ಸೊಲಾರ್​ ಉತ್ಪನ್ನಗಳಿಗೆ ಮಾರುಕಟ್ಟೆಯ ಸೃಷ್ಟಿ- ಭವಿಷ್ಯದ ಕನಸು ಕಾಣ್ತಿದೆ "ಸೊಲ್​ಟ್ರಿಕ್ಸ್​​"

ಟೀಮ್​ ವೈ.ಎಸ್​. ಕನ್ನಡ

1

ಜಾಗತಿಕ ತಾಪಮಾನ ಏರಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ತಾಪಮಾನ ಏರಿಕೆ ಹೀಗೆಯೇ ಮುಂದುವರೆದ್ರೆ ಏನಾಗಬಹುದು ಅನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಏರುತ್ತಿರುವ ತಾಪಮಾನವನ್ನು ಕಡಿಮೆ ಮಾಡಲು ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 2050ರ ಹೊತ್ತಿಗೆ ಜಗತ್ತಿನ ಬಹುತೇಕ ದೇಶಗಳು ಸಂಪೂರ್ಣವಾಗಿ ನವೀಕರಿಸಬಹುದಾದ ಇಂಧನಗಳನ್ನು ಬಳಸಿಕೊಳ್ಳುವ ಬಗ್ಗೆ ಯೋಜನೆಗಳನ್ನು ರೂಪಿಸಿವೆ. ಈ ನಿಟ್ಟಿನಲ್ಲಿ ಭಾರತ ದೊಡ್ಡ ಹೆಜ್ಜೆಯನ್ನು ಇಡುತ್ತಿದೆ. ಸದ್ಯಕ್ಕೆ ಭಾರತ 44.812 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನವನ್ನು ಬಳಸಿಕೊಳ್ಳುತ್ತಿದೆ. 2022ರ ಹೊತ್ತಿಗೆ ಭಾರತ 175 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನವನ್ನು ಬಳಸಿಕೊಳ್ಳುವಂತೆ ಮಾಡಲು ಸರಕಾರ ಯೋಜನೆಗಳನ್ನು ಸಿದ್ಧಪಡಿಸಿದೆ.

ನವೀಕರಿಸಬಹುದಾದ ಶಕ್ತಿಗಳ ಪೈಕಿ ಸೊಲಾರ್ ಶಕ್ತಿ ಅತೀ ಪ್ರಮುಖವಾಗಿದೆ. ಸೊಲಾರ್ ಮೂಲಕ ವಿದ್ಯುತ್ ತಯಾರಿಸಿದ್ರೆ ಕಲ್ಲಿದ್ದಲು ಸೇರಿದಂತೆ ಹಲವು ಇಂಧನಗಳನ್ನು ಉಳಿಸಿಕೊಳ್ಳಬಹುದು. "ಸೊಲ್​ಟ್ರಿಕ್ಸ್" ಅನ್ನುವ ಕಂಪನಿ ನವೀಕರಿಸಬಹುದಾದ ಇಂಧನಗಳನ್ನು ಒಟ್ಟುಗೂಡಿಸಿ ಮಾರುಕಟ್ಟೆ ಪ್ರವೇಶಿಸಿದೆ. "ಸೊಲ್​ಟ್ರಿಕ್ಸ್​​"  ನವೀಕರಿಸಬಹುದಾದ ಶಕ್ತಿಗಳನ್ನು ಒಂದೇ ವೇದಿಕೆಯಲ್ಲಿ ಸಿಗುವಂತೆ ಮಾಡಿದೆ. ಗಾಝಿಯಾಬಾದ್​ನ ರಿಷಿ ಮಾಥುರ್ ಮತ್ತು ಡಾ.ಮುಕುಲ್ ರಜಪೂತ್ ಈ ಯೋಜನೆಯ ಹರಿಕಾರರು. ನ್ಯೂರೋ ಸೈಕೋಲಜಿಯಲ್ಲಿ ರಿಷಿ ಮತ್ತು ಮುಕುಲ್ ಡಾಕ್ಟರೇಟ್ ಕೂಡ ಪಡೆದುಕೊಂಡಿದ್ದಾರೆ.

