ಇನ್ಫೋಸಿಸ್ ಎಂಜಿನಿಯರ್ ಇಂದು ಕನ್ನಡ ಚಿತ್ರರಂಗದ ಭರವಸೆಯ ನಟ

ಉಷಾ ಹರೀಶ್​​

ಇನ್ಫೋಸಿಸ್ ಎಂಜಿನಿಯರ್ ಇಂದು ಕನ್ನಡ ಚಿತ್ರರಂಗದ ಭರವಸೆಯ ನಟ

Monday November 16, 2015,

3 min Read

ಆ ಹುಡುಗ Rank ಸ್ಟೂಡೆಂಟ್ .ಪಾಠಗಳಲ್ಲಿ ಮಾತ್ರವಲ್ಲ, ಆಟದಲ್ಲೂ ಸೈ. ಚಿಕ್ಕಂದಿನಲ್ಲೇ ನಾಟಕದ ಗೀಳು. ಅದಕ್ಕೆ ಕಾರಣ ತಂದೆ. ತಂದೆ ವೃತ್ತಿಯಿಂದ ಶಿಕ್ಷಕಕರಾದರೂ , ಪ್ರವೃತ್ತಿಯಿಂದ ಪೌರಾಣಿಕ ರಂಗಭೂಮಿಯ ನಂಟು ಅಂಟಿಕೊಂಡಿತ್ತು. ಆ ಹುಡುಗ ಅಪ್ಪನಿಗೆ ತಕ್ಕ ಮಗ, ನಾಟಕ ಆಡುತ್ತಲೇ 7ನೇ ತರಗತಿಯಲ್ಲಿ ಮತ್ತು 10 ನೇ ತರಗತಿಯಲ್ಲಿ ಜಿಲ್ಲೆಗೆ ಫಸ್ಟ್ ಬರುತ್ತಾನೆ. ಮುಂದೆ ಯುವಕನಾದ ಹುಡುಗನಿಗೆ ಬಣ್ಣ ನಂಬಿ ಬದುಕು ನಡೆಸುವುದಕ್ಕೆ ಆಗುವುದಿಲ್ಲವಲ್ಲ, ಓದಬೇಕು ಓದಿ ಜೈಸಬೇಕು ಅನ್ನೋ ತವಕ. ಪಿಯುಸಿ ವ್ಯಾಸಾಂಗಕ್ಕಾಗಿ ಮೈಸೂರಿಗೆ ಆಗಮನ. ಸೈನ್ಸ್ ತೆಗದುಕೊಂಡ ಆ ಹುಡುಗ ಮುಂದೆ ಕಾಲೇಜು ಟ್ಯೂಷನ್, ಸ್ಟಡಿ ಮೂರು ಹೊತ್ತು ಇದೆ! ಹಾಗಂತ ಮನಸ್ಸಲ್ಲಿದ್ದ ಬಣ್ಣದಾಸೆ ಸುಮ್ಮನಾಗಲಿಲ್ಲ.

image


ರಂಗಾಯಣದ ಸುತ್ತಮುತ್ತಲೇ ಓಡಾಡುತ್ತಿದ್ದ ಆ ಯುವಕನಿಗೆ ಬಣ್ಣ ಮತ್ತೆ ಮತ್ತೆ ಸೆಳೆಯುತ್ತಿತ್ತು. ಆದ್ರೂ ಪಿಯುಸಿಯಲ್ಲಿ ಡಿಸ್ಟಿಂಕ್ಷನ್, ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜ್​​ನಲ್ಲಿ ಸೀಟ್ ಕೂಡ ಲಭಿಸಿತ್ತು. ಅಭ್ಯಾಸದ ಜೊತೆ ಹವ್ಯಾಸವೂ ಜೋರಾಯ್ತು. ರಂಗಭೂಮಿಯ ನಂಟು ಜೋರಾಗೇ ಬೆಳೆಯಿತು. ಪರಿಣಾಮ ರಾಷ್ಟ್ರಮಟ್ಟದ ನಾಟಕ ಸ್ಪರ್ಧೆಯಲ್ಲಿ 2 ಬಾರಿ ಶ್ರೇಷ್ಠ ನಟ ಪ್ರಶಸ್ತಿಯ ಗರಿ. ಜೊತೆಗೆ ಕ್ಯಾಂಪಸ್ ಇಂಟರ್​​ವೀವ್ಯೂ ನಲ್ಲಿ ಇನ್ಫೋಸಿಸ್​​ನ ಲ್ಲಿ ಉತ್ತಮ ಸಂಬಳದ ಕೆಲಸವೂ ಸಿಕ್ಕಿತು. ಮತ್ತೀನ್ನೇನು ಸ್ವರ್ಗಕ್ಕೆ ಮೂರೇ ಗೇಣು.

