ಡಾ.ರಾಜ್ ಜನರಿಗೆ ಕೊಟ್ಟಿದ್ದೇನು...

ಆರಾಭಿ ಭಟ್ಟಾಚಾರ್ಯ

ಡಾ.ರಾಜ್ ಜನರಿಗೆ ಕೊಟ್ಟಿದ್ದೇನು...

Monday April 18, 2016,

3 min Read

ಕನ್ನಡದ ವರನಟ..ಮೇರು ನಟ ,ಕನ್ನಡ ತಾಯಿಯ ಮಗ ಡಾ ರಾಜ್ ಕುಮಾರ್ ..ಅಭಿಮಾನಿಗಳನ್ನ ದೇವರುಗಳು ಅಂತ ಕರೆದ ಏಕೈಕ ನಟ...ಅದೆಷ್ಟೋ ಜನರು ಖುದ್ದು ಅಣ್ಣಾವ್ರ ಅಭಿಮಾನಿಗಳಿಗೆ ಈ ಪ್ರಶ್ನೆ ಮಾಡಿರೋದು ಉಂಟು..ಡಾ ರಾಜ್ ಕುಮಾರ್ ಜನರಿಗೆ ಏನು ಕೊಟ್ಟಿದ್ದಾರೆ ಅನ್ನೋದು...ಕೊಟ್ಟದ್ದು ಸಾವಿರಾರು ಆದ್ರೆ ಅದು ಎಲ್ಲಿಯೂ ಗೊತ್ತಾಗಬಾರದು ಅನ್ನೋದು ಅಣ್ಣಾವ್ರ ನಾಡಿ ನಾಡಿಯಲ್ಲೂ ಜೀವಂತವಾಗಿತ್ತು..ಡಾ ರಾಜ್ ಕುಮಾರ್ ತಿಂಗಳಾದ ಈ ಸಮಯದಲ್ಲಿ ನಮ್ಮ ಕಡೆಯಿಂದ ಅಣ್ಣಾವ್ರು ಮಾಡಿರೋ ಸಹಾಯದ ಚಿಕ್ಕ ಪರಿಚಯ ಇಲ್ಲಿದೆ…

image


ಯಾವುದೇ ವ್ಯಕ್ತಿ ತಮ್ಮನ್ನ ಬಿಟ್ಟು ಮತ್ಯಾರನ್ನಾದ್ರು ದೇವರಿಗೆ ಹೋಲಿಸುತ್ತಾರೆ ಅಂದ್ರೆ ಅವರನ್ನ ಎಲ್ಲರಿಗಿಂತಲೂ ಶ್ರೇಷ್ಠವಾದ ಸ್ಥಾನದಲ್ಲಿ ಇರಿಸಿರುತ್ತಾರೆ ಎಂದರ್ಥ..ಎಲ್ಲರಿಗೂ ತಿಳಿದಿರುವಂತೆ ಡಾ ರಾಜ್ ಕುಮಾರ್ ಅವ್ರು ರಂಗಭೂಮಿ ಹಿನ್ನಲೆಯಿಂದ ಬಂದವ್ರು ಸಿನಿಮಾ ಕ್ಷೇತ್ರಕ್ಕೆ ಬಂದ ನಂತ್ರವೂ ರಂಗಭೂಮಿ ಕಲಾವಿದರಿಗಾಗಿ ಅವ್ರ ಜೀವ ಮಿಡಿಯುತ್ತಿತ್ತು..ರಂಗಭೂಮಿಯ ಕಲಾವಿದರಿಗಾಗಿ ಕಲಾವಿರ ಮಕ್ಕಳ ಮದುವೆಗಾಗಿ ಸಿನಿಮಾದಲ್ಲಿ ಬಿಡುವಿದ್ದಾಗ ನಾಟಕಗಳನ್ನಾಡಿ ಅಲ್ಲಿ ಬರುತ್ತಿದ್ದ ಹಣವನ್ನ ಅಲ್ಲಿರೋ ಬಡ ಕಲಾವಿದರಿಗೆ ನೀಡುತ್ತಿದ್ರು… ನಾಡು ನುಡಿ ಎಂದರೆ ಜೀವ ಬಿಡುತ್ತಿದ್ದ ಡಾ ರಾಜ್ 1961 ರಲ್ಲಿ ಪ್ರವಾಹ ಆದಾಗ ಕನ್ನಡ ಚಿತ್ರರಂಗದ ಕಲಾವಿದರನ್ನೆಲ್ಲಾ ಒಟ್ಟುಗೂಡಿಸಿಕೊಂಡು ರಾಜ್ಯ ಪೂರ್ತಿ ಪ್ರವಾಸ ಮಾಡಿ ನಿಧಿ ಸಂಗ್ರಹ ಮಾಡಿದ್ರು ಇದೊಂದು ಅಪರೂಪದ ಸಾಮಾಜಿಕ ಕಾರ್ಯವಾಗಿತ್ತು..

