ಸ್ಟಾರ್ಟ್​ಅಪ್ ಬಗ್ಗೆ ಕನಸು ಏಕೆ..? ಉದ್ಯಮದ ಯಶಸ್ಸಿಗೆ ಇಲ್ಲಿದೆ ಟಿಪ್ಸ್​..!​

ಟೀಮ್​​ ವೈ.ಎಸ್​. ಕನ್ನಡ

ಸ್ಟಾರ್ಟ್​ಅಪ್ ಬಗ್ಗೆ ಕನಸು ಏಕೆ..? ಉದ್ಯಮದ ಯಶಸ್ಸಿಗೆ ಇಲ್ಲಿದೆ ಟಿಪ್ಸ್​..!​

Monday January 30, 2017,

3 min Read

ಹೊಸತನದ ಐಡಿಯಾಗಳು, ರಿಸ್ಕ್ ತೆಗೆದುಕೊಳ್ಳುವ ಮನಸ್ಥಿತಿ, ಕಠಿಣ ಪರಿಶ್ರಮ ಹಾಗೂ ಸಂದರ್ಭಕ್ಕೆ ತಕ್ಕಂತೆ ನಿರ್ಧಾರಗಳನ್ನ ತೆಗೆದುಕೊಳ್ಳುವ ಸಾಮರ್ಥ್ಯ ಇದ್ರೆ ಸ್ಟಾರ್ಟ್ ಅಪ್ ಗಳನ್ನ ಹುಟ್ಟುಹಾಕುವುದು ಹಾಗೂ ಬೆಳೆಸುವುದು ಕಷ್ಟವೇನಲ್ಲ. ಇನ್ನು ಸ್ಟಾರ್ಟ್ ಅಪ್ ಗಳಿಗೆ ಹಾಕುವ ಪರಿಶ್ರಮದಷ್ಟೇ ಬಂಡವಾಳದ ಮೊತ್ತವೂ ಬಹುಮುಖ್ಯ. ಜೊತೆಗೆ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಜೀವಾಳದಂತಿರುವ ಸ್ಟಾರ್ಟ್ ಅಪ್ ಗಳು ಉದ್ಯೋಗ ಸೃಷ್ಠಿಯಲ್ಲೂ ಮಹತ್ವದ ಪಾತ್ರವಹಿಸಿವೆ. ಇನ್ನು ಸ್ಟಾರ್ಟ್ ಅಪ್ ಗಳ ರಚನೆಯ ಪಿರಮಿಡ್ ನಲ್ಲಿ ಕೆಳಹಂತಕ್ಕೆ ಇನ್ನಿಲ್ಲದ ಮಹತ್ವ ನೀಡಲಾಗುತ್ತದೆ. ಯಾಕಂದ್ರೆ ಈ ಕೆಳಹಂತ ಅಥವಾ ಮೊದಲ ಹಂತದಲ್ಲಿರುವ ಸಂಪನ್ಮೂಲ ಇಡೀ ಉದ್ದಿಮೆಯ ಜೀವಾಳ ಅಂತಲೇ ಕರೆಯಲಾಗುತ್ತೆ. ಹೀಗಾಗೇ ಇವುಗಳನ್ನ ಪೋಷಿಸಲು ಸ್ಟಾರ್ಟ್ ಅಪ್ ಗಳ ಮಾಲಿಕರು ಹಾಗೂ ಹೊಸ ಉದ್ದಿಮೆದಾತರು ಅತೀ ಹೆಚ್ಚು ಶ್ರಮವನ್ನ ವ್ಯಯಿಸುತ್ತಾರೆ. ಜೊತೆಗೆ ಸಂಪನ್ಮೂಲವನ್ನೂ ಕ್ರೋಢೀಕರಿಸುತ್ತಾ ಮೊದಲ ಹಂತವನ್ನ ಬಲಪಡಿಸುವತ್ತ ಗಮನಕೊಡುತ್ತಾರೆ. ಹೀಗಾದ್ರೆ ಮಾತ್ರ ಉದ್ದಿಮೆ ಬೆಳೆಯುತ್ತೆ ಹಾಗೂ ಬಲವಾಗುತ್ತೆ ಅನ್ನೋದು ಅವರ ನಂಬಿಕೆ.