ಆರಂಭ ಹೇಗಾಯಿತು..?

ನವೀಕರಿಸಲಾಗದ ಇಂಧನಗಳು ದಿನದಿಂದ ದಿನಕ್ಕೆ ಖಾಲಿಯಾಗುತ್ತಿವೆ. ಅಷ್ಟೇ ಅಲ್ಲ ಮುಂದೊಂದು ದಿನ ಅವುಗಳು ಸಿಗುವುದೇ ಇಲ್ಲ ಅನ್ನುವಂತಹ ದಿನ ಕೂಡ ಎದುರಾಗಲಿದೆ. ರಿಷಿ ಈ ಬಗ್ಗೆ ಆರಂಭದಲ್ಲಿ ಹೆಚ್ಚು ಆಸಕ್ತಿ ವಹಿಸಿ ಕೆಲಸ ಆರಂಭಿಸಿದ್ರು. ನಂತರ ತನ್ನ ಗುರುಗಳಾದ ಡಾಕ್ಟರ್ ಮುಕುಲ್ ಜೊತೆ ಸೇರಿಕೊಂಡು ಪ್ರಾಜೆಕ್ಟ್ ಆರಂಭಿಸಿದ್ರು.

“ ಕಳೆದ ಕೆಲವು ವರ್ಷಗಳಿಂದ ಜಗತ್ತಿನಲ್ಲಿ ಇಂಧನಗಳ ಕೊರತೆ ಹೆಚ್ಚಾಗುತ್ತಿದೆ. ವಿದ್ಯುತ್ ದರ ಹೆಚ್ಚಾಗುತ್ತಿದೆ. ಇದು ನನಗೆ ನವೀಕರಿಸಬಹುದಾದ ಇಂಧನಗಳನ್ನು ಬಳಸಿಕೊಂಡು ವಿದ್ಯುತ್ ಶಕ್ತಿ ಉತ್ಪಾದಿಸುವಂತೆ ಪ್ರೇರಣೆ ನೀಡಿತು. ನನಗೆ ಈ ವಿಭಾಗದಲ್ಲಿ ಕೆಲಸ ಮಾಡಲು ಹೆಚ್ಚು ಉತ್ಸಾಹ ಇದೆ.”
- ರಿಷಿ ಮಾಥುರ್, ಸೊಲ್​ಟ್ರಿಕ್ಸ್ ಸಂಸ್ಥಾಪಕ

ಭಾರತದಲ್ಲಿ ಅಭಿವೃದ್ಧಿಗೆ ಸಾಕಷ್ಟು ಅವಕಾಶವಿದೆ. ಸೌರಶಕ್ತಿ, ನವೀಕರಿಸಬಹುದಾದ ಇಂಧನಗಳು ಮತ್ತು ಕೊಳಚೆ ನೀರಿನ ನಿರ್ವಹಣೆ ಅಭಿವೃದ್ಧಿ ಮಂತ್ರಕ್ಕೆ ಹೆಚ್ಚು ಪುಷ್ಟಿ ನೀಡಬಹುದು. ಆದರೆ ಇವುಗಳನ್ನು ಭಾರತದಲ್ಲಿ ಯಾರೂ ಸರಿಯಾಗಿ ಬಳಸಿಕೊಂಡಿಲ್ಲ. ಹೀಗಾಗಿ ಇವುಗಳೆಲ್ಲವೂ ಇದ್ದೂ ಇಲ್ಲದಂತಾಗಿದೆ. ಕೆಲವರು ಬಳಸಿಕೊಂಡರೂ ಅವುಗಳು ಜೊತೆಯಾಗಿ ಕೆಲಸ ಮಾಡಿಲ್ಲ.

