“ತ್ರಿ ಈಡಿಯಟ್ಸ್” ನಿರ್ಮಿಸಿದ ಸುದ್ಧಿ ಸಂಕ್ಷಿಪ್ತಗೊಳಿಸುವ ವೆಂಚರ್ ‘ಔಸಮ್ಲಿ’

ಟೀಮ್​​ ವೈ.ಎಸ್​.

“ತ್ರಿ ಈಡಿಯಟ್ಸ್” ನಿರ್ಮಿಸಿದ ಸುದ್ಧಿ ಸಂಕ್ಷಿಪ್ತಗೊಳಿಸುವ ವೆಂಚರ್ ‘ಔಸಮ್ಲಿ’

Tuesday September 22, 2015,

3 min Read

ಅವರು ಮೂವರು ಒಟ್ಟಾಗಿ ಕಲೆಯುವ ಮೊದಲು ಹಲವು ಸಂಸ್ಥೆಗಳಲ್ಲಿ ಹಲವು ಟೀಂಗಳಲ್ಲಿ ವೈಫಲ್ಯ ಅನುಭವಿಸಿದ್ದರು.. ವಿಭಿನ್ನ ಐಡಿಯಾಗಳಲ್ಲಿ ಬೇರೆ ಬೇರೆ ಹೊಸ ಪ್ರಯೋಗಗಳನ್ನು ನಿರ್ವಹಿಸಲು ಮುಂದಾಗಿ ಸೋತಿದ್ದರು.. ಪ್ರತೀ ಸಲವೂ ಹೊಸ ಹೆಜ್ಜೆ ಇಡುತ್ತಿದ್ದ ಅವರಿಗೆ ಸೂಕ್ತ ನಿರ್ದೇಶನ, ಪರಿಣಿತ ತಂಡ ಹಾಗೂ ಸಮರ್ಥ ಕೌಶಲ್ಯದ ಕೊರತೆಯಿಂದಾಗಿ ಪ್ರತಿಕೂಲ ಪರಿಸ್ಥಿತಿಯಲ್ಲಿ ಸೋಲು ಎದುರಾಗುತ್ತಿತ್ತು.. ಆಗ ಮತ್ತೆ ಹೆಜ್ಜೆ ಮುಂದಿಟ್ಟಿದ್ದರು ಆ ಮೂವರು ಉದ್ದಿಮೆದಾರರು.. ಬೇರೆ ಬೇರೆ ಕಂಪೆನಿಗಳಿಂದ ಹೊರ ಬಂದಿದ್ದ ನಿತಿನ್, ಅಂಕಿತ್ ಹಾಗೂ ದೀಪಕ್ ಮೂವರಿಗೂ ಯಾವುದೇ ಸೂಕ್ತ ನಿರ್ದೇಶನವಾಗಲೀ, ಮಾರ್ಗದರ್ಶನವಾಗಲಿ ಇರಲಿಲ್ಲ..ಆದರೆ ಆ ಮೂವರ ಎದುರಿಗೂ ಒಂದು ಗುರಿಯಿತ್ತು. ಏನಾದರೂ ಸಾಧಿಸಲೇಬೇಕೆಂಬ ತುಡಿತವಿತ್ತು..

ಒಂದು ನಿರ್ದಿಷ್ಟ ಆದಾಯ ಕಳೆದುಕೊಂಡು, ಕುಟುಂಬ ನಿರ್ವಹಣೆಯ ಜವಬ್ದಾರಿಯ ಒತ್ತಡವಿದ್ದಾಗ ಯಾವುದೇ ಉದ್ದಿಮೆದಾರನೂ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರುವುದಿಲ್ಲ.. ಈ ಮೂವರಿಗೂ ಅಂತಹದ್ದೇ ಪರಿಸ್ಥಿತಿ ಎದುರಾಗಿತ್ತು..

