ಸಂತಸ ಹೊತ್ತು ತರುವ `ಶುಗರ್ ಬಾಕ್ಸ್'- ಖುಷಿಯನ್ನೇ ಹಂಚುವ ನಿಹಾರಿಕಾ

ಟೀಮ್​​ ವೈ.ಎ.ಸ್​​.

0

ಸದಾ ಖುಷಿಯಾಗಿರಬೇಕಂದ್ರೆ ಒಂದಿಲ್ಲೊಂದು ಕಾರಣ ಇರ್ಲೇಬೇಕು. ಪ್ರತಿ ತಿಂಗಳು ಸಂತೋಷವೇ ನಿಮ್ಮ ಮನೆ ಬಾಗಿಲಿಗೆ ಬಂದ್ರೆ ಹೇಗಿರುತ್ತೆ..? ಇನ್ನಷ್ಟು ಮತ್ತಷ್ಟು ಆನಂದವಾಗುತ್ತೆ ಅಲ್ವಾ? ಕೋಲ್ಕತ್ತಾದ ನಿಹಾರಿಕಾ ಜುಂಜುನ್‍ವಾಲಾ ಮನೆ ಮನೆಗೆ ಖುಷಿಯನ್ನು ಹಂಚುತ್ತಿದ್ದಾರೆ. ಪ್ರತಿ ತಿಂಗಳೂ ಬೆರಗು ಹುಟ್ಟಿಸುವಂಥ ಖುಷಿಯನ್ನು ಬಾಕ್ಸ್​​​ನಲ್ಲಿಟ್ಟು ಕಳಿಸಿಕೊಡ್ತಾರೆ.

25ರ ಹರೆಯದ ನಿಹಾರಿಕಾ ಅವರಿಗೆ ಹೊಸದೇನನ್ನಾದ್ರೂ ಮಾಡುವ ಉತ್ಸಾಹವಿತ್ತು. ತಮ್ಮ ಪತಿಯ ಜೊತೆ ಚರ್ಚೆ ನಡೆಸಿದ ಅವರು ಶುಗರ್ ಬಾಕ್ಸ್ ಅನ್ನೋ ಸಂಸ್ಥೆಯನ್ನ ಆರಂಭಿಸಿದ್ರು. ಹೆಸರೇ ಹೇಳುವಂತೆ ನಿಜಕ್ಕೂ ಇದು ಸಿಹಿ ಹೊತ್ತು ತರುವ ಕಂಪನಿ. ಶುಗರ್ ಬಾಕ್ಸ್​​ಗೆ ಚಂದಾದಾರರಾದ್ರೆ ಪ್ರತಿ ತಿಂಗಳು ಖುಷಿ ಖುಷಿಯಾಗಿ ನೀವು ಗಿಫ್ಟ್ ಪಡೆಯಬಹುದು. ಸುಂದರ ವಸ್ತುಗಳನ್ನು ಶುಗರ್ ಬಾಕ್ಸ್ ನಿಮ್ಮ ಮನೆಗೆ ಕಳಿಸಿಕೊಡುತ್ತೆ.

ಸಿಹಿ ಸಿಹಿ ಶುಗರ್ ಬಾಕ್ಸ್ ...!

