ಆಹಾರ ಪೂರೈಕೆ ಸ್ಟಾರ್ಟ್​ಅಪ್​ಗಳಿಗೆ ಅಗ್ನಿ ಪರೀಕ್ಷೆಯ ಕಾಲ..!

ಟೀಮ್​​ ವೈ.ಎಸ್​​. ಕನ್ನಡ

ಆಹಾರ ಪೂರೈಕೆ ಸ್ಟಾರ್ಟ್​ಅಪ್​ಗಳಿಗೆ ಅಗ್ನಿ ಪರೀಕ್ಷೆಯ ಕಾಲ..!

Friday December 18, 2015,

3 min Read

ಕಳೆದ ಒಂದು ವರ್ಷದ ಅವಧಿಯಲ್ಲಿ ಆಹಾರ ವಿತರಣೆ ಅಥವಾ ಪೂರೈಕೆ ಸ್ಟಾರ್ಟ್ ಅಪ್​​ ಯೋಜನೆ ಭಾರಿ ಬೆಳವಣಿಗೆ ದಾಖಲಿಸಿದೆ. ಇಲ್ಲಿ ಮೊದಲಿಗೆ ಆಹಾರ ವಿತರಣೆ ಅಥವಾ ಪೂರೈಕೆ ಸ್ಟಾರ್ಟ್ ಅಪ್​​ ಯೋಜನೆ ಅಂದರೆ ಏನು ಎಂಬ ಬಗ್ಗೆ ತಿಳಿದುಕೊಳ್ಳೋಣ. ಈ ಫುಡ್ ಸ್ಟಾರ್ಟ್ ಅಪ್​ ಯೋಜನೆಗಳು ಬಳಕೆದಾರರಿಂದ ಆರ್ಡರ್ ಪಡೆಯುತ್ತವೆ. ಬಳಿಕ ಅವುಗಳನ್ನು ಹೋಟೆಲ್ ಅಥವಾ ರೆಸ್ಟೋರೆಂಟ್​​ಗಳಿಗೆ ವರ್ಗಾಯಿಸುತ್ತವೆ. ಬಳಿಕ ಡೆಲಿವರಿ ಬಾಯ್ಸ್ ಅಂದರೆ ಸರಬರಾಜು ಹುಡುಗರು ಈ ಆಹಾರವನ್ನು ಬಳಕೆದಾರನ ಮನೆಗೆ ತಲುಪಿಸುತ್ತಾರೆ. ಇದು ಆಹಾರ ಡೆಲಿವರಿ ಕುರಿತಾದ ಸ್ಟಾರ್ಟ್ ಅಪ್​​​ ಕಾರ್ಯಾಚರಿಸುತ್ತಿರುವ ರೀತಿ.

ಇಲ್ಲಿ ಪುಡ್ ಸ್ಟಾರ್ಟ್ ಅಪ್​​ ಅಂದರೆ ವಿನೂತನ ಯೋಜನೆಗಳು ಬಳಕೆದಾರ ಬಯಸಿದ ಆಹಾರವನ್ನು ಆತನಿಗೆ ತಲುಪಿಸುತ್ತವೆ. ಅಲ್ಲಿಗೆ ಮಾತ್ರ ಇದರ ಚಟುವಟಿಕೆ ಸೀಮಿತವಾಗಿರುತ್ತದೆ. ಅದಕ್ಕಿಂತ ಮಿಗಿಲಾಗಿ ಆಹಾರ ಗುಣಮಟ್ಟದ ತಪಾಸಣೆ ಮಾಡುವುದಾಗಲಿ ಅಥವಾ ಆಹಾರ ಸಿದ್ಧಪಡಿಸುವ ಸಂದರ್ಭದಲ್ಲಿ ತನ್ನ ಅಭಿಪ್ರಾಯ ತಿಳಿಸುವುದಕ್ಕಾಗಲೀ ಈ ವಿನೂತನ ಯೋಜನೆಗಳಿಗೆ ಅವಕಾಶ ಇಲ್ಲ.

image


ಲಾಭ ಹೇಗೆ..?

ಈ ಆಹಾರ ಪೂರೈಕೆ ಸ್ಟಾರ್ಟ್ ಅಪ್ ಯೋಜನೆಗಳು ಯಾವ ಮಾರ್ಗದ ಮೂಲಕ ಆದಾಯ ಪಡೆಯುತ್ತವೆ. ನಿಜವಾಗಿಯೂ ಆಹಾರ ತಲುಪಿಸಲು ತಗಲುವ ವೆಚ್ಚಕ್ಕಿಂತ ಹೆಚ್ಚಿನ ಆದಾಯ ಈ ವಿನೂತನ ಯೋಜನೆಗಳಿಗೆ ದೊರೆಯುತ್ತದೆಯೋ ಎಂಬುದು ನಿಜವಾದ ಪ್ರಶ್ನೆ. ಆದರೆ ಈಗಿನ ಪರಿಸ್ಥಿತಿ ತೀರಾ ಭಿನ್ನವಾಗಿದೆ. ಕೆಲವು ಆಹಾರ ಪೂರೈಕೆ ಸ್ಟಾರ್ಟ್ ಅಪ್​, ಆದಾಯಕ್ಕಿಂತ ಮೂರು ಪಟ್ಟು ಖರ್ಚು ಮಾಡಿ ಬಳಕೆದಾರರಿಗೆ ಆಹಾರ ಪಾರ್ಸೆಲ್ ನೀಡುವಂತಹ ಪರಿಸ್ಥಿತಿ ಇದೆ. ಆದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು. ಬೇಡಿಕೆ ಹೆಚ್ಚಾದಂತೆ, ಈ ಕ್ಷೇತ್ರ ಕೂಡ ಬೆಳವಣಿಗೆ ದಾಖಲಿಸಲಿದ್ದು, ಆಶಾದಾಯಕ ಚಿತ್ರಣ ಹೊರಹೊಮ್ಮಲಿದೆ.

