ಕೃಷಿ ಆಧಾರಿತ ಸ್ಟಾರ್ಟ್ ಅಪ್​ಗಳಿಗೆ ಸರಕಾರದಿಂದ ಪ್ರೋತ್ಸಾಹ- 10 ಕೋಟಿ ರೂಪಾಯಿಗಳ ನಿಧಿಯನ್ನು ಮೀಸಲಿಟ್ಟ ರಾಜ್ಯ ಸರಕಾರ

ಟೀಮ್​ ವೈ.ಎಸ್​. ಕನ್ನಡ

ಕೃಷಿ ಆಧಾರಿತ ಸ್ಟಾರ್ಟ್ ಅಪ್​ಗಳಿಗೆ ಸರಕಾರದಿಂದ ಪ್ರೋತ್ಸಾಹ- 10 ಕೋಟಿ ರೂಪಾಯಿಗಳ ನಿಧಿಯನ್ನು ಮೀಸಲಿಟ್ಟ ರಾಜ್ಯ ಸರಕಾರ

Monday May 01, 2017,

3 min Read

ಸಾವಯವ ಕೃಷಿ ಧಾನ್ಯಗಳ ಮೇಳ ಯಶಸ್ವಿ ಕಂಡಿದೆ. ರಾಜ್ಯಸರಕಾರ ಜೈವಿಕ ಕೃಷಿ ವಿಧಾನದಲ್ಲೂ ಸ್ಟಾರ್ಟ್ ಅಪ್​ಗಳು ಯಶಸ್ವಿ ಕಾಣಬಹುದು ಅನ್ನುವುದನ್ನು ಅರಿತುಕೊಂಡಿದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಲು ಸರಕಾರ ಯೋಜನೆಗಳನ್ನು ರೂಪಿಸಿಕೊಂಡಿದೆ. ಅಷ್ಟೇ ಅಲ್ಲ ವಿನೂತನ ಐಡಿಯಾಗಳ ಮೂಲಕ ಕೃಷಿಕರನ್ನು ಪ್ರೋತ್ಸಾಹಿಸುವ ಕೆಲಸಕ್ಕಾಗಿ 10 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಈ ನಿಧಿಯನ್ನು ಇನ್​ಫಾರ್ಮೇಷನ್ ಟೆಕ್ನಾಲಜಿ ಮತ್ತು ಬಯೋ ಟೆಕ್ನಾಲಜಿ ಮೂಲಕ ಹಂಚುವ ಯೋಜನೆಗಳನ್ನು ಕೂಡ ರೂಪಿಸಬಹುಹು.

image


ಸಾವಯವ ಮತ್ತು ಸಿರಿಧಾನ್ಯ ಮೇಳಗಳಲ್ಲಿ ಕೃಷಿ ಸಚಿವ ಕೃಷ್ಣ ಬೈರೇ ಗೌಡ ಮತ್ತು ಪ್ರವಾಸೋದ್ಯಮ ಮತ್ತು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕೃಷಿಯಲ್ಲಿ ತಾಂತ್ರಿಕತೆಯನ್ನು ಅಳವಡಿಸಲು ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ. ರೈತರು ಲಾಭದಾಯಕ ಬೆಳೆ ಬೆಳೆಯಲು ಸಹಾಯ ನೀಡುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹ ನೀಡಿದ್ದಾರೆ.

ಹೊಸ ರೀತಿಯ ಕೃಷಿ ಸ್ಟಾರ್ಟ್ ಅಪ್​ಗಳಿಗೆ ಹಣವನ್ನು ಮೀಸಲಿಟ್ಟ ಮೊದಲ ಸಚಿವರಾಗಿ ಕೃಷ್ಣ ಬೈರೇಗೌಡರು ಗುರುತಿಸಿಕೊಂಡಿದ್ದಾರೆ. ಪ್ರಿಯಾಂಕ್ ಖರ್ಗೆ ಹ್ಯಾಕಥಾನ್ ಮೂಲಕ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವ ಯೋಜನೆ ಮಾಡಿಕೊಂಡಿದ್ದಾರೆ. ಐಟಿಬಿಟಿ ಮತ್ತು ಪ್ರವಾಸೋದ್ಯಮ ಸಚಿವರೂ ಆಗಿರುವ ಪ್ರಿಯಾಂಕ್ ಈಗಾಗಲೇ ಸರಕಾರದ ನಿಧಿಯಿಂದ ಸುಮಾರು 2.70 ಕೋಟಿ ರೂಪಾಯಿಗಳನ್ನು ಹ್ಯಾಕಥಾನ್ ಮತ್ತು 4 ವಿವಿಧ ಗ್ರಾಂಡ್ ಚಾಲೆಂಜ್ ಗೆದ್ದವರಿಗೆ ಹಂಚಿದ್ದಾರೆ.

