ಆನ್‌ಲೈನ್ ಮಾರ್ಗದರ್ಶನದ ಪ್ರಾಕ್ಟಿಕಲ್ ಕೋಡಿಂಗ್: ಬಿಡುವಿನ ವೇಳೆಯಲ್ಲಿ ಕಲಿಸಲು ಮೆಂಟರ್‌ಗಳು ರೆಡಿ

ಟೀಮ್​ ವೈ.ಎಸ್​​.

ಆನ್‌ಲೈನ್ ಮಾರ್ಗದರ್ಶನದ ಪ್ರಾಕ್ಟಿಕಲ್ ಕೋಡಿಂಗ್: ಬಿಡುವಿನ ವೇಳೆಯಲ್ಲಿ ಕಲಿಸಲು ಮೆಂಟರ್‌ಗಳು ರೆಡಿ

Thursday October 01, 2015,

3 min Read

ಆ್ಯಂಡ್ರಾಯ್ಡ್ , ವಿಂಡೋಸ್ ಹಾಗೂ ವೆಬ್ ಅಪ್ಲಿಕೇಶನ್‌ಗಳ ಜೊತೆ ಗೇಮ್ಸ್​​​ಗಳನ್ನು ಅಭಿವೃದ್ಧಿಪಡಿಸುವ ಕೌಶಲ್ಯ ಇವತ್ತು ಅತೀ ಹೆಚ್ಚಿನ ಬೇಡಿಕೆ ಹೊಂದಿದೆ. ಮೊಬೈಲ್ ಹಾಗೂ ವೆಬ್ ಮೂಲದ ಸಂಸ್ಥೆಗಳು ಜಗತ್ತಿನಾದ್ಯಂತ ನಾಯಿಕೊಡೆಗಳಂತೆ ಹಬ್ಬತೊಡಗಿವೆ. ಈ ಡೆವಲಪರ್ಸ್ ಅಥವಾ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವ ಕೌಶಲ್ಯ ಹೊಂದಿರುವವರಿಗೆ ಮಹತ್ವದ ಬೇಡಿಕೆ ಕಂಡುಬಂದಿದ್ದರಲ್ಲಿ ಆಶ್ಚರ್ಯವೇನಿಲ್ಲ. ಈ ಕ್ಷೇತ್ರದಲ್ಲಿ ಕಂಡುಬರುತ್ತಿರುವ ಆಸಕ್ತಿಯ ಅಲೆಗಳು ಪ್ರಾಕ್ಟಿಕಲ್ ಕೋಡಿಂಗ್ ಅನ್ನುವ ಸಂಸ್ಥೆಯ ಹುಟ್ಟಿಗೆ ಕಾರಣ.

ಪ್ರಾಕ್ಟಿಕಲ್ ಕೋಡಿಂಗ್ ಸುಮಾರು 100ಕ್ಕೂ ಹೆಚ್ಚು ಗುಣಾತ್ಮಕ, ಕ್ರಿಯಾಶೀಲ, ತಂತ್ರಜ್ಞಾನದಲ್ಲಿ ಆಳವಾದ ಜ್ಞಾನ ಹೊಂದಿರುವ ಇಂಜಿನಿಯರ್ ಹಾಗೂ ಮಾರ್ಗದರ್ಶಕರುಗಳನ್ನು ಹೊಂದಿದ್ದು, ಈ ಆ್ಯಪ್‌ ಮೂಲಕ ಹವ್ಯಾಸಿ ಉಪನ್ಯಾಸಕರಾಗಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ.ಮಲ್ಟಿನ್ಯಾಶನಲ್ ಕಂಪನಿಗಳ ಅಥವಾ ಐಟಿ, ವೃತ್ತಿಪರ ಅನುಭವ ಹೊಂದಿರುವ ಕೌಶಲ್ಯ ಪ್ರವೀಣರನ್ನು ಕಲೆ ಹಾಕಿದೆ.