image


4 ಗಂಟೆಗಳ ಕಾಲ ಪವರ್ ಕಟ್ ಆದ ಆ ರಾತ್ರಿ ಗುರಗಾಂವ್ನ ಯೂ ಬ್ಲಾಕ್ನಲ್ಲಿ ಹೊಸ ಐಡಿಯಾ ಹುಟ್ಟಿಕೊಂಡಿತ್ತು.. ಮೊದಲು ವಾಯು ಸೇವನೆಗೆಂದು ಹೊರಬಂದಿದ್ದರು ದೀಪಕ್.. ಆ ಕಟ್ಟಡದ ಹೊರಭಾಗದಲ್ಲಿ ನಿತಿನ್ ಕುಳಿತಿದ್ದರು.. ಆ ರಾತ್ರಿ ದೀಪಕ್ ಹಾಗೂ ನಿತಿನ್ ಸುದೀರ್ಘ ನಾಲ್ಕು ಗಂಟೆಗಳ ಕಾಲ ಅವರ ಹಿಂದಿನ ವಿಫಲಗೊಂಡ ಪ್ರಾಜೆಕ್ಟ್ ಕಥೆಯನ್ನು ಹಂಚಿಕೊಂಡಿದ್ದರು.. ಆ ರಾತ್ರಿ ಇಬ್ಬರು ಅಪರಿಚಿತರು ತಮ್ಮ ವೃತ್ತಿ ಬದುಕಿನ ವೈಫಲ್ಯಗಳ ಮೂಲಕ ಕಂಡುಕೊಂಡು ಹೊಸ ಆಲೋಚನೆಗಳನ್ನು ಹಂಚಿಕೊಂಡು ಅಲ್ಪಕಾಲದಲ್ಲಿ ಸ್ನೇಹಿತರಾಗಿದ್ದರು.. ಪಬ್ನಲ್ಲಿ ಏರಿಸಿದ್ದ ಡ್ರಿಂಕ್ಸ್ ನಶೆಯಲ್ಲಿಯೇ ಹತ್ತು ಹಲವು ವಿಭಿನ್ನ ಆಲೋಚನೆಗಳನ್ನು ಶೇರ್ ಮಾಡಿಕೊಂಡಿದ್ದರು..

ಔಸಮ್ಲೀ ಅಂದರೇನು?

ಔಸಮ್ಲಿ ಅನ್ನುವುದು ಒಂದು ಆಟೋಮೇಟೆಡ್ ಟೂಲ್.. ಇದು ಹಲವು ಮೂಲಗಳಿಂದ ಸುದ್ದಿ ಹಾಗೂ ಸಾರಾಂಶಗಳನ್ನು ಹೆಕ್ಕಿ ತೆಗೆದು 5-6 ವಾಕ್ಯಗಳಲ್ಲಿ ಕ್ಲುಪ್ತವಾಗಿಸಿ ನ್ಯೂಸ್ ಲಿಸ್ಟ್ ಮಾಡುವ ಸೌಕರ್ಯ ಇದರಲ್ಲಿದೆ..

ಔಸಮ್ಲಿ ಕೇವಲ ಸುದ್ದಿಗಳನ್ನು ಮಾತ್ರ ಕೇಂದ್ರಿಕರಿಸುವುದಿಲ್ಲ.. ಜೊತೆಗೆ ಕಂಪೆನಿಗಳ ವಿಷನ್ ಹಾಗೂ ಕ್ಯಾಟಲಾಗ್ಗಳ ಪ್ರಾಥಮಿಕ ಮಾಹಿತಿಗಳನ್ನೂ ಸಂಕ್ಷಿಪ್ತಗಳಿಸುತ್ತದೆ.. ಗೂಗಲ್ ಸರ್ಚ್ ಎಂಜಿನ್ನಲ್ಲಿ ಅಥವಾ ಬೇರೆ ಬೇರೆ ವೆಬ್ಸೈಟ್ ಗಳಲ್ಲಿ ಸುದ್ದಿ ಸಾರಾಂಶ, ಕಂಪೆನಿಗಳ ಪ್ರಾಡಕ್ಟ್ ಲಿಸ್ಟ್, ಇ-ಕಾಮರ್ಸ್ ವೆಬ್ಸೈಟ್​ಗಳ ಮಾಹಿತಿ, ಪ್ರಸಿದ್ಧ ಬುಕ್ ಹಾಗೂ ಸ್ಥಳಗಳ ಪಟ್ಟಿಗಳನ್ನು ಸರಳೀಕರಿಸಿ ಪ್ರದರ್ಶಿಸುತ್ತದೆ..

