ಬಳಕೆದಾರರ ಅನುಭವದ ಮೇಲಿನ ಸಾಮಾನ್ಯ ಪ್ರಶ್ನೆಗಳು

ಟೀಮ್​​ ವೈ.ಎಸ್​​.

ಬಳಕೆದಾರರ ಅನುಭವದ ಮೇಲಿನ ಸಾಮಾನ್ಯ ಪ್ರಶ್ನೆಗಳು

Monday November 02, 2015,

2 min Read

ಬಳಕೆದಾರರ ಅನುಭವ ಅನ್ನೋದು ಈಗ ಪ್ರಚಲಿತದಲ್ಲಿರುವ ವಿಚಾರ. ಅದಕ್ಕೆ ತಕ್ಕಂತೆ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಎಲ್ಲರೂ ಇಚ್ಛಿಸ್ತಾರೆ. ಆದ್ರೆ ಬಳಕೆದಾರರ ಅನುಭವ ಅನ್ನೋದ್ರ ನಿಜವಾದ ಅರ್ಥವನ್ನು ಕೆಲವೇ ಕೆಲವರು ಮಾತ್ರ ತಿಳಿದಿದ್ದಾರೆ. ಯೂಸರ್ ಎಕ್ಸ್​​​ಪೀರಿಯೆನ್ಸ್ ಅಂದ್ರೆ ಸೌಂದರ್ಯ ಶಾಸ್ತ್ರವೇ? ಅಥವಾ ನೋಡುಗರ ದೃಷ್ಟಿಕೋನವೇ? ಅಥವಾ ಅದರಲ್ಲಿ ಇನ್ನೇನಾದ್ರೂ ಇದೆಯಾ? ಹಾಗೇನಾದ್ರೂ ಆದ್ರೆ ವಾಸ್ತವವನ್ನು ಅಳೆಯುವುದು ಹೇಗೆ? ಬಳಕೆದಾರರ ಅನುಭವದಿಂದ ಸಿಗುವ ಫಲಿತಾಂಶ ವಿನ್ಯಾಸವೋ ಅಥವಾ ಮರು ವಿನ್ಯಾಸವೋ? ಅಂತಿಮವಾಗಿ ಯೂಸರ್ ಎಕ್ಸ್​​ಪೀರಿಯೆನ್ಸ್ ಹಾಗೂ ಯೂಸರ್ ಇಂಟರ್‍ಫೇಸ್ ನಡುವಣ ವ್ಯತ್ಯಾಸವೇನು? ಇವೆಲ್ಲಾ ಗ್ರಾಹಕರು ಕೇಳುವ ಸರ್ವೇಸಾಮಾನ್ಯ ಪ್ರಶ್ನೆಗಳು.

image


ವಿನ್ಯಾಸ ಸರಿಯಾಗಿದೆ ಎಂದಾದಲ್ಲಿ ಬಳಕೆದಾರರ ಅನುಭವಕ್ಕಾಗಿ ಹಣ ಹೂಡುವ ಅಗತ್ಯವೇನು..?

