ಬಣ್ಣದ ಬದುಕೇ ಹಾಗೇ ..ಬಣ್ಣ ಕೆಲವರಿಗೆ ಹೊಟ್ಟೆ ತುಂಬಿಸಿದ್ರೆ ಇನ್ನ ಕೆಲವರಿಗೆ ಸಾವಿನ ಮನೆ ತೋರಿಸುತ್ತೆ ಅಂತಾರೆ. 77 ರ ವಯಸ್ಸಿನಲ್ಲೂ ಕುಂಚ ಹಿಡಿದು ಬಣ್ಣ ಬಳಿದು ಪ್ರತೀ ಶುಕ್ರವಾರ ಥಿಯೇಟರ್ಗಳ ಮುಂದೆ ಕಟೌಟರ್ಗಳನ್ನ ಮಿಂಚಿಸೋ ರಾಜ್ಯದ ಏಕೈಕ ಕಟೌಟರ್ ಕಲಾವಿದ ಚಿನ್ನಪ್ಪ.
ಚಿಕ್ಕ ವಯಸ್ಸಿನಲ್ಲಿ ಪಕ್ಕದ ಮನೆಯಲ್ಲಿ ಬಣ್ಣ ಬಳೆಯುತ್ತಿದ್ದ ಕಲಾವಿದನಿಂದ ಬಣ್ಣ ಬಳಿಯೋದನ್ನ ಕಲಿತ ಚಿನ್ನಪ್ಪ ಈಗಲೂ ಕೂಡ ಕಟೌಟ್‍ಗೆ ಬಣ್ಣ ಬಳಿಯೋ ಏಕೈಕ ಕಲಾವಿದ. ರಾಜ್ಯದ 400ಕ್ಕೂ ಹೆಚ್ಚು ಚಿತ್ರಮಂದಿರದಲ್ಲೂ ಇಂದಿಗೂ ನಿಲ್ಲೋದು ಚಿನ್ನಪ್ಪನ ಕೈನಲ್ಲಿ ಅರಳೋ ಕಟೌಟರ್ಗಳು ಅಂದ್ರೆ ನೀವು ನಂಬಲೇ ಬೇಕು.
ಸುಮಾರು 4000 ಸಿನಿಮಾಗಳ ಕಟೌಟರ್ಗಳಿಗೆ ಬಣ್ಣ ಹಚ್ಚಿರೋ ಚಿನ್ನಪ್ಪಇಲ್ಲಷ್ಟೇಅಲ್ಲದೆ ವಿದೇಶದಲ್ಲೂ ಫೇಮಸ್‍ಆಗಿದ್ದಾರೆ…ಚಿನ್ನಪ್ಪನ ಕೈನಲ್ಲಿ ಅರಳಿರೋ ಹಂಪಿಯ ವಿರೂಪಾಕ್ಷ ದೇವಾಲಯ ವಿದೇಶದ ಮಾರುಕಟ್ಟೆಯಲ್ಲಿ ಇಂದಿಗೂ ಬಾರಿ ಬೇಡಿಕೆ ಇದೆ..
15ವರ್ಷಗಳ ಹಿಂದೆ ಕಾಲ ಬಾಲಿವುಡ್ ಸಿನಿಮಾಗಳ ಕಟೌಟ್ಟರ್ ಗಳಿಗೆ ಬಣ್ಣ ಹಚ್ಚಿದ ಚಿನ್ನಪ್ಪ ಆಗ ಪಡೆದ ಸಂಭಾವನೆ ಕೇವಲ 10 ರೂಪಾಯಿ . 20 ಅಡಿಯಿಂದ 80 ಅಡಿ ತನಕ ಕಟೌಟ್ ರೆಡಿ ಮಾಡೋ ಚಿನ್ನಪ್ಪ ಈ ಇಳಿ ವಯಸ್ಸಿನಲ್ಲೂ ತಾವೇ ಖುದ್ದು ನಿಂತು ಬಣ್ಣ ಬಳಿಯುತ್ತಾರೆ. ಚಿನ್ನಪ್ಪನಿಗೆ ಸಾಥ್ ನೀಡೋಕೆ ಮಗ ಇದ್ರು ಕೂಡ ಚಿನ್ನಪ್ಪನೇ ಕಟೌಟರ್ಗಳಿಗೆ ಬಣ್ಣ ಬಳಿಯಬೇಕು ಅನ್ನೋದು ಚಿನ್ನಪ್ಪನ ಮಾತು. ಅಮಿತಾಬ್ ಬಚ್ಚನ್ , ಕಮಲ್ ಹಾಸನ್, ರಜನಿಕಾಂತ್, ಡಾ. ರಾಜ್ಕುಮಾರ್ ಹೀಗೆ ದೊಡ್ಡ ದೊಡ್ಡ ಸ್ಟಾರ್‍ಗಳ ಕಟೌಟರ್ಗಳಿಗೆ ಬಣ್ಣ ಹಚ್ಚಿದ್ದಾರೆ.
