ಮುಖಬೆಲೆ ಎರಡೇ ಸಾವಿರ ರೂಪಾಯಿ- ಆದ್ರೆ ಫ್ಯಾನ್ಸಿ ನಂಬರ್​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​..!

ಟೀಮ್​ ವೈ.ಎಸ್​. ಕನ್ನಡ

ಮುಖಬೆಲೆ ಎರಡೇ ಸಾವಿರ ರೂಪಾಯಿ- ಆದ್ರೆ ಫ್ಯಾನ್ಸಿ ನಂಬರ್​ಗೆ  ಸಿಕ್ಕಾಪಟ್ಟೆ ಡಿಮ್ಯಾಂಡ್​..!

Wednesday November 23, 2016,

2 min Read

ದೇಶದಾದ್ಯಂತ ಈಗ ಹೊಸ ನೋಟುಗಳದ್ದೇ ಸುದ್ದಿ, ಜನ ನೋಟ್​ಗಳನ್ನು ಪಡೆಯಲು ದಿನಗಟ್ಟಲೆ ಕ್ಯೂ ನಿಲ್ಲುತ್ತಿದ್ದಾರೆ. ಹೊಸ 2000 ರೂಪಾಯಿ ನೋಟನ್ನು ಪಡೆದು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ. ಈಗ ಆ ನೋಟು ಕೂಡಾ ತನ್ನ ಮುಖ ಬೆಲೆಗಿಂತ ಹೆಚ್ಚಿನ ಬೆಲೆಗೆ ಆನ್​ಲೈನ್​ನಲ್ಲಿ ಮಾರಾಟವಾಗುತ್ತಿದೆ.

ಹೌದು ಎರಡು ಸಾವಿರ ರೂಪಾಯಿಯ ಹೊಸ ನೋಟು ‘ಇ ಬೇ’ ಎಂಬ ಆನ್​ಲೈನ್​ ಪೋರ್ಟಲ್​ನಲ್ಲಿ ಮಾರಾಟಕ್ಕಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲವೂ ಆನ್​ಲೈನ್ ಮಯ. ಆನ್​ಲೈನ್​ನಲ್ಲಿ ಬಟ್ಟೆ, ಫೋನ್, ಟಿವಿ ಫ್ರಿಡ್ಜ್ ಕಡೆಗೆ ಮನೆಯ ದಿನಸಿಯೂ ಸಹ ಆನ್​ಲೈನ್​ನಲ್ಲಿ ಸಿಗುತ್ತಿದೆ. ಇತ್ತೀಚಿನ ಬೆಳವಣಿಗೆಯೆಂದರೆ ಇ ಕಾಮರ್ಸ್​ನಲ್ಲಿ ಸೆಗಣಿ ಕೇಕ್ ಅರ್ಥಾತ್​ ಬೆರಣಿ ಮತ್ತು ಸೆಗಣಿಯುಕ್ತ ಗೊಬ್ಬರ ಕೂಡ ಅಂತರ್ಜಾಲದಲ್ಲಿ ಸಿಗುತ್ತಿತ್ತು. ಈಗ ಅಲ್ಲಿ ಹೊಸ ನೋಟು ಲಭ್ಯವಿದೆ. ಅದು ಕೂಡ ಫ್ಯಾನ್ಸಿ ಸೀರಿಸ್​ನಲ್ಲಿ. 

image


ವಾಹನಗಳನ್ನು ರಿಜಿಸ್ಟರ್ ಮಾಡಿಸುವಾಗ ಫ್ಯಾನ್ಸಿ ನಂಬರ್​ಗಳನ್ನು ಲಕ್ಷಾಂತರ ರೂಪಾಯಿಗಳಿಗೆ ಹರಾಜು ಹಾಕುತ್ತಾರೆ. ಈಗ ಆನ್​ಲೈನ್ ತಾಣವಾದ ‘ಇ ಬೇ’ ನಲ್ಲಿ ಈ ರೀತಿಯ ಫ್ಯಾನ್ಸಿ ನಂಬರ್ ಇರುವ 2000 ರೂಪಾಯಿಯ ಹೊಸ ನೋಟನ್ನು ಮಾರಾಟಕ್ಕಿಟ್ಟಿದ್ದಾರೆ.

ಇದನ್ನು ಓದಿ: ಜೋಧ್​ಪುರದ ಉದ್ಯಮಕ್ಕೆ ಫೇಸ್​ಬುಕ್​ ಟಚ್​- ಸಣ್ಣ ಉದ್ಯಮದಲ್ಲಿ ಸಾಮಾಜಿಕ ತಾಣದ ಮ್ಯಾಜಿಕ್​