ಬಳಕೆದಾರರ ಅನುಭವ ಹಾಗೂ ಬಳಕೆದಾರರ ಇಂಟರ್‍ಫೇಸ್ ಮಧ್ಯೆ ಪ್ರತ್ಯೇಕವಾದ ಅರ್ಥವೇ ಇದೆ. ಒಂದೊಳ್ಳೆಯ ಯುಎಕ್ಸ್ ಎಂದರೆ ಉತ್ತಮವಾದ ಬಳಕೆದಾರರ ಇಂಟರ್‍ಫೇಸ್ ಎಂದರ್ಥ. ಆದ್ರೆ ಸುಂದರವಾದ ಬಳಕೆದಾರರ ಇಂಟರ್‍ಫೇಸ್ ಕಡ್ಡಾಯವಾಗಿ ಒಂದೊಳ್ಳೆ ಯುಎಕ್ಸ್ ಆಗಬೇಕೆಂದೇನಿಲ್ಲ. ಅದರಲ್ಲೂ ಡಿಜಿಟಲ್ ಉತ್ಪನ್ನಗಳ ವಿಚಾರದಲ್ಲಿ ಒಳ್ಳೆಯ ವಿನ್ಯಾಸ ಅಥವಾ ಸುಂದರ ವೆಬ್‍ಸೈಟ್ ಬಳಕೆದಾರರಿಗೆ ಉತ್ತಮ ಅನುಭವ ಉಂಟುಮಾಡಬೇಕೆಂದೇನಿಲ್ಲ. ಬಳಕೆದಾರ ವೆಬ್‍ಸೈಟ್ ಅಥವಾ ಆ್ಯಪ್ ಬಳಕೆಯನ್ನು ಕೇವಲ ಎಂಜಾಯ್ ಮಾಡುತ್ತ ಅಂದುಕೊಂಡ ಕಾರ್ಯವನ್ನು ಮಾಡಲಾಗದೆ ಹತಾಶೆಗೊಳ್ಳುವಂತಾಗಬಾರದು. ಬಳಕೆದಾರರ ಅನುಭವದ ವಿನ್ಯಾಸ ಉತ್ಪನ್ನ ತಯಾರಿಕೆಯನ್ನು ಸರಳಗೊಳಿಸುತ್ತದೆ. ಉತ್ಪನ್ನದ ಕಾರ್ಯವೈಖರಿಯಲ್ಲೂ ದಕ್ಷತೆಯನ್ನು ಕಾಣಬಹುದು.

ಯುಎಕ್ಸ್ ವಿನ್ಯಾಸಕ್ಕೆ ಹೆಚ್ಚು ಸಮಯ ಏಕೆ ಬೇಕು..?

ಬಳಕೆದಾರರ ಅನುಭವದ ವಿನ್ಯಾಸ ಅತ್ಯಂತ ಸುದೀರ್ಘ ಪ್ರಕ್ರಿಯೆ. ಹಾಗಾಗಿಯೇ ಉತ್ಪನ್ನಗಳ ಬಿಡುಗಡೆ ಸಂದರ್ಭದಲ್ಲಿ ಇದನ್ನು ಅಳವಡಿಸುವುದು ಅಸಾಧ್ಯ. ಯುಎಕ್ಸ್ ಅನ್ನೋದು ಹೋಮಿಯೋಪತಿಯಿದ್ದಂತೆ. ಬೇರಿನಿಂದಲೇ ಕಾರ್ಯನಿರ್ವಹಿಸುತ್ತೆ. ಉತ್ಪನ್ನದ ಇಂಚಿಂಚನ್ನೂ ಇದು ಗಣನೆಗೆ ತಗೆದುಕೊಳ್ಳುತ್ತದೆ. ಉತ್ಪನ್ನಗಳ ಬಗ್ಗೆ ಮಾಲೀಕರಿಗಿರುವ ಕಲ್ಪನೆಯಂತೆ ಕಾರ್ಯರೂಪಕ್ಕೆ ತರಲಾಗುತ್ತದೆ. ಆದ್ರೆ ವಿನ್ಯಾಸವನ್ನು ಕಾರ್ಯರೂಪಕ್ಕೆ ತರುವ ಪ್ರಕ್ರಿಯೆ ಕೂಡ ದೀರ್ಘವಾದದ್ದು. ವ್ಯಕ್ತಿ ಹಾಗೂ ಉಪಯುಕ್ತತೆಯ ಪರಿಶೀಲನೆಯನ್ನು ಇದು ಒಳಗೊಂಡಿದೆ.

ಯುಎಕ್ಸ್ ವಿನ್ಯಾಸದ ಅಂತಿಮ ಫಲಿತಾಂಶವೇನು..?