ಬೆಳ್ಳಿಗ್ಗೆಯಿಂದ ಸಂಜೆ 6 ತನಕ ಕಟೌಟ್ಟರ್ ಕೆಲಸ ಮಾಡೋ ಚಿನ್ನಪ್ಪ ನಂತ್ರ ಕರ್ನಾಟಕದ ಸುಪ್ರಸಿದ್ದ ದೇವಸ್ಥಾನಗಳನ್ನ ತನ್ನ ಕುಂಚದಲ್ಲಿ ಸೆರೆ ಹಿಡಿಯೋ ಕೆಲಸ ಮಾಡುತ್ತಾರೆ. ಕಾರಣ ಏನಂದ್ರೆ ಎಲ್ಲಾ ಮಕ್ಕಳಿಗೂ ಕರ್ನಾಟಕದ ಪ್ರತೀ ದೇವಸ್ಥಾನಕ್ಕೂ ಭೇಟಿ ನೀಡೋದಕ್ಕೆ ಸಾಧ್ಯ ಆಗಲ್ಲ. ಆದ್ರಿಂದ ನಾನು ಅದನ್ನ ಸೆರೆ ಹಿಡಿಯುತ್ತೇನೆ . ದೂರ ಹೋಗಿ ನೋಡಲು ಆಗದ ಮಕ್ಕಳಿಗೆ ಇಲ್ಲೇ ತೋರಿಸೋಣ ಅನ್ನೋ ಆಸೆ ಚಿನ್ನಪ್ಪನವ್ರದ್ದು. ಚಿನ್ನಪ್ಪರ ಕಲೆಯನ್ನ ಮೆಚ್ಚಿ ಸೂಪರ್ ಸ್ಟಾರ್‍ಅಮಿತಾಬ್ ಬಚ್ಚನ್ ಹಾಗೂ ರಜನಿಕಾಂತ್ ಖುದ್ದಾಗಿ ಬಂದು ಭೇಟಿ ಮಾಡಿ ಈ ಕಲಾವಿದನನ್ನು ಹಾಡಿ ಹೊಗಳಿದ್ದಾರೆ..ಚಿನ್ನಪ್ಪನ ಬೇಟಿ ಮಾಡಿದ ರಜನಿಕಾಂತ್ ಹಾಗೂ ಡಾ. ರಾಜ್ಕುಮಾರ್ ಚಿನ್ನಪ್ಪನನ್ನ ನೀವು ದೊಡ್ಡ ಅಪ್ಪಎಂದಿಗೂ ಚಿನ್ನಪ್ಪಅಲ್ಲ ಎಂದು ಬಿರುದು ಕೊಟ್ಟು ಸಂತೋಷ ಪಡಿಸಿದ್ದಾರೆ..!