ಇದನ್ನು ಓದಿ: ಬೆಂಗಳೂರಲ್ಲಿ ಸಾವಯವ ಮತ್ತು ರಾಷ್ಟ್ರೀಯ ಸಿರಿಧಾನ್ಯ ಮೇಳ… 

ರಾಜ್ಯ ಸರಕಾರ ಇದೇ ಮೊದಲ ಬಾರಿಗೆ ಕೃಷಿಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹ ನೀಡಿದೆ. ಈ ಮೂಲಕ ಕೃಷಿಯಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಕರ್ನಾಟಕ ಜೈವಿಕ ಕೃಷಿ ನೀತಿಯನ್ನು ರೂಪಿಸಿದ ಮೊದಲ ರಾಜ್ಯವಾಗಿ ಇತಿಹಾಸದ ಪುಟ ಸೇರಿಕೊಂಡಿದೆ. ಈ ನಿಟ್ಟಿನಲ್ಲಿ ಸಾವಯವ ಕೃಷಿ ಧಾನ್ಯ ಮೇಳ ಸಾಕಷ್ಟು ಸಹಾಯ ನೀಡಿದೆ.

“ ಸ್ಟಾರ್ಟ್ ಅಪ್​ಗಳಿಗೆ ಇದು ಅತ್ಯುತ್ತಮ ವೇದಿಕೆ. ಸಿರಿಧಾನ್ಯ ಮೇಳದಲ್ಲಿ ಸುಮಾರು 70 ಶೇಕಡಾಕ್ಕಿಂತಲೂ ಹೆಚ್ಚು ಪ್ರದರ್ಶನಕಾರರು ಒಂದಲ್ಲ ಒಂದು ರೀತಿಯಲ್ಲಿ ಸ್ಟಾರ್ಟ್ ಅಪ್ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಪಟ್ಟಣದ ಗ್ರಾಹಕರ ಜೊತೆ ಸಂಪರ್ಕಕ್ಕೆ ಬಂದಿದ್ದಾರೆ. ಯುವ ಸ್ಟಾರ್ಟ್ ಉದ್ಯಮಿಗಳು ಗ್ರಾಹಕರು, ರೈತರು ಮತ್ತು ಮಾರಾಟಗಾರರ ನಡುವೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳಬಲ್ಲರು. ದೊಡ್ಡ ದೊಡ್ಡ ಕಂಪನಿಗಳು ಇದನ್ನು ಭವಿಷ್ಯದಲ್ಲಿ ಬಳಸಿಕೊಳ್ಳುವುದು ಗ್ಯಾರೆಂಟಿ ”
ಕೃಷ್ಣ ಬೈರೇ ಗೌಡ, ಕೃಷಿ ಸಚಿವರು, ಕರ್ನಾಟಕ ಸರಕಾರ

ಕೃಷಿಯಿಂದ ವಿಮಾನಯಾನದ ತನಕ

ಕರ್ನಾಟಕ ದೇಶದಲ್ಲೇ ಕೃಷಿಯಿಂದ ಹಿಡಿದು ಏರೋಸ್ಪೇಸ್ ಸ್ಟಾರ್ಟ್ ಅಪ್ ತನ ನಿಧಿಯನ್ನು ಹಂಚು ಏಕೈಕ ರಾಜ್ಯವಾಗಿದೆ ಅನ್ನುವುದು ಪ್ರಿಯಾಂಕ್ ಖರ್ಗೆಯವರ ಅಭಿಮತ. 2ನೇ ಹಂತದ ನಗರಗಳಲ್ಲಿ ಸಾಕಷ್ಟು ಆವಿಷ್ಕಾರಗಳು ನಡೆಯುತ್ತಿವೆ. ಅನ್ವೇಷಕರು ರಾಜ್ಯ ಸ್ಟಾರ್ಟ್ ಅಪ್ ಸೆಲ್​ನಲ್ಲಿ ತಮ್ಮ ಹೆಸರುಗಳನ್ನು ನಮೂದಿಸಿಕೊಂಡು ರಾಜ್ಯ ಸರಕಾರ ನೀಡುವ ಸಹಾಯ ನಿಧಿಯನ್ನು ಬಳಸಿಕೊಳ್ಳಬಹುದು ಅಂತ ಪ್ರಿಯಾಂಕ್ ತಿಳಿಸಿದ್ದಾರೆ.