ಬಳಕೆದಾರರ ಅನುಭವ ವಿನ್ಯಾಸದ ಅಂತಿಮ ಫಲಿತಾಂಶ ಪ್ರತಿಬಾರಿಯೂ ಫೋಟೋಶಾಪ್ ಅಥವಾ ಸಮಾನ ಕಡತದಂತಿರುವುದಿಲ್ಲ. ಬಹುತೇಕ ಕಂಪನಿಗಳು ಯುಎಕ್ಸ್​​ನ್ನು ಯುಐ ಜೊತೆ ಸಂಯೋಜಿಸುತ್ತವೆ. ಅಂಥ ಸಂದರ್ಭಗಳಲ್ಲಿ ಅಂತಿಮ ಉತ್ಪನ್ನ ವಿನ್ಯಾಸದ ವಿಶೇಷತೆ ಹಾಗೂ ಕಾರ್ಯವೈಖರಿಯನ್ನು ವಿವರಿಸುತ್ತದೆ. ಕೇವಲ ಯುಎಕ್ಸ್ ಮಾತ್ರ ಅಳವಡಿಕೆಯಾಗಿದೆ ಎಂದಾದಲ್ಲಿ ಬಳಕೆದಾರರು ತಮ್ಮ ವೈಯಕ್ತಿಕ ಪಯಣ, ವೈರ್‍ಫ್ರೇಮ್ ಮಾದರಿ, ಉಪಯುಕ್ತತೆ ಪರೀಕ್ಷೆಯ ಫಲಿತಾಂಶ, ಸೈಟ್/ ಹರಿವಿನ ಚಿತ್ರಗಳನ್ನು ನಿರೀಕ್ಷಿಸಬಹುದು.

ವಿನ್ಯಾಸ ಹೇಗೆ ಕಾಣುತ್ತಿದೆ? ಎಂಥ ಅನುಭವ ಕೊಡುತ್ತದೆ ಅನ್ನೋದು ಮುಖ್ಯವಲ್ಲ. ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಅನ್ನೋದೇ ಬಹಳ ಪ್ರಮುಖವಾದದ್ದು ಎನ್ನುತ್ತಾರೆ ಖ್ಯಾತ ಉದ್ಯಮಿ ಸ್ಟೀವ್ ಜಾಬ್ಸ್. ಈ ಹಂತದಲ್ಲಿ ಒಳ್ಳೆಯ ವಿನ್ಯಾಸ ಎಂದರೆ ಬಳಕೆದಾರರ ಅನುಭವ. ಏನಿದೆ? ಮುಂದೇನಾಗಬಹುದು ಅನ್ನೋದನ್ನು ಬಳಕೆದಾರರ ಅನುಭವದ ವಿನ್ಯಾಸ ಹೇಳುತ್ತದೆ. ಅದರ ಮೇಲೆ ನೀವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದು.

ಬಳಕೆದಾರರ ಅನುಭವದ ವಿನ್ಯಾಸವನ್ನು ಒಂದು ವ್ಯಾಪ್ತಿ ಹಾಗೂ ಕಾಲಮಿತಿಯೊಳಗೆ ಹೇಗೆ ವ್ಯಾಖ್ಯಾನಿಸಬಹುದು..?

