ಬಿಹಾರದ ಬಾಲವಧು ಹಸಿರು ವನಿತೆಯಾದಳು..!

ಟೀಮ್​​ ವೈ.ಎಸ್​​.

ಬಿಹಾರದ ಬಾಲವಧು ಹಸಿರು ವನಿತೆಯಾದಳು..!

Tuesday November 17, 2015,

1 min Read

ಆರನೇ ಕ್ಲಾಸಿಗೆ ಆಕೆ ಶಾಲೆ ಬಿಟ್ಟಳು. ಹನ್ನೆಡರನೆ ವಯಸ್ಸಿಗೆ ಆಕೆಯ ಮದುವೆ ನೆರವೇರಿತು. ಆಕೆಗೆ 18 ವಯಸ್ಸಾದಾಗ ಅದಾಗಲೇ ಮೂರು ಮಕ್ಕಳ ತಾಯಿಗಿದ್ದಳು. ಅವರ ಹೆಸರು ಜಯಾದೇವಿ. ಆದರೆ ಇದ್ಯಾವುದೂ ಆಕೆ ತನ್ನದೇ ದಾರಿ ಹುಡುಕಿಕೊಂಡು ಯಶಸ್ವಿಯಾಗುವುದಕ್ಕೆ ಅಡ್ಡಗಾಲು ಹಾಕಲಾಗಲಿಲ್ಲ. ಬಿಹಾರದ ಮುಂಗೇರ್ ಜಿಲ್ಲೆಯಲ್ಲಿಸಸಿಗಳನ್ನು ನೆಡುವಿಕೆ, ನೀರಿನ ಕೊಯ್ಲು ಹಾಗೂ ಸಮೂಹ ಸಹಭಾಗಿತ್ವದ ಮೂಲಕ ಆಕೆ ಹಸಿರು ಕ್ರಾಂತಿಗೆ ಕಾರಳಣಾದಳು. ಹೀಗಾಗಿ ಆಕೆಯನ್ನು ಬಿಹಾರದ ಹಸಿರು ವನಿತೆ ಎಂದು ಕರೆಯಲಾಗುತ್ತದೆ.

ಮಹಿಳೆಯರನ್ನು ಸ್ವಾವಲಂಬಿಯರನ್ನಾಗಿ ಮಾಡಲು, ಜಯಾದೇವಿ 285 ಮಹಿಳಾ ಸ್ವಸಹಾಯ ಗುಂಪುಗಳಿಂದ 2.5 ಕೋಟಿ ಬಂಡವಾಳ ಹೂಡಿಕೆ ಮಾಡಿಸಿದ್ದಾರೆ. ರೆಡ್ ರಿಕ್ಷಾ ರೆವಲ್ಯೂಷನ್ ಪ್ರಕಾರ, ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಹಾಗೂ ಖಾಸಗಿ ಲೇವಾದೇವಿಗಾರರ ಹಿಡಿತದಿಂದ ತಪ್ಪಿಸಿಕೊಳ್ಳಲು ಜಯಾ ಕರೈಲಿ ಹಳ್ಳಿಯಲ್ಲಿ ಮೊದಲು ಸ್ವಸಹಾಯ ಗುಂಪನ್ನು ಸ್ಥಾಪಿಸಿದರು.

image


“ಮಹಿಳೆಯಾಗಿ ನಾನು ಹೆಮ್ಮೆಯಿಂದ ಹೇಳಿಕೊಳ್ಳುವ ವಿಷಯವೆಂದರೆ, ನನ್ನ ಬಗ್ಗೆ ಕಾಳಜಿ ತೆಗೆದುಕೊಳ್ಳಲು ನನಗೆ ಯಾವುದೇ ಪುರುಷನ ಸಹಾಯದ ಅಗತ್ಯವಿಲ್ಲ. ನಾನು ಸ್ವಾವಲಂಬಿಯಾಗಿದ್ದು, ಇತರ ಮಹಿಳೆಯರೂ ಕೂಡ ಸ್ವಾವಲಂಬಿಯಾಗುವಲ್ಲಿ ನೆರವಾಗಿದ್ದೇನೆ. ಇಂದು ಪ್ರತಿಯೊಬ್ಬ ಮಹಿಳೆಯೂ ತನ್ನ ಸ್ಥಾನಮಾನವನ್ನು ಉತ್ತಮಗೊಳಿಸುವಲ್ಲಿ ಶ್ರಮಿಸಬೇಕಾಗಿದ್ದು, ಇದಕ್ಕಾಗಿ ಪ್ರತಿಯೊಬ್ಬ ಮಹಿಳೆಯೂ ಸಮಾನ ಹಕ್ಕಿಗಾಗಿ ಆಗ್ರಹಿಸಬೇಕಾಗಿದೆ” ಎಂದು ಅವರು ಹೇಳುತ್ತಾರೆ.

ಜಯಾದೇವಿ ಈವರೆಗೂ ಸುಮಾರು 2000 ಮಹಿಳೆಯರನ್ನು ಸುಶಿಕ್ಷಿತರನ್ನಾಗಿ ಮಾಡಿದ್ದಾರೆ. ಅಷ್ಟೇ ಅಲ್ಲ, ಜನರು ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಪಿಂಚಣಿ ಸೇರಿದಂತೆ ವಿವಿಧ ದಾಖಲಾತಿ ಹಾಗೂ ಸೌಲಭ್ಯಗಳನ್ನು ಒದಗಿಸುವಲ್ಲಿ ಸಫಲರಾಗಿದ್ದಾರೆ. ವನವಾಸಿಗಳ ಮೇಲಾಗುತ್ತಿರುವ ಲೈಂಗಿಕ ಅತ್ಯಾಚಾರದ ವಿರುದ್ಧ ಅವರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ, ಮಾಲಿನ್ಯ ಮುಕ್ತ ವಾತಾವರಣ, ಮೂಲಭೂತ ಸೌಕರ್ಯ, ಶಿಕ್ಷಣ, ಮಕ್ಕಳಿಗೆ ಪೌಷ್ಟಿಕ ಆಹಾರ ಮುಂತಾದ ಕ್ಷೇತ್ರಗಳಲ್ಲಿ ಜಯಾದೇವಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.