ಕರ್ನಾಟಕದಲ್ಲಿ ಮಾತ್ರವಲ್ಲದೆ ಮುಂಬೈ ಹಾಗೂ ಕೊಲ್ಕತ್ತಾದಲ್ಲಿಯೂ ಚಿನ್ನಪ್ಪ ಮಾಡಿರೋ ಕಟೌರ್ಗಳು ಇಂದಿಗೂ ರಾರಾಜಿಸುತ್ತಿವೆ.. ಆಗಲೇ ಹೇಳಿದ ಹಾಗೇ ಬಣ್ಣ ಕೆಲವೊಮ್ಮೆಹೊಟ್ಟೆ ತುಂಬಿಸಿದ್ರೆ ಇನ್ನೂ ಕೆಲವೊಮ್ಮೆ ಹೊಟ್ಟೆ ಮೇಲೆ ಹೊಡೆದು ಬಿಡುತ್ತೆ...ಅನ್ನೋದಕ್ಕೆಚಿನ್ನಪ್ಪಕೂಡ ಸಾಕ್ಷಿ... ಹಲವಾರು ಜನರು ಕಟೌಟರ್ ಮಾಡಿಸಿ ಹಣ ನೀಡದಿದ್ದ ಹಿನ್ನಲೆಯಲ್ಲಿ ಚಿನ್ನಪ್ಪ ಈ ಕೆಲಸದ ಸಹವಾಸ ಸಾಕು ಅಂತ ಎರಡು ವರ್ಷ ಬಣ್ಣದ ಬದುಕಿಗೆ ಬ್ರೇಕ್ ಕೊಟ್ಟು ಮನೆಯಲ್ಲೇ ಇದ್ದು ಬಿಟ್ಟಿದ್ರು. ಎರಡು ವರ್ಷದ ನಂತ್ರರಾಜಕೀಯ ಹಾಗೂ ಚಿತ್ರರಂಗದ ವ್ಯಕ್ತಿಗಳ ಒತ್ತಾಯಕ್ಕೆ ಮಣಿದು 2006 ರಲ್ಲಿ ಮತ್ತೆ ಚಿನ್ನಪ್ಪ ಕೆಲಸವನ್ನು ಕೈಗೆತ್ತಿಕೊಂಡ್ರು..
2006ರಲ್ಲಿ ತಮ್ಮದೆಯಾದ ರಾಜ್ಕಮಾಲ್ ಅನ್ನೋಎಕ್ಸಿಬಿಷನ್ ಹಾಗೂ ಚಿಕ್ಕದೊಂದು ಗ್ಯಾಲರಿಯನ್ನ ಓಪನ್ ಮಾಡಿದ್ದಾರೆ. ಇಲ್ಲಿ ಚಿನ್ನಪ್ಪ ಇಷ್ಟು ದಿನ ಮಾಡಿರೋ ಅದ್ಬುತ ಪೇಯಿಂಟಿಂಗ್ಗಳನ್ನ ನೋಡಬಹದು. ಚಿನ್ನಪ್ಪ ಬಳಸೋ ಬಣ್ಣಗಳನ್ನ ಈಗಲೂ ಕೊಲ್ಕತ್ತಾದಿಂದ ತರಿಸಿಕೊಳ್ತಾರೆ. ಅಷ್ಟೇ ಅಲ್ಲದೆ ವಿಭಿನ್ನವಾದ ಬಣ್ಣಗಳನ್ನ ಬಳಸಿಕೊಂಡು ಚಿತ್ರವನ್ನ ಬಣ್ಣದಲ್ಲಿ ಅರಳಿಸೋ ಸಾಮರ್ಥ್ಯ ಚಿನ್ನಪ್ಪ ಅವ್ರಿಗಿದೆ. ಇವ್ರ ಕೈಯಲ್ಲಿ ಮೂಡಿರೋ ಹಂಪಿಯ ವಿರೂಪಾಕ್ಷ ದೇವಾಲಯದ ಪೇಯಿಂಟಿಂಗ್ ಗೆ ಈಗಲೂ ಎಲ್ಲಿಲ್ಲದ ಬೇಡಿಕೆಇದೆ...ಇನ್ನೂ ಬಣ್ಣದ ಬದುಕನ್ನ ರೂಡಿಸಿಕೊಳ್ಳಬೇಕು ಅಂತ ಆಸೆ ಇರುವವರು ಚಿನ್ನಪ್ಪಅವ್ರ ಬಳಿ ಪೇಯಿಂಟಿಂಗ್ ಕ್ಲಾಸ್ ಗಳಿಗೂ ಸೇರಬಹುದು.
