ಮಿಮಿಕ್ರಿ ಮಾಡುತ್ತಿದ್ದವ ಚಿತ್ರರಂಗದ ಗೋಲ್ಡನ್ ಸ್ಟಾರ್

1

ಮಿಮಿಕ್ರಿ ಮತ್ತು ಆರ್ಕೆಸ್ಟ್ರಾ ಗಳಲ್ಲಿ ನಾಟಕ ಮಾಡುತ್ತಿದ್ದ ಹುಡುಗ ಇಂದು ಗೋಲ್ಡನ್ ಸ್ಟಾರ್ ಆಗಿದ್ದಾರೆ. ಅವರದೇ ಆದ ಅಭಿಮಾನಿ ಬಳಗ ಇದೆ. ಅವರ ಅಭಿನಯದ ಮುಂಗಾರುಮಳೆ ಚಿತ್ರ ಚಿತ್ರರಂಗದ ಎಲ್ಲ ದಾಖಲೆಗಳನ್ನು ಮುರಿದು ಹಾಕಿದೆ. ಗಣೇಶ್ ಕಾಮಿಡಿ ಟೈಮ್ ಎಂಬ ಟಿವಿ ಶೋ ನಾ ಮೂಲಕ ಯಶಸ್ಸು ಗಳಿಸಿದ ನಂತರ ನಾಯಕನಾಗಿ ಸತತ ಯಶಸ್ಸು ಕಂಡು ಇವಾಗ ಕನ್ನಡ ಚಿತ್ರರಂಗದಲ್ಲಿ ಗೋಲ್ಡನ್ ಸ್ಟಾರ್ ಆಗಿದ್ದಾರೆ. ಅಷ್ಟೇ ಅಲ್ಲದೆ ನಿರ್ಮಾಪಕ ,ಗಾಯಕ ಹೀಗೆ ಹಲವು ರೀತಿಯಲ್ಲಿ ಜನಗಳಿಗೆ ಮನೋರಂಜನೆ ನೀಡುತ್ತಿದ್ದಾರೆ.

ಆರಂಭಿಕ ಜೀವನ:

ಗಣೇಶ್ ಬೆಂಗಳೂರಿನ ಅಡಕಮರನಹಳ್ಳಿ ಯಲ್ಲಿ ಜನಿಸಿದರು. ಅವರ ತಂದೆ ಕಿಶನ್ ಮತ್ತು ತಾಯಿ ಸುಲೋಚನಾ. ಗಣೇಶ್ ಡಿಪ್ಲೊಮಾ ಪದವಿಯನ್ನು ಮುಗಿಸಿದ ನಂತರ ಗುಟ್ಟು ಎಂಬ ಟೆಲಿಫಿಲ್ಮ್ ಮೂಲಕ ಅವರ ನಟನ ವೃತ್ತಿಯನ್ನು ಆರಂಭಿಸಿದರು. ಆದರೆ ಗುಟ್ಟು ಇಂದಿಗೂ ಟಿವಿ ಯಲ್ಲಿ ಪ್ರಸಾರಗೊಂಡಿಲ್ಲ. ನಂತರ ಹಲವು ಟಿವಿ ಧಾರಾವಾಹಿಗಳಲ್ಲಿ ಅಭಿನಯವನ್ನು ಆರಂಭಿಸಿದರು ಸಾಧನೆ, ಭಾಗ್ಯ, ಯದ್ವಾ ತದ್ವ, ವಠಾರ ಹೀಗೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದರು ಅಷ್ಟೇ ಅಲ್ಲದೆ ಹಲವು ಚಿತ್ರಗಳಲ್ಲಿ ಸಹ ನಟರಾಗಿಯೂ ಕೂಡ ಅಭಿನಯಿಸಿದರು ಅಮೃತಧಾರೆ, ಅಹಂ ಪ್ರೇಮಾಸ್ಮಿ ಮುಂತಾದವು .ಜೊತೆ ಜೊತೆ ಗೆ ಜೀವನಕ್ಕಾಗಿ ಹಲವು ಬೀದಿ ನಾಟಕ, ಆರ್ಕೆಸ್ಟ್ರಾಗಳಲ್ಲಿ ಮಿಮಿಕ್ರಿ, ನೃತ್ಯ ಮಾಡುತ್ತಾ ಜೀವನ ಸಾಗಿಸಿದರು. ನಾಯಕರಾಗುವ ಮೊದಲು ಬಹಳಷ್ಟು ಕಷ್ಟ ನೋಡಿದ್ದಾರೆ . ಅವರಿಗೆ ಕೇವಲ ದಿನದ ಹಣಕ್ಕಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಒಂದು ಬೈಕ್ ಕೊಳ್ಳಲು ಕಷ್ಟವಾಗಿತ್ತು. ನಂತರ ಅವರಿಗೆ ಉದಯ ಟಿವಿಯಲ್ಲಿ ಕಾಮಿಡಿ ಟೈಮ್ ಗೆ ನಿರೂಪಕರಾಗುವ ಅವಕಾಶ ದೊರೆಯಿತು ಆ ಕಾರ್ಯಕ್ರಮದ ಮೂಲಕ ಕನ್ನಡದ ಜನರ ಮನ ಗೆದ್ದರು ಕರ್ನಾಟಕದಲ್ಲಿ ಕಾಮಿಡಿ ಟೈಮ್ ಗಣೇಶ್ ಎಂದು ಮನೆ ಮಾತಾದರು. ಆ ಶೋ ಅದ್ಭುತ ಯಶಸ್ಸು ಪಡೆಯಿತು. ಅವರು ಕಾಮಿಡಿ ಟೈಮ್ ನಲ್ಲಿ ನಮಸ್ಕಾರ ನಮಸ್ಕಾರ ಎಂದು ಹೇಳುತ್ತಾ ಎಲ್ಲರ ಮನಗೆದ್ದರು ಮತ್ತು ನಮಸ್ಕಾರ ಅನ್ನುವ ಅವರ ರೀತಿ ಭಾಳ ಪ್ರಸಿದ್ಧಿ ಆಯಿತು.