ಕಾರ್ಯರೂಪಕ್ಕೆ ತರುವುದೇ ಒಂದು ಸವಾಲು..!

ಪ್ರಸಕ್ತ ಸ್ಥಿತಿಯಲ್ಲಿ ಕಾರ್ಯರೂಪಕ್ಕೆ ತರುವುದು ಅತ್ಯಂತ ಸವಾಲಿನ ಕೆಲಸ. ಬಳಕೆದಾರರ ವಿನೂತನ ಯೋಜನೆಗಳು ಎದುರಿಸುವ ಸಾಮಾನ್ಯ ಸವಾಲು ಮತ್ತು ಬಿಕ್ಕಟ್ಟನ್ನು ಆಹಾರ ಸಂಬಂಧಿತ ವಿನೂತನ

ಯೋಜನೆಗಳು ಎದುರಿಸುತ್ತಿವೆ. ಬಳಕೆದಾರ ಎಲ್ಲಿದ್ದಾನೆ ಎಂಬುದನ್ನು ಸ್ಪಷ್ಟವಾಗಿ ತಿಳಿಯಲು ಅಸಾಧ್ಯವಾಗಿರುವುದು. ಮತ್ತು ಬೇಡಿಕೆ ಈಡೇರಿಸಲು ಅಸಮರ್ಥವಾಗಿರುವುದು ಇದರಲ್ಲಿ ಪ್ರಮುಖವಾಗಿದೆ.

ಈ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಪರಿಹರಿಸಲು ಸಂಸ್ಥೆಗಳು ಹಲವು ವಿನೂತನ ಕ್ರಮಗಳನ್ನು ಜಾರಿಗೆ ತಂದಿವೆ.

ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿ ಬೇಡಿಕೆ ಈಡೇರಿಸುವುದು ಇದರಲ್ಲಿ ಸೇರಿದೆ. ಇದರಿಂದಾಗಿ ಅನಗತ್ಯವಾಗಿ ಸುತ್ತಾಟಕ್ಕೆ ಕೊನೆ ಬೀಳುತ್ತದೆ. ಫುಡ್ ಪಿಕ್ ಅಪ್​​ ಕೇಂದ್ರ ಮತ್ತು ಬಾಹ್ಯ ಆಹಾರ ಆರ್ಡರ್ ಕೇಂದ್ರ ಸೂಚಿಸುವ ಕ್ರಮದ ಮೂಲಕ ಬಳಕೆದಾರನ ಹತ್ತಿರಕ್ಕೆ ಬರುವ ಪ್ರಯತ್ನ ಮಾಡಲಾಗುತ್ತಿದೆ. ದಿನಸಿ ಅಂಗಡಿಗಳು ಕೂಡ ಇದೇ ಕ್ರಮ ಅನುಸರಿಸುತ್ತಿವೆ.

ಇಲ್ಲಿ ಒಂದು ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕು. ಆಹಾರ ಪೂರೈಕೆ ಯೋಜನೆಗಳು, ದಿನಸಿ ಸಾಮಗ್ರಿ ಪೂರೈಕೆ ಜಾಲಕ್ಕೆ ಹೋಲಿಸಿದರೆ ಪ್ರತ್ಯೇಕವಾದ ಎರಡು ಅಡಚಣೆಗಳನ್ನು ಎದುರಿಸುತ್ತಿವೆ.

ತಕ್ಷಣ ಆಹಾರ ಲಭಿಸಬೇಕು.. ಯಾವುದೇ ರೀತಿಯ ವಿಳಂಬಕ್ಕೆ ಅವಕಾಶ ಇಲ್ಲವೇ ಇಲ್ಲ.. ಇದು ಆಹಾರ ಪೂರೈಕೆ ಜಾಲದ ವಿನೂತನ ಯೋಜನೆಗಳಿಂದ ಬಳಕೆದಾರ ನಿರೀಕ್ಷಿಸುತ್ತಿರುವ ಪ್ರಮುಖ ಅಂಶವಾಗಿದೆ. ಆದರೆ ದಿನಸಿ ವಸ್ತುಗಳ ಪೂರೈಕೆ ವಿಷಯದಲ್ಲಿ ಇದು ಅಷ್ಟು ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ.