image


ಪ್ರಾಕ್ಟಿಕಲ್ ಕೋಡಿಂಗ್ ಉಗಮದ ಹಿಂದಿನ ಕಥೆ

ಬಸವರಾಜ್ ಹಂಪಳ್ಳಿ ಶೈಕ್ಷಣಿಕ ತಂತ್ರಜ್ಞಾನದ ಸಂಸ್ಥೆ ಕನ್ಹೇರಿ ಎಜು.ಕಾಮ್ (KanheriEdu.com) ಸಂಸ್ಥೆಯ ಸಂಸ್ಥಾಪಕರು ಹಾಗೂ ಆ್ಯಂಡ್ರಾಯ್ಡ್ ಆ್ಯಪ್‌ನ ಅಭಿವೃದ್ಧಿಕಾರರು. ಟ್ರಾಫ್‌ಲೈನ್ ಸಂಸ್ಥೆಗೆ ಕೆಲವು ಕಾಲ ಅವರು ಆ್ಯಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿಕೊಟ್ಟಿದ್ದರು. ಈ ಅವಧಿಯಲ್ಲಿ ಅವರಿಗೆ ಟೀಚಿಂಗ್ ಕೋಡಿಂಗ್ ಕ್ಷೇತ್ರದಲ್ಲಿ ಜನ ಅನುಭವಗಳಿಸಿಕೊಳ್ಳದೇ ಇದ್ದಿದ್ದು ಗಮನಕ್ಕೆ ಬಂದಿತ್ತು. ಹಾಗಾಗಿ ಅವರು ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಟೀಚಿಂಗ್ ಆ್ಯಂಡ್ರಾಯ್ಡ್ ಅಪ್ಲಿಕೇಶನ್ ಒಂದನ್ನು ಅಭಿವೃದ್ಧಿಪಡಿಸಲು ಆರಂಭಿಸಿದರು. ಬಳಿಕ ಈ ಟೀಚಿಂಗ್ ಕೋಡಿಂಗ್ ಅಪ್ಲಿಕೇಶನ್ ಅಭಿವೃದ್ಧಿಯೇ ಅವರ ಪೂರ್ಣಕಾಲಿಕ ಕೆಲಸವಾಯಿತು. ವೆಬ್, ವಿಂಡೋಸ್ ಮತ್ತು ಆ್ಯಂಡ್ರಾಯ್ಡ್ ಗೇಮ್ ಅಭಿವೃದ್ಧಿಪಡಿಸುವ ಪರಿಣಿತರನ್ನು ಹಾಗೂ ಸಮರ್ಪಕವಾಗಿ ವಿಷಯಗಳನ್ನು ಕಲಿಸಬಲ್ಲ ಮಾರ್ಗದರ್ಶಕನ್ನು ಕಲೆಹಾಕುವ ಹಿಂದೆ ಇದ್ದಿದ್ದು ಪ್ರಾಕ್ಟಿಕಲ್ ಕೋಡಿಂಗ್‌ನ ಸ್ಥಾಪನೆಯ ಉದ್ದೇಶ.

ಹುಬ್ಬಳ್ಳಿಯಲ್ಲಿ ಪ್ರಾರಂಭವಾದ ಕಂಪನಿಗೆ ಬೆನ್ನುಲುಬಾದವರು ಬಸವರಾಜ್ ಹಾಗೂ ಅವರ ತಂಗಿ ಸರೋಜ. ಇವರಿಬ್ಬರೂ ಕೋಡರ್ ಚಾನಲಿಂಗ್ ನಿರ್ವಹಿಸುವ ಮೂಲಕ ಪ್ರಾಕ್ಟಿಕಲ್ ಕೋಡಿಂಗ್‌ನ ಆರಂಭಿಕ ತಂತ್ರಜ್ಞಾನದ ಹಂತಗಳನ್ನು ಸ್ವತಃ ನಿರ್ವಹಿಸಿದರು.

ಸಂಸ್ಥೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ

ಪ್ರಾಕ್ಟಿಕಲ್ ಕೋಡಿಂಗ್‌ನಲ್ಲಿ ವ್ಯಾಖ್ಯಾನಿಸಿದ ಎಲ್ಲಾ ಅಂಶಗಳನ್ನು ಸೂಕ್ತವಾಗಿ ತರ್ಕಿಸಿ ಹಾಗೂ ಕ್ರಮಬದ್ಧವಾಗಿ ಜಾರಿಗೊಳಿಸಲಾಗಿದೆ. ಇಲ್ಲಿನ ಮಾರ್ಗದರ್ಶಕರು ಅಥವಾ ಉಪನ್ಯಾಸಕರು ಒಂದು ನಿಗದಿತ ಸಮಯದಲ್ಲಿ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ಕಲಿಯುವವರು ಹಾಗೂ ಕಲಿಸುವವರಿಗೆ ನಿರ್ಧರಿತ ಸಮಯ ಮೊದಲೇ ತೀರ್ಮಾನಿಸಲು ಅನುಕೂಲವಾಗುತ್ತದೆ. ಬಹುತೇಕ ತರಗತಿಗಳು ವಾರಾಂತ್ಯದಲ್ಲಿ ನಡೆಯುತ್ತವೆ ಅಥವಾ ಗೂಗಲ್‌ನ ಹ್ಯಾಂಗ್‌ಔಟ್ ಬಳಸಿ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಉಪನ್ಯಾಸಕರಿಗೆ ಅವರ ಬೋಧನೆಗೆ ತಕ್ಕಂತೆ 10ರೊಳಗೆ ರೇಟಿಂಗ್ ನೀಡುವ ಸೌಕರ್ಯವಿದೆ. ಇಲ್ಲಿ ಮಾರ್ಗದರ್ಶಕರು ಒಂದು ನಿರ್ಧರಿತ ಸಮಯದಲ್ಲಿ ಗರಿಷ್ಠ 3 ವಿದ್ಯಾರ್ಥಿಗಳಿಗೆ ಕಲಿಸಬಹುದು. ಬಸವರಾಜ್‌ ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಅವರ ಎಲ್ಲಾ ಮಾರ್ಗದರ್ಶಕರು 9ಕ್ಕಿಂತ ಹೆಚ್ಚಿನ ರೇಟಿಂಗ್ ಗಳಿಸಿದ್ದಾರಂತೆ.

