗಳಿಗೆ ಬದುಕು ಕಟ್ಟಿಕೊಟ್ಟ ಉದ್ಯಮಿ..

ಟೀಮ್ ವೈ.ಎಸ್.ಕನ್ನಡ 

15,000 ಯುವ ನಿರುದ್ಯೋಗಿಗಳಿಗೆ ಬದುಕು ಕಟ್ಟಿಕೊಟ್ಟ ಉದ್ಯಮಿ..

Thursday November 03, 2016,

2 min Read

ನಿಚುಟೆ ಡೌಲೋ ನಾಗಾಲ್ಯಾಂಡ್​ನಲ್ಲಿರುವ ಬ್ಯಾಪ್ಟಿಸ್ಟ್ ಕಾಲೇಜಿನ ಮಾಜಿ ಅರ್ಥಶಾಸ್ತ್ರ ಉಪನ್ಯಾಸಕರು. Schwab Foundation ನೀಡುವ '2016ರ ವರ್ಷದ ಸಾಮಾಜಿಕ ವಾಣಿಜ್ಯೋದ್ಯಮಿ' ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ನಿರುದ್ಯೋಗಿಗಳ ಪಾಲಿನ ಆಶಾಕಿರಣ ಇವರು. ಯುವಕರಿಗೆ ತರಬೇತಿ ನೀಡುವ ಮೂಲಕ ಉದ್ಯಮ ಲೋಕಕ್ಕೆ ಕಾಲಿಡಲು ನೆರವಾಗಿರುವ ನಿಚುಟೆ 15,000 ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ.

image


2000ನೇ ಇಸ್ವಿಯಲ್ಲಿ ನಿಚುಟೆ ಡೌಲೋ ಉಪನ್ಯಾಸಕ ವೃತ್ತಿ ತ್ಯಜಿಸಿದ್ರು. ಎಂಟರ್​ಪ್ರೆನ್ಯೂರ್ಸ್ ಅಸೋಸಿಯೇಟ್ಸ್ ಎಂಬ ಸಂಸ್ಥೆಯನ್ನು ಆರಂಭಿಸಿದ್ರು. ನಾಗಾಲ್ಯಾಂಡ್​ನ ಯುವಕರಿಗೆ ಉದ್ಯಮ ಆರಂಭಿಸಲು ಬಂಡವಾಳ ನೀಡುವುದು, ಉದ್ಯಮ ಕೌಶಲ್ಯವನ್ನು ಕಲಿಸಿಕೊಡುವುದು, ಚಿಕ್ಕಚಿಕ್ಕ ಉದ್ಯಮಗಳಿಗೆ ಮಾರ್ಕೆಟಿಂಗ್ ನೆಟ್ವರ್ಕ್ ಕಲ್ಪಿಸುವುದು ಈ ಸಂಸ್ಥೆಯ ಉದ್ದೇಶ. ಇದು ಅವರ ಎರಡನೇ ಪ್ರಯತ್ನವಾಗಿತ್ತು. 1992ರಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಯುವಜನತೆಯನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ನಿಚುಟೆ 'ಬೀಕೊನ್ ಆಫ್ ಹೋಪ್' ಎಂಬ ಸಂಸ್ಥೆಯೊಂದನ್ನು ಆರಂಭಿಸಿದ್ದರು. ಆದ್ರೆ ಅದು ಯಶಸ್ವಿಯಾಗಿರಲಿಲ್ಲ. ನಂತರ ಅವರು ಉಪನ್ಯಾಸಕ ವೃತ್ತಿ ಆರಂಭಿಸಿದ್ದರು. 8 ವರ್ಷಗಳ ಕಾಲ ಬ್ಯಾಪ್ಟಿಸ್ಟ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

''ನಾವು 13 ಜನರು ಜೊತೆಯಾಗಿ ಆರಂಭಿಸಿದ ಸಂಸ್ಥೆಯಿದು, ಆಗ ನಮ್ಮ ಬಳಿ ಹೆಚ್ಚು ಹಣವಿರಲಿಲ್ಲ. ಪ್ರತಿಯೊಬ್ಬರು 500 ರೂಪಾಯಿ ಹಣ ತೊಡಗಿಸಿದ್ರು. ನಮ್ಮ ಪ್ರಯಾಣ ಆರಂಭವಾಗಿದ್ದು ಕೇವಲ 7500 ರೂಪಾಯಿ ಬಂಡವಾಳದಿಂದ. ನಾವು ಗ್ರೀಟಿಂಗ್ ಕಾರ್ಡ್ಸ್ , ಲೆದರ್ ಬೆಲ್ಟ್ ಮತ್ತು ಬ್ಯಾಗ್​ಗಳನ್ನು ತಯಾರಿಸಿ ಮಾರಾಟ ಮಾಡಲು ಆರಂಭಿಸಿದ್ವಿ. ಇದರಿಂದ ನಮಗೆ ಲಕ್ಷಾಂತರ ರೂಪಾಯಿ ಗಳಿಸಲು ಸಾಧ್ಯವಾಯ್ತು'' ಎನ್ನುತ್ತಾರೆ ನಿಚುಟೆ ಡೌಲೋ.

