ನಿಮ್ಮ ಸ್ಟಾರ್ಟಪ್ ಬೆಳವಣಿಗೆ ಅಳೆಯುವ 8 ಪ್ರಮುಖ ಅಸ್ತ್ರಗಳು.. 

ಟೀಮ್​ ವೈ.ಎಸ್​. ಕನ್ನಡ

1

ಬೆಳವಣಿಗೆಯ ಹ್ಯಾಕಿಂಗ್ ಅನ್ನೋ ಪರಿಕಲ್ಪನೆ ಕಳೆದ ಕೆಲವು ವರ್ಷಗಳಿಂದ ಪ್ರಚಲಿತದಲ್ಲಿದೆ. ಇದು ಕಲ್ಪನೆಗೆ ಮೂಲವಾಗಿರುವ ವೇಗವಾದ ಚಿಂತನ ಶಾಲೆ. ಸ್ಟಾರ್ಟ್‍ಅಪ್‍ಗಳು ಮತ್ತು ಚಿಂತಕರು ಇದನ್ನು ಭವಿಷ್ಯದ ದೊಡ್ಡ ವಿಷಯವೆಂದು ಬಣ್ಣಿಸುತ್ತಾರೆ. ಸರಳ ಅರ್ಥದಲ್ಲಿ ಹೇಳಬೇಕೆಂದರೆ ಬೆಳವಣಿಗೆ ಹ್ಯಾಕಿಂಗ್ ಅನ್ನೋದು ಮೊದಲು ಮನಸ್ಥಿತಿ, ನಂತರ ತಂತ್ರ. ಇದು ಆದಾಯ ಹೆಚ್ಚಿಸಲು, ವಹಿವಾಟು ವಿಸ್ತರಿಸಲು ವಿಶ್ಲೇಷಣಾತ್ಮಕ ಚಿಂತನೆ, ಸೃಜನಶೀಲತೆಯನ್ನು ಬಳಸಿಕೊಳ್ಳುತ್ತದೆ. ಎಲ್ಲವನ್ನೂ ಪರೀಕ್ಷಿಸುವ ಮಾರ್ಗ ಹಾಗೂ ಅಳೆಯುವಿಕೆಯ ಅನುಷ್ಠಾನದ ವಿಧಾನವೂ ಹೌದು.

ಕಳೆದ ಕೆಲ ವರ್ಷಗಳಿಂದ ಸ್ಟಾರ್ಟಪ್‍ಗಳಿಗಾಗಿ ಸೃಷ್ಟಿಸಿದ ಹ್ಯಾಕಿಂಗ್ ಅಸ್ತ್ರಗಳು ಬೆಳವಣಿಗೆ ಹೊಂದುತ್ತಿವೆ. ಬಳಕೆದಾರರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಹೆಚ್ಹೆಚ್ಚು ಗ್ರಾಹಕರನ್ನು ಸಂಪಾದಿಸಲು ಇದು ನೆರವಾಗುತ್ತದೆ. ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಬಳಕೆದಾರರ ವರ್ತನೆಯನ್ನು ನಿಮ್ಮ ವೇದಿಕೆ ಮತ್ತು ಉಳಿದೆಡೆ ಅರ್ಥಮಾಡಿಕೊಳ್ಳಲು ಇದು ನೆರವಾಗುತ್ತದೆ. ಸ್ಟಾರ್ಟಪ್‍ಗಳು ಹಾಗೂ ಉದ್ಯಮಗಳು ಬಳಸಿಕೊಳ್ಳುತ್ತಿರುವ ಇಂತಹ ಕೆಲ ಅಸ್ತ್ರಗಳ ಪ್ರಮುಖ ಉದ್ದೇಶ ಅಂದ್ರೆ, ಮಾಹಿತಿ ಚಾಲಿತ ಮತ್ತು ಸಾಹಸೋದ್ಯಮಗಳ ಸ್ಕೇಲಿಂಗ್.