ಈ ಸಂಸ್ಥೆಯಲ್ಲಿ ನೇಮಿಸಲ್ಪಡುವ ಮಾರ್ಗದರ್ಶಕರಿಗೆ ಉತ್ತಮ ಸಾಮಾಜಿಕ ಘನತೆ ಇರಬೇಕು. ನೇಮಕಕ್ಕೆ ಮುಂಚೆ ಅವರ ಸಂಪೂರ್ಣ ಸಂದರ್ಶನ ನಡೆಸಿ ಅವರು ಯೋಗ್ಯರು ಅನ್ನುವ ವಿಶ್ವಾಸ ದೊರೆತ ನಂತರವೇ ಅವರನ್ನು ಉಪನ್ಯಾಸಕರಾಗಿ ನೇಮಿಸಲಾಗುತ್ತದೆ. ಬಳಿಕ ಪ್ರತಿ ತರಗತಿ ಅಥವಾ ಪ್ರತಿ ವಿದ್ಯಾರ್ಥಿ ಪಾವತಿಸುವ ಶುಲ್ಕವನ್ನು ಸಮಾನವಾಗಿ ಹಂಚಿಕೊಳ್ಳಲಾಗುತ್ತದೆ. ಪ್ರಾಕ್ಟಿಕಲ್ ಕೋಡಿಂಗ್ ವ್ಯಾಪ್ತಿಯಲ್ಲಿ ಗುಣಾತ್ಮಕ ಇಂಜಿನಿಯರ್‌ಗಳು, ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಕಲಿಕೆ ಅಥವಾ ಮಾರ್ಗದರ್ಶನದಲ್ಲಿ ತೊಡಗಿದ್ದಾರೆ. ಈ ಸಂಸ್ಥೆ ಎಲ್ಲಾ ವೃತ್ತಿಪರ ವಿಷಯಗಳನ್ನು ಸಮರ್ಪಕವಾಗಿ ಕಲಿಸುವುದಾಗಿ ಹೇಳಿಕೊಂಡಿದೆ. ಕಾಮನ್ ಫ್ಲೋರ್.ಕಾಮ್‌ನ ಸಂಸ್ಥಾಪಕರಾದ ಲಲಿತ್ ಮಂಗಲ್‌ರನ್ನು ಸಂಸ್ಥೆ ತನ್ನ ಸಲಹೆಗಾರರನ್ನಾಗಿ ನೇಮಿಸಿಕೊಂಡಿದೆ.

ಬಸವರಾಜ್ ತಮ್ಮ ಈ ಆಲೋಚನೆ ಸಾಕಷ್ಟು ಸಾಮರ್ಥ್ಯ ಹೊಂದಿದೆ ಎಂದು ನಂಬಿಕೊಂಡಿದ್ದಾರೆ. ಅದರಲ್ಲೂ ಕೋಡ್ ಅಕಾಡೆಮಿ ಈಗಾಗಲೇ ಅಮೆರಿಕಾದಲ್ಲಿ 24 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಅಧ್ಯಯನವೊಂದರ ಪ್ರಕಾರ ಸುಮಾರು 66 ಪ್ರತಿಶತ ಕ್ವಾಲಿಟಿ ಇಂಜಿನಿಯರ್‌ಗಳು ಈ ಕೋಡಿಂಗ್ ವ್ಯವಸ್ಥೆಯ ಮೂಲಕ ತಮ್ಮ ಆದಾಯದ 2 ರಿಂದ 3ರಷ್ಟು ಹೆಚ್ಚು ಗಳಿಸುತ್ತಿದ್ದಾರೆ. ಹಾಗಾಗಿ ಮಾರುಕಟ್ಟೆಯಲ್ಲಿ ಕೋಡಿಂಗ್ ಕೌಶಲ್ಯ ಸಾಕಷ್ಟು ಜನಪ್ರಿಯಗೊಳ್ಳತೊಡಗಿದೆ. ವೆಬ್ ಇಂಜಿನಿಯರ್‌ಗಳು ಆ್ಯಪ್ ಸ್ಟೋರ್‌ನಲ್ಲಿ ನಿರಂತರವಾಗಿ ಕೋಡಿಂಗ್ ಕುರಿತಾದ ಅಭಿವೃದ್ಧಿ ಕೆಲಸಗಳಲ್ಲಿ ನಿರತರಾಗಿದ್ದಾರೆ.