image


ಓಲಾ, ರೋಡ್ ರನ್ನರ್ ನಂತಹ ಸ್ಟಾರ್ಟ್ ಅಪ್ ಗಳು ತಮ್ಮ ಕಂಪನಿಗೆ ಬಲನೀಡುವ ಮೊದಲ ಹಂತದತ್ತಲೇ ಹೆಚ್ಚು ಗಮನ ನೀಡುತ್ತಿವೆ. ಯಾಕಂದ್ರೆ ಇಲ್ಲಿ ನೂರರಿಂದ ಸಾವಿರಾರು ಮಂದಿ ಉದ್ಯೋಗಸ್ಥರಿದ್ದಾರೆ. ತರಬೇತಿಯಿಂದ ಹಿಡಿದು ಕೌಶಲ್ಯ ಅಭಿವೃದ್ಧಿವರೆಗೂ ಇಲ್ಲಿ ಗಮನ ನೀಡಲಾಗಿರುತ್ತದೆ. ಆದ್ರೆ ಕೆಲವು ಉದ್ದಿಮೆದಾರರ ವಾದದ ಪ್ರಕಾರ ಬುಸಿನೆಸ್ ಪಿರಮಿಡ್ ನ ಮೊದಲ ಹಂತವೇ ಶ್ರೇಷ್ಠವಲ್ಲ. ಕೇವಲ ಕೆಳಹಂತವನ್ನಷ್ಟೇ ಕೇಂದ್ರೀಕರಿಸುವ ಬದಲು ಸ್ಟಾರ್ಟ್ ಅಪ್ ನ ಮಧ್ಯದ ಹಂತ ಹಾಗೂ ಮೇಲ್​ಸ್ತರಗಳ ಕಡೆಗೂ ಗಮನ ಹರಿಸುವುದು ಬ್ಯುಸಿನೆಸ್ ದೃಷ್ಠಿಯಿಂದ ಉತ್ತಮ ಅಂತಾರೆ ತಜ್ಞರು.

ಇದನ್ನು ಓದಿ: ಹೊಸ ವರ್ಷದಲ್ಲಿ ಕಾಲ ಕಳೆಯೋದು ಹೇಗೆ..?- ಹಾಲಿಡೇ ಪ್ಲಾನ್ ಬಗ್ಗೆ ಯೋಚನೆ ಮಾಡಿ..!​

ಅರ್ಥಿಕವಾಗಿ ಹಿಂದುಳಿದ ವರ್ಗ ಯಾವತ್ತಿಗೂ ಉತ್ಪತ್ತಿಯಲ್ಲಿ ಸೋಲುತ್ತದೆ. ಇದ್ರ ಬಗ್ಗೆ ಗಂಭೀರವಾದ ಪರಿಣಾಮಗಳನ್ನ ಎದುರಿಸುತ್ತವೆ. ಆದ್ರೆ ಅದನ್ನ ಸೃಷ್ಠಿಸುವ ಮೌಲ್ಯ ಅಷ್ಟೇ ಸಾಕಾ ಅನ್ನೋದು ಸದ್ಯಕ್ಕೆ ಕಾಡುವ ಪ್ರಶ್ನೆ. ಆದರೆ ಇರುವುದರಷ್ಟರಲ್ಲೇ ಇನ್ನು ಸ್ಪಲ್ಪ ಕ್ರಿಯೇಟಿವ್ ಆಗಿ ಮತ್ತು ಸಂದರ್ಭಕ್ಕೆ ತಕ್ಕಂತೆ ಯೋಚಿಸುವುದಾದರೆ ಪರಿಸ್ಥಿತಿಯನ್ನ ಇನ್ನಷ್ಟು ಸುಧಾರಿಸಲು ಸಾಧ್ಯವಿದೆ. ಜೊತೆಗೆ ಅವಕಾಶಗಳನ್ನ ಹುಟ್ಟಿಹಾಕುವ ಬಗ್ಗೆ ಚಿಂತಿಸಬಹುದು. ಹಾಗಂತ ಅಲ್ಲಿಗೆ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯಿತು ಅಂತಲೂ ಅಲ್ಲ. ಆರ್ಥಿಕವಾಗಿ ಹಿಂದುಳಿದಿರುವ ಉದ್ದಿಮೆಗಳು ತಾವು ಸಾಗುವ ಹಾದಿಯಲ್ಲಿ ಎದುರಾಗುವ ಸಮಸ್ಯೆಗಳನ್ನ ಸ್ವತಃ ಪರಿಹರಿಸಲು ಸಾಧ್ಯವಾಗುವಂತಿರಬೇಕು. ಹಾಗಿದ್ರೆ ಮಾತ್ರ ಉದ್ದಿಮೆಗಳ ಉದ್ದೇಶದಲ್ಲಿ ಲಾಭಗಳಿಸಲು ಇಲ್ಲಿ ಹೆಚ್ಚಿನ ಅವಕಾಶಗಳಿರುತ್ತವೆ. ಇನ್ನು ಸರ್ಕಾರಿ ಹೂಡಿಕೆಗಳ ಅಡಿಯಲ್ಲಿ ಬರುವ ಉದ್ಯಮಿಗಳು ಹಾಗೂ ಹೂಡಿಕೆದಾರರು ಕನಿಷ್ಠ ಶೇಕಡಾ 30ರಷ್ಟು ಲಾಭಾಂಶವನ್ನಾದ್ರೂ ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕಾಗುತ್ತದೆ.