ನಿರ್ಮಾಪಕರ ಪಾಲಿನ ದೈವ

ಸಿನಿಮಾದಲ್ಲಿ ಅಭಿನಯಿಸುವುದಷ್ಟೇ ತಮ್ಮ ಕೆಲಸ..ನಂತ್ರ ಸಿನಿಮಾಗೂ ನಮಗೂ ಸಂಬಂಧವಿಲ್ಲ ಅನ್ನೋ ರೀತಿಯ ಯೋಚನೆಗಳನ್ನ ಡಾ ರಾಜ್ ಕುಮಾರ್ ಎಂದಿಗೂ ಮಾಡುತ್ತಿರಲಿಲ್ಲ…ಒಮ್ಮೆ ಒಬ್ಬ ನಿರ್ಮಾಪಕರು ಅಣ್ಣಾವ್ರ ಸಿನಿಮಾದಿಂದ ಹಣ ಬಂದಿಲ್ಲ ಅನ್ನೋ ಮಾತನ್ನಾಡಿದ್ದು ರಾಜ್ ಅವ್ರ ಕಿವಿಗೆ ಬಿದ್ದಿತ್ತು..ಇದನ್ನ ಸೂಕ್ಷ್ಮವಾಗಿ ಅರಿತ ರಾಜ್ ಕುಮಾರ್ ಅವ್ರು ಇದೇ ರೀತಿಯಲ್ಲಿ ತಮ್ಮ ಸಿನಿಮಾದಿಂದ ಹಣ ಕಳೆದುಕೊಂಡಿರೋ ನಿರ್ಮಾಪಕರನ್ನ ಗುರುತಿಸಿ ಸುಮಾರು ಹನ್ನೋಂದು ನಿರ್ಮಾಪಕರಿಗೆ ಉಚಿತ ಕಾಲ್ ಶೀಟ್ ನೀಡಿದ್ರು

ಕರ್ನಾಟಕದಲ್ಲಿ ನಿರ್ಮಾಣವಾಗುತ್ತಿದ್ದ ಜಿಲ್ಲಾ ರಂಗಮಂದಿರಗಳಿಗೆ ಬೇಟಿ ನೀಡಿ ರಸಮಂಜರಿ ಕಾರ್ಯಕ್ರಮವನ್ನ ನಡೆಸಿಕೊಟ್ಟು ಅದರಿಂದ ಹಣ ಸಂಗ್ರಹ ಮಾಡಿ ಜಿಲ್ಲಾ ರಂಗಮಂದಿರಗಳ ಉದ್ದಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ರು...ಇನ್ನು ಗೌರವ ಧನವನ್ನ ಶಕ್ತಿ ಧಾಮ ಸಂಸ್ಥೆಗೆ ನೀಡುತ್ತಿದ್ದರು ಇದು ಮೈಸೂರಿನಲ್ಲಿ ಬೀದಿಗೆ ಬಿದ್ದ ಹೆಣ್ಣುಮಕ್ಕಳೀಗಾಗಿ ಆಶ್ರಯ ನೀಡೋ ಸಂಸ್ಥೆ….