“ ಭಾರತ ನವೀಕರಿಸಬಹುದಾದ ಇಂಧನಗಳನ್ನು ಬಳಸಿಕೊಳ್ಳುವಲ್ಲಿ ಹಿಂದೆ ಬಿದ್ದಿದೆ. ಹೀಗಾಗಿ ಇವುಗಳನ್ನು ಒಂದೇ ಸೂರಿನಡಿಗೆ ತರಲು ಆನ್ ಲೈನ್ ಮತ್ತು ಆಫ್ ಲೈನ್ ವೇದಿಕೆಗಳ ಅವಶ್ಯಕತೆ ಇದೆ. ಇರುವ ಶಕ್ತಿಗಳನ್ನು ಬಳಸಿಕೊಂಡು ಪರಿಸರವನ್ನು ಕೂಡ ಕಾಪಾಡಿಕೊಳ್ಳುವ ಹೊಣೆಗಾರಿಕೆ ಮನುಕುಲದ ಮೇಲಿದೆ. ”
ರಿಷಿ ಮಾಥುರ್, ಸೊಲ್​ಟ್ರಿಕ್ಸ್ ಸಂಸ್ಥಾಪಕ

ಇಲ್ಲಿ ತನಕದ ಪಯಣ

ಸೊಲ್​ಟ್ರಿಕ್ಸ್ ಕಳೆದ ಮಾರ್ಚ್ ನಲ್ಲಿ ಮಾರುಕಟ್ಟೆ ಪ್ರವೇಶಿಸಿದೆ. ಮಾರುಕಟ್ಟೆಯ ಚಿತ್ರಣ ಪಡೆಯಲು ಮತ್ತು ವಾಣಿಜ್ಯ ಕಾರ್ಯಸಾಧ್ಯತೆಯ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ. ಮೊದಲ ಹಂತದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತ ಕಾರಣ ಎಪ್ರಿಲ್​ನಲ್ಲಿ 2ನೇ ಆವೃತ್ತಿಯನ್ನು ಬಿಡುಗಡೆಗೊಳಿಸಲಾಗಿದೆ. ಆದರೆ ಸೊಲ್ ಟ್ರಿಕ್ಸ್ ಇ-ಕಾಮರ್ಸ್ ಕಂಪನಿಗಳಿಂದ ವಿಭಿನ್ನವಾಗಿದೆ.

“ ಇದು ಬಂಡವಾಳವನ್ನು ಬೇಡುವ ಇ-ಕಾಮರ್ಸ್ ಕಂಪನಿಯಲ್ಲ. ಸೊಲ್​ಟ್ರಿಕ್ಸ್ ಕೇವಲ ಸೊಲಾರ್ ಪ್ರಾಡಕ್ಟ್​ಗಳನ್ನು ಆನ್​ಲೈನ್ ಮೂಲಕ ಮಾರುತ್ತಿಲ್ಲ. ಬದಲಿಗೆ ಪರಿಸರಕ್ಕೆ ನೆರವು ನೀಡಬಲ್ಲ ಇಂಧನ ಶಕ್ತಿಗಳನ್ನು ಒಟ್ಟು ಸೇರಿಸಿ, ಅವುಗಳ ಪ್ರಚಾರ ಮಾಡುತ್ತಿದೆ. ಸೊಲಾರ್ ಪ್ರಾಡಕ್ಟ್​ಗಳಿಗೆ ವಿಶ್ವದರ್ಜೆಯ ಸ್ಥಾನಮಾನ ಒದಗಿಸುವ ಜೊತೆಗೆ ಉದ್ಯಮವನ್ನು ಬೆಳೆಸಿಕೊಳ್ಳುವ ಉದ್ದೇಶವನ್ನು ಹೊಂದಿದೆ. ”
- ರಿಷಿ ಮಾಥುರ್, ಸೊಲ್​ಟ್ರಿಕ್ಸ್ ಸಂಸ್ಥಾಪಕ