ಶುಗರ್ ಬಾಕ್ಸ್ ಮೂಲಕ ಕಾದಂಬರಿಗಳಿಗೆ ನೀವು ಚಂದಾದಾರರಾಗಬಹುದು. ಸಬ್‍ಸ್ಕ್ರೈಬ್ ಆದ ಸದಸ್ಯರಿಗೆಲ್ಲ ಪ್ರತಿ ತಿಂಗಳು ಉಡುಗೊರೆ ಗ್ಯಾರಂಟಿ. ಪ್ರತಿ ಬಾರಿ ಒಂದೊಂದು ಹೊಸ ವಿಷಯವನ್ನಿಟ್ಟುಕೊಂಡು ಗಿಫ್ಟ್ ಕೊಡಲಾಗುತ್ತೆ. ನಿಮ್ಮ ಕೈಗೆ ಗಿಫ್ಟ್ ಬಾಕ್ಸ್ ತಲುಪುವವರೆಗೂ ಅದರಲ್ಲೇನಿದೆ ಅನ್ನೋದು ಸೀಕ್ರೆಟ್ ಆಗಿಯೇ ಉಳಿಯೋದು ವಿಶೇಷ. ಇನ್ನು ಗಿಫ್ಟ್​​ನ ವಿಷಯ ವಸ್ತುಗಳು ಆಯಾ ಕಾಲಕ್ಕೆ ತಕ್ಕಂತೆ ಇರುತ್ತವೆ. ಇಲ್ಲವಾದಲ್ಲಿ ಏನಾದ್ರೂ ವಿಶೇಷ ಸಂದರ್ಭಗಳಿದ್ರೆ ಅದಕ್ಕೆ ತಕ್ಕಂತೆ ಇರುತ್ತದೆ. ಪ್ರತಿ ತಿಂಗಳು 24ರಂದು ಗಿಫ್ಟ್ ಬಾಕ್ಸ್​​ಗಳನ್ನು ಕಳುಹಿಸಿಕೊಡಲಾಗುತ್ತೆ. ಅದಾಗಿ ಮೂರ್ನಾಲ್ಕು ದಿನಗಳ ನಂತರ ಶುಗರ್ ಬಾಕ್ಸ್ ವೆಬ್‍ಸೈಟ್‍ನಲ್ಲಿ ಗಿಫ್ಟ್ ಬಾಕ್ಸ್​​​ಗಳಲ್ಲಿ ಏನಿದೆ ಅನ್ನೋದನ್ನು ಬಹಿರಂಗಪಡಿಸ್ತಾರೆ. ಇನ್ನು ಗಿಫ್ಟ್ ತಲುಪುತ್ತಿದ್ದಂತೆ ಚಂದಾದಾರರು ಕೂಡ ಅದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳೋದು ವಿಶೇಷ.

ಫ್ಯಾಷನ್, ಬ್ಯೂಟಿ, ಲೈಫ್‍ಸ್ಟೈಲ್‍ಗೆ ಸಂಬಂಧಿಸಿದ ವಸ್ತುಗಳನ್ನೇ ಉಡುಗೊರೆಯಾಗಿ ನಿಹಾರಿಕಾ ಕಳಿಸಿಕೊಡ್ತಾರೆ. ಸದ್ಯ ಪ್ರಚಲಿತದಲ್ಲಿರುವ ಹಾಗೂ ಹೊಸ ಬ್ರಾಂಡ್‍ಗಳಿಗೆ ಕೂಡ ತಮ್ಮ ಉತ್ಪನ್ನಗಳನ್ನು ಪರಿಚಯಿಸಲು ಇದೊಂದು ಉತ್ತಮ ಅವಕಾಶ.

ಅರ್ಥಶಾಸ್ತ್ರ ಪ್ರವೀಣೆ ನಿಹಾರಿಕಾ

ಆಡಳಿತ ಮತ್ತು ಅರ್ಥಶಾಸ್ತ್ರ ವಿಷಯದಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್​​​ನಲ್ಲಿ ನಿಹಾರಿಕಾ ಪದವಿ ಪಡೆದಿದ್ದಾರೆ. ಲಂಡನ್‍ನಲ್ಲೇ ಕೆಲಸ ಮಾಡಲು ನಿಹಾರಿಕಾ ಉತ್ಸುಕರಾಗಿದ್ರು. ಆದ್ರೆ ಪ್ರಾಯೋಜಕರ ಕೊರತೆ ಹಾಗೂ ವೀಸಾ ಸಮಸ್ಯೆಯಿಂದಾಗಿ ತವರು ಕೋಲ್ಕತ್ತಾಗೆ ಹಿಂದಿರುಗಬೇಕಾಯ್ತು. ಸ್ವಲ್ಪ ಕಾಲ ದೆಹಲಿಯ ಕ್ಯಾಬಿನೆಟ್ ಸೆಕ್ರೆಟರಿಯೇಟ್‍ನಲ್ಲಿ ಕರ್ತವ್ಯ ನಿರ್ವಹಿಸಿದ ನಿಹಾರಿಕಾ ನಂತರ ರಾಜೀನಾಮೆ ನೀಡಿದ್ರು. ಮದುವೆಯಾಗಿ ಮುಂಬೈನಲ್ಲಿ ನೆಲೆಸಿದ್ರು.

ಉದ್ಯಮ ಆರಂಭಿಸಲು ಸಹಜ ಆಕಾಂಕ್ಷೆ...