1. ಗೂಗಲ್ ಅನಾಲಿಟಿಕ್ಸ್ : ಈ ಅಸ್ತ್ರವನ್ನು ನೀವು ಬಳಸದೇ ಇದ್ರೆ ಮೊದಲು ಅದನ್ನು ಇನ್‍ಸ್ಟಾಲ್ ಮಾಡಿಕೊಳ್ಳಿ. ಜಗತ್ತಿನಾದ್ಯಂತ 18 ಮಿಲಿಯನ್ ಉದ್ಯಮಗಳು ಗೂಗಲ್ ಅನಾಲಿಟಿಕ್ಸ್ ಅನ್ನು ಬಳಸಿಕೊಳ್ಳುತ್ತಿವೆ. ವಿಶೇಷ ಅಂದ್ರೆ ಇದು ಸಂಪೂರ್ಣ ಉಚಿತ.

ನಿಮಗೆ ನೆರವಾಗುವ ಅಂಶಗಳು...

* ಬಳಕೆದಾರರ ಲಿಂಗ, ವಯಸ್ಸು, ಆಸಕ್ತಿ ಮತ್ತು ಸ್ಥಳವನ್ನೊಳಗೊಂಡ ಜನಸಂಖ್ಯಾ ಮಾಹಿತಿ.

* ವೆಬ್‍ಸೈಟ್‍ನಲ್ಲಿ ಬಳಕೆದಾರರ ಮಾಹಿತಿ, ಹೊಸ ಮತ್ತು ಹಿಂದಿರುಗಿದ ವಿಸಿಟರ್‍ಗಳ ಸಂಖ್ಯೆ, ನಿರ್ಗಮನ ದರ, ವೆಬ್‍ಸೈಟ್‍ನಲ್ಲಿ ಕಳೆದ ಸಮಯ, ವಿಸಿಟ್ ಮಾಡಿದ ಪೇಜ್, ಸೈಟ್‍ನಿಂದ ನಿರ್ಗಮಿಸಿದ ಪೇಜ್.

* ವಿವಿಧ ಮಾರುಕಟ್ಟೆ ವಾಹಕಗಳ ಪ್ರದರ್ಶನ ಮತ್ತು ಅತಿ ಹೆಚ್ಚು ದಟ್ಟಣೆ ಉಂಟುವಾಡುವ ಚಾನೆಲ್‍ಗಳ ವಿವರ.

* ವಿವಿಧ ಡಿವೈಸ್‍ಗಳಿಂದ ದಟ್ಟಣೆ : ಡೆಸ್ಕ್‍ಟಾಪ್, ಐಫೋನ್, ಐಪಾಡ್, ಆ್ಯಂಡ್ರಾಯ್ಡ್

* ಖರೀದಿಸಿದ ವಸ್ತುಗಳು, ಸೈನ್‍ಅಪ್, ಡೆಮೊ, ಅಂತಿಮವಾಗಿ ಗುರಿ ತಲುಪಿದ ವಿಸಿಟರ್‍ಗಳ ಸಂಖ್ಯೆ.

`ಜಿಎ'ಯನ್ನು ಕಾರ್ಯಗತಗೊಳಿಸುವುದು ಹೇಗೆ? ಇಲ್ಲಿದೆ ದಾಖಲೆ:

2. ಮಿಕ್ಸ್‍ಪ್ಯಾನಲ್: ಮಿಕ್ಸ್ ಪ್ಯಾನಲ್ ವೈಯಕ್ತಿಕ ಬಳಕೆದಾರರ ವರ್ತನೆ ಮತ್ತು ನಿಮ್ಮ ವೇದಿಕೆಯಲ್ಲಿ ಅವರ ಕ್ರಮಗಳನ್ನು ಟ್ರ್ಯಾಕ್ ಮಾಡಬಲ್ಲ ವಿಶ್ಲೇಷಣಾತ್ಮಕ ಸಾಧನ. ಮಿಕ್ಸ್‍ಪ್ಯಾನಲ್ ಅನ್ನು ಬಳಸಿಕೊಂಡು ನಿಮ್ಮ ವೇದಿಕೆಯಲ್ಲಿ ಯಾರು ಇರಬೇಕು ಎಂಬುದನ್ನು ನಿರ್ಧರಿಸಬಹುದು. ವಿಶ್ಲೇಷಣೆ, ವೈಯಕ್ತಿಕ ಚಟುವಟಿಕೆ ವಿಶ್ಲೇಷಣೆ, ಸಮಂಜಸತೆ ವಿಶ್ಲೇಷಣೆ, ನೋಟಿಫಿಕೇಷನ್ ಕಳುಹಿಸುವುದು ಮತ್ತು ಎ/ಬಿ ಪರೀಕ್ಷೆ ಮಿಕ್ಸ್‍ಪ್ಯಾನಲ್‍ನ ಪ್ರಮುಖ ಲಕ್ಷಣ. ಮೊದಲ 1000 ಬಳಕೆದಾರರಿಗೆ ಇದು ಉಚಿತ. ಮೊದಲು ನೀವು ಕ್ಯಾಪ್ಚರ್ ಮಾಡಿದ 25,000 ಡೇಟಾ ಪಾಯಿಂಟ್‍ಗಳು ಕೂಡ ಉಚಿತ.