ಕೃಷಿಯಲ್ಲಿನ ಅನ್ವೇಷಣೆಗಳ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ, ಶಿವಮೊಗ್ಗದಲ್ಲಿ ಕೃಷಿಕರು ಅಡಿಕೆ ಗಿಡಗಳಿಗೆ ರೋಗನಿರೋಧಕಗಳನ್ನು ಡ್ರೋಣ್​ಗಳ ಮೂಲಕ ಸಿಂಪಡಣೆ ಮಾಡುತ್ತಿದ್ದಾರೆ. ಡ್ರೋಣ್ ಎತ್ತರಕ್ಕೆ ಹಾರಿ ತನ್ನ ಕೆಲಸ ಮುಗಿಸಿಕೊಂಡು, ವಾಪಾಸ್ ತನ್ನ ಜಾಗಕ್ಕೆ ಬರುತ್ತದೆ. ಇಂತಹ ಅನ್ವೇಷಣೆಗಳು ಕೃಷಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ ಅನ್ನುವುದು ಸಚಿವರ ಆಲೋಚನೆಯಾಗಿದೆ.

ಕೆಲಸಗಳನ್ನು ಸುಲಭ ಮಾಡಿಕೊಳ್ಳುವುದು..!

ಕರ್ನಾಟಕ ಉದ್ಯೋಗ ಮಿತ್ರದ ಮೂಲಕ ಉದ್ಯಮವನ್ನು ಕರ್ನಾಟಕದಲ್ಲಿ ತುಂಬಾ ಸುಲಭವನ್ನಾಗುವಂತೆ ಮಾಡಲಾಗಿದೆ. ಇದು ಕೈಗಾರಿಕೆಗಳಿಗೆ ಮತ್ತು ಸ್ಟಾರ್ಟ್ ಅಪ್​ಗಳಿಗೆ ಸಾಕಷ್ಟು ಸಹಾಯ ನೀಡುತ್ತಿದೆ. ಸ್ಟಾರ್ಟ್ ಅಪ್ ಸೆಲ್ ಸ್ಟಾರ್ಟ್ ಅಪ್ ಕಂಪನಿಗಳಿಗೆ ಸರಕಾರದ ನಿಧಿ ನೀಡಲು ಸಾಕಷ್ಟು ಸಹಾಯ ಮಾಡಲಿವೆ. ಕೃಷಿ ಆಧಾರಿತವಾಗಿರುವ ಸುಮಾರು 2400ಕ್ಕೂ ಅಧಿಕ ಸ್ಟಾರ್ಟ್ಅಪ್ ಕಂಪನಿಗಳು ಈಗಾಗಲೇ ಸ್ಟಾರ್ಟ್ ಅಪ್ ಸೆಲ್​ನಲ್ಲಿ ಹೆಸರು ನೊಂದಾಯಿಸಿಕೊಂಡಿವೆ. ಸರಕಾರದ ಯೋಜನೆಗೆ ಬದ್ಧವಾಗಿರುವ ಸ್ಟಾರ್ಟ್ ಅಪ್ ಕಂಪನಿಗಳು ಒಟ್ಟಾರೆ 200 ಕೋಟಿ ರೂಪಾಯಿಗಳನ್ನು ಹಂಚಿಕೊಳ್ಳಬಹುದು. ಸರಕಾರದ ಹಣಕಾಸಿನ ನೆರವು ಪಡೆದ ಸ್ಟಾರ್ಟ್ ಅಪ್​ಗಳು ಸರಕಾರದ ಜೊತೆ ಮತ್ತು ಸರಕಾರದ ಯೋಜನೆಗಳಂತೆ ಕೆಲಸ ಮಾಡಲು ಅರ್ಹತೆಯನ್ನು ಪಡೆಯುತ್ತವೆ. ಇಂತಹ ವ್ಯವಸ್ಥೆ ದೇಶದಲ್ಲೇ ಅಪರೂಪವಾಗಿದೆ. ಹೀಗಾಗಿ ಸ್ಟಾರ್ಟ್ ಅಪ್ ಕಂಪನಿಗಳು ಇದನ್ನು ಬಳಸಿಕೊಳ್ಳಬೇಕಿದೆ.

