ಎಲ್ಲರಿಗೂ ಸಿಗಬೇಕಿದೆ ಸೂರು- ಗುರಿ ಮುಟ್ಟಲು ಕೇಂದ್ರ ಸರಕಾರ ಮಾಡಿದೆ ನೂರು ಯೋಜನೆ

ಟೀಮ್​ ವೈ.ಎಸ್​. ಕನ್ನಡ

ಎಲ್ಲರಿಗೂ ಸಿಗಬೇಕಿದೆ ಸೂರು- ಗುರಿ ಮುಟ್ಟಲು ಕೇಂದ್ರ ಸರಕಾರ ಮಾಡಿದೆ ನೂರು ಯೋಜನೆ

Friday March 31, 2017,

2 min Read

ಎಲ್ಲರಿಗೂ ಸೂರು, ಕನಸು ನೂರು, ಕೇಂದ್ರ ಸರಕಾರ ಭಾರತದ ಪ್ರತಿಯೊಬ್ಬ ಪ್ರಜೆ ಕೂಡ ಮನೆ ಹೊಂದಿರಬೇಕು ಅನ್ನುವ ಉದ್ದೇಶ ಹೊಂದಿದೆ. ಕಡುಬಡವರು ಕೂಡ ಒಂದು ಸೂರಿನಡಿ ಜೀವನ ನಡೆಸಬೇಕು ಅನ್ನು ಧ್ಯೇಯ ಕೇಂದ್ರ ಸರಕಾರದ್ದು. ಅದಕ್ಕಾಗಿ ಕಡುಬಡವರಿಗೆ ಸರಕಾರವೇ ಮನೆ ಕಟ್ಟಿಸಿಕೊಡಲು ಪ್ಲಾನ್ ಮಾಡಿದೆ. ದೇಶದಾದ್ಯಂತ ಸುಮಾರು 1 ಕೋಟಿ ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿದೆ. 2016-17 ಮತ್ತು 2018-19ರ ಸಾಲಿನಲ್ಲಿ ಒಟ್ಟು 81975 ಕೋಟಿ ರೂಪಾಯಿಗಳನ್ನು ಇದಕ್ಕಾಗಿ ಮೀಸಲಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ 2022ರ ಹೊತ್ತಿಗೆ ದೇಶದ ಎಲ್ಲಾ ನಾಗರೀಕರು ಮನೆ ಹೊಂದಿರಬೇಕು ಅನ್ನುವ ಯೋಜನೆ ರೂಪಿಸಲಾಗಿದೆ. 2011ರ ಸೋಶಿಯೋ-ಎಕಾನಮಿಕ್ ಕಾಸ್ಟ್ ಸೆನ್ಸಸ್ ಪ್ರಕಾರ ಗ್ರಾಮೀಣ ಭಾರತದಲ್ಲಿ ಸುಮಾರು 4 ಕೋಟಿಗೂ ಅಧಿಕ ಜನರು ಸ್ವಂತಃ ಮನೆಯಿಂದ ವಂಚಿತರಾಗಿದ್ದಾರೆ ಅನ್ನುವ ಆಘಾತಕಾರಿ ಅಂಶ ಕೂಡ ಇತ್ತೀಚೆಗೆ ಲೋಕಸಭೆಯಲ್ಲಿ ಚರ್ಚೆಗೆ ಕಾರಣವಾಗಿತ್ತು. ಈ ಚರ್ಚೆಯ ಬಳಿಕ ಕೇಂದ್ರ ಸರಕಾರ ಬಡವರಿಗೆ ಸೂರು ಕಟ್ಟಿಸಿಕೊಡಲು ವಿಶೇಷ ಯೋಜನೆಯನ್ನು ರೂಪಿಸಿದೆ.

image


ಪ್ರೆಸ್ ಇನ್ಫಾರ್ಮೆಶನ್ ಬ್ಯೂರೋ(ಪಿಐಬಿ) ವರದಿ ಪ್ರಕಾರ 2022ರ ಹೊತ್ತಿಗೆ ಸುಮಾರು 2.95 ಕೋಟಿ ಮನೆಗಳನ್ನು ಕಟ್ಟುವ ಪ್ರಸ್ತಾವನೆ ಕೇಂದ್ರ ಸರಕಾರದಲ್ಲಿದೆ. ಈ ಗಾತ್ರ ಹೆಚ್ಚುಕಡಿಮೆ ಶೇಕಡಾ 10ರಷ್ಟು ವ್ಯತ್ಯಾಸ ಕಾಣಲಿದೆ. ಈ ಯೋಜನೆಗೆ ವಿವಿಧ ರಾಜ್ಯ ಸರಕಾರಗಳು 2011ರಲ್ಲಿ ರೂಪಿಸಿರುವ ಇಂದಿರಾ ಆವಾಸ್ ಯೋಜನೆಯ ಸಹಾಯ ಕೂಡ ಸಿಗಲಿದೆ.

ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ ಮೊದಲ ಹಂತ 2016-17ರಿಂದ 2018-19ರ ತನಕ ವಿಸ್ತರಣೆಯಾಗಿದೆ. ಈ ಅವಧಿಯಲ್ಲಿ ಸುಮಾರು 1 ಕೋಟಿ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. 2002ರ ತನಕ ಮುಂದಿನ ಹಂತದ ಯೋಜನೆಗಳ ಬಗ್ಗೆ ತಯಾರಿಗಳು ನಡೆಯಲಿದ್ದು 2011ರ ಸೋಶಿಯೋ-ಎಕಾನಮಿಕ್ ಕಾಸ್ಟ್ ಸೆನ್ಸಸ್ ಆಧಾರದಂತೆ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯೋಜನೆಗಳನ್ನು ಮತ್ತೆ ವಿಸ್ತರಿಸುವ ನಿರ್ಧಾರ ಮಾಡಲಾಗಿದೆ. ನ್ಯಾಷನಲ್ ಟೆಕ್ನಿಕಲ್ ಸಪೋರ್ಟ್ ಏಜೆನ್ಸಿ ಗ್ರಾಮೀಣ ಭಾಗದಲ್ಲಿ ಮನೆ ಕಟ್ಟುವ ವೇಳೆ ತಾಂತ್ರಿಕ ಅಂಶಗಳ ಬಗ್ಗೆ ಗಮನಹರಿಸಿ, ಗುರಿ ಮುಟ್ಟಲು ಶ್ರಮಿಸಲಿದೆ.

ಇದನ್ನು ಓದಿ: ಹುಬ್ಬಳ್ಳಿಯಿಂದ ದೆಹಲಿ ತನಕ- ಇದು ಬಣ್ಣದ ಕ್ಯಾನ್ವಾಸ್​​ನಲ್ಲಿ ಸಾಧನೆ ಕಥೆ

ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ ಇನ್ನೂ ಹಲವು ಉದ್ದೇಶಗಳನ್ನು ಇಟ್ಟುಕೊಂಡಿದೆ. ಸರಕಾರ ಮನೆಕಟ್ಟಲು ನಬಾರ್ಡ್​ನಿಂದ ಆರ್ಥಿಕ ಸಹಾಯವನ್ನು ಪಡೆದುಕೊಳ್ಳಲಾಗುವುದು. ಕಾಮಗಾರಿ ನಿಧಾನವಾಗದಂತೆ ತಡೆಯಲು ಕೂಡ ಹಲವು ಕ್ರಮಗಳನ್ನು ಕೂಡ ಕೈಗೊಳ್ಳಲಾಗಿದೆ. ಕಾಮಗಾರಿ ಮತ್ತು ಗುಣಮಟ್ಟವನ್ನು ಪರೀಕ್ಷೆ ಮಾಡಲು ವಿಶೇಷ ಏಜೆನ್ಸಿಗಳ ನೆರವು ಕೂಡ ಪಡೆದುಕೊಳ್ಳಲಾಗುವುದು.

ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿಯಲ್ಲಿ ನಿರ್ಮಾಣವಾಗುವ ಮನೆಗಳನ್ನು ಮಾನಿಟರ್ ಮಾಡಲು MIS ಆವಾಸ್ ಸಾಫ್ಟ್ ಅನ್ನುವ ಆನ್​ಲೈನ್ ಸ್ಕೀಮ್ ಅನ್ನು ಕೂಡ ರೂಪಿಸಲಾಗಿದೆ. ಇದಕ್ಕಾಗಿ ಆವಾಸ್ ಮೊಬೈಲ್ ಆ್ಯಪ್ ಕೂಡ ಡೆವಲಪ್ ಮಾಡಲಾಗುವುದು. ಈ ಮೂಲಕ ಮನೆ ನಿರ್ಮಾಣ ತಡವಾದ್ರೆ ಅದಕ್ಕೆ ಸೂಕ್ತ ವಿವರ ಕೂಡ ಗುತ್ತಿಗೆದಾರರು ನೀಡಬೇಕಾಗುತ್ತದೆ. ಮನೆ ನಿರ್ಮಾಣವಾದ ಮೇಲೆ ಅದರ ಕಾಮಗಾರಿ ಗುಣಮಟ್ಟ ಪರೀಕ್ಷಿಸಿ ಪ್ರಮಾಣ ಪತ್ರ ಕೂಡ ನೀಡಲಾಗುತ್ತದೆ. ಇದಕ್ಕೆ ಬೇಕಾದ ಎಲ್ಲಾ ಪೂರ್ವ ಸಿದ್ಧತಾ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಒಟ್ಟಿನಲ್ಲಿ ಭಾರತದ ಪ್ರತಿಯೊಬ್ಬ ನಾಗರೀಕ ಕೂಡ ಮನೆ ಹೊಂದುವಂತೆ ಮಾಡುವುದು ಕೇಂದ್ರ ಸರಕಾರದ ಮೊತ್ತ ಮೊದಲ ಉದ್ದೇಶವಾಗಿದೆ.

ಇದನ್ನು ಓದಿ:

1. ಮುಂಬೈನಿಂದ ಆಸ್ಕರ್​ವರೆಗೆ ಸನ್ನಿ ಪವಾರ್ – 8 ವರ್ಷದ ಪುಟಾಣಿಯ ಸಾಧನೆಯ ಹಾದಿ 

2. ಜಾನಪದ ಕಲೆಯ ರಾಯಭಾರಿ ದೀಪಶ್ರೀ...

3. ಆಟದಲ್ಲಿ ಸೂಪರ್- ವ್ಯಕ್ತಿತ್ವದಲ್ಲಿ ಚಿನ್ನ- ಇದು ರಾಹುಲ್ ದ್ರಾವಿಡ್ ನಿಜಜೀವನದ ಕಥೆ