ಅಮೆರಿಕಾ ಮಹಿಳಾ ಕ್ರಿಕೆಟ್ ತಂಡದಲ್ಲಿ ತೆಲಂಗಾಣದ ಪ್ರತಿಭೆ..!

ಟೀಮ್​ ವೈ.ಎಸ್​. ಕನ್ನಡ

1

ಸಿಂಧೂಜಾ ರೆಡ್ಡಿ, ಮೂಲತಃ ತೆಲಂಗಾಣ ಮೂಲದವರು. ಆದ್ರೆ ಈಗ ಯುಎಸ್ ಕ್ರಿಕೆಟ್ ಟೀಮ್​​ಗೆ ಆಟಗಾರ್ತಿಯಾಗಿ ಆಯ್ಕೆಯಾಗಿದ್ದಾರೆ. ನಲಗೊಂಡ ಜಿಲ್ಲೆಯ ಅಮಂಗಲ್ ಗ್ರಾಮದ ಸಿಂಧೂಜಾ ಆಗಸ್ಟ್​​ನಲ್ಲಿ ಸ್ಕಾಟ್​ಲೆಂಡ್​ನಲ್ಲಿ ನಡೆಯಲಿರುವ ಟಿ20 ಮಹಿಳಾ ವಿಶ್ವಕಪ್​ನ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಯುಎಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಸಿಂಧೂಜಾ ವಿಕೆಟ್ ಕೀಪರ್ ಕಂ ಆರಂಭಿಕ ಆಟಗಾರ್ತಿ. ಹೈದ್ರಾಬಾದ್ ಪರ ರಣಜಿ ಕ್ರಿಕೆಟ್ ಆಡಿದ ಅನುಭವ ಈಕೆಗಿದೆ. 2020ರಲ್ಲಿ ನಡೆಯುವ ಟಿ20 ಮಹಿಳಾ ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಳ್ಳುವ ಕನಸು ಈಕೆಗಿದೆ. ಸಿಂಧೂಜ ಹೈದ್ರಾಬಾದ್​​ನಲ್ಲಿ ಶಾಲಾ ದಿನಗಳನ್ನು ಮುಗಿಸಿದ್ದರು. ಈ ವೇಳೆಯಲ್ಲಿ ಸಿಟಿ ಅಂಡರ್ 19 ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದರು. ಯುಎಸ್ ಗೆ ತೆರಳುವ ಮುನ್ನ ಸಿಂಧೂಜಾ ಬಿ.ಟೆಕ್. ಜೊತೆ ಎಂಬಿಎ ಪದವಿ ಪಡೆದುಕೊಂಡಿದ್ದರು. ಸಿಂಧೂಜಾ ಸಿದ್ದಾರ್ಥ ರೆಡ್ಡಿ ಅನ್ನುವವರ ಜೊತೆ ಮದುವೆ ಕೂಡ ಆಗಿದ್ದರು.

ಸಿಂಧೂಜಾ ಮದುವೆಯ ನಂತರ ಕ್ರಿಕೆಟ್ ಅನ್ನು ಬಿಟ್ಟುಬಿಟ್ಟಿದ್ದರು. ಆದ್ರೆ ಯು.ಎಸ್. ನಲ್ಲಿ ಕ್ಲಬ್ ತಂಡಗಳಿಗೆ ಕ್ರಿಕೆಟ್ ಆಡಲು ಆರಂಭಿಸಿದ್ರು. ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಮೂಲಕ ಸಿಂಧೂಜಾ ಆಯ್ಕೆಗಾರರ ಗಮನ ಸೆಳೆದರು. ಸಿಂಧೂಜಾ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗಿರುವುದು ಆಕೆಯ ಪೋಷಕರಿಗೆ ಖುಷಿ ತಂದಿದೆ. ತಂದೆ ಸ್ಪುರ್ದರ್ ರೆಡ್ಡಿ ಮತ್ತು ಲಕ್ಷ್ಮೀ ರೆಡ್ಡಿ ತಮ್ಮ ಮಗಳ ಸಾಧನೆಯಿಂದ ಖುಷಿಯಾಗಿದ್ದಾರೆ. ಮದುವೆಯ ನಂತರ ಸಿಂಧೂಜಾ ಆಟದ ಕಡೆ ಗಮನ ಹರಿಸಲು ಕಷ್ಟಪಟ್ಟರೂ, ಈಗ ಆಕೆಗೆ ಹೊಸ ಸ್ಪೂರ್ತಿ ಸಿಕ್ಕಿದೆ ಅಂತ ಸಂತಸ ವ್ಯಕ್ತಪಡಿಸುತ್ತಾರೆ.

ಇದನ್ನು ಓದಿ: ರೇಸಿಂಗ್ ಜಗತ್ತಿನ ಆಶಾಕಿರಣ- ದಾಖಲೆ ಬರೆದ ವಡೋದರಾದ ಬಾಲಕಿ

ಯು.ಎಸ್. ಮಹಿಳಾ ಕ್ರಿಕೆಟ್ ತಂಡ 2020ರಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಆಡಲಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಕ್ರಿಕೆಟ್ ಅಸೋಸಿಯೇಶನ್ 1965ರಲ್ಲೇ ಐಸಿಸಿಯ ಸದಸ್ಯತ್ವ ಪಡೆದುಕೊಂಡಿತ್ತು. ಆದ್ರೆ ಹಣಕಾಸು ಮತ್ತು ಆಡಳಿತ ಸಮಸ್ಯೆಯಿಂದ 2015ರ ತನಕ ನಿಷೇಧ ಅನುಭವಿಸತ್ತು. ಇತ್ತೀಚಿಗೆ ನಿಷೇಧವನ್ನು ವಾಪಾಸ್ ಪಡೆಯಲಾಗಿತ್ತು.

ಅಮೆರಿಕಾರ ಮಹಿಳಾ ಕ್ರಿಕೆಟ್ ತಂಡ ಇಲ್ಲಿ ತನಕ ಐಸಿಸಿ ವಿಶ್ವಕಪ್ ನಲ್ಲಿ ಪಾಲ್ಗೊಂಡಿಲ್ಲ. ಈಗ ಆಡಲು ಅವಕಾಶ ಪಡೆದಿದೆ. ಸಿಂಧೂಜಾಗೆ ತನ್ನ ಪ್ರತಿಭೆ ತೋರಿಸಲು ದೊಡ್ಡ ಅವಕಾಶ ಸಿಕ್ಕಿದೆ.

ಇದನ್ನು ಓದಿ:

1. ಮಹಿಳೆಯರಿಗೆ ಸಮಾನ ಅವಕಾಶ ಕೊಟ್ಟ ರಾಜಕೀಯ ನಾಯಕರು ಇವರು..!

2. "ಗ್ರೀನ್ ಕಾರ್ಪೆಟ್" ಹಾಸಿತು ಆಧುನಿಕ ಪಾಟ್ ಬ್ಯುಸಿನೆಸ್

3. ಇಲ್ಲಿ ಕೈದಿಗಳೇ ಕೆಲಸಗಾರರು..!

Related Stories

Stories by YourStory Kannada