ಹಾಗಾದ್ರೆ, ಲಾಭಾಂಶವಿಲ್ಲದ ಹೂಡಿಕೆಗಳು ಅಥವಾ ಉದ್ದಿಮೆಗಳು ಕೇವಲ ಹಿಂದುಳಿದ ವರ್ಗಕ್ಕೆ ಮಾತ್ರ ಸೀಮಿತವಾಗಿರಬೇಕು ಅಥವಾ ಸರ್ಕಾರದ ಸ್ವಾಮ್ಯತ್ಯಕ್ಕೆ ಸೀಮಿತವಾಗಿರಬೇಕು ಅನ್ನೋ ತತ್ವಗಳು ಅನ್ವಯಿಸಬಾರದು. ಈ ಹಂತದಲ್ಲಿ ಮತ್ತೊಂದು ಅನುಮಾನ ಸೃಷ್ಠಿಯಾಗುತ್ತದೆ. ಮಾರುಕಟ್ಟೆಯಲ್ಲಿ ಕೇವಲ ಹಣದಿಂದಷ್ಟೇ ಸದ್ದು ಮಾಡಲು ಸಾಧ್ಯವಿಲ್ಲ. ನಮ್ಮ ಉತ್ಪತ್ತಿ ಹಾಗೂ ಗುಣಮಟ್ಟವನ್ನ ಹಣ ಹರಿಸುವ ಕ್ರಿಯೆಯನ್ನೊಳಗೊಂಡ ಪಿರಮಿಡ್ ನಲ್ಲಿ ಬಲವಾಗಿ ನಿಲ್ಲಬೇಕಾಗುತ್ತದೆ. ಇನ್ನು ನಾರಾಯಣ ಹೃದಯಾಲಯದಂತಹ ದೊಡ್ಡ ಆಸ್ಪತ್ರೆಗಳು ಅತೀ ಕಡಿಮೆ ಖರ್ಚಿನಲ್ಲಿ ಅಥವಾ ಉಚಿತವಾಗಿ ಆಪರೇಷನ್ ಗಳನ್ನ ಮಾಡುವ ಮೂಲಕ ಗಮನ ಸೆಳೆಯುತ್ತಿದೆ. ಆದ್ರೆ ಇಲ್ಲಿ ಕೊಡುವ ಸೇವೆಯಲ್ಲೂ ಗುಣಮಟ್ಟಕ್ಕೇ ಮೊದಲ ಆದ್ಯತೆ ನೀಡಲಾಗಿದ್ದು ಶೇರಿಂಗ್, ಜನರಲ್ , ಪ್ರೈವೇಟ್ ವಾರ್ಡ್ ನಂತಹ ಸರ್ವೀಸ್ ಗಳನ್ನ ನೀಡಲಾಗುತ್ತಿದೆ. ಹೀಗಾಗಿ ನಾರಾಯಣ ಹೃದಯಾಲಯದ ಸರ್ವೀಸ್ ಗಳು ಸಾಮಾನ್ಯರನ್ನ ತಲುಪಿದ್ದು ಮಾರುಕಟ್ಟೆಯಲ್ಲೂ ಬ್ರಾಂಡಿಂಗ್ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಸಣ್ಣ ಸ್ಕೇಲ್ ಗಳಲ್ಲಿ ನೀಡುವ ಈ ಸರ್ವೀಸ್ ಗಳ ಇತರೆ ಖರ್ಚು ಉಳಿತಾಯಗಳಿಗೆ ಸಹಾಯಕವಾಗಲಿದೆ.