ಸೋಲ್​ಟ್ರಿಕ್ಸ್ ಸೋಲಾರ್ ಉತ್ಪನ್ನಗಳಿಗೆ ವಿವಿಧ ರೀತಿಯಲ್ಲಿ ಬೆಂಬಲವನ್ನು ನೀಡುತ್ತಿದೆ. ಯಾರಾದರೂ ಹೊಸದಾಗಿ ಈ ಫೀಲ್ಡ್​ಗೆ ಎಂಟ್ರಿಯಾದರೆ ಅವರ ಬೆಂಬಲಕ್ಕೂ ನಿಲ್ಲುತ್ತದೆ. ಸಿಂಡಿಕೇಟ್ ಮಾರ್ಕೆಟ್ ಪ್ಲೇಸ್​ನಲ್ಲಿ ನಾಯಕನಾಗಿ ನಿಂತು, ಎಕ್ಸ್​ಪ್ರೆಸ್​ ಆರ್ಡರಿಂಗ್, ಟ್ರೈನಿಂಗ್ ಮತ್ತು ಅಭಿವೃದ್ಧಿ ಪಾಠಗಳನ್ನು ಹೇಳಿಕೊಡುವ ಉದ್ದೇಶವನ್ನು ಇಟ್ಟುಕೊಂಡಿದೆ. ಅಷ್ಟೇ ಅಲ್ಲ ಸೋಲಾರ್ ಅಥವಾ ನವೀಕರಿಸಬಹುದಾದ ಇಂಧನದ ಉದ್ಯಮ ಆರಂಭಿಸುವವರಿಗೆ ಸಾಲ ಹಾಗೂ ಇತರೆ ಹಣಕಾಸಿನ ನೆರವು ಕೂಡ ನೀಡಲಿದೆ. ಈ ಮೂಲಕ ನವೀಕರಿಸಬಹುದಾದ ಇಂಧನ ಬಳಕೆದಾರರನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಿದೆ.

ಇದನ್ನು ಓದಿ: ವಕೀಲ ವೃತ್ತಿಗೆ ಗುಡ್ ಬೈ ಹೇಳಿದ್ರು- ಸಾವಯವ ಕೃಷಿಕನಾಗಿ ಯಶಸ್ಸಿನ ಹೆಜ್ಜೆ ಇಟ್ರು..!

ಸದ್ಯಕ್ಕೆ ಸೊಲ್​ಟ್ರಿಕ್ಸ್ ಸೇವೆ ಹಾಗೂ ಸಮಸ್ಯೆಗಳನ್ನು ಉಚಿತವಾಗಿ ಪರಿಹರಿಸುತ್ತಿದೆ. ಇದು ಸೊಲ್​ಟ್ರಿಕ್ಸ್​ನ ಆರಂಭದ ದಿನಗಳಾಗಿರುವುದರಿಂದ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿ ಮಾಡಲು ಈ ಯೋಜನೆ ರೂಪಿಸಿದೆ. ಮುಂದಿನ ದಿನಗಳಲ್ಲಿ ಸಬ್ಸ್​ಕ್ರಿಪ್ಶನ್, ಸರ್ವೀಸ್ ಚಾರ್ಜ್ , ಪ್ರಾಜೆಕ್ಟ್ ಕಾಸ್ಟ್ ಮತ್ತು ಕಮಿಷನ್​ಗಳ ಮೂಲಕ ಆದಾಯ ಪಡೆಯುವ ಪ್ಲಾನ್​ಗಳನ್ನು ಮಾಡಿಕೊಂಡಿದೆ.

ಇಷ್ಟೆಲ್ಲಾ ಆಫರ್​ಗಳನ್ನು ಸೊಲ್​ಟ್ರಿಕ್ಸ್ ನೀಡಿದ್ದರೂ ಸೋಲಾರ್ ಪ್ರಾಡಕ್ಟ್ ಉತ್ಪಾದಕರು ಮತ್ತು ಮಾರಾಟಗಾರರು ಒಂದೇ ವೇದಿಕೆ ಕೆಳಗೆ ಕಾಣಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಅಷ್ಟೇ ಅಲ್ಲ ಸೊಲ್​ಟ್ರಿಕ್ಸ್​ ಬಂಡವಾಳದ ಕೊರತೆ ಎದುರಿಸುವ ಭಯವನ್ನೂ ಎದುರಿಸುತ್ತಿದೆ. ಚಿಕ್ಕ ತಂಡವಿದ್ದರೂ ದೊಡ್ಡ ಜವಾಬ್ದಾರಿ ಅವರ ಹೆಗಲ ಮೇಲಿದೆ.