ಈಗಿನ ಮೊಬೈಲ್ ಯುಗದಲ್ಲಿ ಆನ್ಲೈನ್ ಬ್ರೌಸ್ ಮಾಡುವಾಗ ಸುದ್ದಿಗಳು ದೊಡ್ಡದಿದ್ದರೇ ಅದನ್ನು ಓದುವಷ್ಟು ತಾಳ್ಮೆ ಬಹುತೇಕ ಓದುಗರಿಗೆ ಇರುವುದಿಲ್ಲ.. ಹಾಗಾಗಿ ಅವರು ಇಂತಹ ದೀರ್ಘ ಸುದ್ದಿ ಸಾರಾಂಶಗಳ ಸಂಗತಿಗಳನ್ನು ಸ್ಕಿಪ್ ಮಾಡುವ ಸಾಧ್ಯತೆಗಳೇ ಹೆಚ್ಚು.. ಹೀಗಾಗಿ ಬಹಳಷ್ಟು ಬಾರಿ ಅತ್ಯುತ್ತಮ ವಿಚಾರಗಳು ಮಿಸ್ ಆಗುವ ಸಾಧ್ಯತೆ ಇರುತ್ತದೆ.. ಇದೇ ಕಾರಣದಿಂದ ಸುದ್ದಿ ಸಾರಾಂಶ ಸರಳೀಕರಿಸಿ ಸಂಕ್ಷಿಪ್ತಗೊಳಿಸಲು ಪ್ರಾರಂಭಿಸಿದ್ದಾಗಿ ತಮ್ಮ ಪ್ರಾಜೆಕ್ಟ್ ಬಗ್ಗೆ ಮಾಹಿತಿ ನೀಡಿದ್ದಾರೆ ನಿತಿನ್..

ನಿತಿನ್ ಯಾರು..?

ನಿತಿನ್ ಕಂಪ್ಯೂಟರ್ ಸೈನ್ಸ್ನಲ್ಲಿ ಎಂಟೆಕ್ ಮಾಡಿಕೊಂಡು ಟಿಸಿಎಸ್ ಕಂಪೆನಿಯಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ರಿಸರ್ಚ್ ಲ್ಯಾಬ್ನಲ್ಲಿ ಕೆಲಸ ಮಾಡಿದ್ದ ಅನುಭವ ಹೊಂದಿದ್ದಾರೆ.. ಅವರು ತಮ್ಮ ವೃತ್ತಿ ಬದುಕಿನಲ್ಲಿ ಸ್ಕೇಲಬಲ್ ಆರ್ಕಿಟೆಕ್ಚರ್, ಪ್ರಾಡಕ್ಟ್ ಡಿಸೈನ್, ಮೆಚಿನ್ ಲರ್ನಿಂಗ್ ಹಾಗೂ ಎನ್ಎಲ್ಪಿ ತಂತ್ರಜ್ಞಾನಗಳ ಕುರಿತು ನಿರಂತರ ಸಂಶೋಧನೆ ನಡೆಸಿ ಅಧ್ಯಯನ ಪತ್ರಿಕೆ ಪ್ರಕಟಗೊಳಿಸಿದ್ದರು.. ಆದರೆ ಇವೆಲ್ಲದರ ಹೊರತಾಗಿ ನಿತಿನ್ ಏನಾದರೂ ಹೆಚ್ಚಿನದು ಸಾಧಿಸುವ ತುಡಿತ ಹೊಂದಿದ್ದರು..