ಸಿನಿಮಾ ಜೀವನ:

ಆ ಶೋನ ಅದ್ಭುತ ಯಶಸ್ಸಿನ ಪರಿಣಾಮ ಚೆಲ್ಲಾಟ ಎಂಬ ಚಿತ್ರಕ್ಕೆ ನಾಯಕರಾಗುವ ಅವಕಾಶ ದೊರಕಿತು ಆ ಚಿತ್ರಕ್ಕೆ ಆವಾಗಲೇ ಯಶಸ್ಸು ಪಡೆದಿದ್ದ ರೇಖಾ ನಾಯಕಿ ಆಗಿದ್ದರು . ಆ ಚಿತ್ರ 100 ದಿನಗಳ ಪ್ರದರ್ಶನ ಕಂಡು ಯಶಸ್ವಿಯಾಯಿತು. ನಂತರ 2006 ರಲ್ಲಿ ತೆರೆಕಂಡ ಯೋಗರಾಜ್ ಭಟ್ ನಿರ್ದೇಶನದ ಮುಂಗಾರುಮಳೆ ಚಿತ್ರಕ್ಕೆ ನಾಯಕರಾಗುವ ಅವಕಾಶ ದೊರೆಯಿತು ಆ ಚಿತ್ರ ಸತತ ಒಂದು ವರ್ಷಕ್ಕೂ ಹೆಚ್ಚು ದಿನಗಳ ಪ್ರದರ್ಶನ ಕಂಡಿತು ಮತ್ತು ಆ ಚಿತ್ರದ ಎಲ್ಲ ಹಾಡುಗಳು ಜನಪ್ರಿಯವಾದವು , ಕನ್ನಡ ಚಿತ್ರರಂಗದ ಎಲ್ಲ ದಾಖಲೆಗಳನ್ನು ಮುರಿದು ಹೊಸದೊಂದು ಇತಿಹಾಸ ಸೃಷ್ಟಿಸಿತು.

ನಂತರ ಗಣೇಶ್ ಅಭಿನಯದ ಗಾಳಿಪಟ, ಚೆಲುವಿನ ಚಿತ್ತಾರ, ಕೃಷ್ಣ, ಹುಡುಗಾಟ, ಅರಮನೆ ಎಲ್ಲ ಚಿತ್ರಗಳು ಒಂದರ ನಂತರ ಒಂದರಂತೆ ಎಲ್ಲ ಚಿತ್ರಗಳು ಯಶಸ್ವಿ ಆದವು . ನಂತರ ಗಣೇಶ್ ಬಹುಬೇಡಿಕೆಯ ನಟರಾದರು. ಕನ್ನಡ ಚಿತ್ರರಂಗದಲ್ಲಿ ಗೋಲ್ಡನ್ ಸ್ಟಾರ್ ಆದರು ಅವರಿಗೆ ಆದ ಹೊಸದೊಂದು ಸ್ಥಾನ ದೊರಕಿತು.

ನಂತರ 24 ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ ಗಣೇಶ್ ಮತ್ತು ಅಮೂಲ್ಯ ಜೋಡಿ ಕರ್ನಾಟಕದ ಜನತೆಗೆ ಮೆಚ್ಚುಗೆ ಆಯಿತು. ಅವರು ಅಭಿನಯಿಸಿದ ಚೆಲುವಿನ ಚಿತ್ತಾರ ಮತ್ತು ಶ್ರಾವಣಿ ಸುಬ್ರಮಣ್ಯ ಯಶಸ್ವಿ ಆಯಿತು. ಗಣೇಶ್ ಮಳೆಯಲಿ ಜೊತೆಯಲಿ ಮೂಲಕ ನಿರ್ಮಾಪಕರಾಗಿಯೂ ಕೂಡ ಯಶಸ್ಸು ಪಡೆದರು ಅದೇ ಚಿತ್ರದಲ್ಲಿ ಗಾಯಕರಾಗಿಯೂ ಕೂಡ ಜನರಿಗೆ ಇಷ್ಟವಾದರು ಅವರೇ ಹಾಡಿದ ಹಾಡು ಬಹಳ ಜನಪ್ರಿವಾಯಿತು. ನಂತರ ಕೂಲ್ ಚಿತ್ರದ ಮೂಲಕ ನಿರ್ದೇಶಕ ಕೂಡ ಆದರು. 