ಈ ಆರಂಭದ ನಂತರ ಇಎ ಜನರಿಂದ ಹೂಡಿಕೆ ರೂಪದಲ್ಲಿ ಡೊನೇಶನ್​ಗಳನ್ನು ಸಂಗ್ರಹಿಸಲಾರಂಭಿಸಿತ್ತು. ಈಗ ಯುವಜನತೆಗೆ ಸ್ವಂತ ಉದ್ಯಮ ಆರಂಭಿಸಲು ಇಎ ಶೇ.16ರಷ್ಟು ಬಡ್ಡಿದರದಲ್ಲಿ ಹಣಕಾಸು ನೆರವು ನೀಡುತ್ತಿದೆ. ಈಗಾಗ್ಲೇ 10,000ಕ್ಕೂ ಹೆಚ್ಚು ಮಂದಿ ಇಎನಿಂದ ಲೋನ್ ಪಡೆದಿದ್ದಾರೆ. ನಾಗಾಲ್ಯಾಂಡ್ ಮಾತ್ರವಲ್ಲ ಪಕ್ಕದ ಮಣಿಪುರದಲ್ಲೂ 3 ವರ್ಷಗಳ ಹಿಂದೆಯೇ ಇಎ ಕಾರ್ಯನಿರ್ವಹಿಸುತ್ತಿದೆ. ಆರ್​ಬಿಐನಿಂದ್ಲೂ ಇಎಗೆ ಪರವಾನಿಗೆ ಸಿಕ್ಕಿದ್ದು, 150 ಕೋಟಿ ರೂಪಾಯಿ ವಹಿವಾಟು ನಡೆಸಿದೆ. 

''ಆರಂಭದಲ್ಲಿ ಜನರನ್ನು ಪ್ರೇರೇಪಿಸುವುದು ಅತಿ ದೊಡ್ಡ ಸವಾಲಾಗಿತ್ತು. ನಾಗಾಲ್ಯಾಂಡ್ ಮತ್ತು ಮಣಿಪುರದಲ್ಲಿ ನೇರ ಅಥವಾ ಪರೋಕ್ಷವಾಗಿ 15,000 ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ನಾವು ಸಫಲರಾಗಿದ್ದೇವೆ'' ಅನ್ನೋದು ನಿಚುಟೆ ಡೌಲೋ ಅವರ ಹೆಮ್ಮೆಯ ನುಡಿ. ಇಎನಿಂದ ಹಣಕಾಸಿನ ನೆರವು ಪಡೆದು ಹುಟ್ಟಿಕೊಂಡ 2700ಕ್ಕೂ ಹೆಚ್ಚು ಉದ್ಯಮಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇಎನಿಂದ ನೇರ ಬೆಂಬಲ ಪಡೆದ 3500ಕ್ಕೂ ಹೆಚ್ಚು ರೈತರು ಕೃಷಿಯಲ್ಲಿ ಸಫಲರಾಗಿದ್ದು, ಅವರಿಗೆ ಜೀವನಾಧಾರವೂ ದೊರೆತಿದೆ. ಅರುಣಾಚಲ ಪ್ರದೇಶ ಮತ್ತು ಆಸ್ಸಾಂ ಸರ್ಕಾರಗಳು ತರಬೇತಿ ಮತ್ತು ಇತರ ಚಟುವಟಿಕೆಗಳ ಆರಂಭಕ್ಕಾಗಿ ಎಂಟರ್​ಪ್ರೆನ್ಯೂರ್ಸ್ ಅಸೋಸಿಯೇಟ್ಸ್ ಮೊರೆ ಹೋಗಿವೆ.

ಇದನ್ನೂ ಓದಿ..

ಬಣ್ಣಗಳ ಅರಿವಿಲ್ಲದಿದ್ದರೂ ಪೈಂಟಿಂಗ್​ ಮಾಡ್ತಾರೆ- ದೃಷ್ಟಿ ವಿಕಲ ಚೇತನರಾಗಿದ್ರೂ ಬದುಕಿನ ಆಸೆ ಬಿಟ್ಟಿಲ್ಲ..!

ಮಾಂಸಹಾರಕ್ಕಿಲ್ಲ ಡಿಮ್ಯಾಂಡ್​- ಸಸ್ಯಹಾರಕ್ಕೆ ಕುಸಿದಿಲ್ಲ ಬೇಡಿಕೆ