ಸ್ಮಾರ್ಟ್​ ಜನ ಮತ್ತಷ್ಟು ಸ್ಮಾರ್ಟ್​ ಆಗಲಿ..ಫೋನ್​ ಕಳೆದು ಹೋದ್ರೂ ಚಿಂತೆ ಬಿಟ್ಟುಬಿಡಿ..!

ಟೀಮ್​ ವೈ.ಎಸ್​.ಕನ್ನಡ

ಸ್ಮಾರ್ಟ್​ ಜನ ಮತ್ತಷ್ಟು ಸ್ಮಾರ್ಟ್​ ಆಗಲಿ..ಫೋನ್​ ಕಳೆದು ಹೋದ್ರೂ ಚಿಂತೆ ಬಿಟ್ಟುಬಿಡಿ..!

Tuesday June 07, 2016,

2 min Read

ಸ್ಮಾರ್ಟ್​ಫೋನ್ ಇಟ್ಟುಕೊಳ್ಳುವುದು ಪ್ರತಿಷ್ಠೆಯ ಸಂಕೇತ. ಇಂದು ಎಲ್ಲರೂ ಸ್ಮಾರ್ಟ್ ಆಗಿದ್ದಾರೆ. ಬೆಲೆಬಾಳುವ, ಕಾಸ್ಟ್ಲೀ ಸ್ಮಾರ್ಟ್​ಫೋನ್​ಗಳನ್ನು ಅನೇಕ ಬಾರಿ ಎಲ್ಲೋ ಮರೆತು ನಾವೇ ಬಿಟ್ಟು ಬಿಡುತ್ತೇವೆ. ನಮ್ಮ ಬೇಜಾವ್ದಾರಿತನದ ಲಾಭ ಪಡೆದು, ದುಷ್ಕರ್ಮಿಗಳು ಕದ್ದು ಬಿಡ್ತಾರೆ ಇಲ್ಲ. ಎಷ್ಟೇ ಹುಡುಕಿದ್ರೂ ಸ್ಮಾರ್ಟ್​ಫೋನ್​​ಗಳು ಕೈಗೆ ಸಿಗೋದೇ ಇಲ್ಲ. ಇನ್ನು ಕೆಲವೊಮ್ಮೆ ಎಲ್ಲೇ ಫೋನ್​ ಇಟ್ಟು ಮತ್ತೆಲ್ಲೋ ಹುಡುಕಾಡುತ್ತೇವೆ. ಆದ್ರೆ ಶ್ರಮ ಮಾತ್ರ ವ್ಯರ್ಥ. ಫೋನ್​ ಸಿಗುವುದೇ ಇಲ್ಲ. ಇಂತಹ ಹಲವು ಸಮಸ್ಯೆಗಳು ಎದುರಾದಾಗ, ಕಳೆದುಹೋದ ಮೊಬೈಲ್ ಹುಡುಕುವ ವಿಧಾನವನ್ನು ಗೂಗಲ್ ಇನ್ನೂ ಸರಳಗೊಳಿಸಿದೆ.

ಕಳೆದು ಹೋದ ಮೊಬೈಲ್ ಹುಡುಕಲು ಗೂಗಲ್ ನೀಡಿರುವ ಹೊಸ ಆಯ್ಕೆ ಮೂಲಕ ನಿಮ್ಮ ಮೊಬೈಲ್ ಎಲ್ಲಿದೆ ಎಂದು ನೋಡಬಹುದು. ಕಳ್ಳತನವಾಗಿದೆ ಎಂದು ತಿಳಿದಲ್ಲಿ ನಿಮ್ಮ ಗೂಗಲ್ ಖಾತೆಯನ್ನು ಆ ಮೂಬೈಲ್​ನಿಂದ ರಿಮೂವ್ ಮಾಡಬಹುದು. ಸದ್ಯ ಗೂಗಲ್ ಪರಿಚಯಿಸಿರುವ ಹೊಸ ಫೀಚರ್​ನಿಂದ, ಕಳೆದುಕೊಂಡವರಿಗೆ ತಮ್ಮ ವೈಯಕ್ತಿಕ ವಿವರವನ್ನು ಸೇಫ್ ಆಗಿಸಬಹುದಾಗಿದೆ.

ಇದನ್ನು ಓದಿ: ಸ್ಮಾರ್ಟ್​ಫೋನ್​ ಕಾಲಕ್ಕೂ ಅಂತ್ಯಬಂತು.. ಇನ್ನೇನಿದ್ರೂ ರೋಬೋ ಫೋನ್​ನದ್ದೇ ಕಾರುಬಾರು..!