ಹಾಗಂತ ಎಲ್ಲಾ ಸರ್ವೀಸ್ ಗಳಲ್ಲೂ ಉಚಿತತೆ ಮತ್ತು ಸೇವಾ ದರದ ಕಡಿತ ಸಾಧ್ಯವಿಲ್ಲ. ಉದಾಹರಣೆಗೆ ಐಐಟಿಜೆಇಇ ನಂತರಹ ಕೋರ್ಸ್ ಗಳನ್ನ ಉಚಿತವಾಗಿ ನೀಡಲು ಸಾಧ್ಯವಿಲ್ಲ. ನೀಡಲು ಸಾಧ್ಯವಾಗಲಿಲ್ಲ ಅನ್ನೋ ಕಾರಣಕ್ಕೆ ಶಿಕ್ಷಣದ ಗುಣಮಟ್ಟವೇ ಸರಿಯಲ್ಲ ಅಂತ ದೂರುವುದು ಸೂಕ್ತವಲ್ಲ. ಮತ್ತೊಂದೆಡೆ ಬ್ಯಾಂಕರ್ಸ್ ಗಳಿಗೂ ಇದೇ ರೀತಿಯ ಸಮಸ್ಯೆ ಕಾಡುತಿತಿರುತ್ತವೆ. ಬ್ರ್ಯಾಂಚ್ ಗಳು ನಿವ್ವಳ ಲಾಭ ಗಳಿಸಲು ಸಾಧ್ಯವಾಗದೆ ಹೊಸ ರೀತಿಯ ಪ್ರೊಜೆಕ್ಟ್ ಗಳನ್ನ ಹುರಿದುಂಬಿಸಲೂ ಸಾಧ್ಯವಾಗದೆ ಇರುವ ಒದ್ದಾಟಗಳಿರುತ್ತವೆ. ಹೀಗಾಗಿ ಯಾವುದೇ ಉದ್ದಿಮೆ ಅಥವಾ ವ್ಯವಹಾರದಲ್ಲಿ ಮೊದಲ ಹಂತದ ಬಗ್ಗೆ ಕಾಳಜಿಗಿಂತ ಮಧ್ಯ ಹಾಗೂ ನಂತ್ರದ ಮಟ್ಟದ ಬಗ್ಗೆಯೂ ಆಸಕ್ತಿ ವಹಿಸಿದ್ರೆ ಅದು ಬೆಳವಣಿಗೆಗೆ ಪೂರಕವಾಗಲಿದೆ. 

ಇದನ್ನು ಓದಿ:

1. ಸ್ಮಾರ್ಟ್​ಫೋನ್​ನಲ್ಲೇ ಆರೋಗ್ಯ ಸಮಸ್ಯೆಗೆ ಉತ್ತರ- ಇದು "ಡಾಕ್ಟರ್ಸ್​ ಲೈವ್​" ಮ್ಯಾಜಿಕ್​

2. ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಿ: ಉತ್ತಮ ಭಾಷಣ ಮಾಡುವ ಕಲೆ ಕಲಿತುಕೊಳ್ಳಿ

3. ಕರ್ನಾಟಕದಲ್ಲೂ ಇದೆ ಕ್ಯಾಶ್​ಲೆಸ್​ ಗ್ರಾಮ- "ಬೆಳಪು" ಡಿಜಿಟಲ್​ ವ್ಯವಹಾರದ ಮೊದಲ ಬೆಳಕು..!