ಕಲಾವಿರ ಪಾಲಿಗೂ ವರವಾದ ನಟ

ಒಮ್ಮೆ ಪಂಡರಿಬಾಯಿ ಅವ್ರ ನಿರ್ಮಾಣದಲ್ಲಿ ತಯಾರಾಗುತ್ತಿದ್ದ ಚಿತ್ರಕ್ಕೆ ಅದ್ದೂರಿ ಸೆಟ್ ರೆಡಿ ಮಾಡಿ ಚಿತ್ರೀಕರಣವನ್ನ ಶುರು ಮಾಡಲಾಗಿತ್ತು..ಎರಡು ದಿನ ಮಾತ್ರ ಕಲಾವಿದರೊಬ್ಬರ ಡೇಟ್ ಇತ್ತು. ಆದ್ರೆ ಚಿತ್ರೀಕರಣ ಮೂರು ದಿನ ಮಾಡಬೇಕಿತ್ತು ಅಂತಹ ಸಂದರ್ಭದಲ್ಲಿ ಆ ನಟ ಮೂರು ದಿನ ಕಾಲ್ ಶೀಟ್ ನೀಡಲು ಸಾಧ್ಯವಿಲ್ಲ ಎಂದುಬಿಟ್ಟರು...ಅಂತ ಸಮಯದಲ್ಲಿ ಪಂಡರಿಬಾಯಿ ಅವ್ರು ಡಾ ರಾಜ್ ಕುಮಾರ್ ಅವ್ರನ್ನ ಪಾತ್ರ ನಿರ್ವಹಿಸಲು ಕೇಳಲು ನಿರ್ಧಾರ ಮಾಡಿದ್ರು ..ಆದ್ರೆ ಈ ಚಿತ್ರಕ್ಕೂ ಮುಂಚೆ ಪಂಡರಿಬಾಯಿ ಅವ್ರ ಸಿನಿಮಾದಲ್ಲಿ ಡಾ ರಾಜ್ ಅಭಿನಯಿಸಿದ್ರು ಆ ಸಿನಿಮಾದ ಹಣವೇ ಇನ್ನು ಅಣ್ಣಾವ್ರ ಕೈ ಸೇರಿರಲಿಲ್ಲ..ಆದ್ರೂ ಕೂಡ ಡಾ ರಾಜ್ ಅದ್ಯಾವುದನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಬಂದು ಚಿತ್ರದಲ್ಲಿ ಅಭಿನಯಿಸಿದ್ರು…ಇನ್ನು ಗಂದಧ ಗುಡಿ ಸಿನಿಮಾದಲ್ಲಿ ಅಭಿನಯಿಸೋ ಸಮಯದಲ್ಲಿ ರಾಜ್ ಕುಮಾರ್ ಅವ್ರು ಆಗಾಗ್ಲೆ ಸಾಕಷ್ಟು ಪ್ರಸಿದ್ದಿ ಪಡೆದ ನಟರಾಗಿದ್ರು. ಆದ್ರೆ ಎಂ ಪಿ ಶಂಕರ್ ಅವ್ರಿಗಾಗಿ ಕೇವಲ 60 ಸಾವಿರ ಸಂಭಾವನೆ ಪಡೆದು ಅಭಿನಯಿಸಿದ್ರು, ಕೊನೆಗೆ ಅಣ್ಣಾವ್ರ ಕೈಗೆ ಸಂಧಾಯವಾಗಿದ್ದು 40 ಸಾವಿರ ಮಾತ್ರ. ಆದ್ರೆ ಸಿನಿಮಾ ಮಾತ್ರ ಸೂಪರ್ ಸಕ್ಸಸ್ ಆಗಿತ್ತು..