ನಿತಿನ್ ತಲೆಯಲ್ಲಿ ನೂರಾರು ಇನ್ನೋವೇಟಿವ್ ಆಲೋಚನೆಗಳಿದ್ದವು.. ಆದರೆ ಅವರಿಗೆ ಸಾಥ್ ನೀಡಬಲ್ಲ ಸಮಾನ ಮನಸ್ಥಿತಿಯ ಟೀಂ ಬೆಂಬಲವಿರಲಿಲ್ಲ.. ಹಾಗಾಗಿ ಅವರ ಆಲೋಚನೆಗಳನ್ನು ಜಾರಿಗೆ ತರಲು ಸಾಧ್ಯವಾಗಿರಲಿಲ್ಲ.. ಇದೇ ಕಾರಣದಿಂದ ನಿತಿನ್ ತಾವು ಕೆಲಸ ಮಾಡುತ್ತಿದ್ದ ಕಂಪೆನಿಯಿಂದ ಹೊರಬಂದರು..

ದೀಪಕ್ ಯಾರು:

ಎನ್ಐಟಿ ರೂರ್ಕೆಲಾದಲ್ಲಿ ಸಿಎಸ್ಈನಲ್ಲಿ ಬಿಟೆಕ್ ಮಾಡಿಕೊಂಡ ದೀಪಕ್ ಹಲವು ಬಾರಿ ಉದ್ಯೋಗಗಳನ್ನು ಬದಲಾಯಿಸಿದ್ದರು.. ತಮ್ಮ 5ನೇ ವರ್ಷದಲ್ಲಿ 5ನೇ ಕಂಪೆನಿಯಾದ ಸಿವೆಂಟ್ನಲ್ಲಿ ಕೆಲಸಕ್ಕೆ ಸೇರಿದ ದೀಪಕ್ ಈ ಅವಧಿಯಲ್ಲಿ ಮೂರು ಹೊಸ ಪ್ರಯತ್ನಗಳಲ್ಲಿ ಕೈ ಸುಟ್ಟುಕೊಂಡಿದ್ದರು.. ಓರ್ವ ಉದ್ದಿಮೆದಾರನಾಗುವ ಯತ್ನದಲ್ಲಿ 10 ಭಿನ್ನ ಭಿನ್ನ ಆಲೋಚನೆಗಳನ್ನು ಕೈಗೆತ್ತಿಕೊಂಡು ಅಭಿವೃದ್ಧಿಪಡಿಸುವ ಮುನ್ನವೇ ಕೈಬಿಟ್ಟಿದ್ದರು..

ಏಕಾಂಗಿಯಾಗಿ ಪ್ರಯತ್ನಿಸಿ ವಿಫಲರಾದ ಬಳಿಕ ಇದರ ನಂಬಿಕೆಯನ್ನೇ ದೀಪಕ್ ಕಳೆದುಕೊಂಡಿದ್ದರು.. ಮಾಡುತ್ತಿರುವ ಕೆಲಸ ಬಿಡಲು ಆಗಲೀ ಅಥವಾ ಹೊಸ ಹೆಜ್ಜೆ ಇಡಲಾಗಲೀ ಅವರ ಕುಟುಂಬದಿಂದ ಯಾವುದೇ ಪ್ರಯತ್ನಕ್ಕೆ ಒಪ್ಪಿಗೆ ಸಿಗುತ್ತಿರಲಿಲ್ಲ.. ಹೊಸ ಪ್ರಯತ್ನಕ್ಕೆ ಬೇಕಾದ ಮೂಲ ಬಂಡವಾಳ ಹೂಡಿಕೆಯೂ ಕಷ್ಟವಿತ್ತು ಈ ಸ್ಥಿತಿಯಲ್ಲಿ ದೀಪಕ್ ಅವರ ಹಿಂದಿನ ಸಂಸ್ಥೆಯಾದ ಹೂಪೋಸ್ನ ಸಿಇಓ ವಿಜಯ್ ಜುಮಾನಿಯವರಿಂದ ಸ್ಪೂರ್ತಿ ಪಡೆದರು.. ಅವರಂತೆ ಉದ್ಯೋಗಿ ಮಿತ್ರ ಸಂಸ್ಥೆ ಸ್ಥಾಪನೆಯ ಕನಸು ಕಂಡರು..