image


ಆದರೆ ಆ ಯುವಕನಿಗೆ ಉದ್ಯೋಗ ಕಂಪ್ಲೀಟ್ ತೃಪ್ತಿ ಕೊಡಲಿಲ್ಲ! ನೌಕರನಾಗಿ ಜನ ಕೊಡುವ ಮರ್ಯಾದೆಗಿಂತ ವ್ಯಕ್ತಿತ್ವಕ್ಕೆ ಒಂದು ಐಡೆಂಟಿಟಿ ಸೃಷ್ಟಿಸಿಕೊಳ್ಳಬೇಕು ಎಂಬ ಧೋರಣೆ ಹುಟ್ಟಿಕೊಂಡಿತು. ಹಾಗೂ ಹೀಗೂ ಒಂದೆರಡು ವರ್ಷ ಕೆಲಸ ಮಾಡಿಕೊಂಡು ತಳ್ಳಿದ್ದಾಯಿತು. ಕೊನೆಗೆ ಕೆಲಸಕ್ಕೆ ಗುಡ್​​ಬೈ ಹೇಳಿ ಆಚೆ ಬಂದಾಗ ಮನಸ್ಸು ಸ್ವಚ್ಛಂದವಾಗಿ ಹಾರಾಡುತ್ತಿತ್ತು.

ಮತ್ತೆ ಮುಂದೆ ಅದೇ ರಂಗಾಯಣ. ಅದೇ ಬಣ್ಣ ಅದೇ ಭವಿಷ್ಯ ಇದಕ್ಕೆಲ್ಲಾ ಕುಟುಂಬದ ಬೆಂಬಲವೂ ಸಿಕ್ತು. ಅಂದು ಬಣ್ಣವನ್ನು ನಂಬಿಕೊಂಡು ಬಂದಿದ್ದ ಆ ಹುಡುಗ ಇಂದು ಕನ್ನಡದ ಸೂಪರ್ ಸ್ಟಾರ್​​ಗಳ ಸಾಲಿನಲ್ಲಿ ನಿಲ್ಲಬಲ್ಲ ನಟ ಎಂದು ಗುರುತಿಸಿಕೊಳ್ಳುವ ಮಟ್ಟಕ್ಕೆ ಬೆಳೆದಿರುವ ಹಿರೋ ಅವರು ಮತ್ಯಾರು ಅಲ್ಲ ಸ್ಪೆಷಲ್ ಸ್ಟಾರ್ ಧನಂಜಯ.

image


ಹೌದು ಮೇಲಿನ ಇಷ್ಟೇಲ್ಲಾ ಪೀಠಿಕೆ ಧನಂಜಯ ಅವರ ಇತಿಹಾಸ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಾಳೇನಹಳ್ಳಿಯ 28 ರ ಹರೆಯದ ಧನಂಜಯ ಮೈಸೂರಿನ ರಂಗಾಯಣದ ಮೈಮ್ ​ ರಮೇಶ್ ಅವರ ಗರಡಿಯಲ್ಲಿ ಪಳಗಿದ ಕಲಾವಿದ. ಇನ್ಫೋಸೀಸ್ ಉದ್ಯೋಗಕ್ಕೆ ಗುಡ್​ ಬೈ ಹೇಳಿದ ಇವರು ಬರೋಬ್ಬರಿ ಆರು ಅಡಿ ಎತ್ತರ, ಗೋದಿ ಮೈಬಣ್ಣ,ಆಕರ್ಷಕ ಧ್ವನಿ, ತೀಕ್ಷ್ಣ ನೋಟ ಒಮ್ಮೆ ನೋಡಿದರೆ ಮತ್ತೆ ನೋಡಬೇಕನ್ನುವ ಲುಕ್ ಅವರದು.

ಚಿತ್ರರಂಗಕ್ಕೆ ಗುರು ಕೊಡುಗೆ

ಮಠ ಚಿತ್ರದ ಮೂಲಕ ಚಿತ್ರರಂಗದಲ್ಲಿ ಛಾಪು ಮೂಡಿಸಿದ ಗುರುಪ್ರಸಾದ್ ಒಮ್ಮೆ ಅನಿಮೇಶನ್ ಚಿತ್ರದ ತಯಾರಿಯಲ್ಲಿದ್ದಾಗ ಮಹಾರಾಜನ ಪಾತ್ರಕ್ಕಾಗಿ ಹುಡುಕಾಟ ನಡೆಸಿದ್ದರು. ಆಗ ಅವರ ಕಣ್ಣಿಗೆ ಬಿದ್ದಿದ್ದೆ ಈ ಧನಂಜಯ. ಅವರನ್ನು ನೋಡಿದ ಗುರುಪ್ರಸಾದ್ ಭವಿಷ್ಯದಲ್ಲಿ ನಿನ್ನನ್ನು ಹೀರೊ ಮಾಡುತ್ತೇನೆ ಸಿದ್ಧತೆ ನಡೆಸು ಎಂದು ಹೇಳಿದ್ದರು. ನಂತರದ ದಿನಗಳಲ್ಲಿ ಡೈರೆಕ್ಟರ್ ಸ್ಪೆಷಲ್ ಚಿತ್ರ ಕೈಗೆತ್ತಿಕೊಂಡ ಗುರು ಅದಕ್ಕಾಗಿ ಕೋಮಲ್ ಅವರನ್ನು ಕಾಸ್ಟ್ ಮಾಡಿಕೊಂಡಿದ್ದರು. ಆದರೆ ಕೋಮಲ್ ಆ ಚಿತ್ರದಿಂದ ಹೊರಬಂದಾಗ ನಾಯಕನ ಪಾತ್ರ ಧನಂಜಯ ಅವರ ಪಾಲಾಗುತ್ತದೆ. ಅಲ್ಲಿಗೆ ಧನಂಜಯ ಅವರ ಕನಸು ಸಾಕಾರವಾಗುವತ್ತದೆ.