ಕಂಡಿದ್ದು ರಾಗಿಯಷ್ಟು ಕಾಣದ್ದು ಗುಡ್ಡದಷ್ಟು

ಡಾ ರಾಜ್ ಕುಮಾರ್ 100 ಸಿನಿಮಾಗಳನ್ನ ಪೂರೈಸಿದ ಹಿನ್ನಲೆಯಲ್ಲಿ ಬಡ ವಿದ್ಯಾರ್ಥಿಗಳ ಶಿಕ್ಷಣ ನಿಧಿಗಾಗಿ 10000 ಹಣವನ್ನ ನೀಡಿದ್ರು..ಮಾನಸಿಕ ರೋಗಿಗಳ ಕಲ್ಯಾಣ ನಿಧಿಗೆ ಒಂದು ಲಕ್ಷ,ಅಶಕ್ತ ಪೋಷಕರಿಗೆ ಒಂದು ಲಕ್ಷ,ಅನಾಥ ಮಕ್ಕಳ ನಿಧಿಗೆ 1 ಲಕ್ಷ,ಮೈಸೂರು ಸವಿತಾ ವಿದ್ಯಾರ್ಥಿ ನಿಧಿಗೆ 1,50000, ಅನಾಥ ಮಕ್ಕಳಿಗೆ ಪುಸ್ತಕಕ್ಕಾಗಿ ಒಂದು ವರೆ ಲಕ್ಷ, ಬೆಂಗಳೂರು ವಿವಿಯ ಕನ್ನಡ ವಿಭಾಗಕ್ಕೆ ಪದಕ ನೀಡಲು ಐದು ಲಕ್ಷ ,ಇತಿಹಾಸ ವಿಭಾಗಕ್ಕೆ ಹತ್ತು ಲಕ್ಷ ,ಮಾರ್ಥಾಸ್ ಆಸ್ಪತ್ರೆ ಗೆ ಆರು ಲಕ್ಷ,..ಇದು ಕಣ್ಣಿಗೆ ಕಾಣ ಸಿಕ್ಕಿದ್ದು ಅಷ್ಟೆ. ಡಾ ರಾಜ್ ಎಂದಿಗೂ ತಾವು ಮಾಡಿದ ಸಹಾಯವನ್ನ ಎಲ್ಲಿಯೂ ಬಿಟ್ಟು ಕೊಡುತ್ತಿರಲಿಲ್ಲ..ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ ಅಣ್ನಾವ್ರು ಸಿನಿಮಾದಲ್ಲಿ ಅಭಿನಯಿಸಿ ಅಪಾರ ಅಭಿಮಾನಿ ಹಾಗೂ ಕೀರ್ತಿ ಸಂಪಾದಿದಷ್ಟು ಹಣವನ್ನ ಸಂಪಾದನೆ ಮಾಡಲಿಲ್ಲ..ಮತ್ತು ಆಗಿನ ಸಮಯದಲ್ಲಿ ರೂಪಾಯಿ ರೂಪಾಯಿಗೂ ಹೆಚ್ಚು ಬೆಲೆ ಇತ್ತು…ಹೀಗೆ ಇನ್ನು ಸಾಕಷ್ಟು ಸಾಮಾಜಮುಖಿ ಕಾರ್ಯಕ್ರಮದಲ್ಲಿ ಡಾ ರಾಜ್ ತಮ್ಮನ್ನ ತೊಡಗಿಸಿಕೊಂಡಿದ್ರು….ಈಗಲೂ ಕೂಡ ಡಾ ರಾಜ್ ಅವ್ರ ಕುಟುಂಬಸ್ಥರು ಕೂಡ ಈ ಕೆಲಸವನ್ನ ಮುಂದುವರೆಸಿಕೊಂಡು ಹೋಗುತ್ತಿರೋದು ಖುಷಿಯ ಸಂಗತಿ...

(ಆಯ್ದ ಬರಹಗಳ ಸಂಗ್ರಹದಿಂದ)