ತಮ್ಮ ಸ್ವಂತ ಬಲದಿಂದ ಏನನ್ನಾದ್ರೂ ಮಾಡಬೇಕು ಅನ್ನೋ ಅಭಿಲಾಷೆ ನಿಹಾರಿಕಾ ಅವರಿಗೆ ಮೊದಲಿನಿಂದ್ಲೂ ಇತ್ತು. ಸಾಕಷ್ಟು ಐಡಿಯಾಗಳನ್ನು ಮಾಡಿದ್ರೂ ಅದ್ಯಾವುದನ್ನೂ ಕಾರ್ಯರೂಪಕ್ಕೆ ತರಲಾಗಲಿಲ್ಲ. ಮೊದಲು ಆರ್ಗೆನಿಕ್ ಬೇಬಿ ಪ್ರಾಡಕ್ಟ್​​​ಗಳನ್ನು ಮಾರಾಟ ಮಾಡಲು ಮುಂದಾಗಿದ್ರು. ಆದ್ರೆ ಅದು ವರ್ಕೌಟ್ ಆಗ್ಲಿಲ್ಲ. ಅದಾದ್ಮೇಲೆ 2014ರ ನವೆಂಬರ್‍ನಲ್ಲಿ ನಿಹಾರಿಕಾ ಶುಗರ್ ಬಾಕ್ಸ್ ಆರಂಭಿಸಿದ್ರು. ತಿಂಗಳ ಕೊನೆಯಲ್ಲಿ ಸಂಬಳ ಖಾಲಿಯಾಗಿ ಪರದಾಡುವ ಉದ್ಯೋಗಿಗಳ ಬವಣೆ ನೋಡಿ, ಅವರಿಗೆಲ್ಲ ಖುಷಿ ಹಂಚುವ ಯೋಚನೆ ನಿಹಾರಿಕಾ ಅವರಿಗೆ ಬಂದಿತ್ತು. ಅದರ ಫಲವೇ ಈ ಶುಗರ್ ಬಾಕ್ಸ್.

ಮಹಿಳಾ ಗ್ರಾಹಕರ ಮೇಲುಗೈ...

ಸಹಜವಾಗಿಯೇ ಮಹಿಳೆಯರು ಕಾದಂಬರಿ ಪ್ರಿಯರು. ಹಾಗಾಗಿ ಶುಗರ್ ಬಾಕ್ಸ್​​​ಗೆ ಮಹಿಳಾ ಗ್ರಾಹಕರ ಸಂಖ್ಯೆಯೇ ಹೆಚ್ಚು. ಕೆಲವರು ತಮ್ಮ ಸಂಗಾತಿಗೆ, ಸಂಬಂಧಿಕರಿಗೆ ಗಿಫ್ಟ್ ಕಳಿಸಲು ಚಂದಾದಾರರಾಗಿದ್ದಾರೆ. ಪ್ರತಿ ತಿಂಗಳು ಶುಗರ್ ಬಾಕ್ಸ್​​​ನ ವಹಿವಾಟು ಶೇಕಡಾ 30-40ರಷ್ಟು ಹೆಚ್ಚಳವಾಗ್ತಿದೆ. ಕುಟುಂಬದವರು ಕೂಡ ನಿಹಾರಿಕಾ ಅವರ ಉದ್ಯಮಕ್ಕೆ ಸಾಥ್ ಕೊಟ್ಟಿದ್ದಾರೆ. ಪ್ರಮುಖ ನಗರಗಳಲ್ಲೂ ಶುಗರ್ ಬಾಕ್ಸ್ ಸೇವೆ ಆರಂಭಿಸುವ ಕನಸು ನಿಹಾರಿಕಾ ಅವರದ್ದು. ಕೇವಲ ಉದ್ಯಮಿ ಮಾತ್ರವಲ್ಲ ನಿಹಾರಿಕಾ ಉತ್ತಮ ನೃತ್ಯಗಾತಿಯೂ ಹೌದು. ಕಲೆ-ಸಂಸ್ಕೃತಿಯ ಬಗೆಗೂ ಅವರಿಗೆ ಅಪಾರ ಆಸಕ್ತಿ ಇದೆ. ಅದನ್ನು ಉಳಿಸಿ ಬೆಳೆಸುವ ಹಂಬಲವಿದೆ.

Related Stories