ಭಾರತೀಯ ನೋಟ್​ ಒಂದು ಈ ರೀತಿ ಆನ್​ಲೈನ್​ನಲ್ಲಿ ಮಾರಾಟಕ್ಕಿರುವುದು ಬಹುಷಃ ಇದೇ ಪ್ರಥಮ ಇರಬೇಕು. ಪ್ರಧಾನಿ ನರೇಂದ್ರ ಮೋದಿ ಆರ್ಥಿಕ ವ್ಯವಸ್ಥೆಯನ್ನು ಸ್ವಚ್ಛ ಮಾಡಲು ಹಳೇ ನೋಟುಗಳನ್ನು ನಿಷೇಧ ಮಾಡಿ ಈ ನೋಟುಗಳನ್ನು ಜಾರಿಗೆ ತಂದಿದ್ದಾರೆ. ಆದರೆ ಇದನ್ನು ಬಳಸಿಕೊಂಡಿರುವ ಆನ್​ಲೈನ್ ತಾಣಗಳು ಫ್ಯಾನ್ಸಿ ನಂಬರಿನ ನೋಟುಗಳನ್ನು ಸಂಗ್ರಹಿಸಿ ಅದನ್ನು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುವುದಾಗಿ ತನ್ನ ವೆಬ್​ಸೈಟ್​ನಲ್ಲಿ ಚಿತ್ರ ಸಹಿತ ಹಾಕಿಕೊಂಡಿದೆ.

image


ಯಾವ್ಯಾವ ಫ್ಯಾನ್ಸಿ ನಂಬರ್ ಲಭ್ಯ..?

756 ಮತ್ತು 786 ನಿಂದ ಕೊನೆಯಾಗುವ ಸಂಖ್ಯೆಗಳನ್ನು ಒಳಗೊಂಡ ಎರಡು ಸಾವಿರ ರೂಪಾಯಿ ನೋಟನ್ನು ‘ಇ ಬೇ’ ತಾಣ ಒಂದು ಲಕ್ಷದ ಹನ್ನೊಂದು ಸಾವಿರ ರೂಪಾಯಿಗೆ ಒಂದು ನೋಟು, ಮೂರು ಲಕ್ಷ ಬೆಲೆಗೆ ಮಾರಾಟ ಮಾಡುವುದಾಗಿ ಹಾಕಿಕೊಂಡಿದೆ. ಅಲ್ಲದೆ ಈ ಹಣ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಸಹ ಹೇಳಿದೆ. ಇದರಲ್ಲಿ 90 ರೂಪಾಯಿ ಶಿಪ್ಪಿಂಗ್ ಚಾರ್ಜ್ ಸಹ ಸೇರಿದ್ದು, ಬಾಂಬೆಯಿಂದ ಇದು ಡಿಸ್​ಪ್ಯಾಚ್ ಆಗಲಿದೆ ಎಂದು ಮಾಹಿತಿಯನ್ನು ಈ ತಾಣ ಹಾಕಿಕೊಂಡಿದೆ.

ಇದುವರೆಗೂ ಈ ನೋಟನ್ನು ಯಾರು ಕೊಂಡುಕೊಂಡಿಲ್ಲ.

ಫ್ಯಾನ್ಸಿ ನಂಬರಿನ ಹುಚ್ಚಿರುವವರು ಈ ನೋಟನ್ನು ಕೊಂಡುಕೊಳ್ಳಬಹುದು ಎಂಬುದು ತಾಣದ ಆಲೋಚನೆ ಇರಬಹುದು. ಸಾಕಷ್ಟು ಮಂದಿ ತಮ್ಮ ಹುಟ್ಟಿದ ಹಬ್ಬದ ದಿನಾಂಕ ಇರುವ ನಂಬರ್​ನ ನೋಟುಗಳನ್ನು ಅದರ ಮುಖಬೆಲಗಿಂತಲೂ ಹೆಚ್ಚಿನ ಬೆಲೆ ಕೊಟ್ಟು ಕೊಂಡುಕೊಳ್ಳತ್ತಾರೆ. ಈಗಾಗಲೇ ಈ ನೋಟು ಸೇರಿದಂತೆ ಸಾಕಷ್ಟು ನೋಟುಗಳು ಸಹ ಈ ತಾಣದಲ್ಲಿ ಇವೆ ಈಗ ಆ ಸಾಲಿಗೆ 2000 ರೂಪಾಯಿ ನೋಟು ಸಹ ಸೇರಿಕೊಂಡಂತಾಗಿದೆ. ಒಟ್ಟಿನಲ್ಲಿ ಪರಿಸ್ಥಿತಿಯನ್ನು ಬಳಸಿಕೊಂಡು ಉದ್ಯಮವನ್ನು ಹೇಗೆ ಬೆಳೆಸಬಹುದು ಅನ್ನೋದನ್ನ ಇ ಕಾಮರ್ಸ್​ ಪೋರ್ಟಲ್​ಗಳು ಹೇಳಿಕೊಡುತ್ತಿವೆ.

ಇದನ್ನು ಓದಿ:

1. ದೇಶದೆಲ್ಲೆಡೆ ನೋಟಿಗಾಗಿ ಪರದಾಟ-ಗುಜರಾತ್​ನ ಈ ಡಿಜಿಟಲ್ ಗ್ರಾಮದಲ್ಲಿ ಇಲ್ವೇ ಇಲ್ಲ ಕ್ಯಾಶ್ ಜಂಜಾಟ..!

2. ನಿಮ್ಮ ಕೈಯಲ್ಲಿರುವ 2000 ರೂಪಾಯಿ ನೋಟಿನ ಬಗ್ಗೆ ನಿಮಗೆಷ್ಟು ಗೊತ್ತು..?

3. ಬೀದಿಯಲ್ಲಿ ದಿನಪತ್ರಿಕೆ ಮಾರುತ್ತಿದ್ದ ಶಿವಾಂಗಿ ಈಗ IIT-JEE ಉತ್ತೀರ್ಣೆ..