ಡೈರೆಕ್ಟರ್ ಸ್ಪೆಷಲ್, ಮತ್ತು ಎ ಪಿ ಅರ್ಜುನ್ ಅವರ ರಾಟೆ ಚಿತ್ರಗಳು ಮಾತ್ರ ಈವರೆಗೂ ಬಿಡುಗಡೆಯಾಗಿರುವುದು. ಆದರೂ ಧನಂಜಯ ಅವರಿಗೆ ಅವಕಾಶಗಳಿಗೆ ಬರವಿಲ್ಲ. ಹಲವು ಚಿತ್ರಕ್ಕೂ ಇವರೇ ನಾಯಕ. ಈಗ ಸದ್ಯಕ್ಕೆ ಬಾಕ್ಸರ್, ಅಲ್ಲಮ, ಜೆಸ್ಸಿ, ವಿಜಯಾದಿತ್ಯ ಸೇರಿದಂತೆ ಸಾಕಷ್ಟು ಚಿತ್ರಗಳನ್ನು ಕೈಲ್ಲಿಟ್ಟುಕೊಂಡು ಸ್ಯಾಂಡಲ್​ವುಡ್​​ನ ಬ್ಯುಸಿ ನಟರಾಗಿದ್ದಾರೆ ಧನಂಜಯ. ಪ್ರತಿ ದಿನ ನಾಲ್ಕೈದು ಜನ ನಿರ್ದೇಶಕರು ಇವರನ್ನು ಎಡತಾಕುತ್ತಲೇ ಇದ್ದಾರೆ.

ಈ ಮಧ್ಯೆ ಜಯನಗರ 4 ನೇ ಬ್ಲಾಕ್ ಎಂಬ ಕಿರು ಚಿತ್ರದಲ್ಲೂ ಅಭಿನಯಿಸಿ ಸಾಕಷ್ಟು ಪ್ರಶಂಸೆ ಗಳಿಸಿದ್ದಾರೆ. ಧನಂಜಯ ಅವರಿಗೆ ಭವಿಷ್ಯದಲ್ಲಿ ತಮ್ಮ ಹುಟ್ಟೂರನ್ನಿಟ್ಟುಕೊಂಡು ಸಿನಿಮಾ ನಿರ್ದೇಶಿಸುವ ಆಸೆ ಇದೆ. ವಿಪರೀತ ಓದುವ ಹುಚ್ಚಿರುವ ಇವರಿಗೆ ಕಂಬಾರ ಕಾರಂತ, ತೇಜಸ್ವಿ, ವಸುಧೇಂದ್ರ ಅವರ ಪುಸ್ತಕಗಳು ಇಷ್ಟ. ನಾನು ಇಂದು ಈ ಮಟ್ಟಕ್ಕೆ ಬೆಳೆಯಲು ನನ್ನ ಸ್ನೇಹಿತರು, ಪೋಷಕರು, ಸಂಬಂದಿಗಳ ಕೊಡುಗೆ ಅಪಾರ ಎನ್ನುತ್ತಾರೆ ಧನಂಜಯ.

ಒಬ್ಬ ಶಿಕ್ಷಕರ ಮಗನಾದ ಧನಂಜಯ ಇಂದು ಸ್ಯಾಂಡಲ್ವುಡ್ನ ಭರವಸೆಯ ಸ್ಟಾರ್.ಯಾವುದೇ ಸಿನಿಮಾ ಹಿನ್ನೆಲೆಯಿಲ್ಲದ ಕುಟುಂಬದಿಂದ ಬರದಿದ್ದರೂ ತನ್ನ ಸ್ವ ಪ್ರತಿಭೆಯಿಂದಲೇ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಬಂದ್ದಿದ್ದಾರೆ. ಪ್ರತಿಭೆ ಇದ್ದರೆ ಎಲ್ಲರೂ ಮುಂದೆ ಬರುತ್ತಾರೆ ಎನ್ನುವುದಕ್ಕೆ ಧನಂಜಯ ಒಬ್ಬರೇ ಸಾಕ್ಷಿ.