ಹೈದ್ರಾಬಾದ್ ದಂಪತಿಗಳ ಸ್ಟಾರ್ಟ್ಅಪ್ ಕನಸು- ಲೀನ್​ಸ್ಪೂನ್​ನಲ್ಲಿ ಪೋಷಕಾಂಶಗಳದ್ದೇ ಮಾತು

ಟೀಮ್ ವೈ.ಎಸ್​. ಕನ್ನಡ

1

ಗೋಪಿ ಲಿಂಗಲ ಮತ್ತು ಸನೀಶಾ ರಾವ್ ದಂಪತಿಗಳಿಗೆ ಪೋಷಕಾಂಶಯುಕ್ತ ಆಹಾರವನ್ನು ಪಡೆಯುವುದೇ ದೊಡ್ಡ ಸವಾಲಾಗಿತ್ತು. ಎಲ್ಲೇ ಏನೇ ಹುಡುಕಿದ್ರೂ ಅವರಿಗೆ ಇಷ್ಟವಾದ ಮತ್ತು ಅಗತ್ಯವಿದ್ದ ಪೋಷಕಾಂಶಯುಕ್ತ ಆಹಾರ ಸಿಗುತ್ತಿರಲಿಲ್ಲ. ಗೋಪಿ ದಿನವೊಂದಕ್ಕೆ 12ರಿಂದ 14 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಊಟ ತಿಂಡಿ ಎಲ್ಲವೂ ಅಲ್ಲೇ ಆಗುತ್ತಿತ್ತು. ಹೀಗಾಗಿ ಗೋಪಿಗೆ ಕೆಲವು ಪೋಷಕಾಂಶಗಳ ಅಗತ್ಯವಿತ್ತು. ಆದ್ರೆ ಅದು ಸಿಗುತ್ತಾ ಇರಲಿಲ್ಲ. ಸನೀಶಾ ಗರ್ಭಿಣಿ ಆಗಿದ್ದರು. ಅವರಿಗೂ ನ್ಯೂಟ್ರಿಶಿಯನ್​ಗಳು ಬೇಕಾಗಿತ್ತು. ಆದ್ರೆ ಅವುಗಳನ್ನು ಪಡೆಯಲು ಮಾತ್ರ ಸಾಧ್ಯವಾಗುತ್ತಿರಲಿಲ್ಲ. ಒಂದೊಂದು ಆಹಾರದಲ್ಲಿ ಒಂದೊಂದು ಪೋಷಕಾಂಶಗಳ ಕೊರತೆ ಇರುತ್ತಿತ್ತು.

ಗೋಪಿ ಮತ್ತು ಸನೀಶಾ ದಂಪತಿಗಳು ಹಲವು ವೈದ್ಯರ ಬಳಿ ಸಲಹೆ ಪಡೆದಿದ್ದರು. ಹಲವು ಫುಡ್ ಡೆಲಿವರಿ ಸರ್ವೀಸ್​ಗಳ ಮೊರೆಹೋದ್ರು ಅಗತ್ಯವಾಗಿದ್ದ ಪೋಷಕಾಂಶಯುಕ್ತ ಆಹಾರ ಸಿಗಲಿಲ್ಲ. ಅಷ್ಟೇ ಅಲ್ಲ ಈ ರೀತಿಯ ಆಹಾರಗಳನ್ನು ತಯಾರಿಸಲು ಸಮಯ ಹಾಗೂ ಶ್ರಮ ಬೇಕೇ ಬೇಕು ಅನ್ನುವ ಸತ್ಯ ತಿಳಿಯಿತು. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು, ಈ ದಂಪತಿಗಳು 2016ರ ಮೇ ತಿಂಗಳಿನಲ್ಲಿ ಲೀನ್ ಸ್ಪೂನ್ ಅನ್ನುವ ಪೋಷಕಾಂಶಯುಕ್ತ ಆಹಾರ ನೀಡುವ ಸಂಸ್ಥೆಯನ್ನು ಸ್ಥಾಪಿಸಿದರು. ಈ ಕಂಪನಿಯನ್ನು ಸ್ಥಾಪಿಸಲು ಗೋಪಿ ಮತ್ತು ಸನೀಶಾ ಉಳಿತಾಯ ಖಾತೆಯಲ್ಲಿದ್ದ ಹಣದ ಜೊತೆಗೆ ಬ್ಯಾಂಕ್ ಒಂದರಿಂದ ಸಾಲವನ್ನು ಕೂಡ ಪಡೆದರು. ಗೋಪಿ ಹಾಗೂ ಸನೀಶಾ ಗ್ರಾಹಕರಿಗೆ ಅಗತ್ಯಗಳನ್ನು ಪೂರೈಸುವ ಪೋಷಕಾಂಶಯುಕ್ತ ಆಹಾರ ತಯಾರಿಸಲು ಅಡುಗೆಯವರ ತಂಡದ ಜೊತೆಗೆ ಇತರ ವ್ಯವಸ್ಥೆಗಳನ್ನು ಕೂಡ ಮಾಡಿಕೊಂಡರು.