3. ಇನ್‍ಸ್ಪೆಕ್ಟ್‍ಲೆಟ್: ಇನ್‍ಸ್ಪೆಕ್ಟ್‍ಲೆಟ್, ವೈಯಕ್ತಿಕ ಬಳಕೆದಾರರು ನಿಮ್ಮ ವೆಬ್‍ಸೈಟ್‍ನ್ನು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡುವ ಅತ್ಯಾಧುನಿಕ ಅಸ್ತ್ರ. ಬಳಕೆದಾರರು ನಿಮ್ಮ ವೆಬ್‍ಸೈಟನ್ನು ಹೇಗೆ ಬಳಸುತ್ತಿದ್ದಾರೆಂಬ ವಿಡಿಯೋಗಳನ್ನು ಇದು ದಾಖಲಿಸುತ್ತದೆ. ಅವರು ಏನು ಮಾಡುತ್ತಾರೆ ಅನ್ನೋದನ್ನೆಲ್ಲ ವೀಕ್ಷಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಮೌಸ್ ಚಲನೆ, ಸ್ಕ್ರೊಲ್ಸ್, ಕ್ಲಿಕ್ಸ್ ಮತ್ತು ಕೀ ಪ್ರೆಸ್‍ಗಳು. ಬಳಕೆದಾರರು ಯಾವುದನ್ನು ಕ್ಲಿಕ್ ಮಾಡುತ್ತಿದ್ದಾರೆ ಎಂಬುದರ ನಕ್ಷೆ ಹಾಗೂ ಕಣ್ಣುಗಳ ಚಲನೆಯ ಮಾಹಿತಿಯನ್ನೂ ನೀಡುತ್ತದೆ. ನೀವು ಕೇವಲ ಒಂದು ವೆಬ್‍ಸೈಟ್‍ನ್ನು ಬಳಸುತ್ತಿದ್ದರೆ ಮೊದಲ ನೂರು ದಾಖಲೆಗಳನ್ನು ಉಚಿತವಾಗಿ ಪಡೆಯಬಹುದು.

4. ಪೀಕ್: ನಿಮ್ಮ ವೆಬ್‍ಸೈಟ್ ಅನ್ನು ಮೊದಲ ಬಾರಿಗೆ ನೋಡಿದಾಗ ಜನರ ಮನಸ್ಸಿನಲ್ಲಿ ಏನು ಮೂಡಿದೆ ಅನ್ನೋದನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದೇ ಇರುತ್ತೆ. ಆಗ ಠಿeeಞ.useಡಿಣesಣiಟಿg.ಛಿom ಅನ್ನು ನೋಡಿ. ನೀವು ಅವರಿಗೆ ನಿಮ್ ವೆಬ್‍ಸೈಟ್‍ನ ಯುಆರ್‍ಎಲ್ ಅನ್ನು ಕಳುಹಿಸಬಹುದು, ಗಂಟೆಗಳೊಳಗೆ ನಿಜವಾದ ವ್ಯಕ್ತಿ ನಿಮ್ಮೊಂದಿಗೆ ಇರುತ್ತಾರೆ. ನಿಮ್ ಸೈಟ್ ಅಥವಾ ಆ್ಯಪ್ ಬಳಸಿಕೊಂಡು ಆ ವ್ಯಕ್ತಿಯ 5 ನಿಮಿಷದ ವಿಡಿಯೋವನ್ನು ದಾಖಲಿಸಬಹುದು. ಇದು ಕೂಡ ಸಂಪೂರ್ಣ ಉಚಿತ.