ಅವರಿಗೆ ಹಲವು ಪ್ರಶಸ್ತಿಗಳು ದೊರಕಿವೆ. ಗಾಳಿಪಟ ಮತ್ತು ಮಳೆಯಲಿ ಜೊತೆಯಲಿ ಚಿತ್ರದ ಅಭಿನಯಕ್ಕಾಗಿ ಫಿಲ್ಮ್ಫೇರ್ ಪ್ರಶಸ್ತಿ ದೊರಕಿದೆ.

ಗಣೇಶ್11 ಫೆಬ್ರವರಿ 2008 ರಲ್ಲಿ ಶಿಲ್ಪ ಅವರನ್ನು ವರಿಸಿದರು . ಶಿಲ್ಪ ಕೂಡ ಗೆಣೇಶ್ ಹಿಂದೆ ನಿಂತು ಅವರಿಗೆ ಸ್ಪೂರ್ತಿ ಆಗಿದ್ದಾರೆ . ಈ ಜೋಡಿಗೆ ಚಾರಿತ್ಯ ಎಂಬ ಮಗಳು ಕೂಡ ಇದ್ದಾಳೆ.ಗಣೇಶ್ ಸಿನಿಮಾ ಅಲ್ಲದೆ ಹಲವು ಸಮಾಜ ಸೇವೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಲವು ಜನರಿಗೆ ಸಹಾಯ ಮಾಡಿದ್ದಾರೆ. ಪ್ರತಿ ವರ್ಷ ತಮ್ಮ ಹುಟ್ಟಿದ ಹಬ್ಬದಂದು ಅನಾಥಶ್ರಮಗಳಿಗೆ ಭೇಟಿ ನೀಡಿ ಸಹಾಯ ಮಾಡುತ್ತಾರೆ.

ಗಣೇಶ್ 2014 ರಲ್ಲಿ ಈಟಿವಿ ಯ ಸೂಪರ್ ಮಿನಿಟ್ ರಿಯಾಲಿಟೀ ಶೋ ನಡೆಸಿಕೊಟ್ಟರು ಈ ಒಂದು ಕಾರ್ಯಕ್ರಮ ಕೂಡ ಕನ್ನಡ ಜನತೆಯ ಮನ ಗೆದ್ದಿತ್ತು. ಆ ಕಾರ್ಯಕ್ರಮದಲ್ಲಿ ಎಲ್ಲ ಪ್ರಸಿದ್ಧ ನಾಯಕ ನಾಯಕಿ ಭಾಗವಹಿಸಿದರು ರವಿಚಂದ್ರನ್, ಶಿವರಾಜ್‍ಕುಮಾರ್, ಮಾಲಾಶ್ರೀ, ಶ್ರುತಿ ಮುಂತಾದವರು. ಕ್ರಿಕೆಟ್ ತಾರೆ ಶ್ರೀಶಾಂತ್ ಕೂಡ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಅವರು ಕೂಡ ಗಣೇಶ್ ನಿರೂಪಣೆ ಹಾಗೂ ಅಭಿನಯದ ಮೆಚ್ಚುಗೆ ವ್ಯಕ್ತ ಪಡಿಸಿದರು. ಗಣೇಶ್ ಅವರ 25 ನೇ ಬುಗುರಿ ಚಿತ್ರ ಇನ್ನೇನು ತೆರೆಕಾಣಲಿದೆ.

ಅಭಿನಯಿಸಿದ ಚಿತ್ರಗಳು:

ಇದುವರೆಗೆ ಗಣೇಶ್ ಚೆಲ್ಲಾಟ, ಮುಂಗಾರು ಮಳೆ, ಹುಡುಗಾಟ, ಚೆಲುವಿನ ಚಿತ್ತಾರ, ಕೃಷ್ಣ, ಗಾಳಿಪಟ, ಅರಮನೆ, ಬೊಂಬಾಟ್, ಸಂಗಮ, ಸರ್ಕಸ್, ಉಲ್ಲಾಸ ಉತ್ಸಾಹ, ಮಳೆಯಲಿ ಜೊತೆಯಲಿ, ಏನೋ ಒಂಥರಾ, ಕೂಲ್, ಮದುವೆಮನೆ, ಶೈಲೂ, ಮುಂಜಾನೆ, ರೋಮೀಯೋ, ಮಿಸ್ಟರ್ 420, ಆಟೋರಾಜ, ಸಕ್ಕರೆ, ಶ್ರಾವಣಿ ಸುಬ್ರಮಣ್ಯ, ದಿಲ್ ರಂಗೀಲಾ, ಖುಷಿ ಖುಷಿಯಾಗಿ ಹೀಗೆ ಒಟ್ಟೂ 24 ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಅವರ 25 ನೇ ಚಿತ್ರ ಎಂ. ಡಿ ಶ್ರೀಧರ್ ನಿರ್ದೇಶನದ ಬುಗುರಿ ತೆರೆಕಾಣಬೇಕಿದೆ.