ಪ್ರಾರಂಭಿಕ ಪ್ರಯತ್ನಕ್ಕೆ ಪ್ರಾಥಮಿಕ ತೊಡಕುಗಳು:

ಹೊಸ ಪ್ರಯತ್ನ ಆರಂಭಿಸುವುದು ಅಷ್ಟು ಸುಲಭವಾಗಿರಲಿಲ್ಲ.. ಈ ಮಧ್ಯೆ ನಿತಿನ್ ಟ್ರೈಪೋಟೋ ಅನ್ನುವ ಸ್ಟಾರ್ಟ್ಅಪ್ ಕಂಪೆನಿಗೆ ಸೇರಿಕೊಂಡರು.. ದೀಪಕ್ ಹಾಗೂ ನಿತಿನ್ ಪ್ರತಿ ರಾತ್ರಿ ಭೇಟಿಯಾಗಿ ಸುಮಾರು 10 ನಿಮಿಷಗಳ ಕಾಲ ತಮ್ಮ ಹೊಸ ಆಲೋಚನೆಗಳ ಬಗ್ಗೆ ವಿಚಾರ ವಿಮರ್ಷೆ ನಡೆಸುತ್ತಿದ್ದರು..

ವಾರಾಂತ್ಯದಲ್ಲಿ ವರ್ಕ್ಶಾಪ್ ಮಾಡಿಕೊಂಡ ಇಬ್ಬರೂ ಕೆಲವು ಅಮೂಲ್ಯ ಸಂಪರ್ಕ ಸಾಧಿಸಿದರು.. ಆದರೆ ಅಂತಿಮ ಹಂತದಲ್ಲಿದ್ದಾಗ ನಿತಿನ್ ನೋಯ್ಡಾಗೆ ತೆರಳಿ ಅಲ್ಲಿ ನ್ಯೂರಾನ್ ಅನ್ನುವ ಹೊಸ ಕಂಪೆನಿಗೆ ಸೇರಿಕೊಂಡರು..

ಇದರಿಂದ ಏಕಾಂಗಿಯಾಗಿ ಒತ್ತಡ ಅನುಭವಿಸಿದ ದೀಪಕ್ ಮುಂಬೈಗೆ ತೆರಳಿ ಅಲ್ಲಿ ತಮ್ಮ 6ನೇಯ ಸಂಸ್ಥೆಗೆ ಸೇರಿಕೊಂಡರು.. ಸೇರಿದ ತಿಂಗಳಲ್ಲೇ ನಿತಿನ್ ನ್ಯೂರಾನ್ನ ಮುಖ್ಯ ತಾಂತ್ರಿಕ ಅಧಿಕಾರಿಯಾದರು.. ಹಾಗಾಗಿ ಕೆಲಸದ ಒತ್ತಡದಲ್ಲಿ ಬ್ಯುಸಿಯಾದರು.. ಇದೇ ವೇಳೆ ಅಂಕಿತ್ ಅನ್ನುವ ಯುವಕನ ಎಂಟ್ರಿಯಾಯ್ತು..

ನಿತಿನ್ ಅಂಕಿತ್​ರನ್ನು ಭೇಟಿಯಾದಾಗ..!