ಗೂಗಲ್​ನಲ್ಲಿ ಸರಳವಾಗಿ 'I lost my phone' ಎಂದು ಸರ್ಚ್ ಮಾಡುವ ಮೂಲಕ ಕಳೆದುಹೋದ ಮೊಬೈಲ್ ಅನ್ನು ಪತ್ತೆಹಚ್ಚಬಹುದಾಗಿದೆ. ಗೂಗಲ್, ಕಳೆದುಕೊಂಡ ಡಿವೈಸ್​ಗಳನ್ನು ಜನರು ಪತ್ತೆಹಚ್ಚಲು ಪರಿಚಯಿಸಿರುವ ಹೊಸ ಟೂಲ್ ಇದಾಗಿದ್ದು. ಹಲವು ರೀತಿಯಲ್ಲಿ ಇದು ಉಪಯೋಗಕರವಾಗಿದೆ. 'I lost my phone' ಎಂದು ಸರ್ಚ್ ಮಾಡಿದರೆ, ಗೂಗಲ್ ನಿಮ್ಮ ಡಿವೈಸ್​​ಗಳ ಬಗ್ಗೆ ಹೊಂದಿರುವ ದಾಖಲೆಯ ಪ್ರಕಾರ ನಿಮ್ಮ ಮೊಬೈಲ್​ನ ವಿಶೇಷ ಪೇಜ್ ಅನ್ನು ನೀಡುತ್ತದೆ. ಆ ಪೇಜಿನಲ್ಲಿ ನೀವು ಕಳೆದುಕೊಂಡಿರುವ ಡಿವೈಸ್ ಮೇಲೆ ಕ್ಲಿಕ್ ಮಾಡಬೇಕು. ಗೂಗಲ್ ನೀಡಿದ ಪೇಜ್​ನಿಂದ ಕೆಲವು ಸ್ಟೆಪ್​ಗಳನ್ನು ಪಾಲಿಸಬೇಕು.

ಆದರೆ ಕೇವಲ ಕೆಲವೆ ಕೆಲವು ಆ್ಯಂಡ್ರಾಯ್ಡ್ ಹ್ಯಾಂಡ್​ಸೆಟ್​ಗಳು ಈ ಫಿಚರ್ಸ್​ನ್ನು ಹೊಂದಿವೆ. ನಿಮ್ಮ ಹ್ಯಾಂಡ್​ಸೆಟ್ ಐಫೋನ್ ಆಗಿದ್ದಲ್ಲಿ ಕಳೆದು ಹೋದ ಐಫೋನ್ ಹುಡುಕಲು iCloud'ನಲ್ಲಿ 'Find My iPhone' ಎಂದು ಟೈಪ್ ಮಾಡಬೇಕು. ಆ್ಯಪಲ್, ಐಫೋನ್ ಹುಡುಕಲು 'iCloud'ನಲ್ಲಿ 'Find My iPhone' ಎಂಬ ಫೀಚರ್ ಲಭ್ಯವಿದೆ. ಇದು ಸಹ ಗೂಗಲ್ ಟೂಲ್ ರೀತಿಯೇ ಇದೆ. ಐಫೋನ್ ಅನ್ನು ಈ ಫೀಚರ್ ಮ್ಯಾಪ್​ನಲ್ಲಿ ಡಿಸ್ಪ್ಲೇ ಮಾಡಲಿದ್ದು, ಬಳಕೆದಾರನಿಗೆ 'tell it to play a sound' 'lost mode' ಆಯ್ಕೆಗಳನ್ನು ನೀಡುತ್ತದೆ. ಇವುಗಳಿಂದ ಕಳೆದು ಹೋದ ಐಫೋನ್ ಯಾರಿಗಾದರೂ ಸಿಕ್ಕರೆ ಅದನ್ನು ಎಲ್ಲಿ ವಾಪಸ್ಸು ತಲುಪಿಸಬೇಕು ಎಂದು ಐಫೋನ್ ತಿಳಿಸುತ್ತದೆ.

ಗೂಗಲ್ ಸೈಟ್ ತನ್ನ ಖಾತೆ ಬಳಕೆದಾರರಿಗೆ 'account hub' ಎಂಬ ಸೇವೆಯನ್ನು ಪ್ರಾರಂಭಿಸಿದ್ದು, ಬಳಕೆದಾರರ ಖಾತೆಯಲ್ಲಿನ ಡೇಟಾವನ್ನು ವ್ಯಕ್ತಿಗೆ ತೋರಿಸಲಿದೆ. ಆದ್ರೆ ಖಾತೆ ಬಳಕೆದಾರರು 'OK Google, show me my account', ಎಂದು ಹೇಳಬೇಕು. ನಂತರ ಗೂಗಲ್ ಖಾತೆಯಲ್ಲಿನ ಮಾಹಿತಿಯನ್ನು ಪ್ರದರ್ಶನ ಮಾಡುತ್ತದೆ. ಒಟ್ಟಿನಲ್ಲಿ ಹಲವು ಸೇವೆ ನೀಡುತ್ತಿರುವ ಗೂಗಲ್, ನಿಮ್ಮ ಸ್ಮಾರ್ಟ್​ಫೋನ್ ಮತ್ತು ಡೇಟಾ ರಕ್ಷಿಸಲು ವಿವಿಧ ರೀತಿಯಲ್ಲಿ ಭದ್ರತೆ ನೀಡುತ್ತಿದೆ.

ಇದನ್ನು ಓದಿ:

1. 2ನೇ ಅಂತರಾಷ್ಟ್ರೀಯ ಯೋಗ ದಿನಕ್ಕೆ ಸಿದ್ಧತೆ...

2. ಹೈ-ಫೈ ಸ್ಪಾದಲ್ಲಿ ಮೆರುಗಲಿದೆ ಕೈ ಕಾಲುಗಳು

3. ಆಹಾರೋದ್ಯಮ ಕ್ಷೇತ್ರದಲ್ಲಿ ಹೊಸ ಅಧ್ಯಯನಕ್ಕೆ ನಾಂದಿ ಹಾಡಿದ ರಾಜು ಭೂಪತಿ