ಚಿನ್ನಪ್ಪ ಮಾಡಿರೋ ವಿಧಾನ ಸೌಧದ ಚಿತ್ತಾರ ಈಗಲೂ ವಿಧಾನಸೌಧದಲ್ಲಿದೆ. ಅಲ್ಲಷ್ಟೆಅಲ್ಲದೆ ಹೈಕೋರ್ಟ್ ಹಾಗೂ ಸಾಕಷ್ಟು ಸೆಲೆಬ್ರೆಟಿ ಮತ್ತು ರಾಜಕೀಯ ವ್ಯಕ್ತಿಗಳ ಮನೆಯಲ್ಲೂ ಚಿನ್ನಪ್ಪರನ್ನ ನೆನಪು ಮಾಡೋ ಚಿತ್ತಾರಗಳು ಗೋಡೆ ಮೇಲಿವೆ.
70 ವರ್ಷ ವಯಸ್ಸಿನ ಚಿನ್ನಪ್ಪ ಬಣ್ಣವನ್ನೇ ಬದುಕಾಗಿಸಿಕೊಂಡಿದ್ದಾರೆ. ಚಿನ್ನಪ್ಪತನಗೆಂದು ಏನು ಮಾಡಿಕೊಂಡಿಲ್ಲ..ದೇಶ ವಿದೇಶದಲ್ಲಿ ಚಿನ್ನಪ್ಪರ ಕೆಲಸಕ್ಕೆ ಮನ್ನಣೆ ಸಿಕ್ಕಿದೆ ನಿಜ. ಆದ್ರೆ ರಾಜ್ಯದಲ್ಲಿ ನನ್ನ ಕೆಲಸಕ್ಕೆ ಬೆಲೆ ಇಲ್ಲಅಂತಾರೆಚಿನ್ನಪ್ಪ. ಇಷ್ಟೇಲ್ಲ ಪ್ರಸಿದ್ದಿ ಪಡೆದಿರೋ ಚಿನ್ನಪ್ಪ ತನಗಾಗಿ ರಾಜಾಜಿನಗರದಲ್ಲಿ ಒಂದುಅಂಗಡಿಗೆ ಬೇಕಾಗುವ ಜಾಗವನ್ನ ಮಾಡಿಕೊಂಡಿದ್ದಾರೆ. ಅದನ್ನ ಬಿಟ್ಟರೆ ಚಿನ್ನಪ್ಪನ ಬಳಿ ಈಗಲೂ ಸ್ವಂತ ಮನೆಯೂ ಇಲ್ಲ. ಬಣ್ಣವೇ ಸರ್ವಸ್ವವನ್ನಾಗಿಸಿ ಕೊಂಡಿರೋ ಚಿನ್ನಪ್ಪ ಬಣ್ಣ ಬಳಿಯೋದನ್ನ ನಿಲ್ಲಿಸಿದ್ರೆ ಇನ್ನೂ ಮುಂದಕ್ಕೆಚಿತ್ರರಂಗದಲ್ಲಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ಕಟೌಟ್ಟರ್ ಸಂಸ್ಕೃತಿಯೂ ಅಂತ್ಯ ಆಗೋದು ನಿಜ. ಆದ್ರೆ ಈ ವಯಸ್ಸಿನಲ್ಲೂ ಚಿರಯುವಕರನ್ನೂ ನಾಚಿಸುಂತೆ ಕೆಲಸ ಮಾಡೋ ಚಿನ್ನಪ್ಪಅವ್ರಿಗೆ ಹಾಗೂ ಅವ್ರ ಕೆಲಸಕ್ಕೊಂದು ಹ್ಯಾಟ್ಸ್ಅಫ್ ಹೇಳಲೇಬೇಕು.
Related Stories
March 14, 2017
March 14, 2017
March 14, 2017
March 14, 2017
Stories by AARABHI BHATTACHARYA