50ಕ್ಕೂ ಹೆಚ್ಚು ರಾಷ್ಟ್ರೀಯ ಬಿಲ್ಲುಗಾರರ ತವರು ಈ ಕುಗ್ರಾಮ...

ಟೀಮ್ ವೈ.ಎಸ್.ಕನ್ನಡ 

50ಕ್ಕೂ ಹೆಚ್ಚು ರಾಷ್ಟ್ರೀಯ ಬಿಲ್ಲುಗಾರರ ತವರು ಈ ಕುಗ್ರಾಮ...

Tuesday November 29, 2016,

1 min Read

ಶಿವತ್ರೈ... ಚತ್ತೀಸ್ಗಢದ ಬಿಸ್ಲಾಪುರ ಜಿಲ್ಲೆಯಲ್ಲಿರುವ ಒಂದು ಬುಡಕಟ್ಟು ಗ್ರಾಮ. ಸುತ್ತಲ್ಲೂ ದಟ್ಟ ಅಡವಿಯಿಂದ್ಲೇ ಆವರಿಸಿರುವ ಊರು ಇದು. ಈ ಹಳ್ಳಿ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿ ಮಾಡ್ತಾ ಇದೆ. ಇದಕ್ಕೆ ಕಾರಣ ಶಿವತ್ರೈ ಗ್ರಾಮದಲ್ಲಿ ನೆಲೆಸಿರುವ 50ಕ್ಕೂ ಹೆಚ್ಚು ರಾಷ್ಟ್ರೀಯ ಬಿಲ್ಲುಗಾರರು. ಈ ಊರು ಪ್ರತಿಭಾವಂತ ಬಿಲ್ಲುಗಾರರ ತವರು.

image


ಈ ಗ್ರಾಮದ ಜನರಿಗೆ ಆರ್ಚರಿಯೇ ಬದುಕು, ಆರ್ಚರಿಯೇ ಉಸಿರು. ಎಷ್ಟೋ ದಶಕಗಳಿಂದ ಬಿಲ್ವಿದ್ಯೆ ಇವರ ಬದುಕಲ್ಲಿ ಹಾಸುಹೊಕ್ಕಾಗಿದೆ. ಸಾಂಪ್ರದಾಯಿಕ ಬಿಲ್ಲುಗಾರಿಕೆ ಸಮುದಾಯದಲ್ಲಿ ಚಿಕ್ಕ ವಯಸ್ಸಿನವರಿದ್ದಾಗಲೇ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಬಿಲ್ಲುವಿದ್ಯೆ ಕಲಿಸಲಾಗುತ್ತದೆ. ಎಲ್ಲರಿಗೂ ಆರ್ಚರಿ ಕಲೆಯನ್ನು ಧಾರೆ ಎರೆಯುತ್ತಿರುವವರು ತರಬೇತುದಾರರಾದ ಇತ್ವಾರಿ ರಾಜ್. ಹೊಸ ಪೀಳಿಗೆಯ ಬಿಲ್ಲುಗಾರರಿಗೆ ಅವರು ತರಬೇತಿ ನೀಡುತ್ತಿದ್ದಾರೆ. ಅದರ ಫಲವಾಗಿ ಕಳೆದ ಕೆಲವು ವರ್ಷಗಳಿಂದ ಶಿವತ್ರೈ ಗ್ರಾಮ ಅನೇಕ ಪ್ರತಿಭಾವಂತ, ಚಾಂಪಿಯನ್ ಬಿಲ್ಲುಗಾರರಿಗೆ ಜನ್ಮ ನೀಡಿದೆ.

ಶಿವತ್ರೈ ಗ್ರಾಮದಲ್ಲಿ ಮೂಲ ಸೌಕರ್ಯಗಳ ಕೊರತೆಯಿದೆ. ಆದ್ರೂ 50ಕ್ಕೂ ಹೆಚ್ಚು ರಾಷ್ಟ್ರೀಯ ಬಿಲ್ಲುಗಾರರನ್ನು ದೇಶಕ್ಕೆ ನೀಡಿದ ಹೆಮ್ಮೆ ಈ ಗ್ರಾಮದ್ದು. ಈ ಪ್ರದೇಶದಲ್ಲಿ ಒಂದು ಆರ್ಚರಿ ಆಕಾಡೆಮಿ ತೆರೆಯಲು ಹಾಗೂ ತರಬೇತಿ ಕ್ಯಾಂಪ್ ಆಯೋಜಿಸಲು ಸ್ಥಳೀಯ ಆಡಳಿತ ಮುಂದಾಗಿದೆ. ಉತ್ತಮ ಸೌಲಭ್ಯಗಳನ್ನು ಕಲ್ಪಿಸಿದಲ್ಲಿ ಈ ಹಳ್ಳಿಯಿಂದ ಇನ್ನಷ್ಟು ಬಿಲ್ಲುಗಾರರು ದೇಶಕ್ಕಾಗಿ ಆಡುವುದರಲ್ಲಿ ಅನುಮಾನವೇ ಇಲ್ಲ. ಯುವ ಬಿಲ್ಲುಗಾರರಿಗೆ ಪ್ರೋತ್ಸಾಹ ನೀಡಿದ್ರೆ ಅವರು ಮತ್ತಷ್ಟು ಸಾಧನೆಯನ್ನೂ ಮಾಡಬಲ್ಲರು.

ಸೂಕ್ತ ತರಬೇತಿ ಹಾಗೂ ಪ್ರೋತ್ಸಾಹವಿದ್ರೆ ಇಲ್ಲಿನ ಕ್ರೀಡಾಪಟುಗಳ ಬದುಕು ಕೂಡ ಹಸನಾಗುತ್ತೆ. ಕೇವಲ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ, ಅಂತರಾಷ್ಟ್ರೀಯ ಮಟ್ಟದಲ್ಲೂ ಅವರು ಹೆಸರು ಮಾಡಬಹುದು, ದೇಶಕ್ಕೆ ಕೀರ್ತಿ ತರಬಹುದು. ಜಾಗತಿಕ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಶಸ್ತಿ ಗೆದ್ದು ಬಂದ್ರೆ ಅದಕ್ಕಿಂತ ಹೆಮ್ಮೆಯ ವಿಚಾರ ಇನ್ನೊಂದಿಲ್ಲ. ಹಾಗಾಗಿ ಬಿಲ್ಲುಗಾರರ ಪ್ರತಿಭೆಯನ್ನು ಪೋಷಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕಿದೆ. ಹಾಗಾದಲ್ಲಿ ಮಾತ್ರ ಶಿವತ್ರೈ ಗ್ರಾಮದ ಸ್ವತ್ತಾಗಿರುವ ಬಿಲ್ಲುಗಾರಿಗೆ ಶಾಶ್ವತವಾಗಿ ಉಳಿಯಲಿದೆ. 

ಇದನ್ನೂ ಓದಿ...

"ಓಲಾ ಡ್ರೈವ್" ಈಗ ಮತ್ತಷ್ಟು ಫ್ರೆಂಡ್ಲಿ ವಿತ್ "ಓಲಾ ಪ್ಲೇ"

100 ದಿನಗಳಲ್ಲಿ 100 ಡಿಜಿಟಲ್ ಗ್ರಾಮ- ಇದು ಐಸಿಐಸಿಐ ಬ್ಯಾಂಕ್​ ಪಣ