ಭವಿಷ್ಯ ಏನು..?

ಪ್ರಾಕ್ಟಿಕಲ್ ಕೋಡಿಂಗ್ ಮುಂಚೂಣಿಗೆ ಬರುವಲ್ಲಿ ಈಗ ಸಾಕಷ್ಟು ಅವಕಾಶಗಳು ತೆರೆದುಕೊಂಡಿವೆ. ಇದೇ ವೇಳೆ ಮಾರ್ಗದರ್ಶಕರ ಆಧಾರದಲ್ಲಿ ಕಲಿಕೆಯ ಮಾದರಿ ಬಹಳಷ್ಟು ವಿಷಯಗಳಲ್ಲಿ ತನ್ನ ಪ್ರಯೋಗ ನಡೆಸುತ್ತಿದೆ. ಅದರಲ್ಲೂ ಯೋಗ, ಸಂಗೀತದಂತಹ ಸಂಕೀರ್ಣ ವಿಷಯಗಳು ಪ್ರಾಕ್ಟಿಕಲ್ ಕೋಡಿಂಗ್‌ನ ಮೆಂಟರ್ ಲರ್ನಿಂಗ್ ಅಡಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಸಂಸ್ಥೆ ಇಂಡೋನೇಷಿಯಾದಂತಹ ಐಟಿ ಬೂಮ್ ಸಾಧಿಸಿರುವ ರಾಷ್ಟ್ರಗಳಲ್ಲೂ ತನ್ನ ವಿಸ್ತರಣೆಗೆ ಮುಂದಾಗಿದೆ. ಪ್ರಸ್ತುತ ಇರುವ ಕೋಡಿಂಗ್ ಮಾದರಿಯನ್ನು ಬಳಸಿ ಸರಿಯಾದ ಮಾರ್ಗದರ್ಶಕರನ್ನು ಅರಸುವುದು ತನ್ಮೂಲಕ ಗುಣಾತ್ಮಕ ಕಲಿಕೆ ನೀಡುವುದು ಸಂಸ್ಥೆಯ ಮುಂದಿರುವ ಸವಾಲು. ಬಸವರಾಜ್ ಮತ್ತು ಅವರ ತಂಡ ಗುಣಾತ್ಮಕ ಹಾಗೂ ಯೋಗ್ಯ ಮಾರ್ಗದರ್ಶಕರನ್ನು ತಮ್ಮೊಂದಿಗಿಟ್ಟುಕೊಂಡು ಮಾರುಕಟ್ಟೆಯಲ್ಲಿ ಕಲಿಯಲು ಆಸಕ್ತರಾದ ವಿದ್ಯಾರ್ಥಿಗಳನ್ನು ಅರಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ಬಸವರಾಜ್ ಈ ಬಗ್ಗೆ ಮಾತನಾಡುತ್ತಾ ತಮ್ಮ ಪ್ರತಿಸ್ಪರ್ಧಿಗಳಾದ ಎಕ್ಯಾಡ್‌ಗಿಲ್ಡ್‌ ಹಾಗೂ ಎಜು-ರೇಖಾದಂತಹ ಸಂಸ್ಥೆಗಳು ಇದೇ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿರುವುದನ್ನು ತಿಳಿಸಿದ್ದಾರೆ. ಆದರೂ ಈ ಕ್ಷೇತ್ರ ಸದ್ಯ ಆರಂಭಿಕ ಹಂತದಲ್ಲಿದ್ದು ಮುಂಬರುವ ದಿನಗಳಲ್ಲಿ ಬಹಳಷ್ಟು ಸಂಸ್ಥೆಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ ಹಾಗೂ ಮಾರ್ಗದರ್ಶಕರ ಆಧಾರದಲ್ಲಿ ಕಲಿಕೆ ಮಾದರಿ ಮತ್ತಷ್ಟು ಜನಪ್ರಿಯಗೊಳ್ಳುವ ಲಕ್ಷಣವಿದೆ ಎಂದಿದ್ದಾರೆ. ಇವೆಲ್ಲಾ ಸಂಗತಿಗಳ ಮಧ್ಯೆ ಅತ್ಯುತ್ತಮ ಗುಣಮಟ್ಟದ ಮಾರ್ಗದರ್ಶನ ನೀಡಿದರೆ ಭವಿಷ್ಯದಲ್ಲಿ ಸಂಸ್ಥೆಯ ಗ್ರಾಫಿಕಲ್ ಮಟ್ಟ ಉತ್ತಮವಾಗಿರುತ್ತದೆ ಎನ್ನುವುದು ಬಸವರಾಜ್‌ರ ನಿಲುವು.