ಹೈದ್ರಾಬಾದ್ ಮೂಲದ ಲೀನ್​ಸ್ಪೂನ್ ಗ್ರಾಹಕರ ವೈಯಕ್ತಿಕ ಬೇಡಿಕೆಗೆ ಅನುಗುಣವಾಗಿ ಪೋಷಕಾಂಶಯುಕ್ತ ಆಹಾರವನ್ನು ತಯಾರು ಮಾಡಿಕೊಡುತ್ತದೆ. ಈ ಮೂಲಕ ಡಯಟ್, ಹಾಗೂ ಅಗತ್ಯ ಪೋಷಕಾಂಶಗಳನ್ನು ನೀಡಿ ವೈದ್ಯರ ಸಲಹೆಯನ್ನು ಸರಿಯಾಗಿ ಪಾಲಿಸುವಂತೆ ನೋಡಿಕೊಳ್ಳುತ್ತಿದೆ.

“ ನಾವು ಹೂಡಿಕೆ ಮಾಡುವ ಮೊದಲು ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಅಷ್ಟೇ ಅಲ್ಲ ಪೋಷಕಾಂಶಯುಕ್ತ ಆಹಾರ ನೀಡುವ ಬಗ್ಗೆ ಪ್ಲಾನ್ ಕೂಡ ಮಾಡಿಕೊಂಡು, ಹೂಡಿಕೆ ಬಗ್ಗೆ ಪ್ಲಾನ್ ಮಾಡಿಕೊಂಡಿದ್ದೆವು. ಇಂಟರ್ ನ್ಯಾಷನಲ್ ಬ್ಯುಸಿನೆಸ್​ನಲ್ಲಿ ಎಂ.ಎಸ್ಸಿ. ಪದವಿ ಪಡೆದಿರುವ 36 ವರ್ಷದ ಗೋಪಿ, ಬಿಪಿಒ ಒಂದರ ಕನ್ಸಲ್ಟಿಂಗ್ ಸೆಕ್ಟರ್​ನಲ್ಲಿ 13 ವರ್ಷಗಳ ಸೇವೆ ಸಲ್ಲಿಸಿದ ಅನುಭವ ಪಡೆದುಕೊಂಡಿದ್ದಾರೆ. ಈಗ ಸರ್ವಿಸ್ ಮತ್ತು ಸಪ್ಲೈ ಚೈನ್ ಮ್ಯಾನೇಜ್​ಮೆಂಟ್ ಕಡೆಗೆ ಗಮನ ಕೊಡುತ್ತಿದ್ದಾರೆ.”

29 ವರ್ಷದ ಸನೀಶಾ ಕಂಪ್ಯೂಟರ್ ಸೈನ್ಸ್​ನಲ್ಲಿ ಎಂಜಿನಿಯರಿಂಗ್ ಪಧವೀಧರೆ. ಆರಂಭದಲ್ಲಿ ಗೇಮ್ ಡೆವಲಪಿಂಗ್ ಕಂಪನಿಯೊಂದರಲ್ಲಿ ಟೆಕ್ನಿಕಲ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದರು. ಲ್ಯಾಟಿನ್ ಅಮೆರಿಕಾಕ್ಕೆ ವಲಸೆ ಹೋದ ಮೇಲೆ ಪೈಂಟಿಂಗ್ ಅನ್ನು ಆರಂಭಿಸಿದ್ರು.

