"ಸ್ಮಾರ್ಟ್"​ ಆಗೋದಿಕ್ಕೆ ಇನ್ನೇನು ಬೇಕು..?- ಶರ್ಟ್​ನಲ್ಲೇ ಸಿಗುತ್ತೆ ಟೆಕ್ನಾಲಜಿಯ ಕಿಕ್​

ಟೀಮ್​ ವೈ.ಎಸ್​. ಕನ್ನಡ

2

ಜಗತ್ತು ಇವತ್ತು ನಿಂತಿರುವುದೇ ಆವಿಷ್ಕಾರದ ಮೇಲೆ. ಪ್ರತಿದಿನವೂ ಒಂದೊಂದು ಟೆಕ್ನಾಲಜಿಯ ಅನ್ವೇಷಣೆ ಆಗುತ್ತಲೇ ಇದೆ. ವಿಜ್ಞಾನ ಮುಂದುವರೆಯುತ್ತಾ ಇದ್ದಂತೆ ಮನುಷ್ಯ ಕೂಡ ಅಭಿವೃದ್ಧಿ ಆಗುತ್ತಾ ಇದ್ದಾನೆ. ಜೀವನ ಸ್ಮಾರ್ಟ್​ ಆಗುತ್ತಿದೆ. ಎಲ್ಲವೂ ಚಿಟಿಕೆಯಲ್ಲೇ ಮುಗಿದು ಹೋಗುತ್ತಿದೆ. ಸ್ಮಾರ್ಟ್​ ವಿಷಯಗಳಿಗೆ ಮತ್ತು ತಂತ್ರಜ್ಞಾನಕ್ಕೆ ಎಲ್ಲರೂ ಮಾರು ಹೋಗಿದ್ದಾರೆ.

ಇದು ಸ್ಮಾರ್ಟ್ ಯುಗ ದಿನದಿಂದ ದಿನಕ್ಕೆ ಇಡೀ ವಿಶ್ವವೇ ಸ್ಮಾರ್ಟ್ ಆಗುತ್ತಿದೆ. ಎಲ್ಲರೂ ಸ್ಮಾರ್ಟ್ ಆಗಿರಲು ಬಯಸುತ್ತಾರೆ. ಪ್ರಪಂಚದಲ್ಲಿರೂ ಪ್ರತಿ ನಿರ್ಜಿವ ವಸ್ತುಗಳು ಸ್ಮಾರ್ಟ್ ಆಗಿ ಅಪ್​ಗ್ರೇಡ್ ಆಗುತ್ತಿವೆ. ಈಗ ಅದೇ ಸಾಲಿಗೆ ಶರ್ಟ್'ಗಳು ಸಹ ಸೇರುತ್ತಿವೆ. ಮೊಬೈಲ್​ನಿಂದ ಆರಂಭವಾದ ಸ್ಮಾರ್ಟ್ ಬದಲಾವಣೆ ಇಂದು ಸ್ಮಾರ್ಟ್ ಶರ್ಟ್​ನವರೆಗೆ ಬಂದು ನಿಂತಿದೆ ಎಂದರೆ ಅಚ್ಚರಿ ಪಡಲೇಬೇಕಾಗಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಮಾರ್ಟ್ ಆಗಿರುವವರಿಗೆ ಬೆಲೆ ಜಾಸ್ತಿ. ಹೆಚ್ಚು ಸ್ಮಾರ್ಟ್ ಆದಷ್ಟೂ ಹೆಚ್ಚು ಬುದ್ದಿವಂತ, ಅಪ್​ಗ್ರೇಡ್ ಜನ ಅನ್ನೊದು ಈಗಿನ ಟ್ರೆಂಡ್.

ಇದನ್ನು ಓದಿ: ನನಸಾಯ್ತು ಉದ್ಯಮದ 'ಹೂ' ಕನಸು : ಕಾಶ್ಮೀರದ ಸಾಹಸಿ ಮಹಿಳೆಯ ಯಶೋಗಾಥೆ

ಸ್ಮಾರ್ಟ್ ಪ್ಲೇಟ್, ಸ್ಮಾರ್ಟ್ ಸಾಕ್ಸ್ ಹಾಗೂ ಸ್ಮಾರ್ಟ್ ಶೂ ಬಿಡುಗಡೆ ಮಾಡಿ ನೈಕ್ ಸಂಸ್ಥೆ ಎಲ್ಲರ ಗಮನ ಸೆಳೆದಿತ್ತು. ಈಗ ಅದೇ ಮಾದರಿಯಲ್ಲಿ ಸ್ಮಾರ್ಟ್ ಶರ್ಟ್ ಬಿಡುಗಡೆ ಮಾಡಿರು ಆರೋ ಎಂಬ ಸಂಸ್ಥೆ ಇಡೀ ವಿಶ್ವದ ಗಮನ ಸೆಳೆದಿದೆ. ಬ್ರಾಂಡೆಡ್ ವಸ್ತ್ರಗಳ ಉತ್ಪಾದನೆಯಲ್ಲಿ ಗುರುತಿಸಿಕೊಂಡಿರುವ ಆರೋ(arrow). ಈ ಸ್ಮಾರ್ಟ್ ಶರ್ಟ್'ಅನ್ನು, ಕಂಪನಿ ಸಾಮಾನ್ಯ ಜನರ ಹಿತ ದೃಷ್ಠಿಯಿಂದಲೇ ರೂಪಿಸಿದ್ದು, ಇನ್ಮುಂದೆ ಸ್ಮಾರ್ಟ್ ಶರ್ಟ್​ನಿಂದಲೂ ಹಲವು ಕೆಲಸ ಮಾಡಬಹುದಾಗಿದೆ.