ಗುರ್ಗಾಂವ್​​ನ ಜಿಐಟಿಎಮ್​ನಲ್ಲಿ ಕಂಪ್ಯೂಟರ್ ಸೈನ್ಸ್​​ನ ಬಿಟೆಕ್ ಪದವಿ ಪಡೆದಿದ್ದ ಅಂಕಿತ್ ತಮ್ಮ ಕಾಲೇಜು ದಿನಗಳಿಂದಲೇ ಉದ್ದಿಮೆದಾರನಾಗುವ ಕನಸು ಕಂಡಿದ್ದರು.. ಮಹತ್ವಾಕಾಂಕ್ಷೆ ಹೊಂದಿದ್ದ ಅಂಕಿತ್ ಪ್ರಥಮ ನೋಟದಲ್ಲೇ ದೀಪಕ್​ಗೆ ಇಷ್ಟವಾಗಿ ಹೋಗಿದ್ದರು.. ಅಂಕಿತ್ ತಮ್ಮ ಯೋಜನೆಗೆ ಸಾಥ್ ನೀಡುತ್ತಾರೆ ಅನ್ನುವ ಅಭಿಲಾಶೆ ದೀಪಕ್​ರಲ್ಲಿ ಹುಟ್ಟಿತ್ತು..

ಮೂರು ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿದ್ದ ಅಂಕಿತ್ ತಮ್ಮದೇ ಸ್ವಂತ ಕಂಪೆನಿ ಸ್ಥಾಪಿಸುವ ಉಮೇದಿನಲ್ಲಿದ್ದರು.. ಐಇಇಇನಲ್ಲಿ ಕಾರ್ಯಾಚರಣೆ ಹಾಗೂ ಮಾರ್ಕೆಟಿಂಗ್ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ಅನುಭವವೂ ಅಂಕಿತ್​ಗೆ ಇತ್ತು..

ಔಸಮ್ಲಿಯ ಜನನ:

ರಾತ್ರಿ ಸಮಯ ದೆಹಲಿಗೆ ಬರುತ್ತಿದ್ದ ದೀಪಕ್ ಹಾಗೂ ನಿತಿನ್ ತಮ್ಮ ಬಳಿ ಇದ್ದ ಲಘು ಸಮಯದಲ್ಲೇ ಔಸಮ್ಲೀಯ ಉಳಿದ ಯೋಜನೆಯನ್ನು ಪೂರ್ಣಗೊಳಿಸುತ್ತಿದ್ದರು.. ಅಂತಿಮವಾಗಿ 5 ಸತತ ದಿನಗಳ ಬಿಡುವಿಲ್ಲದ ಕಾರ್ಯ ಚಟುವಟಿಕೆಯ ಫಲವಾಗಿ ಔಸಮ್ಲೀ ತನ್ನ ಅಂತಿಮ ರೂಪ ಪಡೆದುಕೊಂಡಿತು..

ಅಷ್ಟು ಕಡಿಮೆ ಅವಧಿಯಲ್ಲಿ ಔಸಮ್ಲಿ ಹುಟ್ಟಿಕೊಂಡ ರೀತಿ ಇಂದಿಗೂ ದೀಪಕ್​ಗೆ ಅಚ್ಚರಿ ಉಂಟುಮಾಡುತ್ತದೆಯಂತೆ.. ನೂರಾರು ಅಡೆತಡೆಗಳು, ಕುಟುಂಬದಿಂದ ಸದಾ ಅಸಹಕಾರ, ಸ್ನೇಹಿತರ ತಿರಸ್ಕಾರದ ಮಧ್ಯೆ ಸವಾಲಾಗಿ ಸ್ವೀಕರಿಸಿದ ಪ್ರಯತ್ನ ಕೊನೆಗೂ ಆ ಮೂವರಿಗೆ ಯಶ ತಂದುಕೊಟ್ಟಿತ್ತು..