5. ಗೂಗಲ್ ಕೀವರ್ಡ್ ಪ್ಯಾನಲ್: ನಿಮ್ಮ ಸೈಟ್‍ನ್ನು ಉತ್ತಮಗೊಳಿಸುವ ಸಂದರ್ಭದಲ್ಲಿ ಕಂಟೆಂಟ್ ಮಾರ್ಕೆಟಿಂಗ್ ಕ್ಯಾಂಪೇನ್ ಮತ್ತು ಕಂಟೆಂಟ್ ಮಾರ್ಕೆಟಿಂಗ್ ಉಪಕ್ರಮಕ್ಕಾಗಿ ನಿಮ್ಮ ಹುಡುಕಾಟದ ಎಂಜಿನ್‍ನಲ್ಲಿ ಯಾವ ಕೀವರ್ಡ್‍ಗಳನ್ನು ಬಳಸಬೇಕು ಎಂಬುದನ್ನು ಗೂಗಲ್ ಕೀವರ್ಡ್ ಪ್ಲಾನರ್ ಪತ್ತೆ ಮಾಡುತ್ತದೆ. ಪ್ಲಾನರ್‍ನೊಳಗೆ ನೀವು ಕೆಲ ಕೀವರ್ಡ್‍ಗಳನ್ನು ಟೈಪ್ ಮಾಡಬಹುದು. ಐತಿಹಾಸಿಕ ಅಂಕಿಅಂಶಗಳನ್ನು ಅದು ನೀಡುತ್ತದೆ, ಕೀವರ್ಡ್‍ಗಳು ಯಾವ ರೀತಿ ಪ್ರದರ್ಶನ ನೀಡಬಹುದು ಎಂಬುದನ್ನೂ ತಿಳಿಸುತ್ತದೆ. ಆ ಕೀ ವರ್ಡ್‍ಗಳ ಮೇಲೆ ನೀವು ಹರಾಜಿನಲ್ಲಿ ಭಾಗವಹಿಸಬಹುದು. ಆ್ಯಡ್‍ವರ್ಡ್‍ಗಳ ಅಕೌಂಡ್ ಸೃಷ್ಟಿಸಿ, ಕೀವರ್ಡ್ ಪ್ಲಾನರ್ ಅನ್ನು ಬಳಸಲು ಆರಂಭಿಸಿ ಯಾಕಂದ್ರೆ ಅದು ಕೂಡ ಉಚಿತ.

6. ಔಟ್‍ಬ್ರೈನ್: ಆನ್‍ಲೈನ್‍ನಲ್ಲಿ ನೀವೇನನ್ನೋ ಓದುತ್ತಿದ್ದೀರಾ ಎಂದುಕೊಳ್ಳಿ, ಆ ಲೇಖನದ ಕೊನೆಯಲ್ಲಿ ಪ್ರಾಯೋಜಿತ ಕಥೆಗಳು ಎಂದು ಬರೆದಿರುತ್ತದೆ. ನೀವು ಕೂಡ ವಿಷಯ ವರ್ಧನೆಯ ಹುಡುಕಾಟದಲ್ಲಿದ್ರೆ, ವಾಲ್‍ಸ್ಟ್ರೀಟ್ ಮತ್ತು ಸಿಎನ್‍ಎನ್‍ನಲ್ಲಿ ಕಾಣಿಸಿಕೊಳ್ಳಬೇಕೆಂದಿದ್ರೆ ಔಟ್‍ಬ್ರೈನ್ ಅನ್ನು ಬಳಸಿ. ನಿಮ್ಮ ಜಾಹೀರಾತಿನ ಮೇಲೆ ನೀವು ಹರಾಜಿನಲ್ಲಿ ಭಾಗವಹಿಸಬಹುದು, ಜಾಹೀರಾತನ್ನು ನೀವೆಷ್ಟು ಕ್ಲಿಕ್ ಮಾಡುತ್ತೀರಾ ಎಂಬುದರ ಮೇಲೆ ಶುಲ್ಕ ವಿಧಿಸಲಾಗುತ್ತದೆ.