“ ಸೊಲಾರ್ ಉತ್ಪನ್ನಗಳನ್ನು ಖರೀದಿ ಮಾಡುವುದು ದುಬಾರಿ. ಹೀಗಾಗಿ ನಾವು ಗ್ರಾಹಕರ ಬೇಡಿಕೆ ಮೇರೆಗೆ ಉತ್ಪನ್ನಗಳನ್ನು ಅವರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಆದರೆ ಗ್ರಾಹಕರನ್ನು ಪಡೆಯಲು ಸಾಕಷ್ಟು ಸರ್ಕಸ್​ಗಳನ್ನು ಮಾಡಬೇಕಿದೆ. ಇದಕ್ಕಾಗಿಯೇ ಒಂದು ನೆಟ್ ವರ್ಕ್ ಅನ್ನು ತಯಾರು ಮಾಡಿಕೊಂಡಿದ್ದೇವೆ. ಗ್ರಾಹಕರು ಅವರಿಗೆ ಅಗತ್ಯವಿರುವ ವಸ್ತುಗಳ ಬಗ್ಗೆ ನಮಗೆ ಮಾಹಿತಿ ನೀಡುತ್ತಾರೆ. ನಾವು ಅವುಗಳನ್ನು ಒಟ್ಟು ಸೇರಿಸಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ”
- ರಿಷಿ ಮಾಥುರ್, ಸೊಲ್​ಟ್ರಿಕ್ಸ್ ಸಂಸ್ಥಾಪಕ

ಭಾರತದ ಜಗತ್ತಿನಲ್ಲಿ ಅತೀ ಹೆಚ್ಚು ಉತ್ಪಾದಿಸುವ ರಾಷ್ಟ್ರಗಳ ಪೈಕಿ 5ನೇ ಸ್ಥಾನವನ್ನು ಪಡೆದುಕೊಂಡಿದೆ. ಗಾಳಿಯ ಮೂಲಕ ಅತೀ ಹೆಚ್ಚು ವಿದ್ಯುತ್ ತಯಾರಿಸುವ ರಾಷ್ಟ್ರಗಳ ಪೈಕಿ 4ನೇ ಸ್ಥಾನ ಪಡೆದುಕೊಂಡಿದೆ. ಸೌರಶಕ್ತಿ ಉತ್ಪಾದನೆಯಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. ಇನ್ನು ಕೆಲವೇ ವರ್ಷಗಳಲ್ಲಿ ಮರುಬಳಕೆಯ ಇಂಧನಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಹೀಗಾಗಿ, ಸೌರ ಉತ್ಪನ್ನಗಳನ್ನು ಒಂದೇ ಸೂರಿನಡಿಗೆ ತರುವ  ಸೊಲ್​ಟ್ರಿಕ್ಸ್ ಉತ್ತಮ ಭವಿಷ್ಯವನ್ನು ಹೊಂದಿದೆ. 

ಇದನ್ನು ಓದಿ:

1. ಮಹಿಳೆಯರ ಸ್ವಯಂ ಅನುಭೂತಿಯ ಪರಿಕಲ್ಪನೆ : ಇದು ಬ್ಯುಸಿನೆಸ್​ನಲ್ಲೂ ಅಡಕವಾದ ಚಿಂತನೆ

2. ವೈಜ್ಞಾನಿಕ ಸಂಶೋಧನೆಗೆ ಆಸ್ತಿ ದಾನ ಮಾಡಿದ IAS ಅಧಿಕಾರಿ – ಸಾವಿನಲ್ಲೂ ಸಾರ್ಥಕತೆ ಮೆರೆದ ಶಾರ್ವರಿ

3. ಮುಂಬೈನಲ್ಲಿ ಈಗ ಮಹಿಳೆಯರು ಕೂಡ ಆಟೋ ಓಡಿಸ್ತಾರೆ..! 

Related Stories