ಯುಎಕ್ಸ್ ವಿನ್ಯಾಸ ಸೂಕ್ತವಾದುದನ್ನೇ ಒಳಗೊಂಡಿರುವ ಪ್ರಕ್ರಿಯೆ. ಬಳಕೆದಾರರ ಅನುಭವದ ವ್ಯಾಪ್ತಿಯನ್ನು ವಿವರಿಸುವ ಸಂದರ್ಭದಲ್ಲಿನ ಮಾತುಕತೆ ಗ್ರಾಹಕರ ಮಧ್ಯೆ ಅಂತರ ನಿರ್ಮಿಸುತ್ತದೆ. ಮುಂದಿನ ಹಂತ ವೆಬ್‍ಸೈಟ್ ಅಥವಾ ಆ್ಯಪ್‍ನ ಪ್ರಸ್ತುತ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು. ಯುಎಕ್ಸ್ ವಿನ್ಯಾಸಕ್ಕಾಗಿ ಬಳಕೆದಾರರ ಪ್ರೊಫೈಲ್‍ಗಳನ್ನು ರಚಿಸಲಾಗುತ್ತೆ. ವಾಸ್ತವ ಬಳಕೆದಾರರಿಗಾಗಿ ನೈಜ ಪ್ರೊಫೈಲ್‍ಗಳನ್ನು ರಚಿಸುವುದು ವಿಶೇಷ. ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ಇದನ್ನೆಲ್ಲ ಮಾಡಲಾಗುತ್ತೆ. ಈ ದಾಖಲೆಗಳು ಸಂಶೋಧನೆ ಹಾಗೂ ವಿನ್ಯಾಸದ ನಡುವಣ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ. ಪ್ರಸ್ತಾಪಿತ ವಿನ್ಯಾಸ, ವಿಷಯ ವರ್ಗೀಕರಣ, ದೃಷ್ಟಿ ವ್ಯವಸ್ಥೆ, ಪರಸ್ಪರ ಹರಿವು ಇವನ್ನೆಲ್ಲ ಬಿಂಬಿಸುವಂಥ ವೈರ್‍ಫ್ರೇಮ್‍ಗಳ ರಚನೆಯೇ ಮುಂದಿನ ಹಂತ. ಈ ವೈರ್‍ಫ್ರೇಮ್‍ಗಳು ನಿಮ್ಮ ಉತ್ಪನ್ನಗಳ ರಚನೆಯನ್ನು ತಿಳಿಸುವ ಬ್ಲೂ ಪ್ರಿಂಟ್ ಇದ್ದಂತೆ. ಪರದೆಯ ರಚನೆಯ ವಿನ್ಯಾಸ ಕೂಡ ಬ್ರಾಂಡಿಂಗ್‍ನಲ್ಲಿ ಅಳವಡಿಕೆಯಾಗಿರುತ್ತದೆ.

ಬಳಕೆದಾರರ ಅನುಭವದ ವಿನ್ಯಾಸ ಯಾವುದೇ ಒಂದು ಸಂಘ ಸಂಸ್ಥೆಯ ಯಶಸ್ಸಿಗೆ ಅತ್ಯಂತ ಅವಶ್ಯಕ. ಸಂಸ್ಥೆ ಅಂತಿಮವಾಗಿ ಅವಲಂಬಿಸುವುದು ಬಳಕೆದಾರರು ಮತ್ತು ಗ್ರಾಹಕರನ್ನು. ಅವರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕರೆ ಆ ಸಂಸ್ಥೆ ಅಭಿವೃದ್ಧಿಯ ಪಥದಲ್ಲಿದೆ ಎಂದರ್ಥ. ಹಾಗಾಗಿ ಬಳಕೆದಾರರ ಅನುಭವ ವಿನ್ಯಾಸಕ್ಕೆ ಹೆಚ್ಚು ಒತ್ತು ಕೊಡಲೇಬೇಕು. ಸಂಸ್ಥೆಯ ಯಶಸ್ಸನ್ನು ವ್ಯಾಖ್ಯಾನಿಸಲು ಹೊರಟಾಗಲೆಲ್ಲ ಗ್ರಾಹಕರು ಮತ್ತು ಬಳಕೆದಾರರ ಪ್ರಸ್ತಾಪವಾಗುವುದು ಸಾಮಾನ್ಯ. ಹಾಗಾಗಿ ಬಳಕೆದಾರರ ಅಗತ್ಯ ಹಾಗೂ ಅಭಿಪ್ರಾಯದನ್ನು ಗಮನದಲ್ಲಿಟ್ಟುಕೊಂಡು ಉತ್ಪನ್ನಗಳನ್ನು ತಯಾರಿಸಿದಲ್ಲಿ, ಮಾರುಕಟ್ಟೆ ಪ್ರತಿಕ್ರಿಯೆಯನ್ನೂ ಊಹಿಸಬಹುದು.