7. ಸುಮೊ ಡಾಟ್ ಮಿ: ಈ ಉಪಕರಣ 3,50,000 ವೆಬ್‍ಸೈಟ್‍ಗಳಿಗೆ ಬಲ ಒದಗಿಸುತ್ತಿದೆ. ಫ್ರೀಲಾನ್ಸರ್‍ಗಳು ಹಾಗೂ ಆರಂಭಿಕ ಹಂತದಲ್ಲಿರುವ ಸ್ಟಾರ್ಟಪ್‍ಗಳಿಗೆ ಸುಮೊ ಡಾಟ್ ಮಿ ನೆರವಾಗುತ್ತಿದೆ. ಸುಮೊ ಡಾಟ್ ಮಿ ಮೂಲಕ ದೊಡ್ಡ ಕಂಪನಿಗಳು ತಮ್ಮ ವೆಬ್‍ಸೈಟ್‍ನಲ್ಲಿ ಹೆಚ್ಚು ದಟ್ಟಣೆ ಹೊಂದಬಹುದು. ಇದರಲ್ಲಿ ಶೇರಿಂಗ್ ಸಲಕರಣೆ, ವಿಶ್ಲೇಷಣೆ ಸಾಧನಗಳಿವೆ. ಅತ್ಯಾಧುನಿಕ ಫೀಚರ್‍ಗಳುಳ್ಳ ಉಚಿತ 20 ಉಪಕರಣಗಳಿವೆ.

8. ವಿಶುವಲ್ ವೆಬ್‍ಸೈಟ್ ಆಪ್ಟಿಮೈಸರ್ (ವಿಡಬ್ಲ್ಯೂಓ) : ವಿಶುವಲ್ ವೆಬ್‍ಸೈಟ್ ಆಪ್ಟಿಮೈಸರ್‍ನ ವಿವರಗಳನ್ನು ತಿಳಿದುಕೊಳ್ಳುವುದಕ್ಕೂ ಮುನ್ನ ನಾವು ಎ/ಬಿ ಟೆಸ್ಟಿಂಗ್ ಪರಿಕಲ್ಪನೆಯ ಬಗ್ಗೆ ತಿಳಿದುಕೊಳ್ಳಬೇಕು. ಎ/ಬಿ ಟೆಸ್ಟಿಂಗ್ ಅನ್ನೋದು ಬಳಕೆದಾರರ ಪರಿಣಾಮದ ಒಂದು ವ್ಯತ್ಯಾಸವನ್ನು ಹೊರತುಪಡಿಸಿ ಮೂಲಭೂತವಾಗಿ ಒಂದೇ ಆಗಿರುವ ಎರಡು ವೆಬ್‍ಸೈಟ್‍ಗಳ ರೂಪಾಂತರಗಳ ನಡುವಿನ ಹೋಲಿಕೆಯ ಪ್ರಕ್ರಿಯೆ. ಇದರ ಮೂಲ ಆವೃತ್ತಿಯನ್ನು `ಕಂಟ್ರೋಲ್' ಎಂದು ಕರೆಯಲಾಗುತ್ತದೆ. ಬಲಾಯಿಸಿದ ಪೇಜ್‍ನ್ನು `ವೇರಿಯೆಂಟ್' ಎನ್ನಲಾಗುತ್ತದೆ. ನೀವು ಕೂಡ ಎ/ಬಿ ಟೆಸ್ಟ್ ರನ್ ಮಾಡಬೇಕೆಂದಿದ್ರೆ, ವಾಸ್ತವವಾಗಿ ಪರಿವರ್ತನೆಯ ಪರಿಣಾಮಗಳನ್ನು ನೋಡಬೇಕೆಂದಿದ್ದರೆ ವಿಶುವಲ್ ವೆಬ್‍ಸೈಟ್ ಆಪ್ಟಿಮೈಸರ್ ಬಳಸಿ.

ನಾವು ಕೇವಲ ಮೇಲ್ಮೈಯನ್ನು ಮಾತ್ರ ಗೀಚುತ್ತಿದ್ದೇವೆ ಅಷ್ಟೆ. ನಿಮ್ಮ ಉತ್ಪನ್ನವನ್ನು ಪ್ರಮಾಣೀಕರಿಸಲು ನೂರಕ್ಕೂ ಹೆಚ್ಚು ಉಪಕರಣಗಳಿವೆ. ಆರಂಭಿಕ ಹಂತದಲ್ಲಿ ಈ ಉಪಕರಣಗಳು ನಿಜಕ್ಕೂ ಪ್ರಯೋಜನಕಾರಿಯಾಗಿವೆ.

ಲೇಖಕರು: ಅನಿರುಧ್ ನಾರಾಯಣ್

ಅನುವಾದಕರು: ಭಾರತಿ ಭಟ್ 

Related Stories