ಒಂದು ಗಂಟೆಗಿಂತ ಹೆಚ್ಚು ತಡವಾದರೆ ಆಹಾರ ಕೆಟ್ಟಂತೆ ಎಂದು ಅರ್ಥ. ಯಾಕೆಂದರೆ ಭಾರತೀಯನ ಮನೋಸ್ಥಿತಿ ಆ ರೀತಿ ಇದೆ. ತಣ್ಣಾಗಾದ ಆಹಾರವನ್ನು ಸಾಮಾನ್ಯವಾಗಿ ಭಾರತೀಯರು ಇಷ್ಟ ಪಡುವುದಿಲ್ಲ. ಇದೇ ಅಭಿರುಚಿ ಔಷಧಿ ಮತ್ತು ಇತರ ಸಂಬಂಧಿತ ವಸ್ತುಗಳಿಗೆ ಅನ್ವಯವಾಗುವುದಿಲ್ಲ.

ಆಹಾರ ಪೂರೈಕೆ ಜಾಲ ಎದುರಿಸುತ್ತಿರುವ ಸಮಸ್ಯೆಗಳು ಅಷ್ಟು ಸುಲಭದಲ್ಲಿ ಪರಿಹಾರವಾಗುವ ಲಕ್ಷಣ ಕಾಣಿಸುತ್ತಿಲ್ಲ. ಯಾಕೆಂದರೆ ಸಮಸ್ಯೆ ಅಷ್ಟು ಸಂಕೀರ್ಣವಾಗಿದೆ. ಒಂದು ಹಂತ ಮೀರಿ ಆಹಾರ ಪೂರೈಕೆ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ. ಇಲ್ಲಿ ಒಂದು ವಿಷಯ ಸ್ಪಷ್ಟ. ಅತ್ಯಂತ ಸುಲಭದಲ್ಲಿ ಈ ಕ್ಷೇತ್ರದಲ್ಲಿ ಆದಾಯ ಗಳಿಸಲು ಸಾಧ್ಯವಿಲ್ಲ. ವ್ಯವಹಾರ ಎಷ್ಟೇ ದೊಡ್ಡದಾಗಿದ್ದರೂ ಲಾಭ ಪ್ರಮಾಣ ತೀರಾ ಕಡಿಮೆ. ಇದು ವಾಸ್ತವ. ಇದನ್ನು ಅರಿತಿರಬೇಕಾಗಿದೆ.

ಸ್ಟಾರ್ಟ್ ಅಪ್ ಯೋಜನೆಗಳಿಗೆ ಮುಂದೇನಾಗಬಹುದು?

ಸ್ಟಾರ್ಟ್ ಅಪ್​​ ಯೋಜನೆ ಕುರಿತಂತೆ ಒಂದು ತಾರ್ಕಿಕ ಅಂತ್ಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಆಹಾರ ಪೂರೈಕೆ ಜಾಲ ಸಮರ್ಥವಾಗಿ ಹೊರಹೊಮ್ಮಿದರೆ ಅದು ಅಗತ್ಯ ವಸ್ತುಗಳ ಪೂರೈಕೆಯ ಬಲವರ್ಧನೆ ಎಂದೇ ವಿಶ್ಲೇಷಿಸಬೇಕಾಗಿದೆ. ಒಂದು ಇನ್ನೊಂದರ ಮೌಲ್ಯ ಹೆಚ್ಚಿಸುತ್ತದೆ. ಬಳಕೆದಾರ , ಅಗತ್ಯ ವಸ್ತುಗಳನ್ನು ಅಂದರೆ ದಿನಸಿ ಸಾಮಗ್ರಿಗಳನ್ನು ದಿನದ ಕೊನೆಗೆ ನಿರೀಕ್ಷಿಸುತ್ತಾನೆ. ಆದರೆ ಆಹಾರದ ಬಗ್ಗೆ ಹಾಗಲ್ಲ. ಅದು ದಿನದ ಮಧ್ಯದ ಅವಧಿಯಲ್ಲಿ ಅಂದರೆ ತಕ್ಷಣ ಆಹಾರ ಪೂರೈಕೆಯನ್ನು ಬಳಕೆದಾರ ಬಯಸುತ್ತಾನೆ. ಮುಂದಿನ ದಿನಗಳಲ್ಲಿ ಅಗತ್ಯವಸ್ತುಗಳ ಅಂದರೆ ದಿನಸಿ ವಸ್ತುಗಳ ಪೂರೈಕೆ ಪಟ್ಟಿಯಲ್ಲಿ ಆಹಾರ ಪೂರೈಕೆ ವ್ಯವಸ್ಥೆ ಸೇರ್ಪಡೆಗೊಳ್ಳುವುದನ್ನು ಬಳಕೆದಾರ ಎದುರು ನೋಡುತ್ತಿದ್ದಾನೆ.

ಲೇಖಕರು: ಆದಿತ್ಯ ಸೋಮಾನಿ

ಅನುವಾದಕರು : ಎಸ್​ಡಿ