ಆಹಾರವನ್ನು ತಯಾರಿಸುವುದು

ಲೀನ್​ಸ್ಪೂನ್​ ತಂಡದಲ್ಲಿ 20 ಜನರಿದ್ದಾರೆ. ತಂಡದಲ್ಲಿ ನ್ಯೂಟ್ರಿಷಿಯಶ್ ಸ್ಪೆಷಲಿಸ್ಟ್​ಗಳು ಕೂಡ ಸೇರಿರುವುದು ಮತ್ತೊಂದು ವಿಶೇಷತೆ. ಈ ನ್ಯೂಟ್ರಿಷನ್​ಗಳು ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಅವರು ಆಹಾರದಲ್ಲಿ ನ್ಯೂಟ್ರೀಷನ್ ಅಂಶಗಳನ್ನು ಸೇರಿಸುವ ಬಗ್ಗೆ ಸಲಹೆಗಳನ್ನು ನೀಡುತ್ತಾರೆ. ಆಹಾರ ತಯಾರಾದ ಬಳಿಕ ಅದರಲ್ಲಿರುವ ಪೋಷಕಾಂಶಗಳ ಬಗ್ಗೆ ಪರೀಕ್ಷೆ ಕೂಡ ನಡೆಸಲಾಗುತ್ತದೆ. ಆಹಾರ ತಯಾರಿಸುವವರು ಕೂಡ ಹೊಟೇಲ್ ಉದ್ಯಮದಲ್ಲಿ ಪರಿಣತರಾಗಿದ್ದು, 5 ಸ್ಟಾರ್ ಹೊಟೇಲ್ ಅಥವಾ ವಿಮಾನದಲ್ಲಿ ಆಹಾರ ತಯಾರಿಸಿ ಅನುಭವ ಹೊಂದಿದ ತಜ್ಞರಿದ್ದಾರೆ. ಸದ್ಯಕ್ಕೆ 8 ಶೆಫ್​ಗಳು ಮತ್ತು ಒಬ್ಬರು ನ್ಯೂಟ್ರಿಷಿಯನ್​ಗಳ ತಂಡ ಲೀನ್ ಸ್ಪೂನ್​ನಲ್ಲಿದೆ.

“ ಪೋಷಕಾಂಶಯುಕ್ತ ಆಹಾರವನ್ನು ಪಡೆಯುವುದು ಸುಲಭದ ಮಾತಲ್ಲ. ಸೇವೆನೆ ಮಾಡುವ ಆಹಾರದಲ್ಲಿ ಫ್ಯಾಟ್, ಪ್ರೊಟೀನ್, ಕಾರ್ಬೋಹೈಡ್ರೇಡ್ಸ್ ಮತ್ತು ಮೈಕ್ರೋ ನ್ಯೂಟ್ರಿಷನ್​ಗಳಾದ ಫೈಬರ್, ವಿಟಮಿನ್ಸ್ ಮತ್ತು ಮಿನರಲ್​ಗಳು ಇರಲೇಬೇಕು. ಆದ್ರೆ ನಮಗೆ ಉಪಯುಕ್ತವಾದ ಆಹಾರ ಎಲ್ಲೂ ಸಿಗುವುದಿಲ್ಲ. ಆದ್ರೆ ಲೀನ್ ಸ್ಪೂನ್ ಪೋಷಕಾಂಶಯುಕ್ತ ಆಹಾರದ ಮೆನುವನ್ನೇ ತಯಾರಿಸಿದೆ. ಒಂದು ಮೆನು 10 ವಾರಗಳನ ತನಕ ಮತ್ತೆ ಕಾಣಸಿಗುವುದಿಲ್ಲ. ಅಷ್ಟು ವೆರೈಟಿಯ ಫುಡ್ ನಾವು ತಯಾರಿಸಬಲ್ಲೆವು.”
- ಗೋಪಿ, ಲೀನ್​ಸ್ಪೂನ್ ಮಾಲೀಕ

ಲೀನ್​ಸ್ಪೂನ್ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಕೂಡ ನೀಡುತ್ತದೆ. ವಾರಕ್ಕೆ 5, ತಿಂಗಳಿಗೆ 22 ಅಥವಾ ತ್ರೈ ಮಾಸಿಕಕ್ಕೆ 70 ಊಟಗಳನ್ನು ಆರ್ಡರ್ ಮಾಡುವ ವಿಶೇಷ ವ್ಯವಸ್ಥೆ ಕೂಡ ಇದೆ. ಹೈದ್ರಾಬಾದ್​ನಲ್ಲಿ ಮಾತ್ರ ಇರುವ ಲೀನ್​ಸ್ಪೂನ್ ಬ್ರೇಕ್​ಫಾಸ್ಟ್ ಅಥವಾ ಲಂಚ್​ಬಾಕ್ಸ್​ಗಳ ವ್ಯವಸ್ಥೆ ಮಾಡಿ ಪೋಷಕಾಂಶಗಳನ್ನು ಗ್ರಾಹಕರ ದೇಹ ಸೇರುವಂತೆ ಮಾಡುತ್ತದೆ.