“ ಕರ್ನಾಟಕ ಸರಕಾರ ಈಗಾಗಲೇ 8 ಟೂರಿಸಂ ಸ್ಟಾರ್ಟ್ ಅಪ್​ಗಳಿಗೆ 5ರಿಂದ 25 ಲಕ್ಷದ ತನಕ ಸುಮಾರು 1.90 ಕೋಟಿ ರೂಪಾಯಿಗಳ ಸಹಾಯ ನೀಡಿದೆ. ಭರವಸೆ ನೀಡಿದ ಮೊತ್ತಗಳ ಪೈಕಿ ಶೇಕಡಾ 25ರಷ್ಟನ್ನು ಆರಂಭದಲ್ಲೇ ನೀಡಿ ಸ್ಟಾರ್ಟ್ ಅಪ್​ಗಳನ್ನು ಪ್ರೋತ್ಸಾಹಿಸಲಾಗುತ್ತಿದೆ”
ಪ್ರಿಯಾಂಕ್ ಖರ್ಗೆ, ಸಚಿವರು, ಕರ್ನಾಟಕ ಸರಕಾರ

ಕರ್ನಾಟಕ ದೇಶದಲ್ಲೇ ಕೃಷಿ ಆಧಾರಿತ ಸ್ಟಾರ್ಟ್ ಅಪ್​ಗಳಿಗೆ ಧನಸಹಾಯ ಮಾಡಲು ನಿಧಿಯನ್ನು ಮೀಸಲಿಟ್ಟಿರುವ ಏಕೈಕ ರಾಜ್ಯವಾಗಿದೆ. ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿರುವ ಸ್ಟಾರ್ಟ್ ಅಪ್​ಗಳಿಗೆ ಬೇರೆಯದ್ದೇ ಹಣವನ್ನು ಮೀಸಲಿಟ್ಟಿದೆ. ಇತ್ತೀಚೆಗೆ ಕೃಷಿ ಇಲಾಖೆ ಇತರೆ ಸಂಘ ಸಂಸ್ಥೆಗಳ ಜೊತೆ ಸೇರಿಕೊಂಡು ಸಾವಯವ ಕೃಷಿ, ಸಾವಯವ ಸಿರಿಧಾನ್ಯಗಳ ಬಗ್ಗೆ ಕಾರ್ಯಾಗಾರವನ್ನು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಡೆಸಿತ್ತು. ಸಾವಯವ ಸಿರಿಧಾನ್ಯಗಳಲ್ಲಿನ ಅನೇಕ ಪ್ರಯೋಜನಗಳನ್ನು, ಪರಿಸರದ ಸಂರಕ್ಷಣೆ ಹೇಗಾಗುತ್ತದೆ ಮತ್ತು ಸಾವಯವ ಕೃಷಿ ಯಾಕೆ ಪ್ರಸಿದ್ಧಿ ಪಡೆಯುತ್ತಿಲ್ಲ ಅನ್ನುವುದನ್ನು ಕಾರ್ಯಾಗಾರದಲ್ಲಿ ಚರ್ಚಿಸಲಾಗಿತ್ತು. ಒಟ್ಟಿನಲ್ಲಿ ಕೃಷಿ ಆಧಾರಿತ ಸ್ಟಾರ್ಟ್ ಅಪ್​ಗಳಿಗೆ ನೀಡಿರುವ ಪ್ರೋತ್ಸಾಹ ರೈತರಿಗೆ ಸಾಕಷ್ಟು ಪ್ರಯೋಜನವನ್ನು ತಂದುಕೊಡಲಿದೆ. 

ಇದನ್ನು ಓದಿ:

1. ರೈತರಿಗೆ ಎಲ್ಲವೂ ಗೊತ್ತು..ಆದ್ರೆ..?

2. ಪರಿಸರ ಸಂರಕ್ಷಣೆಗೆ ಬೇಕಿದೆ ಜೈವಿಕ ಕೃಷಿ- ಸಾವಯವ ಪದ್ಧತಿಯಿಂದ ಜೀವನಕ್ಕೆ ಸಿಗುತ್ತದೆ ಖುಷಿ

3. ಯುವ ಆರ್ಥಿಕ ತಜ್ಞ, ಸಾಮಾಜಿಕ ಉದ್ಯಮಿ, ಶಂಕರನಾರಾಯಣನ್ ಮಾತುಕೇಳಿ..!