ಸಾಮಾನ್ಯ ಶರ್ಟ್​ನಂತಿರುವ ಇದು, ನಿಮ್ಮ ಮೊಬೈಲ್ ಜೊತೆ ಒಮ್ಮೆ ಸಂಪರ್ಕ ಸಾಧಿಸಿದ್ರೆ ಸಾಕು ನಿಮ್ಮ ಅನೇಕ ಒತ್ತಡಗಳಿಗೆ ಸ್ಮಾರ್ಟ್ ಆಗಿ ಪರಿಹಾರ ನೀಡಲಿದೆ. ನೋಡಿದವರಿಗೆ ಇದು ಹೇಗೆ ಕೆಲಸ ಮಾಡುತ್ತಿದೆ ಎಂಬುದು ತಿಳಿಯುವುದಿಲ್ಲ. ಅಷ್ಟೊಂದು ಚೆನ್ನಾಗಿ ಈ ಶರ್ಟ್​ನ್ನು ಸಿದ್ಧಪಡಿಸಲಾಗಿದೆ.

ಸ್ಮಾರ್ಟ್ ಶರ್ಟ್ ಸಾಮಾನ್ಯ ಶರ್ಟ್ ನಂತಯೇ ಇದೆ. ಆದರೆ ಶರ್ಟ್ ನ ಕೈ ಬಳಿ ಅಳವಡಿಸಿರುವ ಎನ್ ಎಫ್ ಸಿ ಟ್ಯಾಗ್ ಶರ್ಟ್ ಅನ್ನು ಸ್ಮಾರ್ಟ್ ಮಾಡಿದೆ. ಈ ಶರ್ಟ್ ನಿಮ್ಮ ಮೊಬೈಲ್ ನೊಂದಿಗೆ ಸಂಪರ್ಕ ಸಾಧಿಸಲಿದ್ದು, ಇದು ನಿಮ್ಮ ಫೇಸ್ ಬುಕ್ ಅಕೌಂಟ್ ಮಾಹಿತಿ ಪಡೆಯಲು ಹಾಗೂ ಮ್ಯೂಸಿಕ್ ಕೇಳಲು ಸಹಾಯ ಮಾಡುತ್ತದೆ. ಅಲ್ಲದೇ ನಿಮ್ಮ ಮೊಬೈಲ್ ಅನ್ನು ಸೈಲೆಂಟ್ ಮಾಡಲು, ನಿಮ್ಮ ನಂಬರ್ ಅನ್ನು ಇತರರೊಂದಿಗೆ ಹಚ್ಚಿಕೊಳ್ಳುವಲ್ಲಿ ಸಹ ಶರ್ಟ್ ಸಹಕಾರಿಯಾಗಲಿದೆ.

ಶರ್ಟ್ ಸ್ಮಾರ್ಟ್ ಎಂದಕೂಡಲೇ ಇದರ ಬೆಲೆ ಗಗನ ಮುಟ್ಟುತ್ತದೆ ಎನ್ನುವಂತಿಲ್ಲ. ಯಾಕಂದರೆ ಇದು ಸಾಮಾನ್ಯ ಜನರ ಕೈಗೆ ಎಟುಕುವಂತೆ ದರ ನಿಗದಿಪಡಿಸಲಾಗಿದೆ. ಸಾಮಾನ್ಯ ಬ್ರಾಂಡೆಡ್ ಶರ್ಟ್ ಗಳ ಬೆಲೆಯಷ್ಟೆ ಇದೆ. ಇದರಿಂದಾಗಿ ಸಾಮಾನ್ಯ ಜನರು ಸಹ ಇದನ್ನು ಖರೀದಿಸ ಬಹುದಾಗಿದೆ, ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 2.999 ರೂಪಾಯಿಗಳಿಗೆ ಈ ಶರ್ಟ್ ಲಭ್ಯವಿದೆ. ಸದ್ಯ ಆನ್​ಲೈನ್ ಇ-ಕಾಮರ್ಸ್ ಸಂಸ್ಥೆಯಾದ ಅಮೇಜಾನ್​ನಲ್ಲಿ ಶರ್ಟ್ ದೊರೆಯುತ್ತಿದೆ. ಸ್ಮಾರ್ಟ್​ ಯುಗ ಮತ್ತು ಅಭಿವೃದ್ಧಿಗಳು ಹೀಗೆ ಮುಂದುವರೆಯುತ್ತಾ ಹೋದ್ರೆ ಮುಂದೊಂದು ದಿನ ಮನುಷ್ಯನ ತಿಂಡಿ, ನಿದ್ದೆಗಳು ಕೂಡ ತಂತ್ರಜ್ಞಾನಗಳಿಂದಲೇ ಕಂಟ್ರೋಲ್​ ಆಗಬಹುದಾದ ದಿನ ದೂರವಿಲ್ಲ.


ಇದನ್ನು ಓದಿ:

1. ಸಕಲ ಕಲಾ ವಲ್ಲಭನಿಗಿಲ್ಲ ಸಾಟಿ- ಸೂಪರ್​ ಆರ್ಟಿಸ್ಟ್​, ಖಡಕ್​ ವಿಲನ್​..!

2. ಇದು ಜಸ್ಟ್​ ಸ್ಕೂಟರ್​ ಮಾತ್ರ ಅಲ್ಲ... ಸ್ಮಾರ್ಟ್​ ಲೈಫ್​ನ ಸರದಾರ..!

3. ಆನ್​ಲೈನ್​ನಲ್ಲಿ "ಭಕ್ತಿ"ಗೆ ಟಚ್​- ಗ್ರಾಹಕರನ್ನು ಸೆಳೆಯುತ್ತಿದೆ ಸತೀಶ್​ ಸ್ಟೋರ್ಸ್​

Related Stories