ವೈಯಕ್ತಿಕ ನ್ಯೂಟ್ರಿಷಿಯನ್​ಗಳು ಗ್ರಾಹಕರ ಸಂತೃಪ್ತಿಯನ್ನು ಮತ್ತು ಅವರ ಆಯ್ಕೆಗಳ ಬಗ್ಗೆ ಎಲ್ಲವನ್ನೂ ನಿಭಾಯಿಸಲಿದ್ದಾರೆ. ಆಹಾರ ತಯಾರಿಸುವ ಹಂತದಲ್ಲಿ ಕೂಡ ನ್ಯೂಟ್ರಿಷಿಯನ್​ಗಳು ನಿಗಾ ಇಡುತ್ತಾರೆ. ಒಂದು ತಿಂಗಳ ಪ್ಯಾಕೇಜ್​ಗೆ  ಸುಮಾರು 9000 ರೂಪಾಯಿಗಳ ಚಾರ್ಜ್ ಮಾಡಲಾಗುತ್ತದೆ. ಮೂರು ತಿಂಗಳ ಪ್ಯಾಕೇಜ್​ಗೆ 25000 ರೂಪಾಯಿಗಳನ್ನು ನೀಡಬೇಕಾಗುತ್ತದೆ. ಇದ್ರಲ್ಲಿ ನ್ಯೂಟ್ರಿಷಿಯನ್ ಅಡ್ವೈಸ್, ಬ್ರೇಕ್​ಫಾಸ್ಟ್​  ಮತ್ತು ಊಟದ ಪ್ಯಾಕೇಜ್ ಇರುತ್ತದೆ. ಸುಮಾರು 175 ಮತ್ತು 205 ರೂಪಾಯಿಗಳು ಪ್ರತೀ ಪ್ಯಾಕೇಜ್​ಗೆ ಖರ್ಚಾಗುತ್ತದೆ.

ಲೀನ್​ಸ್ಪೂನ್ ವ್ಯಾಪಾರ

ಲೀನ್ ಸ್ಪೂನ್ ಪ್ರತೀ ತಿಂಗಳು ಸುಮಾರು 1000 ಆರ್ಡರ್​ಗಳನ್ನು ಪಡೆಯುತ್ತಿದೆ. ಪ್ರತಿಯೊಂದು ಊಟದ ಆರ್ಡರ್ ಬಂದಾಗಲೂ ಸ್ಟಾರ್ಟ್ಅಪ್ ಅಭಿವೃದ್ಧಿಯ ಕನಸು ಕಾಣುತ್ತಿದೆ. ಸದ್ಯದಲ್ಲೇ ಹೈದ್ರಾಬಾದ್​ನಲ್ಲಿ ತನ್ನ ಎರಡನೇ ಬ್ರಾಂಚ್ ಓಪನ್ ಮಾಡಲಿದೆ. ಅಷ್ಟೇ ಅಲ್ಲ ಪ್ರತೀ ತಿಂಗಳು 25000 ಆರ್ಡರ್ ಪಡೆಯುವ ಗುರಿಯನ್ನು ಕೂಡ ಹೊಂದಿದೆ.

ಮುಂದಿನ 2-3 ವರ್ಷಗಳಲ್ಲಿ ಲೀನ್​ಸ್ಪೂನ್ ತಾಂತ್ರಿಕತೆಯನ್ನು ಕೂಡ ಅಭಿವೃದ್ಧಿ ಪಡಿಸುವ ಕನಸು ಕಾಣುತ್ತಿದೆ. ಬಟ್ಟೆ ಮತ್ತು ಇತರೆ ಉದ್ಯಮದ ಕಡೆಗೂ ಕಣ್ಣಿಡುವ ಬಗ್ಗೆ ಪ್ಲಾನ್​ಗಳು ನಡೆಯುತ್ತಿದೆ. ಒಟ್ಟಿನಲ್ಲಿ ಲೀನ್​ಸ್ಪೂನ್ ಸ್ಟಾರ್ಟ್ಅಪ್ ಉದ್ಯಮದಲ್ಲಿ ಹೊಸ ಶಕೆಯನ್ನು ಹುಟ್ಟುಹಾಕಿದೆ.

ಇದನ್ನು ಓದಿ:

1. ಒಲಿಂಪಿಕ್ಸ್ ಅಂಚೆ ಚೀಟಿಗಳ ಸಂಗ್ರಹಕ್ಕಾಗಿ ಕಂಚಿನ ಪದಕ ಗೆದ್ದಿರುವ ಬೆಂಗಳೂರಿನ ಉದ್ಯಮಿ

2. ಅಂದು ಒಂದು ಹೊತ್ತಿನ ಊಟಕ್ಕೂ ಪರದಾಡುವ ದುಸ್ಥಿತಿ- ಇಂದು 2500 ಕೋಟಿ ಉದ್ಯಮದ ಒಡೆಯ

3. ಕಾಫಿ ಕುಡಿದು ಫ್ರೆಶ್​ ಆಗಿ- "ಫ್ಲೈಯಿಂಗ್ ಸ್ಕ್ವಿರಲ್"ನಲ್ಲಿದೆ ಆಧುನಿಕತೆಯ ಮೋಡಿ..!

Related Stories